ಸಮಾಜ ಸೇವೆಯನ್ನ ಮೆಚ್ಚಿಕೊಂಡ ಕರ್ನಾಟಕದ ಪೊಲೀಸ್ ಅಧಿಕಾರಿ

0
882
chanaanavar

ಪೊಲೀಸ್ ಅಧಿಕಾರಿಗಳು ಬಹಳ ಸ್ತ್ರೀಕ್ ಆಗಿರುತ್ತಾರೆ, ಜನರ ಹತ್ತಿರ ಸ್ವಲ್ಪ ಹೊತ್ತು ಕೂಡ ಮಾತನಾಡುವುದಿಲ್ಲ ಅವರ ಕಾರ್ಯದಲ್ಲಿ ನೀರುತರಾಗಿರುತ್ತಾರೆ ಎನ್ನುವುದು ಜನರ ಅಭಿಪ್ರಾಯ. ಪೊಲೀಸ್ ಅಧಿಕಾರಿಗಳು ಹತ್ತಿರ ಬಂದರೆ ಸಾಕು ಅನುಮಾನದ ದೃಷ್ಟಿ ಅಲ್ಲಿ ನಮ್ಮನ್ನು ನೋಡುತ್ತಾರೆ ಎಂದು ಜನರು ಭಾವಿಸಿದ್ದಾರೆ. ರವಿ ಡಿ ಚನ್ನಣ್ಣವರ್ ಅವರ ಹೆಸರು ಯಾರಿಗೆ ತಾನೇ ಗೊತಿಲ್ಲ ಹೇಳಿ ಇಡೀ ಕರ್ನಾಟಕದ ಜನತೆಗೆ ಇವರು ಚಿರಪರಿಚಿತರು, ಸಿನೆಮಾದಲ್ಲಿ ರೌಡಿಗಳನ್ನು ಹಿಡಿಯುವುದು ನೀವು ನೋಡಿರಬಹುದು ಆದರೆ ಇವರು ನಿಜ ಜೀವನದಲ್ಲಿ ರೌಡಿಗಳನ್ನು ಹಿಡಿದು ಬೆಂಡೆತ್ತಿದ್ದಾರೆ. ಸಾಕಷ್ಟು ಯುವಕರಿಗೆ, ಸಾಧನೆ ಮಾಡಲು ಹೊರಟವರಿಗೆ ಮಾದರಿ ಆಗಿದ್ದಾರೆ. ಇವರ ಬಗ್ಗೆ ಹೇಳಲು ಪದಗಳೆ ಸಾಲೋದಿಲ್ಲ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಕೂಡ ಕೂತಿದ್ದರು.

ರವಿ ಡಿ ಚೆನ್ನಣ್ಣವರ್ ಅವರು ಯುವಕರ ಬಳಿ ಹೋಗಿ ಮಾತನಾಡಿಸಿದ್ದಾರೆ

ಚುನಾವಣೆಯ ಪ್ರಚಾರ ಎಲ್ಲಾ ಕಡೆ ಜೋರಾಗಿ ಸಾಗಿದೆ, ಇಂತಹ ಒಂದು ಸನ್ನಿವೇಶದಲ್ಲಿ ಮೈದಾನವೊಂದರಲ್ಲಿ ಸಮಾವೇಶ ನಡೆದಿತ್ತು.  ಸಮಾವೇಶ ಮುಗಿಯುವ ಹೊತ್ತಿಗೆ ರಾತ್ರಿ ಆಯಿತು, ರಾತ್ರಿಯ ಸಮಯದಲ್ಲಿ ಯುವಕರ ಗುಂಪು ಕೆಲಸ ಮಾಡುವುದನ್ನ ಕಂಡ ರವಿ ಡಿ ಚನ್ನಣ್ಣವರ್ ಯುವಕರ ಬಳಿ ಹೋಗಿ ಮಾತನಾಡಿಸಿದ್ದಾರೆ. ಮೋಡಿಯ ನೇತೃತ್ವದಲ್ಲಿ ಬಂದ ಸ್ವಚ್ಛ ಭಾರತ ಅಭ್ಯಾನದಿಂದ ಪ್ರೇರಣೆಗೊಂಡು ಸಮಾವೇಶ ಆಯೋಜಿಸಿದ್ದ ಜಾಗದಲ್ಲಿ ಕಸವನ್ನು ಗುಡಿಸಿ ಜಾಗವನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಿದ್ದರೆ ಎಂಬುವ ವಿಷಯ ಯುವಕರ ಮೂಲಕ ರವಿ ಡಿ ಅವರಿಗೆ ತಿಳಿದು ಬಂದಿದೆ. ಒಬ್ಬ ಹುಡುಗಿ ಸಹ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾಳೆ, ಕೊನೆಗೆ ಇವರೆಲ್ಲರ ಜೊತೆ ಚೆನ್ನಾಣ್ಣವರ್ ಅವರು ಫೋಟೋ ತೆಗಿಸಿಕೊಂಡಿದ್ದಾರೆ.

ravi chennannavar

ಯುವಕರ ಕಾರ್ಯವನ್ನು ಹೊಗಳಿ ಶೇಕ್ ಹ್ಯಾಂಡ್ ಕೊಟ್ಟಿದ್ದಾರೆ

ಚನ್ನಣ್ಣವರ್ ಅವರು ಹುಡುಗರ ಹತ್ತಿರ ಮಾತನಾಡುತ್ತಾ, ಯುವಕರ ಕಾರ್ಯವನ್ನು ಮೆಚ್ಚಿಕೊಂಡು ನಾನು ಕೂಡ ಒಬ್ಬ ಸೇವಕ ಅಂತಾ ಹೇಳಿದ್ದಾರೆ. ಮೈದಾನದಲ್ಲಿ ಕಸವನ್ನು ಕ್ಲೀನ್ ಮಾಡುತ್ತಿದ್ದ ಯುವಕರಿಗೆ ಶೇಕ್ ಹ್ಯಾಂಡ್ ನೀಡಿ ಹೊಗಳಿದ್ದಾರೆ, ಆದರೆ ಒಬ್ಬ ಯುವಕನ ಕೈ ಮಣ್ಣಾಗಿರುವ ಕಾರಣದಿಂದಾಗಿ ತನ್ನ ಹಸ್ತವನ್ನು ಚಾಚಲು ಮುಜುಗರ ಪಟ್ಟುಕೊಂಡ, ಇದರ ಬಗ್ಗೆ ಎಲ್ಲಾ ಗಮನಿಸಬಾರದು ಅಂತಾ ಹೇಳಿ ಶೇಕ್ ಹ್ಯಾಂಡ್ ಕೊಟ್ಟರು. ಒಬ್ಬ ಪೊಲೀಸ್ ಅಧಿಕಾರಿ ಆಗಿರುವ ಚನ್ನಣ್ಣವರ್ ಅವರು ತಾವಾಯ್ತು ತಮ್ಮ ಕೆಲಸ ಆಯ್ತು ಅಂತಾ ತಮ್ಮ ಪಾಡಿಗೆ ತಾವು ಸುಮ್ಮನೆ ಇರಬಹುದಾಗಿತ್ತು, ಯಾವುದೇ ವ್ಯಕ್ತಿ ಆಗಲಿ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದರೆ ಎಂದರೆ ಅದನ್ನು ನಾವು ಪ್ರೋತ್ಸಾಹಿಸ ಬೇಕೆಂಬುವ ಗುಣ ಇವರಲ್ಲಿದೆ, ಆದ್ದರಿಂದ ಹೋಗಿ ಮಾತನಾಡಿಸಿದ್ದಾರೆ.

ravi chennannavar

ಕಷ್ಟ ಪಟ್ಟು ಸಮಾಜ ಸುಧಾರಣೆಯಗೋಸ್ಕರ ಕೆಲಸ ಮಾಡುವವರನ್ನ ಕಂಡರೆ ಅನುಕಂಪ ಹಾಗು ಪ್ರೀತಿ

ಒಬ್ಬ ಪೊಲೀಸ್ ಅಧಿಕಾರಿ ಆಗಲು ಎಷ್ಟು ಕಷ್ಟ ಪಡಬೇಕೆನ್ನುವುದು ರವಿ ಡಿ ಚೆನ್ನಣ್ಣವರ್ ಅವರಿಗೆ ಗೊತ್ತು, ಆದ್ದರಿಂದ ಕಷ್ಟ ಪಟ್ಟು ಸಮಾಜಗೋಸ್ಕರ ಕೆಲಸ ಮಾಡುವವರನ್ನ ಕಂಡರೆ ಅನುಕಂಪ ಹಾಗೂ ಪ್ರೀತಿ. ಮನುಷ್ಯ ಬೆಳಿಯಬೇಕೆಂದರೆ ಸಣ್ಣ ಪುಟ್ಟ ಕೆಲಸವೆ ಅವನಿಗೆ ಮೊದಲು ಬುನಾದಿ ಆಗುತ್ತದೆ, ಯಾವುದೇ ವ್ಯಕ್ತಿಯು ಒಂದೇ ಸಾರಿ ಶ್ರೀಮಂತ ಆಗಲು ಸಾಧ್ಯವೇ ಇಲ್ಲ, ಒಂದ್ ಒಂದೇ ಕನಸಿನ ಮೆಟ್ಟಿಲುಗಳನ್ನು ಹತ್ತಿ ಸಾಧನೆ ಎಂಬ ಶಿಖರವನ್ನು ಏರಬೇಕು. ಮಾಡುವ ಕಾರ್ಯದಲ್ಲಿ ನಿಷ್ಠೆ, ಶ್ರದ್ದೆ, ಶ್ರಮ ಇದ್ದರೆ ಸಾಕು ಏನು ಬೇಕಾದರೂ ಮನುಷ್ಯ ಸಾಧಿಸಬಲ್ಲ, ಸಾಗುವ ದಾರಿಯಲ್ಲಿ ಆಡೆ-ತಡೆಗಳು ಬಂದೆ ಬರುತ್ತದೆ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಗೆಲುವಿನ ರುಚಿ ಸವಿಯುವನೆ ಸಾಧಕ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ರವಿ ಡಿ ಚೆನ್ನಣ್ಣವರ್.

LEAVE A REPLY

Please enter your comment!
Please enter your name here