ಸಮಾಜ ಸೇವೆಯ ಜೊತೆಗೆ ಕೃಷಿಯಲ್ಲು ಸಾಧನೆ ಮಾಡಿದ ಪೊಲೀಸ್ ಅಧಿಕಾರಿ

0
441

ತಮ್ಮ ಕನಸಿನ ಗುರಿಯತ್ತ ಬೆನ್ನತ್ತಿ ಸಾಧಿಸಿದವರು ತುಂಬಾ ಜನರು ಇದ್ದಾರೆ, ಕೆಲವೊಮ್ಮೆ ನಾವು ಓದಿರುವ ವಿಷಯಕ್ಕು ನಮ್ಮ ವೃತ್ತಿಗೂ ಸಂಬಂಧವೇ ಇರುವುದಿಲ್ಲ. ರೈತರು ದೇಶದ ಬೆನ್ನೆಲುಬು ಅಂತಾ ಒಂದು ಮಾತಿದೆ, ರೈತರಿಂದಾನೆ ಪ್ರತಿ ನಿತ್ಯ ನಮ್ಮ ಹೊಟ್ಟೆ ತುಂಬುತ್ತಿರುವುದು ಇಲ್ಲವಾದಲ್ಲಿ ಒಂದು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಮ್ಮಗೆ ಬರುತಿತ್ತು. ಕೃಷಿ ಎಂದರೆ ಅದು ತಮಾಷೆಯ ಮಾತಲ್ಲ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಕೃಷಿಯಲ್ಲಿ ಮಾಡಬೇಕಾಗಿರುವ ಎಲ್ಲಾ ಕಾರ್ಯಗಳು ಮುಗಿದ ಮೇಲೆ ರೈತ ಉತ್ತಮ ಫಲಕ್ಕಾಗಿ ಕಾಯುತ್ತಾನೆ, ಕೊನೆ ಹಂತದಲ್ಲಿ ಸಿಗುವ ಯಶಸ್ಸನ್ನು ವರ್ಣಿಸಲು ಆಸಾದ್ಯ. ಕೃಷಿಯಲ್ಲಿ ಸಿಗುವ ಖುಷಿ, ನೆಮ್ಮದಿ, ತೃಪ್ತಿ ಬೇರೆ ಯಾವ ಕೆಲಸದಲ್ಲೂ ನಮ್ಮಗೆ ಸಿಗುವುದಿಲ್ಲ.

ಕೃಷಿಯಲ್ಲು ಸಾಧನೆ ಮಾಡಿದ ಪೊಲೀಸ್ ಅಧಿಕಾರಿ

ಸರ್ಕಾರಿ ಕೆಲಸ ಸಿಕ್ಕರೆ ಸಾಕು ತಾವಾಯಿತು, ತಮ್ಮ ಕೆಲಸವಾಯಿತು ಎಂದು ಸುಮ್ಮನಾಗುತ್ತಾರೆ. ಇನ್ನು ಪೊಲೀಸ್ ಕೆಲಸ ಸಿಕ್ಕರಂತು ಬೇರೆ ಕೆಲಸದತ್ತ ಮುಖ ಕೂಡ ಮಾಡುವುದಿಲ್ಲ. ಆದರೆ ಬೀದರ್ ಜಿಲ್ಲೆಯ ಒಬ್ಬ ಪೊಲೀಸ್ ಅಧಿಕಾರಿ ಮಾತ್ರ ಪೊಲೀಸ್ ಕೆಲಸ ಮಾಡುವುದರ ಜೊತೆಗೆ ಕೃಷಿಯ ಕ್ಷೇತ್ರದಲ್ಲು ಸಾಧನೆಯನ್ನು ಮಾಡಿದ್ದಾರೆ. ಪಾಳು ಬಿದ್ದ ಒಂದು ಜಮೀನಿನಲ್ಲೆ ಒಂದು ಸುಂದರವಾದ ತೋಟವನ್ನು ನಿರ್ಮಿಸಿದ್ದಾರೆ. ತಮ್ಮ ತೋಟದಲ್ಲಿ ಬದನೆಕಾಯಿ, ಮೆಣಸಿನಕಾಯಿ, ಟೊಮ್ಯಾಟೊ, ಬೆಂಡೆಕಾಯಿ, ಕೊತ್ತಂಬರಿ, ಪಾಲಕ್, ಕಲ್ಲಂಗಡಿ ಹೀಗೆ ತರತರಹದ ಬೆಳೆಗಳನ್ನು ಬೆಳೆದಿದ್ದಾರೆ. ಪೊಲೀಸ್ ಕೆಲಸದ ಒತ್ತಡದಲ್ಲು ಇವರು ಕೃಷಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ.

ನೈಜ್ಯವಾದ ಗೊಬ್ಬರವನ್ನು ಬಳಸಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ

ಪಾಳು ಬಿದ್ದ ಭೂಮಿಯಲ್ಲಿ ಅತ್ಯಂತ ಕಡಿಮೆ ದುಡ್ಡನ್ನು ವೆಚ್ಚ ಮಾಡಿ, ನೀರಾವರಿ ಮೂಲಕ ಅತಿ ಹೆಚ್ಚು ಉತ್ಪಾದನೆ ನೀಡುವ ಗುಣಮಟ್ಟದ ತರಕಾರಿಗಳನ್ನು ಬೆಳೆದಿದ್ದಾರೆ. ತಮ್ಮ ಮನೆಯ ಹಿಂಭಾಗದಲ್ಲಿ ಇದ್ದ ಭೂಮಿಯನ್ನು ಉಪಯೋಗಿಸಿಕೊಂಡು ಹಚ್ಚ ಹಸಿರಿನಿಂದ ಕೂಡಿದ ತೋಟವನ್ನು ನಿರ್ಮಿಸಿದ್ದಾರೆ. ಈ ಭೂಮಿಯಲ್ಲಿ ಆಸ್ಪೆರಾ ಎನ್ನುವ ಬೆಳೆ ಬೆಳೆದಿದ್ದೆ ಆಶ್ಚರ್ಯವಾದ ಸಂಗತಿವಾಗಿದೆ. ಸಾಮಾನ್ಯವಾಗಿ ಈ ಬೆಳೆ ಯೂರೋಪ್ ಮತ್ತು ಇನ್ನಿತರ ದೇಶಗಳಲ್ಲಿ ಮಾತ್ರ ಬೆಳೆಯಲಾಗಿತ್ತು. ಕ್ರಿಮಿನಾಶಕ ವಸ್ತುಗಳನ್ನು ಬಳಸದೆ, ನೈಜ್ಯವಾದ ಗೊಬ್ಬರವನ್ನು ಬಳಸಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಬೀದರ್ ನ ಭೂಮಿ ಮತ್ತು ವಾತವರಣ ಆಸ್ಪೆರಾ ಎನ್ನುವ ಬೆಳೆ ಬೆಳೆಯಲು ಮುಖ್ಯ ಕಾರಣವಾಗಿದೆ.

ಯುವಕರಿಗೆ ಸ್ಫೂರ್ತಿಯಾಗಿದ್ದಾರೆ

ಇಂದಿನ ಪೀಳಿಗೆಯ ಯುವಕರಿಗೆ ಕೃಷಿ ಪದ ಕೇಳಿದರೆ ಸಾಕು ದೂರ ಸರಿಯುತ್ತಾರೆ, ಆದ್ದರಿಂದ ಕೃಷಿಯ ಕುಲಕಸುಬನ್ನು ಬಿಟ್ಟು ಅಥವಾ ಭೂಮಿ ಮಾರಿಕೊಂಡು ನಗರಕ್ಕೆ ಬಂದು ವಾಸಿಸುತ್ತಾರೆ. ಆದರೆ ನಾವು ಹೇಳಲು ಹೊರಟಿರುವ ಕಥೆಯನ್ನು ಕೇಳಿದರೆ ನಿಜಕ್ಕೂ ವಾವ್ ಅಂತೀರಾ ಹೌದೂ ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಹೊರಟವರಿಗೆ ಈ ಈ ಪೊಲೀಸ್ ಅಧಿಕಾರಿಯೆ ಸ್ಫೂರ್ತಿ , ಸ್ವಲ್ಪ ಸುತ್ತಾಡಿದರೆ ಸಾಕು ಈಗಿನ ಕಾಲದ ಯುವಕ,ಯುವತಿಯರು ಸುಸ್ತು ಅಂತಾ ಮಲಗಿ ಬಿಡುತ್ತಾರೆ, ನೀರು ಬೇಕು ಆದರೆ ನೆಲ ಗುದ್ದುವುದು ಬೇಡ ಎನ್ನುವ ಮನಸ್ಥಿತಿ ಯುವಕರದ್ದು. ಶ್ರೀಧರ್ ಎನ್ನುವ ವ್ಯಕ್ತಿ ಕೃಷಿಯಲ್ಲು ಸಹ ಜಯಶಾಲಿಯಾಗಿದ್ದಾರೆ.

LEAVE A REPLY

Please enter your comment!
Please enter your name here