ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಮಕ್ಕಳ ಕನಸನ್ನು ಈಡೇರಿಸಲು ಮುಂದಾದ ಪೊಲೀಸ್ ಕಮಿಷನರ್

0
343
commisioner office and makkalu

ಕನಸು ಅನ್ನೋದು ಕೇವಲ ಕನಸಾಗಿಯೇ ಎಂದಿಗೂ ಉಳಿಯಬಾರದು. ಬದಲಾಗಿ ಅದನ್ನು ಈಡೇರಿಸಿಕೊಳ್ಳಬೇಕು. ಯಾಕಂದ್ರೆ ಕನಸು ಕಾಣುವುದು ದೊಡ್ಡದಲ್ಲ, ಆದರೆ ಅದನ್ನು ನನಸುಗುವಂತೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ತಿಳಿದವರು ಒಂದು ಮಾತನ್ನು ಹೇಳುತ್ತಲೇ ಇರುತ್ತಾರೆ. ನಿದ್ದೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆಗೆಡುವಂತೆ ಮಾಡುವುದು ನಿಜವಾದ ಕನಸು ಎಂದು. ಅದರಂತೆ ಸಾಕಷ್ಟು ಜನರು ಕನಸನ್ನು ಹೊಂದಿರುತ್ತಾರೆ. ಆದರೆ ಎಲ್ಲರ ಕನಸುಗಳು ಸಹ ಈಡೇರುವುದಿಲ್ಲ. ಯಾಕಂದ್ರೇ ಕೆಲವು ಕಾರಣಗಳಿಂದ ಅವರ ಕನಸು, ಕನಸಾಗಿಯೇ ಉಳಿಯುತ್ತದೆ. ಇನ್ನು ಕೆಲವರಿಗೆ ಮೃತ್ಯು ಅನ್ನೋದು ಅಡ್ಡ ಬರುತ್ತದೆ. ಹೌದು. ಅದೇ ರೀತಿ ಇಲ್ಲಿ ಏಳು ಜನ ಮಕ್ಕಳ ಕನಸಿಗೆ ಮೃತ್ಯು ಅಡ್ಡ ಬಂದಿದೆ. ಆದರೆ ಅವರ ಕನಸನ್ನು ಪೊಲೀಸ್ ಅಧಿಕಾರಿಗಳು ಪೂರ್ಣಗೊಳಿಸಲು ಮುಂದಾಗಿದ್ದಾರೆ.

ಮಕ್ಕಳ ಕನಸನ್ನು ಈಡೇರಿಸಲಿರುವ ನಗರ ಪೊಲೀಸ್ ಆಯುಕ್ತರು

ಈ ಮಕ್ಕಳು ನೋಡೋಕೆ ಬಲು ಮುದ್ದಾಗಿದ್ದಾರೆ. ಆದರೆ ಅವರ ಜೀವನದಲ್ಲಿ ವಿಧಿ ಅನ್ನೋದು ಚೆಲ್ಲಾಟವಾಡಿದೆ. ಹೌದು. ಸಾಕಷ್ಟು ಕನಸು ಕಾಣುವ ಸಮಯದಲ್ಲಿ ಎಲ್ಲವನ್ನು ಕೆಳೆದುಕೊಳ್ಳುವಂತಹ ಪರಿಸ್ಥಿತಿಗೆ ಈ ಮಕ್ಕಳು ತಲುಪಿದ್ದಾರೆ. ಯಾಕಂದ್ರೆ ಈ ಏಳು ಜನ ಮಕ್ಕಳು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದು, ಯಾವಾಗ ಬೇಕಾದ್ರು ಅನಾಹುತ ಸಂಭವಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಆದರೆ ಆ ಮಕ್ಕಳಿಗೆ ತಮ್ಮ ಸಾವಿನ ಬಗ್ಗೆ ಭಯವಿಲ್ಲ. ಬದಲಿಗೆ ತಾವು ಪೊಲೀಸ್ ಅಧಿಕಾರಿಗಳಾಗಬೇಕೆಂಬ ಆಸೆಯನ್ನು ಹೊಂದಿದ್ದಾರಂತೆ. ಹಾಗಾಗಿ ಅವರ ಆಸೆಯನ್ನು ಈಡೇರಿಸಲು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಮುಂದಾಗಿದ್ದಾರೆ.

ನಗರ ಪೊಲೀಸ್ ಹುದ್ದೆಯನ್ನು ಅಲಂಕರಿಸಲಿರುವ 7 ಜನ ಮಕ್ಕಳು

ಇನ್ನು ಮಕ್ಕಳು ಗಂಭೀರ ಖಾಯಿಲೆಯಿಂದ ಬಳಲುತ್ತಿರುವ ವಿಚಾರವನ್ನು ತಿಳಿದ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಮಕ್ಕಳ ಕನಸನ್ನು ನನಸಾಗುವಂತೆ ನಿರ್ಧರಿಸಿದ್ದಾರೆ. ಹಾಗಾಗಿ ಒಂದು ದಿನದ ಮಟ್ಟಿಗೆ ಅವರ ಅಧಿಕಾರವನ್ನು ಈ 7 ಜನ ಮಕ್ಕಳಿಗೆ ಬಿಟ್ಟುಕೊಡಲಿದ್ದಾರೆ. ಹೌದು. ಒಂದು ದಿನದ ಮಟ್ಟಿಗೆ ಅಧಿಕಾರವನ್ನು ಪಡೆಯಲಿರುವ ಮಕ್ಕಳು, ತಮ್ಮ ಅಧಿಕಾರವನ್ನು ಚಲಾಯಿಸಬಹದು. ಜೊತೆಗೆ ಒಂದು ದಿನದ ಮಟ್ಟಿಗೆ ಮಕ್ಕಳು ಏನಾದ್ರು ನಿರ್ಧಾರ ತೆಗೆದುಕೊಂಡರು, ಅದು ಈಡೇರಿಸುವ ರೀತಿ ಇದ್ದರೆ, ಅದನ್ನು ಸಹ ಈಡೇರಿಸುತ್ತೇವೆ ಎಂದು ಕಮಿಷನರ್ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 11ಗಂಟೆಗೆ ಅಧಿಕಾರ ಪಡೆಯಲಿರುವ ಮಕ್ಕಳು

ನಾಳೆ ಬೆಳಗ್ಗೆ ಸರಿಯಾಗಿ 11 ಗಂಟೆಯ ಸಮಯಕ್ಕೆ ಮಕ್ಕಳು ಅಧಿಕಾರವನ್ನು ಪಡೆಯಲಿದ್ದಾರಂತೆ. ಹೌದು. ನಾಳೆ ಬೆಳಿಗ್ಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಶೇಷವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆಯಂತೆ. ಯಾಕಂದ್ರೆ ಮಕ್ಕಳ ಮನಸ್ಸು ಮಗು ರೀತಿ. ಅವರಿಗೆ ಅವರು ಕಂಡ ಕನಸು ನನಸಾದಾಗ ಮಾತ್ರ, ಅವರಿಗೆ ಸಮಾಧಾನವಾಗುವುದು. ಆದರೆ ಇಲ್ಲಿನ ಮಕ್ಕಳು ತಮ್ಮ ಜೀವನದ ವಿಶಿಷ್ಟವಾದ ಕನಸನ್ನು ಈಡೇರಿಸಿಕೊಳ್ಳಲಿದ್ದಾರೆ. ಹಾಗಾಗಿ ಅವರಿಗೆ ನಮ್ಮ ಸಹಕಾರ ಸದಾಕಾಲ ಇರುತ್ತದೆ ಎಂದು ಹೇಳಿದ್ದಾರೆ.

ನಿಜಕ್ಕೂ ಕೆಲವು ವಿಚಾರಗಳು ಇಂಥವರ ಮನಸ್ಸನ್ನು ಒಂದು ಕ್ಷಣ ನಿಶ್ಯಬ್ಧವಾಗುವಂತೆ ಮಾಡುತ್ತವೆ. ಯಾಕಂದ್ರೆ ಈ ಮಕ್ಕಳು ಗಂಭೀರ ಖಾಯಿಲೆಯಿಂದ ಬಳಲುತ್ತಿದ್ದಾರೆ. ಆದರೆ ಅವರಿಗೆ ತಮ್ಮ ಖಾಯಿಲೆಯ ಬಗ್ಗೆ ಯಾವುದೇ ಭಯವಿಲ್ಲ. ಬದಲಿಗೆ ತಮ್ಮ ಕನಸು ನನಸಾಗಬೇಕು ಅನ್ನೋದು ಮಾತ್ರ ಮುಖ್ಯವಾಗಿದೆ. ಹಾಗಾಗಿ ಅವರು ನಾಳೆ ತಮ್ಮ ಕನಸನ್ನು ಈಡೇರಿಸಿಕೊಳ್ಳಲಿದ್ದಾರೆ.

LEAVE A REPLY

Please enter your comment!
Please enter your name here