ಅಚಾನಕ್ಕಾಗಿ ಕಿಚ್ಚನ ಮನೆಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿ ಅಭಿಮಾನಿಗಳಲ್ಲಿ ಕೌತುಕ

0
658

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ದಿನದಿಂದ ದಿನ ಹೆಚ್ಚಾಗುತ್ತಿದೆ. ಹೌದು ಸುದೀಪ್ ಹಾಗು ದರ್ಶನ್ ಅಭಿಮಾನಿಗಳ ನಡುವೆ ವೈಮನಸ್ಸು ವ್ಯಾಪಕವಾಗುತ್ತಲೆ ಹೋಗುತ್ತಿದೆ. ಕಿಚ್ಚ ಹಾಗು ದಚ್ಚು ನಡುವೆ ಈ ಹಿಂದೆ ಮನಸ್ತಾಪ ಉಂಟಾಗಿದ್ದು, ಪೈಲ್ವಾನ್ ಚಿತ್ರ ಬಿಡುಗಡೆ ಆದ ನಂತರ ಇದು ಬೇರೆಯೆ ಒಂದು ಹಂತಕ್ಕೆ ಬಂದು ನಿಂತಿದೆ ಅಂತಾನೆ ಹೇಳಬಹುದಾಗಿದೆ. ಸುದೀಪ್ ಹಾಗು ದರ್ಶನ್ ಇಬ್ಬರು ತಮ್ಮ ನಟನೆಯ ಮೂಲಕ ಅಭಿಮಾನಿಗರನ್ನು ಸಂಪಾದಿಸಿದ್ದಾರೆ. ಪೈಲ್ವಾನ್ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿರುವುದು ದರ್ಶನ್ ಅವರ ಅಭಿಮಾನಿಗಳು ಎಂದು ಆರೋಪಿಸಿದ್ದರು.

ಕಿಚ್ಚನ ಮನೆಗೆ ಪೊಲೀಸ್ ಕಮಿಷನರ್ ಭೇಟಿ

ಸದ್ಯಕ್ಕೆ ಕಿಚ್ಚ ಸುದೀಪ್ ಪೈಲ್ವಾನ್ ಯಶಸ್ವಿಯ ಸಂಭ್ರಮದಲ್ಲಿದ್ದಾರೆ. ಪೈಲ್ವಾನ್ ಚಿತ್ರಕ್ಕೆ ಅನೇಕ ತೊಂದರೆಗಳು ಉಂಟಾಗಿದ್ದು, ಇದರ ನಡುವೆಯು ಕಿಚ್ಚ ಖುಷಿಯಲ್ಲಿದ್ದಾರೆ, ಜೊತೆಗೆ ಹೊಸ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇಷ್ಟೊಂದು ಬ್ಯುಸಿ ಲೈಫ್ ಮಧ್ಯೆಯು ಕಿಚ್ಚ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿದ್ದು, ಅಭಿಮಾನಿಗಳಲ್ಲಿ ಕುತೂಹಲವನ್ನು ಹುಟ್ಟು ಹಾಕಿದೆ. ಕಿಚ್ಚನ ಮನೆಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಭೇಟಿ ನೀಡಿದ್ದಾರೆ. ಅಚಾನಕ್ಕಾಗಿ ಭಾಸ್ಕರ್ ರಾವ್ ಕಿಚ್ಚನ ಮನೆಗೆ ಆಗಮಿಸಿದ್ದು, ಯಾವ ಕಾರಣಕ್ಕೆ ಎಂದು ಸಿನಿ ರಸಿಕರು ತಲೆ ಕೆಡಿಸಿಕೊಂಡಿದ್ದಾರೆ. ಮುಂದೆ ಓದಿ

ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿತ್ತು

ಯಾವ ಕಾರಣಕ್ಕೆ ಪೊಲೀಸ್ ಅಧಿಕಾರಿ ಸುದೀಪ್ ಮನೆಗೆ ಬಂದಿದ್ದಾರೆ ಎನ್ನುವುದು ಇನ್ನು ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ಆದರೆ ಈ ವಿಷಯದ ಕುರಿತು ಸ್ವತಃ ಕಿಚ್ಚ ಸುದೀಪ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇಂದು ಬೆಳಿಗ್ಗೆಯಿಂದಾನೆ ಸುದೀಪ್ ಅವರ ಮನೆಯ ಸುತ್ತ ಮುತ್ತ ಟೈಟ್ ಸೆಕ್ಯೂರಿಟಿ ಇತ್ತು. ಇದನ್ನು ಕಂಡ ಅನೇಕ ಜನರು ಏನಿರಬಹುದೆಂದು ಆಲೋಚಿಸುತ್ತಿದ್ದರು. ಆದರೆ ಸಡನ್ ಆಗಿ ಭಾಸ್ಕರ್ ರಾವ್ ಕಿಚ್ಚನ ಮನೆಗೆ ಆಗಮಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸ್ಟಾರ್ ವಾರ್ ಗಗನಕ್ಕೇರಿದೆ ಸೆಕ್ಯೂರಿಟಿ ಇರುವುದನ್ನು ಕಂಡು ಜನರು ಒಂದು ಕ್ಷಣ ಆತಂಕರಾಗಿದ್ದರು.ಕೊಂಚ ಸಮಯ ಭಾಸ್ಕರ್ ರಾವ್ ಹಾಗು ಸುದೀಪ್ ಅವರು ಮಾತು ಕಥೆಯನ್ನು ನಡೆಸಿದ್ದಾರೆ. ಸುದೀಪ್ ಮತ್ತು ಅವರ ತಂದೆ ಭಾಸ್ಕರ್ ರಾವ್ ಅವರ ಜೊತೆ ಫೋಟೋ ತೆಗಿಸಿಕೊಂಡಿದ್ದು, ಯಾವ ವಿಷಯದ ಕುರಿತು ಮಾತನಾಡಿದ್ದಾರೆ ಎನ್ನುವ ವಿಷಯ ಇನ್ನು ತಿಳಿದುಬಂದಿಲ್ಲ.

ಈ ಕ್ಷಣವನ್ನು ಖುಷಿಯಿಂದ ಸ್ವಾಗತಿಸೋಣ

ನಾವು ಒಳ್ಳೆಯದನ್ನು ಮಾಡಿದಾಗಲೆ ಜನರು ನಮ್ಮ ಕುರಿತು ಸುಳ್ಳು ವದಂತಿಗಳು ಹಬ್ಬಿಸಲು ಸಾಧ್ಯ. ನಾವು ಒಳ್ಳೆಯದನ್ನು ಮಾಡುತ್ತಿದ್ದೇವೆ, ಆದ್ದರಿಂದ ಈ ಕ್ಷಣವನ್ನು ಖುಷಿಯಿಂದ ಸ್ವಾಗತಿಸೋಣ ಎಂದು ಕಿಚ್ಚ ಟ್ವೀಟ್ ಮಾಡಿದ್ದರು. ಇನ್ನು ಪೈಲ್ವಾನ್ ಗೆ ಪೈರಸಿ ಭೂತವು ಸಹ ಅಂಟುಕೊಂಡಿದೆ. ತಮಿಳ್ ರಾಕರ್ಸ್ ವೆಬ್ ಸೈಟ್ ನಲ್ಲಿ ಪೈಲ್ವಾನ್ ಚಿತ್ರ ಲೀಕ್ ಆಗಿದ್ದು, ಇದರಿಂದ ಸಿನಿಮಾಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿದೆ ಎಂದು ಹೇಳಬಹುದಾಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾದ ಪೈಲ್ವಾನ್ ಮೂರು ಭಾಷೆಗಳಲ್ಲಿಯೂ ಪೈರಸಿ ಆಗಿದೆ.

LEAVE A REPLY

Please enter your comment!
Please enter your name here