ಧ್ವಂಸವಾದ ನವವೃಂದಾವನದ ಕಟ್ಟಡಕ್ಕೆ ಮರು ಜೀವ ನೀಡುತ್ತಿರುವ ಸ್ಥಳೀಯರು

0
714

ಹಂಪೆಯ ಇತಿಹಾಸ ಬಹಳ‌ ದೊಡ್ಡದು ಇತಿಹಾಸದಲ್ಲೇ ಸಿರಿವಂತ ಸಾಮ್ರಾಜ್ಯ, ಬೀದಿಗಳಲ್ಲಿ ಮುತ್ತು ರತ್ನಗಳನ್ನು ಮಾರಾಟ ಮಾಡುತ್ತಿದ್ದರು‌‌ ಎಂದರೆ ನೀವೆ ಊಹಿಸಿ ಇದರ ಪ್ರತಿಷ್ಠೆ ಆಗಿನ ಕಾಲದಲ್ಲಿ ಎಷ್ಟರ ಪ್ರಮಾಣದಲ್ಲಿ ಇತ್ತು ಅಂತ. ಅಕ್ಕ‌ ಬುಕ್ಕರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ, ವಿದ್ಯಾರಣ್ಯರು ಈ ಜಾಗದಲ್ಲಿ ತಮ್ಮ‌ ತಪಸ್ಸು ಶಕ್ತಿಯಿಂದ ಬಂಗಾರದ ಮಳೆಯು ಸುರಿಸುತ್ತಾರೆ. ಹಂಪಿ ವಿಜಯನಗರ ಸಾಮ್ರಾಜ್ಯ ಎಂದೆ ಪ್ರಸಿದ್ಧಿಯಾಗುತ್ತದೆ. ಅನೇಕ‌ ರಾಜರು ಬಂದು‌ ಹೋಗುತ್ತಾರೆ ಆದರೆ ವಿಜಯನಗರದ ರಾಜ ಎಂದ ತಕ್ಷಣವೇ ನಮಗೆ ನೆನಪಿಗೆ ಬರೋದು ಒಬ್ಬರೇ ಅವರೇ ಕೃಷ್ಣದೇವರಾಯ, ಇವರು ತಮ್ಮ ಪ್ರಜೆಗಳ‌ ಕಷ್ಟಕ್ಕೆ ಉತ್ತಮ‌ ರೀತಿಯಲ್ಲಿ ಸ್ಪಂದಿಸುತ್ತಿದ್ದರು.ತಮ್ಮ‌ ರಾಜ್ಯವನ್ನು ಬಹಳ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಿದ ರಾಜ ಕೃಷ್ಣದೇವರಾಯ.

ಹಿಂದು ಮಾಧ್ವ ಧರ್ಮದ ಸ್ವಾಮೀಜಿಗಳ ವೃಂದಾವನ

ಹಂಪೆಯಲ್ಲಿ ನೋಡಿ ಕಣ್ಣ್ ತುಂಬಿಕೊಳ್ಳುವ ಸ್ಥಳಗಳು ಅನೇಕ ಈಗಲು ಪರದೇಶದವರು ಬಂದು ಹಂಪೆಯ ರಮಣೀಯವಾದ ದೃಶ್ಯವನ್ನು ನೋಡಿ ಆನಂದ ಪಡುತ್ತಾರೆ, ಪರದೇಶದವರಿಗೆ ಸಮ್ಮರ್ ಟ್ರಿಪ್ ಎಂದರೆ ಅದು ಹಂಪಿ. ಹಂಪಿಯಲ್ಲಿ ನೀವು ಅನೇಕ ದೇವಾಲಯಗಳು ನೋಡಬಹುದಾಗಿದೆ. ನವವೃಂದಾವನ ಕೊಪ್ಪಳ ಜಿಲ್ಲೆಯ ಆನೆಗುಂದಿ ಗ್ರಾಮಕ್ಕೆ ಸೇರಿದ್ದು ಹಂಪಿಯಿಂದ ಬಹಳ ಹತ್ತಿರವಾದ ಜಾಗವಾಗಿದೆ. ಹಿಂದು ಮಾಧ್ವ ಧರ್ಮದ ಸ್ವಾಮೀಜಿಗಳ ವೃಂದಾವನ ಇಲ್ಲಿ ಇದೆ. ವ್ಯಾಸ ತೀರ್ಥರ ವೃಂದಾವನ ಮಧ್ಯದಲ್ಲಿದ್ದು, ಇನ್ನಿತರ ಸ್ವಾಮೀಜಿಗಳ ವೃಂದಾವನ ಸರ್ಕಲ್ ಆಕಾರವನ್ನು ಪಡೆದುಕೊಂಡಿದೆ. ಬೃಂದಾವನದ ಹತ್ತಿರ ಹಳದಿ ಗೆರೆಯನ್ನು ಎಳೆಯಲಾಗಿದೆ. ಈ ಗೆರೆಯನ್ನು ದಾಟಿ ನೀವು ಹೋಗಬಾರದು.

ಇನ್ನು ಅನೇಕ ಸಾಧು ಸಂತರು ಈ ಜಾಗಕ್ಕೆ ಭೇಟಿ ನೀಡಿದ್ದಾರೆ

ಹಂಪಿಯಿಂದ ನೀವು ದೋಣಿ ಅಥವಾ ತೆಪ್ಪದ ಮೂಲಕ ನವವೃಂದಾನಕ್ಕೆ ಹೋಗಬಹುದಾಗಿದೆ. ಆನೆಗುಂದಿಯಲ್ಲಿ ನೆಲೆಗೊಂಡಿದ್ದು, ಆನೆಗುಂದಿ ವಿಜಯನಗರ ರಾಜ್ಯದ ಮೊದಲ ಕ್ಯಾಪಿಟಲ್ ಸಿಟಿ ಆಗಿತ್ತು ನಂತರ ಹಂಪಿಯೆಂದು ಬದಲಾಯಿಸಿದ್ದರು. ವ್ಯಾಸರಾಜರು ತಾವು ಮೊದಲು ಪ್ರಹ್ಲಾದ ಅವತಾರ ತಾಳಿದ್ದಾಗ ತಮ್ಮ ತಂದೆಯನ್ನು ನರಸಿಂಹ ದೇವರಿಂದ ವಧಿಸಿರುತ್ತಾರೆ. ಆದ್ದರಿಂದ ಆ ದೋಷವನ್ನು ಪರಿಹಾರ ಮಾಡಿಕೊಳ್ಳಲು ಈ ಸ್ಥಳದಲ್ಲಿ ತಪಸ್ಸು ಮಾಡಿರುತ್ತಾರೆ. ಪುರಂದರದಾಸರು,ಕನಕದಾಸರು, ರಾಘವೇಂದ್ರ ಸ್ವಾಮಿ ಇನ್ನು ಅನೇಕ ಸಾಧು ಸಂತರು ಈ ಜಾಗಕ್ಕೆ ಭೇಟಿ ನೀಡಿದ್ದಾರೆ.

ಧಾರ್ಮಿಕ ಕಾರ್ಯ ಎಂದಿನಂತೆ ಸಾಗಬೇಕಾಗಿದೆ

ವ್ಯಾಸರಾಜರ ನವವೃಂದಾವನದ ಕಟ್ಟಡಗಳನ್ನು ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ನಿಧಿಯ ಆಸೆಗಾಗಿ ಇಂತಹದೊಂದು ಕಿಡಿಗೇಡಿಯ ಕೆಲಸವನ್ನು ಮಾಡಿದ್ದಾರೆ ಎಂದು ಗೊತ್ತಾಗಿದೆ ಗುರುವಾರ ಬೆಳಗಿನ ಜಾವದಲ್ಲಿ ಈ ಪ್ರಕರಣ ನಡೆದಿದೆ, ಶುಕ್ರವಾರ ದಿನದಂದು ನೂರಾರು ಭಕ್ತಾದಿಗಳು ಸೇರಿ ಪುನರ್ ನಿರ್ಮಾಣ ಮಾಡಲೆಬೇಕೆಂದು ಸಿದ್ದರಾಗಿದ್ದಾರೆ. ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪುನರ್ ಪ್ರತಿಷ್ಠಾಪನ ಕಾರ್ಯ ಸಾಗಿದೆ. ಮುಂಬೈ ನ ವಾಸ್ತು ಶಿಲ್ಪದ ತಜ್ಞರನ್ನು ಮತ್ತು ತಮಿಳು ನಾಡಿನಿಂದ ಬಂದ ಶಿಲ್ಪಿಗಳು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇದೆ ಸಮಯದಲ್ಲಿ ನವವೃಂದಾವನಕ್ಕೆ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮಿ ಭೇಟಿ ನೀಡಿದ್ದು, ವೃಂದಾವನದ ಪುನರ್ ನಿರ್ಮಾಣದ ಕಾರ್ಯಾಚರಣೆಯ ಕುರಿತು ಚರ್ಚಿಸಿದ್ದಾರೆ. ಧಾರ್ಮಿಕ ಕಾರ್ಯ ಎಂದಿನಂತೆ ಸಾಗಬೇಕೆಂದು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here