ವರ್ಲ್ಡ್ ಕಪ್ ನಲ್ಲಿ ಇಂಡಿಯಾ ಸೋತಿದ್ದಕ್ಕೆ ಕಣ್ಣೀರು ಹಾಕುತ್ತಿರುವ ಪಾರುಲ್ ಯಾದವ್

0
350

ಕಳೆದ ಎರಡು ದಿನಗಳ ಹಿಂದೆ ಕ್ರಿಕೆಟ್ ಅಭಿಮಾನಿಗಳೆಲ್ಲ ಟಿವಿ ಮುಂದೆ ಕಾತುರದಿಂದ ಕೂತಿದ್ರು. ಯಾಕಂದ್ರೆ ಎರಡು ದಿನಗಳ ಹಿಂದೆ, ಭಾರತ ಹಾಗು ನ್ಯೂಜಿಲ್ಯಾಂಡ್ ಪಂದ್ಯವಿತ್ತು. ಹಾಗಾಗಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಪಂದ್ಯ ನೋಡಲು ಕಾದು ಕುಳಿತ್ತಿದ್ದರು. ಜೊತೆಗೆ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅನ್ನೋ ಆತ್ಮವಿಶ್ವಾಸವನ್ನು ಹೊಂದಿದ್ದರು. ಆದ್ರೆ ಕೊನೆ ಸಮಯದಲ್ಲಿ ಇಂಡಿಯಾ ಸೋಲನ್ನು ಕಂಡಿತು. ಇದರಿಂದ ಎಲ್ಲ ಕ್ರಿಕೆಟ್ ಅಭಿಮಾನಿಗಳಿಗೂ ನಿರಾಸೆಯುಂಟಾಯಿತು. ಇನ್ನು ಎಷ್ಟೋ ಜನ ಇಂಡಿಯಾ ಸೋಲನ್ನು ಕಂಡಿದ್ದಕ್ಕೆ, ಕಣ್ಣೀರು ಹಾಕಿರುವವರು ಇದ್ದಾರೆ. ಅದರಲ್ಲಿ ಪಾರುಲ್ ಯಾದವ್ ಕೂಡ ಒಬ್ಬರು. ಹೌದು. ಪಾರುಲ್ ಗೆ ಕ್ರಿಕೆಟ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಒಂದು ರೀತಿಯಲ್ಲಿ ಹುಚ್ಚು ಅಂತಾನೆ ಹೇಳಬಹುದು. ಹಾಗಾಗಿ ಅವರು ಮೊನ್ನೆ ನಡೆದ ಪಂದ್ಯದ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಆದ್ರೆ ಇಂಡಿಯಾ ಸೋತಿದ್ದಕ್ಕೆ, ಈಗ ಪಾರುಲ್ ಕಣ್ಣೀರಾಕುತ್ತ ಒಂದು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇಂಡಿಯಾ ಸೋತಿರುವುದಕ್ಕೆ ಕಣ್ಣೀರು ಹಾಕುತ್ತಿರುವ ಪಾರುಲ್

ಕೆಲವರಿಗೆ ಅಭಿಮಾನ ಅನ್ನೋದು ಯಾವ ವಿಷಯಗಳಲ್ಲಿ ಇರುತ್ತೆ ಅನ್ನೋದೇ ಗೊತ್ತಾಗಲ್ಲ. ಹೌದು. ತಮಗಿಷ್ಟವಾಗುವ ವ್ಯಕ್ತಿಗೆ ಅಥವಾ ಕ್ರೀಡೆಗೆ ಅಭಿಮಾನಿಯಾಗಿರುತ್ತಾರೆ. ಅದೇ ರೀತಿ ಈ ಕ್ರಿಕೆಟ್ ಗೆ ಕೋಟ್ಯಾಂತರ ಜನ ಅಭಿಮಾನಿಗಳಿದ್ದಾರೆ. ಇಂಡಿಯಾ ಪಂದ್ಯ ಇರುವ ದಿನ ಕಾತುರದಿಂದ ಕಾಯುತ್ತ ಟಿವಿ ಮುಂದೆಯೇ ಕುಳಿತುಕೊಳ್ಳುತ್ತಾರೆ. ಅದೇ ರೀತಿ ಮೊನ್ನೆ ನಡೆದ ವರ್ಲ್ಡ್ ಕಪ್ ನ ಇಂಡಿಯಾ ಹಾಗು ನ್ಯೂಜಿಲ್ಯಾಂಡ್ ಮ್ಯಾಚ್ ನೋಡಲು ಬಹಳ ಆಸೆಯಿಂದ ಕೂತಿದ್ದರು. ಆದರೆ ಅಷ್ಟು ಆಸೆ ಇಂದು ಕೂತಿದ್ದ ಜನರಿಗೆ ಇಂಡಿಯಾ ಟೀಮ್ ನಿರಾಸೆಯನ್ನುಂಟುಮಾಡಿತು. ಆಗಿಂದ ಪಾರುಲ್ ಯಾದವ್ ಅವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರಂತೆ. ಹೌದು. ಪಾರುಲ್ ಗೆ ಕ್ರಿಕೆಟ್ ಅಂದ್ರೆ ವಿಪರೀತ ಹುಚ್ಚು. ಅವರು ಇಂಡಿಯಾ ಟೀಮ್ ನ ಕಟ್ಟಾಭಿಮಾನಿ. ಆದ್ರೆ ಇಂಡಿಯಾ ಸೋತಿರುವುದು ಪಾರುಲ್ ಗೆ ಬಹಳಷ್ಟು ನೋವಾಗಿದೆ. ಹಾಗಾಗಿ ನೋವನ್ನು ತಡೆಯಲಾಗದೆ ಕಣ್ಣೀರಾಕುತ್ತ ಒಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ.

ನಾನು ಇನ್ಮುಂದೆ ಕ್ರಿಕೆಟ್ ನೋಡುವುದಿಲ್ಲ

ಇನ್ನು ಪಾರುಲ್ ಕಣ್ಣೀರಾಕುತ್ತ ತಮಗನಿಸಿದ ಮಾತುಗಳನ್ನು ಸಹ ಹೇಳಿದ್ದಾರೆ. ಹೌದು. ನಾನು ಇನ್ಮುಂದೆ ಕ್ರಿಕೆಟ್ ನೋಡುವುದಿಲ್ಲ. ಯಾಕಂದ್ರೆ ನನ್ನ ಆಸೆ ಎಲ್ಲ ಮಣ್ಣು ಪಾಲಾಗಿದೆ. ಹಾಗಾಗಿ ನನ್ನ ಜೀವನದಲ್ಲಿ ನಾನು ಇನ್ಮುಂದೆ ಕ್ರಿಕೆಟ್ ನೋಡಲ್ಲ ಎಂದು ಗಳಗಳನೆ ಅಳುತ್ತಲೆ ಖಡಕ್ ಆಗಿ ಹೇಳಿದ್ದಾರೆ. ಜೊತೆಗೆ ನಮ್ಮ ತಮ ನೋವನ್ನು ಸಹ ಎಲ್ಲರ ಮುಂದೆ ತೋಡಿಕೊಂಡಿದ್ದಾರೆ. ನನಗೆ ಒಂದು ಚಿಕ್ಕಂದಿನಿಂದಲೂ ಕ್ರಿಕೆಟ್ ಅಂದ್ರೆ ಪಂಚಪ್ರಾಣ. ಹಾಗಾಗಿ ನನಗೆ ಎಷ್ಟೇ ಕೆಲಸ ಇದ್ದರು, ನಾನು ಮ್ಯಾಚ್ ಅಂತ ತಕ್ಷಣ ಹೋಗಿ, ಟಿವಿ ಮುಂದೆ ಕುಳಿತುಬಿಡುತ್ತಿದ್ದೆ. ಅದರಂತೆ ಈ ಬಾರಿಯೂ ಸಹ ನಾನು ಭಾರತ ಗೆಲ್ಲಲಿ ಎಂದು ಬಹಳಷ್ಟು ಆಸೆ ಪಟ್ಟಿದೆ. ಗೆಲ್ಲಲಿ ಎನ್ನುವುದಕ್ಕಿಂತ, ಗೆದ್ದೇ ಗೆಲ್ಲುತ್ತಾರೆ ಅನ್ನೋ ಆತ್ಮವಿಶ್ವಾಸ ಹೆಚ್ಚಾಗಿತ್ತು. ಆದ್ರೆ ಇಂಡಿಯಾ ಸೋತಿರುವುದು ನನ್ನಿಂದ ಸಹಿಸಲು ಆಗುತ್ತಿಲ್ಲ ಎಂದು ಗಳಗಳನೆ ಅಳುತ್ತಿದ್ದಾರೆ.

ಪಾರುಲ್ ವಿಡಿಯೋಗೆ ಹರಿದುಬರುತ್ತಿರುವ ಕಮೆಂಟ್ಸ್

ಪಾರು ಕಣ್ಣೀರಾಕುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಹಾಗಾಗಿ ಅದನ್ನು ಸಾವಿರಾರು ಜನರು ನೋಡಿ, ಅವರು ತಮಗನಿಸಿದ ಮಾತುಗಳನ್ನು ಹೇಳುತ್ತಿದ್ದಾರೆ. ಹೌದು. ಪಾರುಲ್ ವಿಡಿಯೋ ನೋಡಿದ ಕೆಲವರು ಅವರಿಗೆ ಸಮಾಧಾನ ಮಾಡಿದರೆ, ಇನ್ನು ಕೆಲವರು ಅಳಬೇಡ ತಂಗಿ ಅಳಬೇಡ ಎಂದು ಕಾಲೆಳೆಯುತ್ತಿದ್ದರೆ. ಇನ್ನು ಕೆಲವರು ಇದೆಲ್ಲ ಓವರ್ ರಿಯಾಕ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಆದ್ರೆ ಇದ್ಯಾವ ಕಮೆಂಟ್ ಗು ಪಾರುಲ್ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ವಿಡಿಯೋ ನೋಡಿದವರು ಮಾತ್ರ, ಸಾಲು ಸಾಲಾಗಿ ಕಮೆಂಟ್ ಮಾಡುತ್ತಿದ್ದಾರೆ.

ನಿಜಕ್ಕೂ ಕೆಲವರ ಅಭಿಮಾನವನ್ನು ನೋಡಿದಾಗ ಏನು ಹೇಳಬೇಕು ಅನ್ನೋದೇ ಗೊತ್ತಾಗುವುದಿಲ್ಲ. ಯಾಕಂದ್ರೆ ಅವರ ಹುಚ್ಚು ಅಭಿಮಾನ ಆ ರೀತಿ ಇರುತ್ತದೆ. ಈಗ ಕ್ರಿಕೆಟ್ ವಿಷಯದಲ್ಲೂ ಪಾರುಲ್ ಗೆ ಅದೇ ರೀತಿ ಅಭಿಮಾನ ಇರೋದ್ರಿಂದ ಈಗ ಕಣ್ಣೀರು ಹಾಕುತ್ತಿದ್ದಾರಂತೆ.

 

LEAVE A REPLY

Please enter your comment!
Please enter your name here