ಪೈರಸಿಯಿಂದ ಆಗಿರುವ ನಷ್ಟಕ್ಕೆ ವಿರೋಧಿಗಳಿಗೆ ನಿದ್ದೆ ಕೆಡಿಸುವಂತಹ ಎಚ್ಚರಿಕೆ ನೀಡಿದ ಕಿಚ್ಚ. ಏನದು?

0
707
pairasi nashta

ಪೈಲ್ವಾನ್ ಸಿನಿಮಾ ಪೈರಸಿ ಬಗ್ಗೆ ಹಲವು ಮಾತುಕತೆಗಳು ನಡೆಯುತ್ತಲೇ ಇವೆ. ಆದರೆ ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದ ಆರೋಪಿ ನಿನ್ನೆ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಹಾಗಾಗಿ ಪೊಲೀಸರು ಆತನನ್ನು ಬಂಧಿಸಿ, ಕಾರಣವನ್ನು ಸಹ ತಿಳಿದಿದ್ದರು. ಹೌದು. ನಾನು ದರ್ಶನ್ ಅವರ ಕಟ್ಟಾ ಅಭಿಮಾನಿ. ಹಾಗಾಗಿ ಅವರ ಪೈಲ್ವಾನ್ ಸಿನಿಮಾ ಅದ್ಭುತ ಪ್ರದರ್ಶನ ಕಾಣುವುದು ನನ್ನಿಂದ ಸಹಿಸಲು ಆಗಲಿಲ್ಲ. ಹಾಗಾಗಿ ಈ ರೀತಿಯ ಕೆಲಸವನ್ನು ಮಾಡಿದೆ ಎಂದು ಹೇಳಿದ್ದ. ಅಲ್ಲಿಂದ ಟ್ವಿಟ್ಟರ್ ನಲ್ಲಿ ದೊಡ್ಡ ಕುರುಕ್ಷೇತ್ರ ಯುದ್ಧವೇ ನಡೆಯುತ್ತಿದೆ. ಹೌದು. ಇಷ್ಟು ದಿನ ಪೈಲ್ವಾನ್ ಸಿನಿಮಾ ಪೈರಸಿ ಬಗ್ಗೆ ಫ್ಯಾನ್ಸ್ ವಾರ್ ನಡೆಯುತ್ತಿತ್ತು. ಆದ್ರೆ ಸುದೀಪ್ ಮಾತ್ರ ಎಲ್ಲವನ್ನು ನೋಡಿಯೂ ಸುಮ್ಮನಿದ್ದರು. ಆದ್ರೆ ಈಗ ಒಂದು ಖಡಕ್ ಹೇಳಿಕೆಯೊಂದನ್ನು ನೀಡಿದ್ದಾರೆ. ಹೌದು. ಪೈರಸಿಯಿಂದ ಆಗಿರುವ ನಷ್ಟದ ಬಗ್ಗೆ ತಿಳಿಸಿ, ವಿರೋಧಿಗಳಿಗೆ ಖಡಕ್ ಹೇಳಿಕೆ ನೀಡಿದ್ದಾರೆ.

ನಾವು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ

ಇನ್ನು ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದ ಆರೋಪಿ ನೀಡಿದ್ದ ಹೇಳಿಕೆಯಿಂದಾಗಿ ಸುದೀಪ್ ಬಹಳಷ್ಟು ಕೆಂಡಾಮಂಡಲರಾಗಿದ್ದಾರೆ. ಹೌದು. ಇಷ್ಟುದಿನ ಪೈರಸಿ ಆಗಿರುವ ವಿಚಾರ ತಿಳಿದರು ಸಹ ಸಮಾಧಾನದಿಂದ ಇದ್ದರು. ಆದ್ರೆ ಈಗ ದರ್ಶನ್ ಅಭಿಮಾನಿ ಪೈರಸಿ ಮಾಡಿರುವ ವಿಚಾರ ತಿಳಿದು, ಆಕ್ರೋಶದಿಂದ ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಹೌದು. ಸುದೀಪ್ ತಮ್ಮ ವಿರೋಧಿಗಳಿಗೆ ಒಂದು ಮೆಸೇಜ್ ಟ್ವೀಟ್ ಮಾಡಿದ್ದಾರೆ. ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತ್ತಿಲ್ಲ. ನನ್ನ ಮೌನ, ತಾಳ್ಮೆ, ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳು ಈಗ ನಿಮ್ಮೆದಿಯಾಗಿ ಇರಬಹುದು. ಆದ್ರೆ ಅವರ ನೆಮ್ಮದಿಯ ನಿದ್ದೆ ಕೆಲವು ದಿನಗಳು ಮಾತ್ರ ಎಂದು ಬರೆದುಕೊಂಡಿದ್ದಾರೆ.

ಪೈರಸಿಯಿಂದ ಪೈಲ್ವಾನ್ ಗೆ 5 ಕೋಟಿ ರೂ ನಷ್ಟವಾಗಿದೆ

ತಮ್ಮ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವಾಗ ಸುದೀಪ್ ಪೈರಸಿಯಿಂದ ಆಗಿರುವ ನಷ್ಟವನ್ನು ಸಹ ತಿಳಿಸಿದ್ದಾರೆ. ಹೌದು. ಕಿಡಿಗೇಡಿಗಳು ಮಾಡಿರುವ ಪೈರಸಿಯಿಂದ ಪೈಲ್ವಾನ್ ಸಿನಿಮಾಗೆ 5 ಕೋಟಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ನಿಜಕ್ಕೂ ಇದಕ್ಕೆ ತಕ್ಕ ಶಿಕ್ಷೆಯನ್ನು ಅವರು ಅನುಭವಿಸಲೇ ಬೇಕು. ಯಾಕಂದ್ರೆ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿರುವುದು ಅವರಿಂದ ಸಹಿಸಲು ಆಗುತ್ತಿಲ್ಲ. ಹಾಗಾಗಿ ಅವರು ಈ ರೀತಿಯ ಕೆಲಸವನ್ನು ಮಾಡಿದ್ದಾರೆ. ಆದ್ರೆ 5 ಕೋಟಿ ನಷ್ಟವಾಗಿರೋದು ದೊಡ್ಡದಲ್ಲ. ಆದರೆ ಅದರ ಹಿಂದೆ ಶ್ರಮ ಪಟ್ಟು ಕೆಲಸ ಮಾಡಿರುವ ನಮಗೆ ಮಾತ್ರ ಗೊತ್ತಿದೆ ಎಷ್ಟು ಶ್ರಮ ವಹಿಸಿದ್ದೆವು ಎಂದು ಬಹಳಷ್ಟು ಭಾವುಕರಾಗಿ, ಆಕ್ರೋಶಗೊಂಡು ಟ್ವೀಟ್ ಮಾಡಿದ್ದಾರೆ.

ಮಾಡಿದ ತಪ್ಪನ್ನು ಒಪ್ಪಿಕೊಂಡ ರಾಕೇಶ್

ಇನ್ನು ಪೈಲ್ವಾನ್ ಸಿನಿಮಾವನ್ನು ಪೈರಸಿ ಮಾಡಿದ್ದ ರಾಕೇಶ್ ನನ್ನು ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದಾರೆ. ರಾಕೇಶ್ ಕೂಡ ತಾನೇ ಪೈರಸಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇನ್ನು ಈ ಮಧ್ಯೆ ನಿನ್ನೆ ಸುದೀಪ್ ಮನೆಗೆ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಕೂಡ ಏಕಾಏಕಿ ಭೇಟಿ ನೀಡಿದ್ದರು. ಅವರು ನಿನ್ನೆ ಭೇಟಿ ನೀಡಿದ್ದು, ಎಲ್ಲರಿಗು ಒಂದು ಕ್ಷಣ ಆಶ್ಚರ್ಯವಾಗಿತ್ತು. ಆದರೆ ಅವರು ಯಾವ ಕಾರಣಕ್ಕೆ ಭೇಟಿಯಾಗಿದ್ದರು ಎಂಬುದನ್ನು ಇಲ್ಲಿಯವರೆಗೂ ಸುದೀಪ್ ಆಗಲಿ, ಅಥವಾ ಭಾಸ್ಕರ್ ರಾವ್ ಅವರಾಗಲಿ ತಿಳಿಸಿಲ್ಲ. ಆದರೆ ಅಭಿಮಾನಿಗಳಲ್ಲಿ ಮಾತ್ರ ಗೊಂದಲ ಶುರುವಾಗಿದೆ. ಆದರೆ ಸುದೀಪ್ ಮಾತ್ರ ಪೈರಸಿ ಬಿಟ್ಟು, ಉಳಿದ ಯಾವ ವಿಷಯಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿಲ್ಲ.

ಒಟ್ಟಿನಲ್ಲಿ ಸುದೀಪ್ ಅವರ ಪೈಲ್ವಾನ್ ಸಿನಿಮಾ ವಿಚಾರ ಬಹಳಷ್ಟು ಸದ್ದು ಮಾಡುತ್ತಿದ್ದು, ಭಾರಿ ಸಂಚಲವನ್ನು ಮೂಡಿಸುತ್ತಿದೆ. ಇತ್ತ ಸುದೀಪ್, ತಪ್ಪು ಮಾಡಿರುವವರು ನಿದ್ದೆ ಕೆಡುವ ಸಮಯ ಬರುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಇದರ ಅರ್ಥವೇನು ಎಂಬುದು ಸಹ ಯಾರಿಗೂ ತಿಳಿಯದಾಗಿದೆ. ಆದ್ರೆ ತಮ್ಮ ವಿರೋಧಿಗಳಿಗೆ ಮಾತ್ರ ಖಡಕ್ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here