ಈ ಸಾಲಿನ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿರುವ ಕನ್ನಡಿಗರ ಲಿಸ್ಟ್ ಇಲ್ಲಿದೆ

0
441
padma awards karnataka
padma awards karnataka

ಏನಿದು ಪದ್ಮ ಪ್ರಶಸ್ತಿ ?

padma awards
padma awards

ಭಾರತ ರತ್ನ ನಂತರದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಯಲ್ಲಿ ಮೂರು ವಿಭಾಗಗಳಿದ್ದು ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಎಂದು ಕರೆಯಲ್ಪಡುತ್ತವೆ.
ಪದ್ಮ ವಿಭೂಷಣ ಭಾರತದ ದ್ವಿತೀಯ ಅತ್ಯುನ್ನತ ನಾಗರೀಕ ಗೌರವವಾಗಿದ್ದು ,ಪದ್ಮ ಭೂಷಣ ಮತ್ತು ಪದ್ಮ ಶ್ರೀಗಳು ಮೂರನೆಯ ಹಾಗೂ ನಾಲ್ಕನೆಯ ಕ್ರಮದಲ್ಲಿವೆ. ಪ್ರತಿ ವರ್ಷದ ಗಣರಾಜ್ಯೋತ್ಸವದಂದು ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಸಮಾಜ ಸೇವೆ, ಕ್ರೀಡೆ, ಸಾರ್ವಜನಿಕ ವ್ಯವಹಾರ, ವಿಜ್ಞಾನ, ವ್ಯಾಪಾರ ಮತ್ತು ಕೈಗಾರಿಕೆ, ಔಷದ, ನಾಗರೀಕ ಸೇವೆ ಮತ್ತು ಇತರೆ ವಿಭಾಗಗಳಲ್ಲಿ ಅತ್ಯುನ್ನತ್ತ ಸಾಧನೆ ಮಾಡಿದವರಿಗೆ ಈ ನಾಗರೀಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಈ ಸಾಲಿನ ಪದ್ಮ ಪ್ರಶಸ್ತಿಯನ್ನು ಪಡೆದ ನಮ್ಮ ಹೆಮ್ಮೆಯ ಕನ್ನಡಿಗರು

padma awards karnataka
padma awards karnataka

ಈ ವರ್ಷದಲ್ಲಿ ಕನ್ನಡನಾಡಿನ ಒಟ್ಟು ಹತ್ತು ಜನರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಿವಂಗತರಾದ ಪೇಜಾವರ ಶ್ರೀಗಳಿಗಳು ಹಾಗು ಜಾರ್ಜ್ ಫರ್ನಾಂಡಿಸ್ ಅವರಿಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದ್ದು. ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಭರತ್ ಗೋಯೆಂಕಾರಿಗೆ ಔಷದದಲ್ಲಿ ಎಂ.ಪಿ.ಗಣೇಶ್ ಅವರಿಗೆ, ಕ್ರೀಡೆಯಲ್ಲಿ ಬಿ.ಏನ್.ಗಂಗಾಧರ್ ಅವರಿಗೆ ಪತ್ರಿಕೋದ್ಯಮದಲ್ಲಿ ಸಂಪತ್ ಕುಮಾರ ಮತ್ತು ವಿದ್ವಾನ್ ಜಯಲಕ್ಷ್ಮಿಯವರಿಗೆ, ಶಿಕ್ಷಣ ಹಾಗೂ ನಾಗರೀಕ ಸೇವೆಲ್ಲಿ ಹೇರಳ ಹಾಜಬ್ಬರಿಗೆ , ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ತುಳಸಿ ಗೌಡ ಅವರಿಗೆ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ವಿಜಯ ಸಂಕೇಶ್ವರ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪದ್ಮ ಪ್ರಶಸ್ತಿ ಲಿಸ್ಟ್ನಲ್ಲಿ ಕನ್ನಡ ಚಿತ್ರರಂಗದ ಸಾಧಕರು ಯಾಕಿಲ್ಲ ?

simple suni on padma award
simple suni on padma award

ಈ ಬಾರಿಯ ಪದ್ಮ ಪ್ರಶಸ್ತಿಯ ಬಗ್ಗೆ ಗಾಂಧಿನಗರದ ಕೆಲವರು ಬೇಸರ ವ್ಯಕ್ತ ಪಡಿಸಿದ್ದಾರೆ. ಹಿಂದಿ ಚಲನಚಿತ್ರರಂಗಕ್ಕೆ ಕೊಟ್ಟಷ್ಟು ಮಹತ್ವವನ್ನು, ಪ್ರಾಧಾನ್ಯವನ್ನು ದಕ್ಷಿಣ ಭಾರತದ ಚಿತ್ರೋದ್ಯಮಕ್ಕೆ ಕೊಡುತ್ತಿಲ್ಲ ಎಂಬುದು ಚಂದನವನದ ಅಭಿಪ್ರಾಯವಾಗಿದೆ. ಈ ಭಾರಿ ಕರ್ನಾಟಕದ ಹತ್ತು ಜನರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರೂ, ಸಿನಿಮಾ ಕಲಾವಿದರು ಹಾಗು ತಂತ್ರಜ್ಞರನ್ನು ಕಡೆಗಣಿಸಲಾಗಿದೆ ಎಂಬುವುದು ಗಾಂಧಿನಗರದ ಮಂದಿಯ ವಾದ.

ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಅನಂತ್ ನಾಗ್ ಮತ್ತು ಶಿವರಾಜ್ ಕುಮಾರ್ ಹಾಗೂ ಉಳಿದ ಹಿರಿಯ ಕಲಾವಿದರಿಗೂ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕಿತ್ತು ಎನ್ನುವುದು ಕನ್ನಡ ಸಿನಿಮಾ ನಿರ್ದೇಶಕ ಸುನಿಯವರ ಮಾತು.

 

 

LEAVE A REPLY

Please enter your comment!
Please enter your name here