ಭಾರತ ಗೆದ್ದ ನಂತರ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟ ಪಾರುಲ್ ಯಾದವ್

0
581

ವಿಶ್ವ ಕಪ್ ಕ್ರಿಕೆಟ್ ಪಂದ್ಯಾವಳಿಗಳು ಪ್ರಸಾರ ಮಾಡುವ ಹಕ್ಕನ್ನು ಪಾಕಿಸ್ತಾನದ ಜಜ್ಜ್ ವಾಹಿನಿ ಪಡೆದುಕೊಂಡಿದೆ. ಈ ವಾಹಿನಿ ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಕುರಿತು ಹೀಯಾಳಿಸುವುದುಕ್ಕಾಗಿ ಒಂದು ಜಾಹೀರಾತನ್ನು ಪ್ರಸಾರ ಮಾಡಿದ್ದು, ಜಾಹೀರಾತಿನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಕಾಣುವ ಹಾಗೆ ಒಬ್ಬ ವ್ಯಕ್ತಿಯು ಮೀಸೆ ಬಿಟ್ಟಿದ್ದು, ಅವನು ಭಾರತ ಕ್ರಿಕೆಟ್ ಆಟಗಾರರು ಹಾಕಿಕೊಳ್ಳುವ ಜೆರ್ಸಿಯನ್ನು ಧರಿಸಿದ್ದಾನೆ. ಈ ಜಾಹಿರಾತಿನ ಅವಧಿ 33 ನಿಮಿಷ, ಅಭಿನಂದನ್ ಅವರು ಪಾಕಿಸ್ತಾನದ ಎಫ್ -16 ವಿಮಾನವನ್ನು ಹೊಡೆದುರುಳಿಸಿ, ನಂತರ ಪಾಕಿಸ್ತಾನದಲ್ಲಿ ಬಂಧಿತರಾಗಿದ್ದರು. ಈ ಸಮಯದಲ್ಲಿ ಅವರ ಕೆಲವೊಂದು ವೀಡಿಯೋ ಗಳು ಬಿಡುಗಡೆಯಾಗಿದ್ದವು, ಬಿಡುಗಡೆಯಾದ ವೀಡಿಯೋ ಗಳಲ್ಲಿ ಒಂದು ವೀಡಿಯೋ ವನ್ನು ಟಿ‌ವಿ ವಾಹಿನಿಯವರು ಆರಿಸಿಕೊಂಡಿದ್ದಾರೆ.

ಆ ಕಪ್ ನಮ್ಮದೇ ಇಲ್ಲಿಯೇ ಇಟ್ಟು ಹೋಗು

ಪಾಕಿಸ್ತಾನದ ಸೇನೆಯ ಜೊತೆಗೆ ಅಭಿನಂದನ್ ಅವರು ಮಾತನಾಡುತ್ತಿರುವ, ಒಂದು ವೀಡಿಯೋ ವನ್ನು ಬಳಸಿಕೊಂಡು ಅದೇ ಶೈಲಿಯಲ್ಲಿ ವೀಡಿಯೋ ಮಾಡಿ ಗೇಲಿ ಮಾಡಿದ್ದಾರೆ. ವೀಡಿಯೋವೊಂದರಲ್ಲಿ ಟಾಸ್ ಗೆದ್ದರೆ ನೀವು ಏನು ಮಾಡುತ್ತೀರಾ? ಎಂದು ಅಭಿನಂದನ್ ಹೋಲಿಕೆ ಇರುವ ವ್ಯಕ್ತಿಯನ್ನು ಕೇಳಿದರೆ, ಅದನ್ನು ನಾನು ಹೇಳುವಂತಿಲ್ಲ ಎಂದು ಆ ವ್ಯಕ್ತಿ ಉತ್ತರಿಸಿದ್ದಾನೆ. ಟೀಮ್ ಇಂಡಿಯಾದ ಪ್ಲೇಯಿಂಗ್ 11 ಹೇಗಿದೆ ಎಂದು ಕೇಳಿದಾಗ? ಅದನ್ನು ನಾನು ಹೇಳುವಂತಿಲ್ಲ ಎಂದು ಆ ವ್ಯಕ್ತಿ ಉತ್ತರ ಕೊಟ್ಟಿದ್ದಾನೆ. ನಂತರ ಚಹಾ ಹೇಗಿದೆ ಎಂದು ಕೇಳಿದಾಗ ಅದು ಚೆನ್ನಾಗಿದೆ ಎಂದಿದ್ದಾನೆ. ಆ ವ್ಯಕ್ತಿ ಅಲ್ಲಿಂದ ಕಪ್ ಕೈ ಅಲ್ಲಿ ಇಟ್ಟುಕೊಂಡು ಹೊರಡುವಾಗ, ಏಕೆ ಕಪ್ ಅನ್ನು ಇಟ್ಟುಕೊಂಡು ಹೋಗುತ್ತೀರಾ ಎಂದು ಕೇಳಿದಾಗ? ಆ ಕಪ್ ನಮ್ಮದೇ ಇಲ್ಲಿಯೇ ಇಟ್ಟು ಹೋಗು ಎಂದು ಹೇಳುವ ಜಾಹೀರಾತನ್ನು ಮಾಡಿದ್ದರು.

ಸ್ಯಾಂಡಲ್ ವುಡ್ ನ ನಟಿ ಪ್ರತ್ಯುತ್ತರ ಕೊಟ್ಟಿದ್ದಾರೆ

ನಿನ್ನೆ ಭಾರತ, ಪಾಕಿಸ್ತಾನದ ವಿರುಧ್ಹ ಭರ್ಜರಿ ಗೆಲುವನ್ನು ಸಾಧಿಸಿದೆ. ಟಾಸ್ ಗೆದ್ದು ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಭಾರತದ ಆಟಗಾರರ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದ್ದರು. ರೋಹಿತ್ ಶರ್ಮಾ ಶತಕವನ್ನು ಭಾರಿಸುವ ಮೂಲಕ ತಂಡಕ್ಕೆ ನೆರವಾಗಿದ್ದರು. ಕರ್ನಾಟಕದ ಆಟಗಾರ ಕೆ‌ಎಲ್ ರಾಹುಲ್ ಅವರು ಸಹ ಅರ್ಧ ಶತಕವನ್ನು ಭಾರಿಸಿದ್ದಾರೆ. 336 ರನ್ಸ್ ಗಳ ಟಾರ್ಗೆಟ್ ಭಾರತ ಪಾಕಿಸ್ತಾನಕ್ಕೆ ನೀಡುತ್ತಾರೆ. ಭಾರತದ ಬೌಲರ್ಸ್ ಪಾಕಿಸ್ತಾನದ ವಿಕೆಟ್ಸ್ ಬಹಳ ಬೇಗನೆ ಪಡೆದುಕೊಳ್ಳುತ್ತಾರೆ. ಆನಂತರ ಮಳೆ ಬಂದಿರುವ ಕಾರಣದಿಂದಾಗಿ, ಡೆಕ್ವರ್ಸ್ ರೂಲ್ಸ್ ಪ್ರಕಾರ ಪಾಕಿಸ್ತಾನ ಸೋಲುತ್ತಾರೆ. ಭಾರತ ಗೆದ್ದಿರುವುದರಿಂದ, ಪಾಕಿಸ್ತಾನ ಮಾಡಿದ ಜಾಹೀರಾತಿಗೆ, ಈಗ ಸ್ಯಾಂಡಲ್ ವುಡ್ ನ ನಟಿ ಪ್ರತ್ಯುತ್ತರ ಕೊಟ್ಟಿದ್ದಾರೆ. ಮುಂದೆ ಓದಿ.

ಟೀ ಕಪ್ ನೀವೆ ಇಟ್ಟುಕೊಳ್ಳಿ ವರ್ಲ್ಡ್ ಕಪ್ ನಾವೆ ಗೆಲ್ಲುತ್ತೇವೆ

ಪಾರುಲ್ ಯಾದವ್ ವಿಂಗ್ ಕಮ್ಯಾಂಡರ್ ಅಭಿನಂದನ್ ಅವರ ರೀತಿಯೇ ಮೀಸೆಯನ್ನು ಅಂಟಿಸಿಕೊಂಡು ಒಂದು ವೀಡಿಯೋ ದಲ್ಲಿ ಕಾಣಿಸಿಕೊಂಡಿದ್ದಾರೆ.  ಪರುಲ್ ಯಾದವ್ ಪಾಕಿಸ್ತಾನಕ್ಕೆ ಟಾಂಗ್ ಕೊಟ್ಟಿದ್ದಾರೆ. ಟೀ ಕಪ್ ನೀವೆ ಇಟ್ಟುಕೊಳ್ಳಿ ವರ್ಲ್ಡ್ ಕಪ್ ನಾವೆ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಪಾರುಲ್ ಅವರು ತಮ್ಮ ಸ್ನೇಹಿತರ ಜೊತೆಗೆ ಇಂಡಿಯಾ ಪಾಕಿಸ್ತಾನದ ಪಂದ್ಯವನ್ನು ವೀಕ್ಷಿಸಿದ್ದಾರೆ. ಭಾರತ ಗೆದ್ದಿರುವದರಿಂದ ಇವರಿಗೆ ತುಂಬಾ ಖುಷಿಯಾಗಿದೆ ಅಂತೆ. ಈ ಹಿಂದೆ ಪೂನಂ ಪಾಂಡೆ ಅವರು ಸಹ ಬೇರೆ ರೀತಿಯಲ್ಲಿ ಪಾಕಿಸ್ತಾನ ಮಾಡಿರುವ ಜಾಹೀರಾತಿಗೆ’ ಉತ್ತರ ನೀಡಿದ್ದರು . ಈಗ ಪಾರುಲ್ ಯಾದವ್ ಅವರು ವೀಡಿಯೋ ಮಾಡುವುದರ ಮೂಲಕ ಭಾರತ ವಿಶ್ವ ಕಪ್ ಗೆದ್ದೆ ಗೆಲ್ಲುತ್ತದೆ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ಸತತ 3 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿರುವ ಭಾರತ, ಮುಂಬರುವ ಪಂದ್ಯಾವಳಿಗಳಲ್ಲಿಯು ಗೆಲ್ಲಬೇಕೆನ್ನುವುದು ಪ್ರತಿಯೊಬ್ಬ ಭಾರತೀಯನ ಆಸೆ.

LEAVE A REPLY

Please enter your comment!
Please enter your name here