ಅಂತಾರಾಷ್ಟ್ರೀಯ ಆಟಗಾರ್ತಿ ಪಿ.ವಿ ಸಿಂಧು ಮೇಲೆ ಕಣ್ಣಾಕಿದ 70ರ ತಾತ. ನಾ ನಿನ್ನ ಬಿಡಲಾರೆ

0
497

ತಮ್ಮ ನೆಚ್ಚಿನ ಸ್ಟಾರ್ ಗಳನ್ನು ಕಂಡರೆ ಅಭಿಮಾನಿಗಳಿಗೆ ಒಂಥರಾ ಅಭಿಮಾನ. ಅದು ಯಾವ ಕ್ಷೇತ್ರದಲ್ಲಾದರೂ ಆಗಿರಬಹದು. ಹೌದು. ಸಿನಿಮಾ ನಟರು, ರಾಜಕೀಯ ನಾಯಕರು, ಸರ್ಕಾರಿ ಅಧಿಕಾರಿಗಳು ಹಾಗು ಕ್ರೀಡಾ ಪಟುಗಳು ಈ ರೀತಿಯ ಕ್ಷೇತ್ರದಲ್ಲಿನ ನೆಚ್ಚಿನ ವ್ಯಕ್ತಿಗಳನ್ನು ಜನರು ಇಷ್ಟ ಪಡುತ್ತಾರೆ. ಹಾಗಾಗಿ ತಮ್ಮ ನೆಚ್ಚಿನ ವ್ಯಕ್ತಿಗಳಿಗೆ ಏನಾದ್ರು ಉಡುಗೊರೆ ನೀಡಬೇಕೆಂದು ಬಯಸುತ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ಸ್ಟಾರ್ ಗಳ ಜೊತೆ ಫೋಟೋ ತೆಗೆಸಿಕೊಳ್ಳೋದು, ಆಟೋಗ್ರಾಫ್ ಪಡೆಯೋದು ಮಾಡ್ತಾರೆ. ಆದರೆ ಇಲ್ಲೊಬ್ಬ ವೃದ್ಧ ತಮ್ಮ ನೆಚ್ಚಿನ ಕ್ರೀಡಾಪಟುವನ್ನು ಮದುವೆಯಾಗಲು ನಿರ್ಧಾರ ಮಾಡಿದ್ದಾನೆ. ಹೌದು. ನಮ್ಮ ದೇಶಕ್ಕೆ ಕೀರ್ತಿ ತಂದ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪಿ.ವಿ ಸಿಂಧು ಅವರ ಜೊತೆ ನನ್ನ ಮದುವೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾನೆ.

ಪಿ.ವಿ ಸಿಂಧುರನ್ನು ಮದುವೆ ಮಾಡಿಕೊಳ್ಳಲು ನಿರ್ಧರಿಸಿರುವ 70ರ ವೃದ್ಧ

ಈ ವೃದ್ಧನ ಹೆಸರು ಮಲೈಸ್ವಾಮಿ. ಇವರಿಗೆ 70 ವರ್ಷ ಆಗಿದೆ. ಇವರು ಮೂಲತಃ ತಮಿಳುನಾಡಿನ ರಾಮನಾಥಪುರಂ ನವರು. ಇವರಿಗೆ ಬಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅಂದ್ರೆ ಬಹಳ ಇಷ್ಟವಂತೆ. ಹಾಗಾಗಿ ಮಲೈಸ್ವಾಮಿ, ಸಿಂಧು ಅವರನ್ನು ಮದುವೆಯಾಗಲು ನಿರ್ಧಾರ ಮಾಡಿದ್ದಾರಂತೆ. ಯಾಕಂದ್ರೆ ಸಿಂಧು ಅವರ ಆಟೋಟ ಹಾಗು ಅವರ ವ್ಯಕ್ತಿತ್ವ ಬಹಳ ಇಷ್ಟವಾಗಿದೆಯಂತೆ. ಹಾಗಾಗಿ ನಾನು ಮದುವೆಯಾದ್ರೆ, ಅವರನ್ನೇ ಆಗುವುದು ಎಂದು ಹಠ ಹಿಡಿದಿದ್ದಾರೆ. ಅಲ್ಲದೆ ನನಗೆ ಅವರ ಜೊತೆ ಮದುವೆ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ. ಹೌದು. ನನಗೆ ಅವರ ಜೊತೆ ಮದುವೆ ಮಾಡಿಸಬೆಕು, ಇಲ್ಲವಾದರೆ ಸಿಂಧು ಅವರನ್ನು ಅಪಹರಿಸುವುದಾಗಿ ತಿಳಿಸಿದ್ದಾರೆ. ಇದನ್ನು ಕೇಳಿದ ಜಿಲ್ಲಾಧಿಕಾರಿಗಳೇ ಒಂದು ಕ್ಷಣ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರ ಮನವಿಯನ್ನು ಪಡೆದುಕೊಂಡಿದ್ದಾರೆ.

ಮದುವೆ ಮಾಡಿಸದಿದ್ದರೆ, ಕಿಡ್ನ್ಯಾಪ್ ಮಾಡುತ್ತೇನೆ

ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಜನರ ಸಮಸ್ಯೆಗಳನ್ನು ಕೇಳಲು ಸಭೆಯನ್ನು ಏರ್ಪಡಿಸುತ್ತಾರೆ. ಈ ಸಭೆಗೆ ಆಗಮಿಸಿದ್ದ ಮಲೈಸ್ವಾಮಿ ಅವರು ಸಿಂಧು ಆಡುವ ಶೈಲಿ ತನಗೆ ಬಹಳ ಇಷ್ಟವಾಗಿದ್ದು, ಆಕೆಯನ್ನು ತನ್ನ ಮದುವೆಯಾಗುವ ಯೋಚನೆ ಇದೆ ಎಂದು ಇಬ್ಬರ ಫೋಟೋಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ನೀವು ಮದುವೆ ಮಾಡಿಸದಿದ್ದರೆ, ನಾನು ಕಿಡ್ನ್ಯಾಪ್ ಮಾಡುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ. ಹಾಗಾಗಿ ನೀವೇ ಮದುವೆ ಮಾಡಿಸಿ ಎಂದು ಹೇಳಿದ್ದಾರೆ.

ಅರ್ಜಿಯಲ್ಲಿ ತನಗೆ 16 ವರ್ಷ ಎಂದು ನಮೂದಿಸಿದ್ದಾರೆ

ಇನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿರುವ ವೃದ್ಧ ಖಡಾ ಖಂಡಿತವಾಗಿ ನನಗೆ ಮದುವೆ ಮಾಡಿಸಬೇಕೆಂದು ಹೇಳಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮಾನವೀಯ ಅರ್ಜಿಯಲ್ಲಿ ತನಗಿನ್ನು ೧೬ ವರ್ಷ. ನಾನು ಹುಟ್ಟಿದ್ದು ೨೦೦೪ರಲ್ಲಿ ಎಂದು ಬರೆದಿದ್ದಾರೆ. ಹೌದು. ನನಗಿನ್ನೂ ಚಿಕ್ಕ ವಯಸ್ಸು, ನಾನು ಸಿಂಧು ಅವರನ್ನು ಮದುವೆಯಾಗಲೇ ಬೇಕು. ಆದಷ್ಟು ಬೇಗ ಜಿಲ್ಲಾಡಳಿತ ಮದುವೆ ಸಿದ್ಧತೆಯನ್ನು ನಡೆಸಬೇಕು. ಇಲ್ಲವಾದರೆ ನಾನು ಹೇಳಿರುವಂತೆ ಕಿಡ್ನ್ಯಾಪ್ ಮಾಡುವುದು ಪಕ್ಕಾ. ಯಾರೇ ಅಡ್ಡ ಬಂದರು ನಾನು ಬಿಡುವುದಿಲ್ಲ. ಅವರನ್ನು ಮದುವೆಯಾಗೇ ಆಗುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಮಲೈಸ್ವಾಮಿ ಅವರು ಪಿ.ವಿ ಸಿಂಧು ಅವರನ್ನು ಮದುವೆಯಾಗುವುದಾಗಿ ಮನವಿ ಸಲ್ಲಿಸಿದ್ದಾರೆ. ಆದರೆ ಅವರ ಮಾತುಗಳನ್ನು ಕೇಳಿ ಜಿಲ್ಲಾಧಿಕಾರಿಗಳೇ ಆಶ್ಚರ್ಯ ಪಟ್ಟಿದ್ದಾರೆ. ಆದರೂ ಅವರ ಅರ್ಜಿಯನ್ನು ಸ್ವೀಕರಿಸಿದ್ದಾರೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ಮಾತ್ರ ನೀಡಿಲ್ಲ.

LEAVE A REPLY

Please enter your comment!
Please enter your name here