ರೈಲ್ವೆ ನಿಲ್ದಾಣದ ಬಳಿಯಿರುವ ಒಂದು ರೂಪಾಯಿ ಚಿಕಿತ್ಸಾಲಯದಲ್ಲಿ ಉಳಿದ ಎರಡು ಜೀವಗಳು

0
728

ಪ್ರತಿನಿತ್ಯ ಸಾಕಷ್ಟು ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ವೈದ್ಯರು ರೋಗಿಗಳ ಕಷ್ಟಗಳನ್ನು ಆಲಿಸಿ ಸೂಕ್ತವಾದ ಚಿಕಿತ್ಸೆಯನ್ನು ನೀಡಿ ಕೆಲ ಸಲಹೆಗಳನ್ನು ನೀಡಿ ಕಳುಹಿಸುತ್ತಾರೆ. ರೋಗಿಗಳ ಪ್ರಾಣವು ವೈದ್ಯರ ಕೈಯಲ್ಲಿರುತ್ತದೆ ಅಂತಾನೆ ಹೇಳಬಹುದಾಗಿದೆ. ಅದೆಷ್ಟೋ ರೋಗಿಗಳ ಪಾಲಿಗೆ ವೈದ್ಯರು ದೇವರಾಗಿದ್ದಾರೆ. ಇನ್ನು ವೈದ್ಯರು ನಮ್ಮ ಪ್ರಯತ್ನವನ್ನು ಮಾಡಿದ್ದೀವಿ ದೇವರಿದ್ದಾನೆ ಎನ್ನುವ ಮಾತನ್ನು ಹೇಳುತ್ತಾರೆ. ವೈದ್ಯರು ಸಹ ಒಂದು ರೀತಿಯಲ್ಲಿ ಸಮಾಜ ಸೇವಕರಾಗಿದ್ದಾರೆ. ಆದರೆ ತುರ್ತಿನ ಸಮಯದಲ್ಲಿ ವೈದ್ಯರು ಎರಡು ಜೀವವನ್ನು ಉಳಿಸಿದ್ದಾರೆ.

ಅರ್ಧ ಗಂಟೆಯಲ್ಲಿ ವೈದ್ಯರು ಸಿಹಿ ಸುದ್ದಿಯನ್ನು ನೀಡಿದ್ದರು

ಮುಂಬೈ ಗೆ ಹೋಗುವ ರೈಲಿನಲ್ಲಿ ಸಂಚರಿಸುತ್ತಿದ್ದ 29 ವರ್ಷದ ವಯಸ್ಸಿನ ತುಂಬು ಗರ್ಭಿಣಿಗೆ ಮಹಾರಾಷ್ಟ್ರದ ಥಾಣೆ ರೈಲು ನಿಲ್ದಾಣದಲ್ಲಿ ನೋವು ಕಾಣಿಸಿಕೊಂಡಿತ್ತು. ಕರ್ಜನತ್ ನಿಂದ ಪರೇಲ್ ಗೆ ಸುಬಂತ್ರಿ ಪಾತ್ರಾ ಅವರಿಗೆ ಠಾಣೆಯ ಬಳಿ ನೋವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ಒಂದು ರೂಪಾಯಿ ಚಿಕಿತ್ಸಾಲಯ ಅಧಿಕಾರಿಯಯಾದ ಡಾಕ್ಟರ್ ರಾಹುಲ್ ಗೆ ತಿಳಿಸಿದ್ದಾರೆ. ತಕ್ಷಣ ರೈಲ್ವೆ ಅಧಿಕಾರಿಗಳು ಆ ಗರ್ಭಿಣಿ ಮಹಿಳೆಯನ್ನ ಪ್ಲಾಟ್ ಫಾರಂನಲ್ಲಿರುವ ಚಿಕಿತ್ಸಾಲಯಕ್ಕೆ ತಂದಿದ್ದಾರೆ. ಅರ್ಧ ಗಂಟೆಯಲ್ಲಿ ವೈದ್ಯರು ಸಿಹಿ ಸುದ್ದಿಯನ್ನು ನೀಡಿದ್ದರು. ಮುಂದೆ ಓದಿ

ಚಿಕಿತ್ಸಾಲಯ ರೈಲ್ವೆ ನಿಲ್ದಾಣಗಳಲ್ಲಿ ಅತ್ಯವಶ್ಯಕ

ತಾಯಿ ಹಾಗು ಗಂಡು ಮಗು ಆರೋಗ್ಯವಾಗಿದ್ದಾರೆ ಹೆಚ್ಚುವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದರು. ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸೆಗಾಗಿ ಈ ಚಿಕಿತ್ಸಾಲಯ ತೆರೆಯಲಾಗಿದ್ದು, ಇದರಿಂದ ಒಬ್ಬ ಮಹಿಳೆಯ ಹೆರಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅಗತ್ಯ ಸೇವೆ ಒದಗಿಸುವ ಮೂಲಕ ನಮಗೆ ಅವಕಾಶ ನೀಡಿದ ರೈಲ್ವೆ ಅಧಿಕಾರಿಗಳಿಗೆ ಡಾಕ್ಟರ್ ಗುಳೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಹೆರಿಗೆಯ ಮೂಲಕ ಒಂದು ರೂಪಾಯಿ ಚಿಕಿತ್ಸಾಲಯದ ಮಹತ್ವ ಮತ್ತು ಗರ್ಭಿಣಿಯರಿಗೆ ಸಮಯಕ್ಕೆ ಅನುಸಾರವಾಗಿ ಹೆರಿಗೆ ಮಾಡಿಸುವ ಆಸ್ಪತ್ರೆ ರೈಲು ನಿಲ್ದಾಣಗಳಲ್ಲಿ ಅತ್ಯವಶ್ಯಕವಾಗಿದೆ ಎನ್ನುವುದು ಸಾರ್ವಜನಿಕರಿಗೆ ತಿಳಿಯಬೇಕಿದೆ ಎಂದು ಅಲ್ಲಿಯ ವೈದ್ಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here