ಮಾಜಿ ಮುಖ್ಯಮಂತ್ರಿಗಳ ಕಾರ್ ಅನ್ನು ನಿಲ್ಲಿಸಿ ಕ್ಲಾಸ್ ತೆಗೆದುಕೊಂಡ ವೃದ್ದೆ

0
665

ಕರ್ನಾಟಕದಲ್ಲಿ ಧಾರಾಕಾರವಾದ ಮಳೆ ಸುರಿದ ಕಾರಣದಿಂದಾಗಿ ಜನರು ಪರದಾಡುತ್ತಿದ್ದಾರೆ. ಇನ್ನು ಪ್ರವಾಹ ಪೀಡಿತ ಪ್ರದೇಶದ ಜನರ ಕಷ್ಟ ಊಹಿಸಿಕೊಳ್ಳುವುದಕ್ಕು ಸಾಧ್ಯವಿಲ್ಲ. ಮಲೆನಾಡು ಮತ್ತು ಇನ್ನಿತರ ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಮಳೆಯಿಂದಾಗಿ ಜನರು ಸರಿಯಾಗಿ ರಸ್ತೆಯಲ್ಲಿ ಹೋಗಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದು, ಜನರು ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾವೇರಿ, ಕೊಡಗು, ಬಾಗಲಕೋಟೆ, ಹಾಸನ ಮತ್ತು ರಾಯಚೂರು ಜಿಲ್ಲೆಗಳಲ್ಲಿ ನದಿಗಳು ತುಂಬಿ ಹರಿಯುತ್ತಿತ್ತು.

ಮಾಜಿ ಮುಖ್ಯಮಂತ್ರಿಗಳ ಕಾರನ್ನು ನಿಲ್ಲಿಸಿದ ವೃದ್ದೆ

ಮಲಪ್ರಭಾ ನದಿಯ ಪ್ರವಾಹದ ಹಿನ್ನಲೆಯಲ್ಲಿ, ಪ್ರವಾಹ ಪೀಡಿತ ಜನರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನೆನ್ನೆ ಅಷ್ಟೆ ಒಬ್ಬ ಬಾಲಕಿ ಪತ್ರವನ್ನು ಓದುವ ಮೂಲಕ ಪ್ರದೇಶದ ಸ್ಥಿತಿಯನ್ನು ವಿವರಿಸುವ ಮೂಲಕ ಮಾಜಿ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ಇದೆ ವೇಳೆಯಲ್ಲಿ ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮಕ್ಕೆ ಬರುತ್ತಿದ್ದರು. ಮಾರ್ಗದ ಮಧ್ಯೆ ಸಿದ್ದರಾಮಯ್ಯನವರ ವಾಹನವನ್ನು ಓರ್ವ ವೃದ್ಧ ಮಹಿಳೆ ತಡೆದರು. ಈರವ್ವ ತಳವಾರ್ ಎಂಬ ಹೆಸರಿನ ವೃದ್ದೆ ಮಾಜಿ ಮುಖ್ಯಮಂತ್ರಿಗಳಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮುಂದೆ ಓದಿ

ನಮಗೆ ಆಶ್ರಯದ ವ್ಯವಸ್ಥೆಯನ್ನು ಕಲ್ಪಿಸಿ ಕೊಡಿ

ಧಾರಾಕಾರವಾದ ಮಳೆ ಸುರಿದ ಕಾರಣದಿಂದಾಗಿ ಇದ್ದ ಮನೆಯು ಕಳೆದುಕೊಂಡಿದ್ದೇವೆ. ಈಗ ನಮಗೆ ವಾಸಿಸಲು ಮನೆ ಇಲ್ಲ, ಬಾಡಿಗೆ ಮನೆಯಲ್ಲಿ ಇದ್ದೇವೆ. ವೋಟ್ ಕೇಳುವಾಗ ಮಾತ್ರ ಮನೆ ಮನೆಗೂ ಬರುತ್ತೀರಿ, ಜನರು ಕಷ್ಟದಲ್ಲಿದ್ದಾಗ ಯಾಕೆ ಯಾರು ಬರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ನಮಗೆ ಆಶ್ರಯದ ವ್ಯವಸ್ಥೆಯನ್ನು ಕಲ್ಪಿಸಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದೆ ಸಂದರ್ಭದಲ್ಲಿ ನಿಮಗೆ ಮನೆ ಬೇಕು ತಾನೆ ನಾನು ವ್ಯವಸ್ಥೆ ಮಾಡಿಸಿಕೊಡುತ್ತೇನೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.

ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ

ಪ್ರವಾಹದ ನೀರನ್ನು ಲೆಕ್ಕಿಸದೆ ಒಬ್ಬ ಬಾಲಕಿ ಪತ್ರವನ್ನು ಓದುವ ಮೂಲಕ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರಿಗೆ ಸರಿಯಾದ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅನ್ನಪೂರ್ಣ ಎನ್ನುವ ಬಾಲಕಿ ನೀರಿನಲ್ಲಿಯೆ ನಿಂತು ಪತ್ರವನ್ನು ಓದಿದ್ದಾಳೆ.

ನಮ್ಮ ಗ್ರಾಮದ ರಸ್ತೆ ಪ್ರವಾಹದಿಂದ ರದ್ದಾಗಿವೆ. ಮೂರು ದಿನಗಳಿಂದ ಸತತವಾಗಿ ನೀರು ಹರಿದು ಬರುತ್ತಿದೆ. ಯಾರು ಸಹ ಇದನ್ನು ಗಮನಿಸುತ್ತಿಲ್ಲ, ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ನೀವು ನಿಜವಾಗಲೂ ಜನ ಸೇವೆಯನ್ನು ಮಾಡುವುದಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಬಾಲಕಿ ತನ್ನ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಳು.

LEAVE A REPLY

Please enter your comment!
Please enter your name here