ಮಯೂರ, ಬಬ್ರುವಾಹನ ಚಿತ್ರಗಳನ್ನು ಮುಟ್ಟಲು ಸಾಧ್ಯವಿಲ್ಲ

0
868

ಯಾವುದೆ ಒಂದು ಪೌರಾಣಿಕವಾದ ಚಿತ್ರ ಮಾಡಬೇಕಾದರು ನಿರ್ದೇಶಕರ ಮೇಲೆ ಹೆಚ್ಚು ಜವಾಬ್ದಾರಿ ಇರುತ್ತದೆ. ನಿರ್ದೇಶಕರು ಆಯ್ಕೆ ಮಾಡುವ ಕಲಾವಿದರ ಪಾತ್ರ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಮೊದಲು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಹೆಚ್ಚು ಪೌರಾಣಿಕ ಆಧಾರಿತವಾದ ಚಿತ್ರಗಳು ಬರುತ್ತಿದ್ದವು. ಇತ್ತೀಚಿಗೆ ಪೌರಾಣಿಕವಾದ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಬರುತ್ತಿಲ್ಲ. ಆದರೆ ಚಂದನವನದಲ್ಲಿ ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರದಲ್ಲಿ ಹಲವಾರು ಗಣ್ಯ ಕಲಾವಿದರು ಬಣ್ಣ ಹಚ್ಚಿದ್ದಾರೆ. ಡಿ ಬಾಸ್ ದುರ್ಯೋಧನ ಪಾತ್ರವು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಮಹಾಭಾರತದ ಕಥೆಯನ್ನು ತೆರೆ ಮೇಲೆ ತರಬೇಕೆಂದು ನಿರ್ದೇಶಕ ಮುನಿ ರತ್ನ ಬಹಳ ದಿನಗಳಿಂದ ಹೇಳುತ್ತಿದ್ದರು. ಈಗ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಮಯೂರ, ಬಬ್ರುವಾಹನ ಚಿತ್ರಗಳನ್ನು ಮುಟ್ಟಲು ಸಾಧ್ಯವಿಲ್ಲ

ಈ ಹಿಂದೆ ದರ್ಶನ್ ಸಂಗೊಳ್ಳಿ ರಾಯಣ್ಣ ಎನ್ನುವ ಐತಿಹಾಸಿಕ ಚಿತ್ರದಲ್ಲಿ ಅಭಿನಯಿಸಿದ್ದು, ನಟನೆಗಾಗಿ ದಚ್ಚು ಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು. ಆದರೆ ಡಿ ಬಾಸ್ ಈಗ ಅಣ್ಣಾವ್ರು ನಟಿಸಿದ್ದ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳ ಕುರಿತು ಮಾತನಾಡಿದ್ದಾರೆ. ಪಲ್ಲವ ರಾಜ್ಯದ ಕೀರ್ತಿಯನ್ನು ಮೆರೆದ ಮಯೂರ ರಾಜನ ಪಾತ್ರವನ್ನು ಡಾಕ್ಟರ್ ರಾಜ್ ಕುಮಾರ್ ಅವರು ಮಾಡಿದ್ದರು. ಆ ಪಾತ್ರವನ್ನು ರಾಜ್ ಅಭಿಮಾನಿಗಳು ಇಂದಿಗು ಸಹ ಮರೆಯುವುದಕ್ಕೆ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಪ್ರಭಾವ ಬೀರಿತ್ತು ಮಯೂರ ಚಿತ್ರ. ಇದರ ಸಾಲಿಗೆ ಬಬ್ರುವಾಹನ ಸಿನಿಮಾ ಕೂಡ ಸೇರ್ಪಡೆಯಾಗುತ್ತದೆ. ಅಣ್ಣಾವ್ರು ಮಾಡಿದ ಈ ಅದ್ಭುತವಾದ ಚಿತ್ರಗಳನ್ನು ಮುಟ್ಟಲು ಸಾಧ್ಯವಿಲ್ಲ. ಯಾಕಂದ್ರೆ ಅವೆಲ್ಲ ಮಾಸ್ಟರ್ ಪೀಸ್ ಸಿನಿಮಾಗಳು. ಅವುಗಳನ್ನು ನೋಡಿ ನಾವು ಖುಷಿ ಪಡಬೇಕಷ್ಟೆ.

ಐತಿಹಾಸಕ, ಪೌರಾಣಿಕ ಚಿತ್ರಗಳಿಗೆ ಮೊದಲ ಆದ್ಯತೆ ನೀಡುತ್ತೇನೆ

ಅದೆ ಮಯೂರ ಅಥವಾ ಬಬ್ರುವಾಹನ ಸಿನಿಮಾ ಮತ್ತೆ ಮಾಡಬೇಕೆಂದರೆ ನಾನು ಓಡಿ ಹೋಗುತ್ತೇನೆ ಎಂದು ಡಿ ಬಾಸ್ ಹೇಳಿದ್ದಾರೆ. ಕಮರ್ಷಿಯಲ್ ಸಿನಿಮಾಗಳು ನನ್ನ ಸರದಿಯಲ್ಲಿದ್ದು, ಒಂದಾದ ನಂತರ ಮತ್ತೊಂದು ತೆಗೆದುಕೊಳ್ಳುತ್ತೇನೆ. ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳಿಗೆ ನಾನು ಮೊದಲ ಆಧ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ರಾಬರ್ಟ್, ಒಡೆಯ ಚಿತ್ರಗಳಲ್ಲಿ ದಚ್ಚು ಅಭಿನಯಿಸಲಿದ್ದು, ನಂತರ ಗಂಡುಗಲಿ ಮದಕರಿ ನಾಯಕ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಲಿದ್ದು, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮದಕರಿ ನಾಯಕ ಚಿತ್ರದ ಪ್ರಾಜೆಕ್ಟ್ ತೆಗೆದುಕೊಳ್ಳಲಿದ್ದಾರೆ.

ದುರ್ಯೋಧನ ಪಾತ್ರ ಹೊಸ ಅನುಭವ

ಕುರುಕ್ಷೇತ್ರ ಚಿತ್ರದ ಬಗ್ಗೆ ದರ್ಶನ ಮಾತನಾಡಿದ್ದು, ಈ ಹಿಂದೆ ದುರ್ಯೋಧನ ಮೇಲೆ ಯಾವ ಕಥೆಯು ಮಾಡಿರಲಿಲ್ಲ. ಕೃಷ್ಣ, ಅರ್ಜುನ ಸೇರಿದಂತೆ ಇನ್ನು ಅನೇಕ ಪೌರಾಣಿಕ ಪಾತ್ರಗಳನ್ನ ರಾಜ್ ಕುಮಾರ್ ಅವರು ಮಾಡಿದ್ದಾರೆ. ಆದ್ದರಿಂದ ದುರ್ಯೋಧನ ಪಾತ್ರ ಹೊಸ ಅನುಭವ ಎಂದು ಆಡಿಯೊ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದ್ದಾರೆ.

LEAVE A REPLY

Please enter your comment!
Please enter your name here