ಜಿ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿಗೆ ಒದಗಿ ಬಂದಿಲ್ಲ ಪ್ರಶಸ್ತಿಯ ಭಾಗ್ಯ

0
490

ಸದ್ಯಕ್ಕೆ ಈಗ ಜೊತೆ ಜೊತೆಯಲಿ ಸೀರಿಯಲ್ ಸಿಕ್ಕಾಪಟ್ಟೆ ಜನರ ಗಮನವನ್ನು ಸೆಳೆಯುತ್ತಿದ್ದು, ಬೇರೆ ಧಾರಾವಾಹಿಗಳನ್ನು ಹಿಂದಕ್ಕೆ ಹಾಕಿ ಟಿ ಆರ್ ಪಿ ರೇಟ್ ನಲ್ಲಿ ಅಗ್ರ ಸ್ಥಾನವನ್ನು ಈ ಸೀರಿಯಲ್ ಪಡೆದುಕೊಂಡಿದೆ. ಬಹಳ ವರ್ಷಗಳ ಕೆಳಗೆ ಜೊತೆ ಜೊತೆಯಲಿ ಸೀರಿಯಲ್ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ವಿಭಿನ್ನವಾದ ಪ್ರೇಮ ಕಥೆಗೆ ವೀಕ್ಷಕರು ಮಾರು ಹೋಗಿದ್ದರು. ಹೊಸ ದಾಖಲೆಯನ್ನು ಸಹ ಆ ಧಾರವಾಹಿ ಬರೆದಿತ್ತು. ಮುಂದೆ ಓದಿ

ಜಿ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು

ಜೊತೆ ಜೊತೆಯಲಿ ಧಾರಾವಾಹಿಯ ವೀಕ್ಷಕರಿಗೆ ಬಹಳ ಬೇಸರವಾದ ಸುದ್ದಿಯೊಂದು ಹೊರ ಬಿದ್ದಿದೆ. ಮೊನ್ನೆಯಷ್ಟೆ ಜೀ ಕನ್ನಡ ವಾಹಿನಿಯವರು ಜಿ ಕುಟುಂಬ ಅವಾರ್ಡ್ಸ್ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ನೇರ ಪ್ರಸಾರ ಈ ಶನಿವಾರ ಮತ್ತು ಭಾನುವಾರ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ವಾಹಿನಿಯ ರಿಯಾಲಿಟಿ ಶೋ ಹಾಗು ಸೀರಿಯಲ್ ನ ಕಲಾವಿದರಿಗೆ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಗುತ್ತದೆ. ಅತ್ಯುತ್ತಮ ನಟ, ಉತ್ತಮ ನಟಿ, ಉತ್ತಮ ಮಗಳು, ಅತ್ಯುತ್ತಮ ಪೋಷಕ ನಟ ಹೀಗೆ ಹಲವಾರು ಪ್ರಶಸ್ತಿಗಳು ನೀಡಲಾಗಿತ್ತು. ಮುಂದೆ ಓದಿ

ಜೊತೆ ಜೊತೆಯಲಿ ಧಾರವಾಹಿ ನೊಮಿನೇಟ್ ಆಗಿರಲಿಲ್ಲ

ಆದರೆ ಜೊತೆ ಜೊತೆಯಲಿ ಧಾರಾವಾಹಿಗೆ ಒಂದು ಪ್ರಶಸ್ತಿಯು ದೊರೆತಿಲ್ಲ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ಬಾರಿಯ ಜಿ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಜೊತೆ ಜೊತೆಯಲಿ ಧಾರವಾಹಿ ನೊಮಿನೇಟ್ ಆಗಿರಲಿಲ್ಲ. ಆದ್ದರಿಂದ ಜೊತೆ ಜೊತೆಯಲಿ ಧಾರಾವಾಹಿಯು ಯಾವುದೆ ಪ್ರಶಸ್ತಿಯನ್ನು ಬಾಚಿಕೊಂಡಿಲ್ಲ. ಇದನ್ನು ಹೊರತು ಪಡಿಸಿ ಜೊತೆ ಜೊತೆಯಲಿ ಧಾರಾವಾಹಿಯ ಕಲಾವಿದರು ವೇದಿಕೆಯ ಮೇಲೆ ಪರ್ಫಾರ್ಮೆನ್ಸ್ ಮಾಡುವ ಮೂಲಕ ಜನರನ್ನು ರಂಜಿಸಿದ್ದಾರೆ. ಆರ್ಯವರ್ಧನ್ ಹಾಗು ಅನು ಸಿರಿಮನೆ  ಜೊತೆ ಜೊತೆಯಾಗಿ ಹೆಜ್ಜೆಯನ್ನು ಹಾಕಿದ್ದಾರೆ. ಅಕಸ್ಮಾತ್ ಜೊತೆ ಜೊತೆಯಲಿ ಧಾರವಾಹಿ ಆಯ್ಕೆ ಆಗಿದ್ದರೆ, ಬಹುಶ ಅರ್ಧ ಭಾಗದ ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿತ್ತು ಅಂತಾನೆ ಹೇಳಬಹುದಾಗಿದೆ.

ಜನರು ಇಷ್ಟ ಪಡುವ ಧಾರವಾಹಿಯಾಗಿದೆ

ಆದರೆ ಈ ಹೊಸ ಧಾರಾವಾಹಿಯಲ್ಲಿ ಅನಿರುದ್ಧ್ ಅವರ ಅಭಿನಯ ವೀಕ್ಷರನ್ನು ಧಾರಾವಾಹಿಯ ಕಡೆಗೆ ಸೆಳೆಯುತ್ತಿದೆ. ಪ್ರತಿ ದಿನ ಸಂಜೆ 8:20 ಕ್ಕೆ ಈ ಧಾರವಾಹಿ ಜಿ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅನಿರುದ್ದ್ ಅವರು ಖ್ಯಾತ ಕಂಪನಿಯ ಉದ್ಯಮಿಯಾಗಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಮೊದಲನೆ ಬಾರಿಗೆ ಮೇಘಾ ಶೆಟ್ಟಿ ಎನ್ನುವ ಯುವ ಪ್ರತಿಭೆ ಸೀರಿಯಲ್ ನಲ್ಲಿ ನಟಿಸಿದ್ದು, ತನ್ನ ನಟನೆಯಿಂದಾನೆ ಜನರನ್ನು ಆಕರ್ಷಿಸುತ್ತಿದ್ದಾರೆ. ಪ್ರಥಮವಾಗಿ ನಟಿಸಿದ್ದರು ಸಹ ಪರಿಪೂರ್ಣವಾದ ಅಭಿನಯವನ್ನು ನಾವು ಧಾರಾವಾಹಿಯಲ್ಲಿ ನೋಡಬಹುದಾಗಿದೆ.

LEAVE A REPLY

Please enter your comment!
Please enter your name here