‘ನಾನು ಕರ್ನಾಟಕ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ’. ಭಾಷಾಭಿಮಾನ ಮೆರೆದ ನಿತ್ಯಾ ಮೆನನ್

0
322

ಕರ್ನಾಟಕದಲ್ಲೇ ಹುಟ್ಟಿದ ಎಷ್ಟೋ ನಟಿಯರು ಪರ ಭಾಷಾ ಸಿನಿಮಾಗಳಲ್ಲಿ ನಟಿಸುತ್ತಾ ಕನ್ನಡವನ್ನು ಮರೆತಿರುವುದು ಉಂಟು. ಇದರ ವಿಚಾರವಾಗಿ ಕಳೆದ ಕೆಲವು ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಸಾಕ್ಷಿಯಾಗಿದ್ದರು. ಆದರೆ ಅದೇ ರೀತಿ ಕರ್ನಾಟಕದ ಅನೇಕ ನಟಿಯರು ಬಾಲಿವುಡ್, ಕಾಲಿವುಡ್ ಹಾಗು ಮಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವರು ಕನ್ನಡವನ್ನು ಮರೆತಿಲ್ಲ. ಹೌದು. ನಮ್ಮ ಕನ್ನಡದ ನೆಲದಲ್ಲಿ ಹುಟ್ಟಿದ ಎಷ್ಟೋ ಜನ ನಾಯಕಿಯರು ಪರ ಭಾಷೆಯ ಸಿನಿಮಾಗಳಲ್ಲಿ ಟಾಪ್ ನಟಿಯರಾಗಿದ್ದರೂ, ಕನ್ನಡವನ್ನು ಮರೆಯದೆ, ತಾಯ್ನಾಡಿಗೆ ಗೌರವ ನೀಡುತ್ತಿದ್ದಾರೆ. ಅದರ ಸಾಲಿಗೆ ಈಗ ನಟಿ ನಿತ್ಯಾ ಮೆನನ್ ಕೂಡ ಸೇರುತ್ತಾರೆ. ಹೌದು. ಕನ್ನಡದ ಮೇಲಿರುವ ಗೌರವವನ್ನು ನಿತ್ಯಾ ತಮ್ಮ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ನಾನು ಕನ್ನಡದವಳು – ನಿತ್ಯಾ ಮೆನನ್

ನಿತ್ಯಾ ಮೆನನ್ ಕರ್ನಾಟಕದವರೇ ಆದರೂ, ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವುದು ಕಡಿಮೆ. ಯಾಕಂದ್ರೆ ಪರ ಭಾಷಾ ಸಿನಿಮಾಗಳಲ್ಲಿ ನಿತ್ಯಾ ಗೆ ಬಹಳ ಬೇಡಿಕೆ ಬಂದಿದ್ದರಿಂದ, ಅವರು ಅಲ್ಲಿ ನಟಿಸಬೇಕಾಯಿತು. ಇನ್ನು ಅವರು ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ, ಅವರು ಕನ್ನಡವನ್ನು ಮರೆತಿಲ್ಲ. ಹೌದು. ಪರಭಾಷಾ ಸಂದರ್ಶನವೊಂದರಲ್ಲಿ ನಿತ್ಯಾ ಮೆನನ್ ಭಾಗಿಯಾಗಿದ್ದು, ನಿರೂಪಕಿ ಕನ್ನಡದ ಬಗ್ಗೆ ಅವರನ್ನು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಿತ್ಯಾ ತಲೆ ಎತ್ತಿ ಖಡಕ್ ಆಗಿಯೇ ಉತ್ತರಿಸಿದ್ದಾರೆ. ನಾನು ಕನ್ನಡದವಳು, ನನ್ನ ತಾಯ್ನಾಡು ಕನ್ನಡ. ಅಲ್ಲದೆ ನನ್ನ ತಂದೆ, ತಾಯಿ ಕೂಡ ಕನ್ನಡ ನೆಲದಲ್ಲೇ ಹುಟ್ಟಿದವರು. ನಾನು ಈಗ ಸದ್ಯಕ್ಕೆ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿರಬಹದು ಆದರೆ ಕನ್ನಡವನ್ನು ಎಂದಿಗೂ ಮರೆಯುವುದಿಲ್ಲ ಎಂದು ಉತ್ತರಿಸಿದ್ದಾರೆ.

ನಾನು ಕರ್ನಾಟಕವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ

ಇನ್ನು ಕನ್ನಡದ ಬಗ್ಗೆ ಮಾತನಾಡುತ್ತ ನಿತ್ಯಾ, ನಾನು ಕರ್ನಾಟಕವನ್ನು ಬಿಟ್ಟು ಎಲ್ಲಿಗೂ ಹೋಗುವದಿಲ್ಲ ಎಂದು ಹೇಳಿದ್ದಾರೆ. ಹೌದು. ನಾನು ಪರಭಾಷಾ ಸಿನಿಮಾಗಳಲ್ಲಿ ನಟಿಸುತ್ತಿರಬಹುದು, ಆದರೆ ಕೊನೆಗೆ ನಾನು ಉಳಿಯುವುದು ಕರ್ನಾಟಕದಲ್ಲೇ. ನಾನು ಎಂದಿಗೂ ಕನ್ನಡದವಳು ಎಂದು ಹೇಳಿದ್ದಾರೆ. ಅಲ್ಲದೆ ನಟಿ ಸುಹಾಸಿನಿ ಅವರೊಂದಿಗೆ ನಡೆದ ಕೆಲವು ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಹಿಂದೆ ಮೈನಾ ಚಿತ್ರದ ಶೂಟಿಂಗ್ ವೇಳೆ ನಟಿ ಸುಹಾಸಿನಿ ಮೇಡಂ, ನನಗೆ ಮಲಯಾಳಂನಲ್ಲಿ ಬರೆದು ಡೈಲಾಗ್ ಹೇಳಬಹುದಲ್ಲವೇ ಎಂದರು. ನನಗೂ ಅವರು ಯಾಕೆ ಹಾಗೆ ಹೇಳಿದರೂ ಎಂಬುದು ಸಡನ್ ಆಗಿ ತೋಚಲಿಲ್ಲ. ಆಗ, ನಾನು ಕನ್ನದಡವಳು, ಕನ್ನಡದಲ್ಲೇ ಡೈಲಾಗ್ ಹೇಳಿ ಎಂದು ನಿತ್ಯಾ, ಸುಹಾಸಿನಿ ಅವ್ರಿಗೆ ಹೇಳಿದರಂತೆ.

ಸಂದರ್ಶನದಲ್ಲಿ ಕನ್ನಡ ಹಾಡು ಹೇಳಿದ ನಿತ್ಯಾ

ಇನ್ನು ಕೆಲ ತಿಂಗಳ ಹಿಂದೆ ಮಲಯಾಳಂ ಸಂದರ್ಶನವೊಂದರಲ್ಲಿ ನಿರೂಪಕಿ ಆಯಾ ಸಂದರ್ಭವನ್ನು ತಿಳಿಸಿ ಅದಕ್ಕೆ ಹೊಂದುವಂತಹ ಗೀತೆಗಳನ್ನು ಹಾಡಲು ನಿತ್ಯಾಗೆ ತಿಳಿಸಿದ್ದರು. ಹಾಗಾಗಿ ನಿರೂಪಕಿಯ ಕೋರಿಕೆಯಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಂಗ್ಲೀಷ್ ಹಾಡುಗಳನ್ನು ನಿತ್ಯಾ ಸುಮಧುರವಾಗಿ ಹಾಡಿದರು. ಹಾಡು ಮುಗಿಯುತ್ತಿದ್ದಂತೆ ನಿರೂಪಕಿ ಚಪ್ಪಾಳೆ ಸಹ ಹೊಡೆದರು. ಆದರೆ, ನಿತ್ಯಾ ಮೆನನ್ ‘ನಾನಿನ್ನೂ ಕನ್ನಡ ಹಾಡನ್ನು ಹಾಡಿಲ್ಲ. ಕನ್ನಡದಲ್ಲೂ ಒಂದು ಗೀತೆಯನ್ನು ಹಾಡಬೇಕು ಎಂದು ನಿರೂಪಕಿಗೆ ತಿಳಿಸಿದ್ದರು. ಅದರಂತೆ ‘ಮಿಲನ’ ಚಿತ್ರದ ‘ನಿನ್ನಿಂದಲೇ.. ನಿನ್ನಿಂದಲೇ..’ ಹಾಡನ್ನು ಇಂಪಾಗಿ ಹಾಡಿದ ನಿತ್ಯಾ ತಮ್ಮ ನೆಲದ ಮೇಲಿನ ಪ್ರೀತಿಯನ್ನು ತೋರಿಸಿದರು.

ಒಟ್ಟಿನಲ್ಲಿ ನಿತ್ಯಾ ಕನ್ನಡದ ಮೇಲಿನ ತಮ್ಮ ಅಭಿಮಾನವನ್ನು ಪರಭಾಷಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅಲ್ಲದೆ, ನಾನು ಎಂದಿಗೂ ಕರ್ನಾಟಕ ಬಿಟ್ಟು ಹೋಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

LEAVE A REPLY

Please enter your comment!
Please enter your name here