ತೆರಿಗೆದಾರರ ಕಷ್ಟಕ್ಕೆ ಸ್ಪಂದಿಸಿದ ನಿರ್ಮಾಲಾ ಸೀತಾರಾಮನ್

0
308

ಇನ್ನು ಮುಂದೆ ವಾಣಿಜ್ಯ ಕ್ಷೇತ್ರದಲ್ಲಿ ತೆರಿಗೆ ಅಧಿಕಾರಿಗಳಿಂದ ಯಾವುದೆ ಒಂದು ಒತ್ತಡವನ್ನು ಹಾಕುವಂತಿಲ್ಲ ಎಂದು ಕೇಂದ್ರ ಹಣಕಾಸಿನ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ. ಉದ್ಯಮಿಗಳಿಗೆ ಮತ್ತು ತೆರಿಗೆದಾರರಿಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಮಾಡುವ ಪ್ಲಾನ್ ನಲ್ಲಿದ್ದಾರೆ ನಿರ್ಮಲಾ ಸೀತಾರಾಮನ್. ದೇಶದ ಪ್ರಧಾನಿ ಸ್ವಾತಂತ್ರೋತ್ಸವ ದಿನದಂದು ಸಂಪತ್ತನ್ನು ಸೃಷ್ಟಿ ಮಾಡುವ ವ್ಯಕ್ತಿಗಳಿಗೆ ಗೌರವಿಸಬೇಕೆಂದು ಹೇಳಿದ್ದರು. ಸೀತಾರಾಮನ್ ಈ ವಿಷಯವನ್ನು ಪ್ರಸ್ತಾಪಿಸಿ ಇಂತಹದೊಂದು ನಿಯಮವನ್ನು ಸಹ ಜಾರಿಗೆ ತರಬೇಕೆಂದು ಹೇಳಿದ್ದಾರೆ. ಸಾಲ ಕೊಟ್ಟ ಸಂಸ್ಥೆಗಳಿಂದ ಉದ್ಯಮಿಗರಿಗೆ ವಿಪರೀತ ತೊಂದರೆಯಾಗುತ್ತಿರುವುದು ಕೇಳಿ ಬರುತ್ತಿದೆ. ಸಿದ್ಧಾರ್ಥ್ ವಿಷಯದಲ್ಲು ಹೀಗೆ ಆಗಿದೆ.

ತೆರಿಗೆದಾರರು ಸಂತಸ ಪಡುವ ಕ್ಷಣ ಇದಾಗಿದೆ

ಕಪ್ಪು ಹಣ ಮತ್ತು ತೆರಿಗೆಯ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಆದಾಯ ತೆರೆಗೆ ಆದೇಶಗಳನ್ನು, ನೋಟಿಫಿಕೇಷನ್ಸ್, ಮತ್ತು ಸಮನ್ಸ್ ಗಳನ್ನು ನೀಡಲು ಹೊಸದಾದ ಕಂಪ್ಯೂಟರ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದು ವಿಶಿಷ್ಟವಾದ ಸಂಖ್ಯೆ ಅಥವಾ ಗುರುತನ್ನು ಹೊಂದಿದ್ದು, ಅಕ್ಟೋಬರ್ 2 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದ್ದಾರೆ. ತೆರಿಗೆದಾರರು ಕಂಪನಿ ಅಧಿಕಾರಿಗಳು ಕೇಳುವ ದಾಖಲೆಗಳನ್ನು ಮೊದಲೇ ಸಿದ್ಧವಾಗಿಟ್ಟುಕೊಳ್ಳಬೇಕಾಗಿದೆ. ನಂತರ ಅಧಿಕಾರಿಗಳು ಕೇಳುವ ನಾನಾ ಪ್ರಶ್ನೆಗಳಿಗೆ ದಾಖಲೆಗಳನ್ನು ತೋರಿಸುವ ಮೂಲಕ ಕಿರುಕುಳದಿಂದ ತಪ್ಪಿಸಿಕೊಳ್ಳಬಹುದು ಎಂದು ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಅನ್ಯಾಯದ ವಿರುದ್ಧ ಸರ್ಕಾರ ನಿಲ್ಲುತ್ತದೆ

ಸಣ್ಣ ಪುಟ್ಟ ತಪ್ಪುಗಳಿಗಾಗಿ ಹೆಚ್ಚಿನ ಹಣವನ್ನು ತೆಗೆದುಕೊಳ್ಳುವ ಕಂಪನಿ ಅಧಿಕಾರಿಗಳಿಂದ ನೀವು ಬಹಳ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದೆ. ಈ ಸಮಸ್ಯೆಗೆ ನಾವು ಆದಷ್ಟು ಬೇಗ ಸ್ಪಂದಿಸುತ್ತೇವೆ. ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರ ನಿಲ್ಲುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ.

ಐಬಿಪಿಎಸ್ ವಿಷಯದ ಕುರಿತು ಧ್ವನಿ ಎತ್ತಿದ್ದರು 

ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಭಾಷೆ ಸೇರಿದಂತೆ, ಆಯಾ ರಾಜ್ಯಗಳ ಭಾಷೆಯಲ್ಲಿ ಬರೆಯಲು ಅವಕಾಶ ನೀಡುವುದರ ವಿಚಾರದ ಕುರಿತು ಸೂಕ್ತ ಕ್ರಮ ಕೈ ಗೊಳ್ಳಲಾಗುವುದು, ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಶ್ವಾಸನೆ ಕೊಟ್ಟಿದ್ದರು. ಕಾಂಗ್ರೆಸ್ ಸಂಸದರಾದ ಜೆಸಿ ಚಂದ್ರಶೇಖರ್ ಐಬಿಪಿಎಸ್ ವಿಷಯವನ್ನು ರಾಜಸಭೆಯಲ್ಲಿ ಪ್ರಸ್ತಾಪಿಸಿದ್ದು, ಈ ವಿಷಯದ ಕುರಿತು ಕನ್ನಡದಲ್ಲೇ ಮಾತನಾಡಿದ್ದರು.  ಇದೊಂದು ಅತ್ಯಂತ ಗಂಭೀರದ ಸಂಗತಿಯಾಗಿದೆ. ಇದಕ್ಕಾಗಿ ಪರಿಶೀಲನೆ ನಡೆಸಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳ ಕಡೆ ಸಹ ಗಮನ ಕೊಡಬೇಕು ಎಂದು ಸಚಿವೆ ಹೇಳಿದ್ದರು.

ಕರ್ನಾಟಕದಲ್ಲಿ ಯಾವಾಗಲೂ ಕನ್ನಡಿಗನೇ ಸಾರ್ವಭೌಮನಾಗಿರಬೇಕು

ಹೌದೂ ಕರ್ನಾಟಕಲ್ಲಿ ಎಲ್ಲ ಭಾಷೆಯ ಚಿತ್ರಗಳು ಬಿಡುಗಡೆ ಆಗುತ್ತವೆ, ಆದರೆ ಹೊರ ರಾಜ್ಯಗಳಲ್ಲಿ  ಕನ್ನಡ ಭಾಷೆಯ ಚಿತ್ರಗಳು ಬಿಡುಗಡೆಯಾಗುವ ಸಂಖ್ಯೆ ಕಡಿಮೆ. ಕರ್ನಾಟಕದಲ್ಲಿ ಯಾವಾಗಲೂ ಕನ್ನಡಿಗನೇ ಸಾರ್ವಭೌಮನಾಗಿರಬೇಕು. ನಮ್ಮ ರಾಜ್ಯದಲ್ಲಿ ಅನೇಕ ವಿಚಾರಗಳಲ್ಲಿ ಕನ್ನಡಿಗರಿಗೆ ಮೋಸ ಆಗುತ್ತಿದೆ. ನೀರಿನ ವಿಷಯಕ್ಕೆ ಬಂದರೆ ತಮಿಳುನಾಡಿನ ಸರ್ಕಾರ ಸರಿಯಾದ ಸಮಯಕ್ಕೆ ನಮ್ಮ ರಾಜ್ಯಕ್ಕೆ ನೀರನ್ನು ಬಿಡುವುದಿಲ್ಲ. ಬ್ಯಾಂಕಿಂಗ್ ಪರೀಕ್ಷೆಯಲ್ಲು ಸಹ ಕನ್ನಡಿಗರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ. ಬೇರೆ ಭಾಷೆಯವರಿಗೆ ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ.

LEAVE A REPLY

Please enter your comment!
Please enter your name here