ತಂದೆ ಹಾಗೂ ತಾತನ ವಿರುದ್ಧ ಗರಂ ಆಗಿರುವ ನಿಖಿಲ್

0
1827
nikil

ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಎಲ್ಲೆಡೆ ಬಾರಿ ಸಂಚಲನ ಮೂಡಿಸಿದೆ. ಯಾಕಂದ್ರೆ ದೋಸ್ತಿ ಸರ್ಕಾರ ನೆಲಕ್ಕುರುಳಿರುವುದು ಯಾರಿಂದಲೂ ನಂಬಲಾಗುತ್ತಿಲ್ಲ. ಯಾಕಂದ್ರೆ, ಅವರ ಕಡೆಯಿಂದ ಸ್ಪರ್ಧಿಸಿದ್ದವರು ಸಾಮಾನ್ಯರಲ್ಲ. ಸೋಲನ್ನೇ ಕಾಣದ ಮಹಾ ಘಟಾನುಘಟಿಗಳು. ಆದರೆ ಈ ಬಾರಿಯ ಚುನಾವಣೆ ಅವರಿಗೆ ಸೋಲಿನ ರುಚಿ ತೋರಿಸಿದೆ. ಎಲ್ಲಕ್ಕಿಂತ ಹೆಚ್ಚಿನ ಗಮನ ಇದ್ದಿದ್ದು, ಮಂಡ್ಯ ಕ್ಷೇತ್ರದ ಮೇಲೆ. ಯಾಕಂದ್ರೆ ಅಲ್ಲಿದ್ದಂತಹ ಪೈಪೋಟಿ, ಬೇರೆ ಎಲ್ಲೂ ಇರಲಿಲ್ಲ.

ಹೌದು. ಈ ಬಾರಿ ಮಂಡ್ಯದಲ್ಲಿ ನಡೆದಂತಹ ರಾಜಕಾರಣ, ಇದುವರೆಗೂ ಎಲ್ಲಿಯೂ ಯಾವತ್ತೂ ನಡೆದಿರಲಿಲ್ಲ. ಯಾಕಂದ್ರೆ ಅಂತ ಪೈಪೋಟಿ ನಡೆದಿತ್ತು. ಸುಮಲತಾ ಅವರು ಸಹ, ಪ್ರಚಾರ, ಮತಯಾಚನೆ ಮಾಡಿದ್ರೆ, ಇತ್ತ ನಿಖಿಲ್ ಕೂಡ, ನಾನ್ಯಾರಿಗೂ ಕಮ್ಮಿ ಇಲ್ಲ ಅಂತ ಅವರು ಕೂಡ, ಪ್ರಚಾರದ ಮೇಲೆ, ಪ್ರಚಾರ ಕೈಗೊಳ್ಳುತ್ತಿದ್ರು. ಆದ್ರೆ ಪರಿಣಾಮ, ಸುಮಲತಾ ಗೆದ್ದರು. ಈಗ ಸುಮಲತಾ ಗೆದ್ದಿರುವ ಪರಿಣಾಮ, ಕುಟುಂಬ ರಾಜಕಾರಣದಲ್ಲಿ ದೊಡ್ಡ ಬಿರುಕುಂಟಾಗಿದೆ. ಹೌದು. ನಿಖಿಲ್ ತನ್ನ ತಂದೆ ಹಾಗೂ ತಾತನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಂದೆ ಹಾಗೂ ತಾತನ ವಿರುದ್ಧ ಗರಂ ಆಗಿರುವ ನಿಖಿಲ್

ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಗೆ ಒತ್ತಾಯ ಮಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಾಗು ಮಾಜಿ ಪ್ರಧಾನಿ ದೇವೇಗೌಡರು. ಹಾಗಾಗಿ ತನ್ನ ತಂದೆ ಹಾಗೂ ತಾತನ ಮಾತನ್ನ ನಂಬಿ ನಿಖಿಲ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಈಗ ಸೋಲನ್ನ ಕಂಡಿರುವುದಕ್ಕೆ ನಿಖಿಲ್, ಅವರ ತಂದೆ ಹಾಗೂ ತಾತನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ನನ್ನ ಪಾಡಿಗೆ ನಾನು ಇದ್ದೆ. ಆದ್ರೆ ನೀವು ಚುನಾವಣೆಗೆ ನಿಲ್ಲು, ನೀನು ಗೆದ್ದೇ ಗೆಲ್ಲುತ್ತೀಯ ಅಂತ ಹೇಳಿದ್ರಿ. ಆದ್ರೆ ಈಗ ಸೋಲನ್ನ ಕಂಡು ಅವಮಾನ ಅನುಭವಿಸುತ್ತಿರೋದು ನಾನು ಎಂದು ಗರಂ ಆಗಿದ್ದಾರಂತೆ.

ನನ್ನನ್ನ ಮಂಡ್ಯ ಚಕ್ರವ್ಯೂಹದಲ್ಲಿ ಸಿಲುಕಿಸಿಬಿಟ್ರಿ

ಮಂಡ್ಯ ಜೆಡಿಎಸ್ ನ ಭದ್ರಕೋಟೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ಕುಮಾರಸ್ವಾಮಿ ಅವರು ಹಾಗೂ ದೇವೇಗೌಡರು ತಮ್ಮ ವಂಶದ ಕುಡಿಯನ್ನೇ ಕಣಕ್ಕಿಳಿಸುತ್ತಾರೆ. ಆದರೆ ಈಗ ಅದರ ಸೋಲಿನ ರುಚಿ ಕಂಡಿರುವ ನಿಖಿಲ್ ತಮ್ಮ ಸಿಟ್ಟನ್ನ ಹೊರಹಾಕುತ್ತಿದ್ದಾರೆ. ಹೌದು. ನನ್ನನ ಈ ಮಂಡ್ಯ ಅನ್ನೋ ಚಕ್ರವ್ಯೂಹದಲ್ಲಿ ಸಿಲಿಕಿಸಿದ್ದು ನೀವೆ. 8 ಶಾಸಕರು, ಇಬ್ಬರು ಸಚಿವರು ಇದ್ದರೂ ಕೂಡ ನಾನು ಏಕೆ ಗೆಲ್ಲುವುದಕ್ಕೆ ಆಗಲಿಲ್ಲ? ಹಾಸನದಲ್ಲಿ ಕಾಂಗ್ರೆಸ್ಸಿಗರನ್ನು ಮನವೊಲಿಸಲು ರೇವಣ್ಣ ಯಶಸ್ವಿಯಾಗಲಿಲ್ವಾ? ನೀವು ಏಕೆ ಕಾಂಗ್ರೆಸ್ ನ ರೆಬೆಲ್ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ಮನವೊಲಿಸಲಿಲ್ಲ ಎಂದು ದೇವೇಗೌಡರನ್ನು ನಿಖಿಲ್ ಪ್ರಶ್ನಿಸಿದ್ದಾರೆ.

ನನ್ನನ ಹಾಳು ಮಾಡಿದ್ದೀರಿ

ಈಗಾಗಲೇ ಸೋಲನ್ನ ಕಂಡಿರುವ ನಿಖಿಲ್ ಯಾರ ಮಾತಿಗೂ ಬೆಲೆ ಕೊಡುತ್ತಿಲ್ಲ. ಬದಲಿಗೆ ನನ್ನನ್ನ ಹಾಳು ಮಾಡಿದ್ದೀರಾ ನೀವು ಎಂದು ಎಲ್ಲರ ವಿರುದ್ಧ ಸಿಟ್ಟಿಗೆದ್ದಿದ್ದಾರೆ. ಜೊತೆಗೆ, ಯಾವುದೇ ಕಾರಣಕ್ಕೂ ಇನ್ಮುಂದೆ ನಾನು ನಿಮ್ಮನ್ನ ನಂಬುವುದಿಲ್ಲ ಅನ್ನೋ ಮಾತುಗಳನ್ನಾಡುವುದರ ಮೂಲಕ, ದೇವೇಗೌಡರ ಎದುರೇ ತಮ್ಮ ಆಕ್ರೋಶ ಹೊರಹಾಕಿದ್ದಾರಂತೆ ನಿಖಿಲ್.

ಒಟ್ಟಿನಲ್ಲಿ ಸಿನಿಮಾ ಮಾಡಿಕೊಂಡು ಇದ್ದ ನಿಖಿಲ್ ಅವರನ್ನ, ಅವರ ಮನೆಯವರು ರಾಜಕಾರಣಕ್ಕೆ ಇಳಿಸಿದರು. ಆದ್ರೆ ಈಗ ಅವರು ಸೋಲನ್ನು ಕಂಡಿರೋದ್ರಿಂದ, ತಮ್ಮ ಮನೆಯವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರಂತೆ.

LEAVE A REPLY

Please enter your comment!
Please enter your name here