ನಿಖಿಲ್ ರಾಜ್ಯದ ಮುಂದಿನ ಮುಖ್ಯಮಂತ್ರಿ – ಬಹಿರಂಗವಾಗಿ ಹೇಳಿಕೆ ನೀಡಿದ ಗೌರಿಶಂಕರ್

0
287

ರಾಜ್ಯ ರಾಜಕಾರಣದಲ್ಲಿ ಪ್ರತಿದಿನ ಯಾವುದಾದ್ರೂ ಒಂದು ಗಲಭೆ, ಗದ್ದಲ ಹಾಗು ಬದಲಾವಣೆ ನಡೆಯುತ್ತಲೇ ಇರುತ್ತೆ. ಹೌದು. ಲೋಕಸಭಾ ಚುನಾವಣೆಯ ಸಮಯದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಹೆಸರು ಅಂದ್ರೆ ಅದು ನಿಖಿಲ್ ಕುಮಾರಸ್ವಾಮಿ. ಹೌದು. ಚುನಾವಣಾ ಪ್ರಚಾರದ ವೇಳೆ ನಿಖಿಲ್ ಹೆಸರು ಎಲ್ಲ ಕಡೆ ಕೇಳಿಬರುತ್ತಿತ್ತು. ಆದ್ರೆ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಸೋಲನ್ನು ಕಂಡ ನಂತರ ಅವರು ರಾಜಕೀಯದಿಂದ ಪಕ್ಕಕ್ಕೆ ಸರಿದಿದ್ದರು. ನಂತರ ಅವರನ್ನು ಜೆಡಿಎಸ್ ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆದರೂ ಅವರ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿರಲಿಲ್ಲ. ಆದ್ರೆ ಈಗ ನಿಖಿಲ್ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ಅವರ ಪಕ್ಷದ ಶಾಸಕರೊಬ್ಬರು ಬಹಿರಂಗವಾಗಿ ತಿಳಿಸಿದ್ದಾರೆ.

ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಆಗಲಿದ್ದಾರೆ

ಚುನಾವಣೆಯಲ್ಲಿ ಸೋಲನ್ನು ಕಂಡ ನಂತರ ನಿಖಿಲ್ ಅವರು ರಾಜಕೀಯದಿಂದ ಸ್ವಲ್ಪ ಮಟ್ಟಿಗೆ ದೂರ ಸರಿದಿದ್ದರು. ಆದರೂ ಅವರ ಪಕ್ಷದವರು ಮಾತ್ರ ಅವರನ್ನು ಹುರಿದುಂಬಿಸುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ಈಗ ಮತ್ತೊಂದು ಘಟನೆ ನಡೆದಿದೆ. ಹೌದು. ತುಮಕೂರು ಗ್ರಾಮಾಂತರ ಶಾಸಕರಾದ ಗೌರಿ ಶಂಕರ್, ನಿಖಿಲ್ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ತುಮಕೂರಿನ ಹೊನ್ನುಡಿಕೆ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಗೌರಿಶಂಕರ್ ಆಗಮಿಸಿದ್ದರು. ಆಗ ಕಾರ್ಯಕ್ರಮದಲ್ಲಿ ನಿಖಿಲ್ ಹಾಗು ಕುಮಾರಸ್ವಾಮಿ ಅವರ ಬಗ್ಗೆ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ನಿಖಿಲ್ ವಿಚಾರವಾಗಿ ಭವಿಷ್ಯ ನುಡಿದ ಗೌರಿಶಂಕರ್

ಇನ್ನು ಕಾರ್ಯಕ್ರಮದಲ್ಲಿ ಗೌರಿಶಂಕರ್, ನಿಖಿಲ್ ಬಗ್ಗೆ ಹಾಗು ಕುಮಾರಸ್ವಾಮಿ ಅವರ ಬಗ್ಗೆಯೇ ಮಾತನಾಡಿದ್ದಾರೆ. ಹೌದು. ನಾನು ರಾಜ್ಯ ರಾಜಕಾರಣದಲ್ಲಿ ಆಗುತ್ತಿರುವ ಸಾಕಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇನೆ. ಹಾಗಾಗಿ ನಮ್ಮ ರಾಜ್ಯದ ಮುಂದಿನ ಭವಿಷ್ಯ ನಿಖಿಲ್ ಕುಮಾರಸ್ವಾಮಿ ಅವರ ಕೈಯಲ್ಲಿದೆ. ಹಾಗಾಗಿ ನಮ್ಮ ರಾಜ್ಯದ ಮುಂದಿನ ಮುಖ್ಯಮಂತ್ರಿ ಅವರೇ ಆಗಲಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಅವರು ಸದಾಕಾಲ ಮುಖ್ಯಮಂತ್ರಿ ಆಗೇ ಇರುತ್ತಾರೆ. ಆದ್ರೆ ನಮ್ಮ ರಾಜ್ಯದ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಅನ್ನೋದು ಸತ್ಯ ಎಂದು ಭವಿಷ್ಯವಾಣಿ ನುಡಿದಿದ್ದಾರೆ.

ಟೀ ಮಾರುತ್ತಿದ್ದವರು ಪ್ರಧಾನಿಯಾಗಿದ್ದಾರೆ

ರಾಜಕೀಯದ ಬಗ್ಗೆ ಮಾತನಾಡುತ್ತ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆಯೂ ಸಹ ಗೌರಿಶಂಕರ್ ಮಾತನಾಡಿದ್ದಾರೆ. ಹೌದು. ಒಂದು ಕಾಲದಲ್ಲಿ ಟೀ ಮಾರುತ್ತಿದ್ದವರು ಈಗ ಪ್ರಧಾನಿಯಾಗಿದ್ದಾರೆ ಅಂದ್ಮೇಲೆ, ಇಡೀ ರೈತರ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಬಹಳಷ್ಟು ಶ್ರಮ ವಹಿಸುತ್ತಿರುವ ನಮ್ಮ ಕುಮಾರಣ್ಣ ಏಕೆ ಮುಖ್ಯಮಂತ್ರಿ ಆಗಬಾರದು. ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಕುಮಾರಣ್ಣ ತಮ್ಮೆಲ್ಲಾ ಅಧಿಕಾರವನ್ನು ಅವರ ಪುತ್ರನಿಗೆ ನೀಡುವುದರಿಂದ ರಾಜ್ಯದ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಆಗಿರಲಿದ್ದಾರೆ.

ಒಟ್ಟಿನಲ್ಲಿ ತುಮಕೂರು ಶಾಸಕರಾದ ಗೌರಿಶಂಕರ್ ಅವರು ನಿಖಿಲ್ ಅವರ ಭವಿಷ್ಯವಾಣಿ ನುಡಿದಿದ್ದಾರೆ. ಹೌದು. ಮುಂದಿನ ನಮ್ಮ ಮುಖ್ಯಮಂತ್ರಿ ಅವರೇ ಎಂದು ಬಹಿರಂಗವಾಗಿ ಎಲ್ಲರ ಮುಂದೆ ಹೇಳಿದ್ದಾರೆ.

LEAVE A REPLY

Please enter your comment!
Please enter your name here