ನಮ್ಮ ತಂದೆ ರಾಜ್ಯದ ಜನತೆಗೆ ಏನು ಅನ್ಯಾಯ ಮಾಡಿದ್ದಾರೆ. ತಂದೆಗಾಗಿ ನಿಖಿಲ್ ಕಣ್ಣೀರು

0
966
nikil and hdk

ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಹೊಸ ಬದಲಾವಣೆಗಳಾಗುತ್ತಿವೆ. ಅದರಲ್ಲೂ ರಾಜ್ಯ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಕಾಂಗ್ರೆಸ್ ಹಾಗು ಜೆಡಿಎಸ್ ಮೂಲೆಗುಂಪಾಗಿವೆ. ಅಲ್ಲದೆ ಈಗಾಗಲೇ ಸಿದ್ದರಾಮಯ್ಯ ಹಾಗು ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು. ನಮ್ಮ ತಂದೆ ಇಂತಹ ಸ್ಥಿತಿಯಲ್ಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ಜೊತೆಗೆ ನಮ್ಮ ತಂದೆ ರಾಜ್ಯದ ಜನೆತೆಗೆ ಏನು ಅನ್ಯಾಯ ಮಾಡಿದ್ದಾರೆ ಎಂದು ಎಲ್ಲರ ಮುಂದೆ ಗೋಳಾಡಿದ್ದಾರೆ.

ನಮ್ಮ ತಂದೆ ರಾಜ್ಯದ ಜನೆಗೆ ಏನು ಅನ್ಯಾಯ ಮಾಡಿದ್ದಾರೆ

ರಾಜ್ಯ ಉಪಚನಾವಣೆಯ ಫಲಿತಾಂಶ ಬಂದ ನಂತರ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಹಾಗಾಗಿ ಜೆಡಿಎಸ್, ಕಾಂಗ್ರೆಸ್ ನಾಯಕರು ಬೇಸರದ ಮನೆಯಲ್ಲಿ ಕುಳಿತಿದ್ದಾರೆ. ಇತ್ತ ನಿಖಿಲ್ ತಮ್ಮ ತಂದೆಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಹೌದು. ದೇವನಹಳ್ಳಿ ತಾಲೂಕಿನ ಕಾರಹಳ್ಳಿಯಲ್ಲಿ ನಿನ್ನೆ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಅಲ್ಲಿಗೆ ನಿಖಿಲ್ ವಿಶೇಷ ಅಥಿತಿಯಾಗಿ ಆಗಮಿಸಿದ್ದರು. ಆಗ ಅವರ ತಂದೆ ಅನುಭವಿಸುತ್ತಿರುವ ನೋವಿನ ಬಗ್ಗೆ ತಿಳಿಸಿದ್ದಾರೆ. ನಮ್ಮ ತಂದೆ ರಾಜ್ಯ ಜನತೆಗೆ ಏನು ಅನ್ಯಾಯ ಮಾಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದಾರೆ. ಆದರೂ ಅವರಿಗೇಕೆ ಈ ಶಿಕ್ಷೆ ಎಂದಿದ್ದಾರೆ.

ನಮ್ಮ ತಂದೆ ರೈತರ ಸಾಲ ಮನ್ನಾ ಮಾಡಿದ್ದಾರೆ

ನಮ್ಮ ತಂದೆ 8 ಸ್ಥಾನ ಪಡೆದು ಸಿಎಂ ಆಗಿದ್ದರು. ಬಹುಮತ ಇಲ್ಲದಿದ್ರೂ ಹೇಳಿದ ಹಾಗೆ ಅವರು ರೈತರ ಸಾಲಮನ್ನಾ ಮಾಡಿದ್ದರು. ರೈತರ ಸಾಲಮನ್ನಾ ಮಾಡುವ ಕಾಯಕ ಮಾಡಿ ಉಪಚುನಾವಣೆಗೆ ಬಂದೆವು. ಆದರೆ ರಾಜ್ಯದ ಜನರು ಕುಮಾರಣ್ಣನ ಕೈ ಹಿಡಿಯಲಿಲ್ಲ ಎಂದರು. ಇನ್ನು ಉಪಚುನಾವಣೆಯ ಫಲಿತಾಂಶ ಕಂಡು ಕುಮಾರಣ್ಣ ತುಂಬಾ ನೋವನ್ನು ಅನುಭವಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕೆ.ಆರ್ ಪೇಟೆ ಜನ ನಮ್ಮನ್ನು ಯಾವ ಕಾರಣಕ್ಕೆ ಕೈ ಬಿಟ್ಟರು ಎಂಬುದು ಗೊತ್ತಿಲ್ಲ? ರಾಜ್ಯದ ಜನತೆಗೆ ನಮ್ಮ ತಂದೆ ಏನು ಅನ್ಯಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

ನನ್ನ ಸೋಲಿನ ಬಗ್ಗೆ ನನಗೆ ಚಿಂತೆಯಿಲ್ಲ

ಇನ್ನು ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿದ ಬಗ್ಗೆ ಮಂಡ್ಯ ಚುನಾವಣೆಯ ಬಗ್ಗೆ ತಿಳಿಸಿದ್ದಾರೆ. ಹೌದು. ನಾನು ಸಹ ಮಂಡ್ಯದಲ್ಲಿ ಸ್ಪರ್ಧಿಸಿದ್ದೆ. ಆದರೆ ಅಲ್ಲಿನ ಜನರು ಕೈ ಹಿಡಿಯಲಿಲ್ಲ. ಆದರೆ ನನಗೇನು ಬೇಸರ ತಂದಿಲ್ಲ. ಯಾಕಂದ್ರೆ ಗೆದ್ದಿದ್ದಾರೆ ನಾನು ಯಾವುದೇ ಚಿಂತೆಯಿಲ್ಲದೆ ಅಧಿಕಾರ ನಡೆಸುತ್ತಿದ್ದೆ. ಆದರೆ ನಂಗೆ ಅದು ಬೇಡ. ಯಾಕಂದ್ರೆ ಸೋಲನ್ನು ಕಂಡಾಗ ಮಾತ್ರ ವ್ಯಕ್ತಿ ಗೆಲ್ಲುವುದಕ್ಕೆ ಸಾಧ್ಯ ಎಂಬುದನ್ನು ನಾನು ಅರಿತಿದ್ದೇನೆ. ಅಲ್ಲದೆ ನಾನು ಸೋತ ನಂತರ ಅನೇಕ ಪಾಠಗಳನ್ನು ಕಲಿತಿದ್ದೇನೆ ಎಂದು ನಿಖಿಲ್ ತಮ್ಮ ಮನಸ್ಸಿನ ಬೇಸರವನ್ನು ಎಲ್ಲರ ಸಮ್ಮುಖದಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ನಿಖಿಲ್ ತಮ್ಮ ತಂದೆಯ ಸ್ಥಿತಿಯ ಬಗ್ಗೆ ತಿಳಿಸುತ್ತಾ ಜೊತೆಗೆ, ಅವರು ಅನುಭವಿಸುತ್ತಿರುವ ನೋವಿನ ಬಗ್ಗೆ ಹೇಳಿದ್ದಾರೆ. ಅಲ್ಲದೆ ನಾನು ಸಹ ಬಹಳಷ್ಟು ಪಾಠ ಕಲಿತಿದ್ದೇನೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here