ಬಂದೇ ಬಿಡ್ತು ನಿಖಿಲ್ ಎಲ್ಲಿದಿಯಪ್ಪ ಸಿನಿಮಾದ ಫಸ್ಟ್ ಪೋಸ್ಟರ್

0
602
nikhil yellidiyappa

ಮಂಡ್ಯ ಚುನಾವಣೆ ಎಂದ ತಕ್ಷಣ ಜನರಿಗೆ ಏನು ನೆನಪಾಗುತ್ತದೋ ಗೊತಿಲ್ಲ, ಆದರೆ ನಿಖಿಲ್ ಎಲ್ಲಿದಿಯಪ್ಪ ಅನ್ನೋ ಸಾಲುಗಳು ಮಾತ್ರ ನೆನಪಿಗೆ ಬರುತ್ತದೆ. ಯಾವತ್ತೋ ಕುಮಾರ್ ಸ್ವಾಮಿ ಅವರು ಹೇಳಿದ ಈ ಮಾತುಗಳ ಒಂದು ವೀಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮಂಡ್ಯ ಚುನಾವಣೆಯ ಅನುಸಾರವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ, ಈ ಸಾಲುಗಳನ್ನು ಬಳಸಿಕೊಂಡು ಬಹಳ ಜನ ಅಪಹಾಸ್ಯ ಮಾಡುತ್ತಿದ್ದರು. ಇದು ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು.

ನಿಖಿಲ್ ಎಲ್ಲಿದಿಯಪ್ಪ ಸಿನಿಮಾದ ಫಸ್ಟ್ ಲುಕ್ ಹೊರಬಿದ್ದಿದೆ

ನಿಖಿಲ್ ಎಲ್ಲಿದಿಯಪ್ಪ ಅನ್ನೋ ಶೀರ್ಷಿಕೆಗೆ ಕನ್ನಡ ಚಿತ್ರರಂಗದಲ್ಲಿ ಬಾರಿ ಬೇಡಿಕೆ ಇತ್ತು. ಹಲವಾರು ನಿರ್ಮಾಪಕರು ನಾ ಮುಂದು ನೀ ಮುಂದು ಎಂದು ಈ ಶೀರ್ಷಿಕೆ ಪಡೆದುಕೊಳ್ಳುವುದಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಆದರೆ ಕುಮಾರ್ ಸ್ವಾಮಿ ಅವರು ಚಲನಚಿತ್ರ ವಾಣಿಜ್ಯ ಮಂಡಳಿ ಅವರನ್ನು ಭೇಟಿ ಮಾಡಿ ಇದಕ್ಕೆ ಕಡಿವಾಣ ಹಾಕಬಹುದೆನ್ನುವುದು ಜನರ ಅಭಿಪ್ರಾಯವಾಗಿತ್ತು. ಹಾಗೆ ಆಗಲಿಲ್ಲ ಹೌದು ಈ ಶೀರ್ಷಿಕೆ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ ಎನ್ನುವ ವಿಷಯ ನಮಗೆ ತಿಳಿದಿತ್ತು, ಇನ್ನು ಖಾತರಿ ಆಗಿರಲಿಲ್ಲ. ನಿಖಿಲ್ ಎಲ್ಲಿದಿಯಪ್ಪ ಶೀರ್ಷಿಕೆ ಸೋಲ್ಡ್ ಔಟ್ ಆಗುವುದರ ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ಈಗ ಹೊರ ಬಿದ್ದಿದೆ.

nikhil ellidiyappa

ಕೃಷ್ಣೆ ಗೌಡರ ಪಾಲಾಗಿದೆ ಶೀರ್ಷಿಕೆ

ಡಬ್ಬಿಂಗ್ ವಾಣಿಜ್ಯ ಮಂಡಳಿಯ ಆದ್ಯಕ್ಷರಾದ ಕೃಷ್ಣ ಗೌಡ ಅವರು ಸ್ವತಃ ತಾವೆ ಈ ಚಿತ್ರಕ್ಕೆ ಕಥೆಯನ್ನು ಬರೆದು ನಿರ್ಮಾಣ ಮಾಡಲು ತಯಾರಾಗಿದ್ದಾರೆ. ಅಶೋಕ್ ಕೆ ಕಡಬ ಅವರು ನಿರ್ದೇಶನ ಮಾಡಲಿದ್ದಾರೆ. ಸಿ ಡಿ ರಾಜು ಛಾಯಾಗ್ರಹಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇಷ್ಟು ಬೇಗ ಇದು ಸಿನಿಮಾ ಆಗುತ್ತೆ ಎಂದು ಯಾರು ಸಹ ಊಹಿಸಿರಲಿಲ್ಲ. ಒಟ್ಟಿನಲ್ಲಿ ಸಿನಿಮಾದ ಫಸ್ಟ್ ಪೋಸ್ಟರ್ ಬಿಡುಗಡೆ ಆಗಿದ್ದು, ಚಿತ್ರದ ಕಥೆ ಏನಿರಬಹುದೆಂದು ಜನರು ಕೌತುಕರಾಗಿದ್ದಾರೆ.

ಚಿತ್ರಕ್ಕೆ ನಾಯಕ ನಟ ಯಾರು?

ಪೋಸ್ಟರ್ ಅನ್ನು ನೀವು ಗಮನಿಸಿದರೆ ಇದರಲ್ಲಿ ಚಿತ್ರದ ಶೀರ್ಷಿಕೆ ಮತ್ತು ಸಂಸದೀಯ ಭವನದ ಭಾವಚಿತ್ರವಿದೆ. ರಾಜಕೀಯದ ಮೇಲೆ ಚಿತ್ರ ದ ಕಥೆ ಆಧಾರಿತವಾಗಿರುತ್ತದೆ ಎನ್ನುವುದು ನಮಗೆ ಗೊತ್ತಾಗುತ್ತದೆ. ಈ ಚಿತ್ರಕ್ಕೆ ನಾಯಕ ನಟ ಯಾರು ಎನ್ನುವ ಪ್ರಶ್ನೆ ನಮಗೆ ಕಾಡುತ್ತದೆ. ಸ್ಟಾರ್ ನಟರನ್ನು ಆಯ್ಕೆ ಮಾಡುತ್ತಾರಾ ಅಥವಾ ಕೃಷ್ಣ ಗೌಡರೆ ನಾಯಕ ನಟನ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಗೊತ್ತಿಲ್ಲ ಇನ್ನು ಸ್ವಲ್ಪ ದಿನಗಳ ಕಾಲ ನಾವು ಕಾಯಲೇಬೇಕು.

ಅನೇಕ ಜನರ ಗೊಂದಲಕ್ಕೆ ಈ ಫಸ್ಟ್ ಲುಕ್ ಕಾರಣವಾಗಿದೆ

ಚಿತ್ರದ ಟೈಟಲ್ ಗೆ ತಕ್ಕ ಹಾಗೆ ಮಂಡ್ಯ ರಾಜಕಾರಣದ ಬಗ್ಗೆ ಚಿತ್ರದಲ್ಲಿ ತೋರಿಸುತ್ತಾರಾ, ಅಥವಾ ನಿಖಿಲ್ ಅವರ ನಿಜ ಜೀವನದ ಸಂಗತಿಗಳು ಮತ್ತು ರಾಜಕಾರಣ ಎರಡು ಮಿಶ್ರಣ ಮಾಡಿ ಚಿತ್ರಕ್ಕೆ ಹೊಸ ರೂಪ ನೀಡುತ್ತಾರಾ ಎನ್ನುವುದು ಕುತೂಹಲಕಾರಿ ಆಗಿದೆ. ಅನೇಕ ಜನರ ಗೊಂದಲಕ್ಕೆ ಈ ಫಸ್ಟ್ ಲುಕ್ ಕಾರಣವಾಗಿದೆ. ನಿಖಿಲ್ ಅವರ ರಾಜಕೀಯದ ರಣತಂತ್ರ ಚಿತ್ರದಲ್ಲಿ ತೋರಿಸಬಹುದಾ, ಹೀಗೆ ಕೆದಕುತ್ತಾ ಹೋದರೆ ಅನೇಕ ಪ್ರಶ್ನೆಗಳು ಹುಟ್ಟಿ ಕೊಳ್ಳುತ್ತವೆ.

ಪ್ರಚಾರದ ವೇಳೆಯಲ್ಲಿ ಪ್ರಖ್ಯಾತಿ ಆದ ಮತ್ತೊಂದು ಪದ ಜೋಡೆತ್ತು

ಮಂಡ್ಯ ಪ್ರಚಾರದ ವೇಳೆಯಲ್ಲಿ ಪ್ರಖ್ಯಾತಿ ಆದ ಮತ್ತೊಂದು ಪದ ಜೋಡೆತ್ತು. ಜೋಡೆತ್ತು ಅನ್ನೋ ಶೀರ್ಷಿಕೆಯನ್ನು ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾದ ರಾಮ್ ಮೂರ್ತಿ ಅವರು ಪಡೆದುಕೊಂಡಿದ್ದಾರೆ. ಇದೆ ಟೈಟಲ್ ಇಟ್ಟುಕೊಂಡು ದರ್ಶನ್ ಗಾಗಿ ಒಂದು ಕಥೆಯನ್ನು ಮಾಡಿದರೆ, ಜೋಡೆತ್ತು ಎನ್ನುವ ಹೆಸರನ್ನು ಇಡಬೇಕೆಂದು ಆಲೋಚನೆ ಮಾಡುತ್ತಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ಕೇಳಿ ಬಂದ ಎಲ್ಲಾ ಶಬ್ದಗಳ ಮೇಲೆ ಸಿನಿಮಾ ಮಾಡಲು ನಿರ್ಮಾಪಕರು ಆಸಕ್ತಿ ತೋರಿಸುತ್ತಿದ್ದಾರೆ. ಇನ್ನು ಮಂಡ್ಯ ಚುನಾವಣೆಗೆ ಸಂಬಂಧ ಪಟ್ಟ ಹಾಗೆ ಯಾವ ಯಾವ ಶೀರ್ಷಿಕೆ ಮೇಲೆ ಸಿನಿಮಾ ನಿರ್ಮಾಣವಾಗುತ್ತದೆಯೋ ಗೊತ್ತಿಲ್ಲ ಅಲ್ಲಿಯವರೆಗು ನಾವು ಕಾಯಲೇಬೇಕು.

LEAVE A REPLY

Please enter your comment!
Please enter your name here