ನನ್ನ ಸೋಲಿಗೆ ನಾನೇ ಕಾರಣವೆಂದು ಹೇಳಿದ ನಿಖಿಲ್ ಕುಮಾಸ್ವಾಮಿ

0
959
nikhil anisike

ಈ ಬಾರಿಯ ಲೋಕಸಭಾ ಚುನಾವಣೆ ಮುಗಿದ ಮೇಲೆ, ಯಾರು, ಏನಾದರು ಅಂತ ಸರಿಯಾಗಿ ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಕೆಲವ್ರು ಮಾಧ್ಯಮಗಳಲ್ಲಿ ಅಥವಾ ಜನರ ಮುಂದೆ ಕಾಣಿಸಿಕೊಂಡಿಲ್ಲ. ಅದರಲ್ಲೂ ಸೋಲನ್ನು ಕಂಡಿರುವವರು, ಒಂದೊಂದು ಕಡೆ ದಿಕ್ಕಾಪಾಲಾಗಿದ್ದರೆ. ಯಾಕಂದ್ರೆ ಮೈತ್ರಿ ಸರ್ಕಾರಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮುಖಭಂಗವಾಗಿರೋದ್ರಿಂದ, ಪಕ್ಷಗಳ ನಾಯಕರುಗಳು, ಹಿರಿಯ ನಾಯಕರ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಇನ್ನೂ ಚುನಾವಣೆಯಲ್ಲಿ ಎಲ್ಲರ ಗಮನ ಸೆಳೆದ ಜಿಲ್ಲೆ ಅಂದ್ರೆ ಅದು ಮಂಡ್ಯ. ಹೌದು. ಈ ಕ್ಷಣಕ್ಕೂ ಮಂಡ್ಯ ಚುನಾವಣೆಯನ್ನ ಯಾರಿಂದಲೂ ಮರೆಯಲು ಆಗುವುದಿಲ್ಲ. ಆದರೆ ಮಂಡ್ಯ ಜನತೆ ಸುಮಲತಾ ಅವರನ್ನ ಕೈ ಹಿಡಿಯುವ ಮೂಲಕ ಜಯಶೀಲರಾಗುವಂತೆ ಮಾಡಿದೆ.

ಹೌದು. ಮಂಡ್ಯದಲ್ಲಿ ಬಹಳಷ್ಟು ಸದ್ದು ಮಾಡಿದವರು ನಿಖಿಲ್ ಹಾಗೂ ಸುಮಲತಾ. ಇಂತಹ ಚುನಾವಣೆ ಮಂಡ್ಯದಲ್ಲಿ ಈ ವರೆಗೂ ನಡೆದಿಲ್ಲ. ಇವರಿಬ್ಬರ ಕಾಳಗ ಜೋರಾಗೆ ನಡೆಯುತ್ತಿತ್ತು. ಆದ್ರೆ ಫಲಿತಾಂಶ ಅನ್ನೋ ಹೆಸರಿನಲ್ಲಿ ಸುಮಲತಾ ಜಯಗಳಿಸಿದರು. ನಿಖಿಲ್ ಸೋಲನ್ನ ಕಂಡರು. ಅದಾದ ಮೇಲೆ,ನಿಖಿಲ್ ಅವರ ಬಗೆಗಿನ ಕೆಲವು ಊಹಾಪೋಹಗಳು ಕೇಳಿಬಂದವು. ಆದ್ರೆ ಅದೆಲ್ಲಕ್ಕೂ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಸ್ಪಷ್ಟನೆ ನೀಡಿದರು. ಆದ್ರೆ ಫಲಿತಾಂಶ ಬಂದಾಗಿಂದ ನಿಖಿಲ್ ಅವರು, ಯಾವುದೇ ಮಾತುಕತೆಗಾಗಲಿ ಅಥವಾ ಹೇಳಿಕೆ ನೀಡುವುದಕ್ಕಾಗಲಿ ಬಂದಿರಲಿಲ್ಲ. ಆದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆ ನೀಡಿದ್ದಾರೆ.

ಫಲಿತಾಂಶದ ನಂತರ ಮೊದಲ ಹೇಳಿಕೆ

ನಿಖಿಲ್ ಅವರು ಮಂಡ್ಯ ಚುನಾವಣೆಯಲ್ಲಿ ಸೋಲನ್ನ ಕಂಡ ಮೇಲೆ ಯಾವುದೇ ಹೇಳಿಕೆ ನೀಡಿವುದಕ್ಕಾಗಲಿ ಅಥವಾ ಮಾಧ್ಯಮದವರ ಮುಂದಾಗಲಿ ಬಂದಿರಲಿಲ್ಲ. ಆದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ, ತಮ್ಮ ಹೇಳಿಕೆ ನೀಡಿದ್ದಾರೆ. ಹೌದು. ಚುನಾವಣೆಯಲ್ಲಿ ನಡೆದ ಕೆಲವು ಅಂಶಗಳ ಬಗ್ಗೆ ಹಾಗೂ ಸೋಲಿನ ಬಗ್ಗೆ ಕೆಲವು ಮಾತುಗಳನ್ನ ಹೇಳಿದ್ದಾರೆ. ಅಲ್ಲದೆ ನಿಖಿಲ್ ಅವರು ಇನ್‍ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಂಪೂರ್ಣವಾಗಿ ಫಲಿತಾಂಶದ ಸೋಲು, ಮುಂದಿನ ನಡೆಯ ಬಗ್ಗೆ ತಿಳಿಸಿದ್ದಾರೆ.

ನನ್ನ ಸೋಲಿಗೆ ನಾನೇ ಕಾರಣವೆಂದ ನಿಖಿಲ್

ಇಷ್ಟು ದಿನದ ಬಳಿಕ ಈಗ ಮಾತಾಡಿದ ನಿಖಿಲ್, ತಮ್ಮ ಸೋಲಿನ ಬಗೆಗಿನ ಮಾತುಗಳನ್ನ ಹಂಚಿಕೊಂಡಿದ್ದಾರೆ. ಹೌದು. ನನ್ನ ಸೋಲಿಗೆ ನಾನೇ ಕಾರಣ. ನನ್ನ ಸೋಲಿಗೆ ಬೇರೆ ಯಾರು ಕಾರಣರಲ್ಲ. ಹೌದು. ನನ್ನ ಸೋಲಿಗೆ ನಾನೇ ಕಾರಣ ಹೊರತು, ಮಂಡ್ಯ ಲೋಕಸಭಾ ಕ್ಷೇತ್ರದ, ವಿಧಾನ ಸಭಾ ಕ್ಷೇತ್ರದ ಸದಸ್ಯರಾಗಲಿ,ಅಥವಾ ಪರಿಷತ್ ಸದಸ್ಯರಾಗಲಿ ಅಲ್ಲ. ಜನತೆಗೆ ನಾಯಕನ ಬಗ್ಗೆ ತಿಳುವಳಿಕೆ ಇರುತ್ತದೆ. ಯಾರನ್ನ ಆಯ್ಕೆ ಮಾಡಿದರೆ, ಸರಿ ಅನಿಸುತ್ತದೆಯೋ ಅವರನ್ನ ಆಯ್ಕೆ ಮಾಡುತ್ತಾರೆ. ಅದರಂತೆ, ಈಗ ಸುಮಕ್ಕನನ್ನ ಆಯ್ಕೆ ಮಾಡಿದ್ದಾರೆ ಎಂದು ತಮ್ಮ ಮನದಾಳದ ಮಾತನ್ನ ಹಂಚಿಕೊಂಡಿದ್ದಾರೆ.

ಸುಮಲತಾ ಗೆ ಶುಭಾಶಯ ತಿಳಿಸಿದ ನಿಖಿಲ್

ತಮ್ಮ ಮನದಾಳದ ಮಾತನ್ನ ಹಂಚಿಕೊಳ್ಳುವಾಗ, ನಿಖಿಲ್, ಸುಮಲತಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಹೌದು. ಮಂಡ್ಯ ಜನೆತೆಗೆ ನಾನು ಯಾವಾಗಲು ಚಿರಋಣಿಯಾಗಿರುತ್ತೇನೆ. ಅವರು ಸೋಲಿಸಿದರು ಎಂದ ಮಾತ್ರಕ್ಕೆ ನಾನು ಅವರನ್ನ ದೂರುವುದಿಲ್ಲ. ಯಾಕಂದ್ರೆ ಎಲ್ಲದ್ದಕ್ಕೂ ಕಾರಣವಿರುತ್ತದೆ. ಜೊತೆಗೆ ಈಗಾಗಲೇ ಮಂಡ್ಯ ಜಿಲ್ಲೆಗೆ 8671 ಕೋಟಿ ಹಣ ಬಿಡುಗಡೆ ಮಾಡಿದ್ದು, ಇದರಿಂದ ಮಂಡ್ಯ ಜಿಲ್ಲೆ ಅಭಿವೃದ್ಧಿ ಮಾಡಬಹುದಾಗಿದೆ. ಸುಮಕ್ಕ ಅದನ್ನ ಸರಿಯಾದ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ. ಅವರ ಜೊತೆ, ನಾನು ಸಹ ಬೆನ್ನೆಲುಬಾಗಿ ನಿಲ್ಲುತ್ತೇನೆ. ಇದುವರೆಗೂ, ನಾನು ಅವರನ್ನ ವಿರೋಧಿ ಎಂದು ತಿಳಿದಿಲ್ಲ. ಈಗಲೂ ಅವರು ನನಗೆ ಅಕ್ಕ ಎಂದು ತಿಳಿಸಿ, ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಫಲಿತಾಂಶ ಬಂದ ಇಷ್ಟು ದಿನದ ಬಳಿಕ, ನಿಖಿಲ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಜೊತೆಗೆ ಸುಮಲತಾ ಅವರಿಗೆ ಶುಭಾಶಯ ತಿಳಿಸಿ, ಅವರ ಬೆನ್ನೆಲುಬಾಗಿ ನಿಲ್ಲುವುದಾಗಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here