ವಿದ್ಯಾರ್ಥಿಗಳಿಗೆ ಇದು ಪರೀಕ್ಷೆಯಾ ಅಥವಾ ಘೋರವಾದ ಶಿಕ್ಷೆಯಾ?

0
245

ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ತರಲೆ ಮತ್ತು ತಮಾಷೆಯನ್ನು ಮಾಡಿಕೊಂಡು ಇರುತ್ತಾರೆ. ಶಿಕ್ಷಕರು ಸಹ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವ ಸಲುವಾಗಿ ಪಾಠವನ್ನು ಮಾಡುತ್ತಾರೆ. ಆದರೆ ವಿದ್ಯಾರ್ಥಿಗಳು ಎದೆಗುಂದುವುದು ಪರೀಕ್ಷೆ ಬಂದಾಗ. ಹೌದು ಪರೀಕ್ಷೆ ಎನ್ನುವ ಭೂತದಿಂದ ವಿದ್ಯಾರ್ಥಿಗಳು ಪರಾಗಲೇಬೇಕಾಗಿದೆ ಬೇರೆ ಆಯ್ಕೆ ಇಲ್ಲ. ವರ್ಷ ಪೂರ್ತಿ ಓದಿರುವ ವಿಷಯಗಳನ್ನು ಪರೀಕ್ಷೆ ಬರೆಯುವ ಮೂಲಕ ವ್ಯಕ್ತ ಪಡಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಮಾಡಲೆಂದು ಅನೇಕ ಮಾರ್ಗಗಳನ್ನು ಹುಡುಕಿಕೊಂಡಿರುತ್ತಾರೆ. ಕೆಲ ಹುಡುಗರು ಚೀಟಿಯನ್ನು ತಂದರೆ, ಇನ್ನು ಕೆಲವರು ಪಕ್ಕಕ್ಕೆ ಕುಳಿತುಕೊಂಡಿರುವ ಸ್ನೇಹಿತರಿಂದ ಕಾಪಿ ಮಾಡುತ್ತಾರೆ. ಆದರೆ ಈ ಕಾಲೇಜ್ ನಲ್ಲಿ ಕಾಪಿ ಮಾಡುವ ವಿದ್ಯಾರ್ಥಿಗಳಿಗೆ ಬ್ರೇಕ್ ಹಾಕಿದ್ದಾರೆ. ಮುಂದೆ ಓದಿ

ವಿಚಿತ್ರವಾದ ನಿಯಮ

ಭಗತ್ ಪಿಯು ಕಾಲೇಜಿನ ಆಡಳಿತ ಮಂಡಳಿಯವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಇದೆ ತಿಂಗಳ 16 ರಂದು ವಿದ್ಯಾರ್ಥಿಗಳು ತಲೆ ಮೇಲೆ ಡಬ್ಬಿಯನ್ನು ಹಾಕಿಕೊಂಡು ಪರೀಕ್ಷೆಯನ್ನು ಬರೆದಿದ್ದಾರೆ. ಸತತ ಮೂರು ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆಯನ್ನು ಬರೆದಿರುವ ಸನ್ನಿವೇಶವನ್ನು ಭಗತ್ ಕಾಲೇಜಿನಲ್ಲಿ ನೋಡಬಹುದಾಗಿತ್ತು. ಮೂರು ಗಂಟೆಗಳ ಕಾಲ ತಲೆ ಮೇಲೆ ಡಬ್ಬಿ ಹಾಕಿಕೊಂಡು ಪರೀಕ್ಷೆ ಬರೆಯುವುದೆಂದರೆ ಅದು ತಮಾಷೆಯ ಮಾತಲ್ಲ. ವಿದ್ಯಾರ್ಥಿಗಳು ಕುತ್ತಿಗೆ ನೋವನ್ನು ಸಹಿಸಿಕೊಂಡು ಕಾಲೇಜಿನ ಆಡಳಿತ ಮಂಡಳಿಯ ಆದೇಶವನ್ನು ಪಾಲಿಸಿದ್ದಾರೆ.

ಆಡಳಿತ ಮಂಡಳಿಯವರ ವಿರುದ್ಧ ಗರಂ ಆದ ಡಿಸಿಪಿ

ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಕಾಲೇಜಿನ ಆಡಾಳಿತ ಮಂಡಳಿಯ ವಿರುದ್ಧ ಡಿಸಿಪಿಯವರು ಕೆಂಡಮಂಡಲವಾಗಿದ್ದಾರೆ.

ಈ ರೀತಿ ಮಾಡುವುದಕ್ಕೆ ನಿಮಗೆ ಅನುಮತಿ ಕೊಟ್ಟವರು ಯಾರು? ಶಿಕ್ಷಣ ಇಲಾಖೆಯಲ್ಲಿ ಈ ರೀತಿಯ ನಿಯಮ ಬಂದಿದೆಯಾ ಎಂದು ಕಾಲೇಜಿನ ಆಡಳಿತದ ಮಂಡಳಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here