ಬರಿದಾಗಿದ್ದ ನೇತ್ರಾವತಿ, ಈಗ ನೀರಿಂದ ಮೈದುಂಬಿ ನಲಿಯುತ್ತಿದ್ದಾಳೆ

0
1778
netrvatahi odalu

ಬರಗಾಲ ಅನ್ನೋದು ಮನುಷ್ಯನ ಜೀವವನ್ನ ಹಿಂಡುತ್ತದೆ. ಹೌದು. ಮನುಷ್ಯನಾದವನು ಯಾವ ಕಾಲಕ್ಕಾದರೂ ಹೊಂದಿಕೊಂಡು ಬದುಕುತ್ತಾನೆ. ಆದರೆ ಈ ಬರಗಾಲಕ್ಕೆ ಮಾತ್ರ, ಅವನು ಹೊಂದಿಕೊಳ್ಳೋಕೆ ಸ್ವಲ್ಪ ಕಷ್ಟವಾಗುತ್ತೆ. ಅಂದ್ರೆ ಬಿಸಿಲಿಗೆ ಆತ ಹೆದರುತ್ತಾನೆ ಅಂತಲ್ಲ. ನೀರಿನ ಸಮಸ್ಯೆಗೆ ಅವನು ಬಳಲಿ ಬೆಂಡಾಗುತ್ತಾನೆ. ಹೌದು. ಬರಗಾಲ ಬಂತು ಅಂದ್ರೆ, ನೀರಿನ ಸಮಸ್ಯೆ ಬರುತ್ತೆ ಅನ್ನೋದು ಪಕ್ಕಾ. ಆದ್ರೆ ಇಂತ ಬರಗಾಲ ಯಾವತ್ತೂ ಬಂದಿರಲಿಲ್ಲ ಎನಿಸುತ್ತೆ. ಯಾಕಂದ್ರೆ ಈ ವರ್ಷದ ಬರಗಾಲ ಹೇಗಿತ್ತು ಅಂದ್ರೆ ಬರ ಕಾಣದ ಜಿಲ್ಲೆಗಳು ಸಹ, ಈ ವರ್ಷದಲ್ಲಿ ಬರ ನೋಡುವಂತಾಗಿದೆ.

ಧರ್ಮಕ್ಕೆ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ಈವರೆಗೂ ಬರಗಾಲ ಅನ್ನೋದನ್ನ ಯಾರು ನೋಡಿರಲಿಲ್ಲ. ಯಾಕಂದ್ರೆ ಎಂದಿಗೂ ಆ ಕ್ಷೇತ್ರ ಇಂತ ಬರಗಾಲಕ್ಕೆ ತುತ್ತಾಗಿರಲಿಲ್ಲ. ಆದರೆ ಈ ವರ್ಷದ ಬೇಸಿಗೆಗೆ ಧರ್ಮಸ್ಥಳ ಬಾರಿ ನೀರಿನ ಸಮಸ್ಯೆಯನ್ನ ಎದುರಿಸಿದೆ. ಹೌದು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧರ್ಮಸ್ಥಳ ನೀರಿನ ಸಮಸ್ಯೆಯನ್ನ ಎದುರಿಸಿರೋದು. ಹಾಗಾಗಿ ಅಲ್ಲಿನ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಡೆ ಅವರು, ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದರು. ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಇರೋದ್ರಿಂದ ಭಕ್ತಾಧಿಗಳು ತಮ್ಮ ಪ್ರಯಾಣವನ್ನ ಮುಂದೂಡಬೇಕು ಎಂದು. ಯಾಕಂದ್ರೆ ನೇತ್ರಾವತಿ ತನ್ನ ಒಡಲನ್ನ ಬರಿದು ಮಾಡಿಕೊಂಡಿದ್ದಳು. ಆದ್ರೆ ಈಗ ನೇತ್ರಾವತಿ ನೀರಿಂದ ಮೈದುಂಬಿ ನಲಿಯುತ್ತಿದ್ದಾಳೆ.

ನೀರಿನಿಂದ ಮೈದುಂಬಿ ನಲಿಯುತ್ತಿರುವ ನೇತ್ರಾವತಿ

ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದಲ್ಲಿನ ಜನರು ನೀರಿಗಾಗಿ ಹಾಹಾಕಾರ ಪಡುತ್ತಿದ್ದರು. ಯಾಕಂದ್ರೆ, ಇಲ್ಲಿಯವರೆಗೂ ಅಲ್ಲಿನ ಜನರು ಇಷ್ಟರ ಮಟ್ಟಿಗಿನ ನೀರಿನ ಸಮಸ್ಯೆಯನ್ನ ಎದುರಿಸಿರಲಿಲ್ಲ. ಹಾಗಾಗಿ ಅವರು ನೀರಿನ ಸಮಸ್ಯೆಯಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದರು. ನೇತ್ರಾವತಿ ತನ್ನ ಒಡಲನ್ನ ಸಂಪೂರ್ಣ ಬರಿದು ಮಾಡಿಕೊಂಡಿದ್ದಳು. ಹಾಗಾಗಿ ಕಳೆದ ಕೆಲವು ದಿನಗಳ ಹಿಂದೆ, ಬಿಬಿಎಂಪಿ ಧರ್ಮಸ್ಥಳಕ್ಕೆ ನೀರಿನ ಟ್ಯಾಂಕರ್ ಗಳನ್ನ ಕಳಿಸಿ, ಸಹಾಯ ಮಾಡಿತ್ತು. ಆದ್ರೆ ಈಗ ನೇತ್ರಾವತಿ ನೀರಿಂದ ಮೈದುಂಬಿ ನಲಿಯುತ್ತಿದ್ದಾಳೆ.

 

ಬತ್ತಿಹೋದ ಸ್ನಾನಘಟದಲ್ಲಿ ನೀರಿನ ಹರಿವು

ನೀರಿನ ಕೊರತೆ ಹಿನ್ನೆಲೆಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾನಘಟ್ಟದಲ್ಲಿ ಭಕ್ತರಿಗೆ ಸ್ನಾನಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಆದ್ರೆ ಈಗ ಆಗಿರುವ ಮಳೆಯಿಂದ ಸ್ನಾನಘಟದಲ್ಲಿ ನೀರು ಹರಿಯುತ್ತಿದೆ. ಹೌದು. 15 ದಿನ ಮಳೆ ಬರದಿದ್ದರೆ ಮಂಜುನಾಥನ ಅಭಿಷೇಕಕ್ಕೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಇದೀಗ ಬತ್ತಿಹೋಗಿದ್ದ ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಮಳೆಯಿಂದಾಗಿ ಸ್ನಾನಘಟ್ಟದಲ್ಲಿ ನೀರು ಹರಿಯುತ್ತಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

ಪ್ರಯಾಣ ಬೆಳೆಸುತ್ತಿರುವ ಭಕ್ತಾಧಿಗಳು

ನೇತ್ರಾವತಿಯಲ್ಲಿ ನೀರು ಹರಿಯುತ್ತಿರುವ ವಿಷಯ ಕೇಳಿ, ಭಕ್ತರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮಂಜುನಾಥನ ದರ್ಶನ ಪಡೆಯಲು, ಭಕ್ತರು ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಹೌದು. ವೀರೇಂದ್ರ ಹೆಗ್ಡೆ ಅವರ ಮನವಿಗೆ ಒಪ್ಪಿಕೊಂಡ ಭಕ್ತರು ತಮ್ಮ ಪ್ರಯಾಣವನ್ನ ಮುಂದೂಡಿದ್ದರು. ಆದ್ರೆ ಈಗ ನೇತ್ರಾವತಿಯಲ್ಲಿ ನೀರು ಇರುವ ವಿಷಯ ತಿಳಿದ ಭಕ್ತರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸುತ್ತಿದ್ದಾರೆ. ಈಗಾಗಲೇ ಹಲವರು ಮಂಜುನಾಥನ ದರ್ಶನ ಪಡೆದಿದ್ದಾರೆ. ನಿಜಕ್ಕೂ ಇಂಥ ಘಳಿಗೆಯನ್ನ ನೋಡಲು ಬಹಳ ಸಂತೋಷವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು ತಿಳಿಸಿದ್ದಾರೆ.

ಕೆಲವೊಂದು ಘಟನೆಗಳು ಒಬ್ಬರನ್ನ ಮಾತ್ರ ಸಂತೋಷ ಪಡಿಸುತ್ತವೆ. ಆದ್ರೆ ಇಂಥ ಘಟನೆಗಳು ಎಲ್ಲರನ್ನೂ ಸಂತೋಷ ಪಡಿಸುತ್ತದೆ. ಯಾಕಂದ್ರೆ ಇತಿಹಾಸದಲ್ಲೇ ನೇತ್ರಾವತಿಯ ಒಡಲು ಬರಿದಾಗಿರಲಿಲ್ಲ. ಆದ್ರೆ ಈ ಬಾರಿ ಈ ರೀತಿ ಆಗಿದ್ದು, ಎಲ್ಲರ ಆತಂಕಕ್ಕೆ ಕಾರಣವಾಗಿತ್ತು. ಆದ್ರೆ ಆ ಮಂಜುನಾಥ ಆ ಆತಂಕಕ್ಕೆ ಬ್ರೇಕ್ ಹಾಕಿದ್ದಾನೆ.

LEAVE A REPLY

Please enter your comment!
Please enter your name here