ಬರಿದಾದ ನೇತ್ರಾವತಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ವೀರೇಂದ್ರ ಹೆಗ್ಡೆ ಅವರು

0
1337
netravathi

ಮಾರ್ಚ್, ಏಪ್ರಿಲ್ ತಿಂಗಳು ಬಂತು ಅಂದ್ರೆ, ಯಾವ ತೊಂದರೆ ಬರುತ್ತೋ, ಇಲ್ವೋ ಗೊತ್ತಿಲ್ಲ. ಆದರೆ ಬರಗಾಲ ಅಂತೂ ತಪ್ಪಿದ್ದಲ್ಲ. ಹೌದು. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ವರ್ಷದಲ್ಲಿ ಬರುವಂತಹ ಕಾಲಗಳು. ಆದರೆ ಈ ಬರಗಾಲ ತರುವಷ್ಟು ಹಿಂಸೆ, ಬೇರೆ ಯಾವ ಕಾಲವೂ ತರುವುದಿಲ್ಲ. ಯಾಕಂದ್ರೆ, ಒಬ್ಬ ಮನುಷ್ಯನಿಗೆ ಮುಖ್ಯವಾದದ್ದು ಬೇಕಾದದ್ದು ಅಂದ್ರೆ ಅದು, ನೀರು ಹಾಗು ಅನ್ನ. ಆದರೆ ಈ ಬರಗಾಲ ಬಂದಾಗ, ಮನುಷ್ಯನಿಂದ ಅವೆರಡು ದೂರವಾಗುತ್ತವೆ. ಯಾಕಂದ್ರೆ ಬೇಸಿಗೆಯಲ್ಲಿ ಮಳೆ ಬರುವುದಿಲ್ಲ ಹಾಗಾಗಿ ನೀರು ಸಿಗುವುದಿಲ್ಲ. ನೀರು ಸಿಕ್ಕಿಲ್ಲ ಅಂದ್ರೆ, ಬೆಳೆ ಬೆಳೆಯೋಕು ಆಗಲ್ಲ. ಇದ್ರಿಂದ,ಮನುಷ್ಯನಿಗೆ ತಿನ್ನಲು ಅನ್ನ ಸಿಗಿವುದಿಲ್ಲ. ಇದರಿಂದ ಎಷ್ಟೋ ಜನರು ಪ್ರಾಣ ಕಳೆದುಕೊಳ್ಳುವಂತಾಗುತ್ತೆ.

ಹೌದು. ನೀರಿಲ್ಲದೆ ಮನುಷ್ಯ ಎಷ್ಟು ಸಮಸ್ಯೆ ಅನುಭವಿಸತ್ತಾನೆ ಅನ್ನೋದನ್ನ ನಿಜಕ್ಕೂ ಯಾರಿಂದಲೂ ಊಹೆ ಮಾಡಲು ಸಹ ಆಗುವುದಿಲ್ಲ. ಯಾಕಂದ್ರೆ, ಯಾರೇ ಆಗಲಿ, ಒಂದು ದಿನ ಊಟ ಬಿಟ್ಟು ಬೇಕಾದರೂ ಇರುತ್ತಾರೆ. ಆದ್ರೆ ನೀರಿಲ್ಲದೆ ಯಾರಿಂದಲೂ ಇರಲಾಗುವುದಿಲ್ಲ. ಸಾಮಾನ್ಯವಾಗಿ ಜನರು, ಊರಿನಲ್ಲಿರುವ ಕೆರೆ ಅಥವಾ ನದಿಯ ನೀರನ್ನ ನಂಬಿ, ಜೀವನ ನಡೆಸುತ್ತಿರುತ್ತಾರೆ. ಆದ್ರೆ ಅದೇ ನದಿ ಬತ್ತಿದರೆ, ಅವರು ಹೋಗುವುದಾದರೂ ಎಲ್ಲಿಗೆ. ಹೌದು. ಇತಿಹಾಸದಲ್ಲೇ ಮೊದಲ ಬಾರಿಗೆ ಬತ್ತಿರುವ ನದಿ ಅಂದ್ರೆ, ಅದು ನೇತ್ರಾವತಿ. ಎಷ್ಟೋ ಜನರ ಜೀವನಕ್ಕೆ ಆಧಾರವಾಗಿದ್ದ ನದಿ ಈಗ, ಬತ್ತಿ ಹೋಗಿದೆ. ಈ ಬತ್ತಿರುವ ನದಿಯ ಸ್ವಚ್ಛತಾ ಕಾರ್ಯವನ್ನ ಇಂದು ಮಾಡಲಾಗಿದೆ.

ಬರಿದಾದ ನೇತ್ರಾವತಿ 

ಕಳೆದ ಕೆಲವು ದಿನಗಳ ಹಿಂದೆಯಷ್ಟೇ, ಧರ್ಮಸ್ಥಳ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಡೆ ಅವರು, ಭಕ್ತಾಧಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಈ ಬಾರಿಯ ಬರಗಾಲದ ಬಿಸಿ ಧರ್ಮಸ್ಥಳಕ್ಕೂ ತಟ್ಟಿರೋದ್ರಿಂದ, ದಯಮಾಡಿ ಭಕ್ತಾಧಿಗಳು ತಮ್ಮ ಪ್ರಯಾಣವನ್ನ ಸ್ವಲ್ಪ ದಿನ ಮುಂದೂಡಬೇಕು ಎಂದು ತಿಳಿಸಿದ್ದರು. ಅದಾದ ಸ್ವಲ್ಪ ದಿನದ ನಂತರ ಇನ್ನೊಂದು ವಿಷಯವನ್ನ ತಿಳಿಸಿದರು. ಆ ಮಾತನ್ನ ಕೇಳಿದಾಗ ನಿಜಕ್ಕೂ ಎಲ್ಲರಿಗೂ ಆಶ್ಚರ್ಯವಾಯಿತು. ಹೌದು. ಇನ್ನೂ15 ದಿನಗಳ ಒಳಗ ಮಳೆ ಬರದಿದ್ದರೆ, ಭಗವಂತ ಮಂಜುನಾಥನ ಅಭಿಷೇಕಕ್ಕೂ ನೀರಿರುವುದಿಲ್ಲ ಎಂದು ತಿಳಿಸಿದ್ದರು. ಆದರೆ ಈಗ, ನೇತ್ರಾವತಿ ಸಂಪೂರ್ಣವಾಗಿ ಬತ್ತಿ ಹೋಗಿದ್ದಾಳೆ. ಹೌದು. ನೇತ್ರಾವತಿ ಸಂಪೂರ್ಣವಾಗಿ ಬರಡಾಗಿದ್ದಾಳೆ.

ವೀರೇಂದ್ರ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯ

ಇಂದು ಬೆಳಿಗ್ಗೆಯಿಂದಲೇ ನೇತ್ರಾವತಿಯ ಸ್ವಚ್ಛತಾ ಕಾರ್ಯ ನಡೆದಿದೆ. ಹೌದು. ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಡೆ ಅವರ ನೇತೃತ್ವದಲ್ಲಿ ಇಂದು ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಈ ಸ್ವಚ್ಛತಾ ಕಾರ್ಯದಲ್ಲಿ ಸುಮಾರು 400ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಇದರಲ್ಲಿ ಸಾಮಾನ್ಯ ಜನರು ಸೇರಿದಂತೆ, ವೀರೇದ್ರ ಹೆಗ್ಡೆ ಅವರ, ಕುಟುಂಬಸ್ಥರು ಸಹ ಸೇರಿದ್ದರು. ಎಲ್ಲರು ಸೇರಿ, ನದಿಯನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಸುಮಾರು ಹತ್ತಕ್ಕೂ ಹೆಚ್ಚಿನ ಲೋಡ್ ಕಸ ತೆಗೆದಿದ್ದಾರೆ.

ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ

ಧರ್ಮಸ್ಥಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪರಿಸ್ಥಿತಿ ಬಂದೊದಗಿದೆ. ಹೌದು. ನೇತ್ರಾವತಿ ಎಂದಿಗೂ ಬತ್ತಿರಲಿಲ್ಲ. ಆದ್ರೆ ಈ ಬಾರಿ ಈ ರೀತಿ ಬರಿದಾಗಿರೋದು, ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಹೌದು. ಈಗಾಗಲೇ ಧರ್ಮಸ್ಥಳದ ಜನತೆಗೆ ಆತಂಕ ಉಂಟಾಗಿದೆ. ಯಾಕಂದ್ರೆ, ಇಂದಿಗೂ ಆಗಿರದ ಪರಿಸ್ಥಿತಿ ನೋಡಿ, ಏನಾದರು ತೊಂದರೆ ಸೂಚನೆಯಿರಬಹುದಾ? ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವೀರೇಂದ್ರ ಹೆಗ್ಡೆ ಅವರು ಮಾತ್ರ, ತಮ್ಮ ಮಾತಿನ ಮೂಲಕ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ಒಟ್ಟಿನಲ್ಲಿ ಈ ಬರಗಾಲ ಕೇವಲ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಬಂದಿಲ್ಲ. ದೇವರಿಗೂ ಸಹ ಈ ಬರಗಾಲದ ಬಿಸಿ ತಟ್ಟಿದೆ. ಸದ್ಯಕ್ಕೆ ಈಗ ನೇತ್ರಾವತಿಯ ಸ್ವಚ್ಛತಾ ಕಾರ್ಯ ನಡೆದಿದೆ. ಆದರೆ ಮೊದಲಿನಂತೆ, ಯಾವಾಗ ನೇತ್ರಾವತಿ ತುಂಬಿ ಹರಿಯುತ್ತಾಳೆ ಅಂತ ಗೊತ್ತಿಲ್ಲ.

LEAVE A REPLY

Please enter your comment!
Please enter your name here