ಪೈರಸಿ ವಿಚಾರದ ಕುರಿತು ರಹಸ್ಯವನ್ನು ಬಯಲು ಮಾಡಿದ ನವರಸನಾಯಕ

0
371

ಕನ್ನಡ ಚಿತ್ರರಂಗಕ್ಕೆ ಪೈರಸಿ ಎನ್ನುವ ಭೂತ ಕಾಡುತ್ತಿದೆ. ಹೌದು. ಇದು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ ಎಲ್ಲ ಭಾಷೆಯ ಚಲನಚಿತ್ರಕ್ಕು ಅನ್ವಯಿಸುತ್ತದೆ. ಕೆಲ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಚಿತ್ರ ಮಂದಿರದಲ್ಲಿ ಕದ್ದು ಮುಚ್ಚಿ ಶೂಟ್ ಮಾಡಿ, ಅದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಮತ್ತು ಇನ್ನಿತರ ಮೂಲಭೂತಗಳ ಸೌಖರ್ಯಗಳ ಮೂಲಕ ಹರಿದು ಬಿಡುತ್ತಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಂಡು ಶೂಟ್ ಮಾಡಿ ಲೀಕ್ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೆ ಸಿನಿಮಾದ ಕಾಪಿ ಲೀಕ್ ಆಗುತ್ತಿದೆ. ಬೇಕು ಬೇಕಂತಾನೆ ಸ್ಟಾರ್ ನಟನ ಸ್ಟಾರ್ ಪಟ್ಟವನ್ನು ಬೀಳಿಸಬೇಕೆಂದು, ಕಿಡಿಗೇಡಿಗಳು ಹೀಗೆ ಮಾಡುತ್ತಿದ್ದಾರೆಂದು ಚಿತ್ರರಂಗದ ಹಿರಿಯ ನಟ ಆರೋಪಿಸಿದ್ದಾರೆ.

ಪೈರಸಿ ವಿಶ್ವಸಿನಿರಂಗಕ್ಕೆ ದೊಡ್ಡ ತಲೆನೋವಾಗಿದೆ

ಇದೆಲ್ಲವೂ ಗಮನಿಸುತ್ತಿದ್ದರೆ ಸ್ಟಾರ್ ಗಿರಿಯ ಮೇಲೆ ಅವರು ಕಣ್ಣು ಹಾಕಿದ್ದಾರೆ, ಮತ್ತು ಸ್ಟಾರ್ ನಟನ ಬೇಡಿಕೆಯನ್ನು ಕಡಿಮೆಗೊಳಿಸಲು ಈ ರೀತಿ ಮಾಡುತ್ತಿದ್ದಾರೆ. ಇದೊಂದು ವ್ಯಾಪಾರವಾಗಿದೆ ಎಂದು ನವರಸನಾಯಕ ತಿಳಿಸಿದ್ದಾರೆ. ವಿಶ್ವ ಸಿನಿಮಾರಂಗಕ್ಕೆ ಈ ಪೈರಸಿ ವೆಬ್ಸೈಟ್ ದೊಡ್ಡ ತಲೆನೋವಾಗಿ ಕಾಡುತ್ತಿದೆ. ದುಡ್ಡಿಗಾಗಿ ಯಾರ ಸ್ಟಾರ್ ಪಟ್ಟ ಬೇಕಾದರು ತಪ್ಪಿಸುತ್ತಾರೆ. ಒಬ್ಬ ಸಾಮಾನ್ಯ ತಮಿಳು ನಾಡಿನ ಯುವಕ ಸಣ್ಣದಾಗಿ ಈ ಕೆಲಸವನ್ನು ಶುರು ಮಾಡಿದ್ದು, ಇಂದು ಮಲೇಶಿಯಾಗೆ ಶಿಫ್ಟ್ ಆಗಿ ಇಡೀ ಚಿತ್ರರಂಗಕ್ಕೆ ತಲೆ ನೋವಾಗಿದ್ದಾನೆ. ದೊಡ್ಡ ಸ್ಟಾರ್ ಗಿರಿ ತಪ್ಪಿಸಲು ಇವನಿಗೆ ದುಡ್ಡು ಕೊಟ್ಟರೆ ಸಾಕು ಅದನ್ನು ಮಾಡಿ ಮುಗಿಸುತ್ತಾನೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

ಕಲಾವಿದರ ಪರಿಶ್ರಮಕ್ಕೆ ಕಲ್ಲು ಹಾಕಿದಂತಾಗುತ್ತದೆ

ಇವನನ್ನು ಸೇಡಿಗೆ ಬಳಸಿಕೊಳ್ಳುವವರೇ ಇವನಿಂದ ಕಷ್ಟದ ಬಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಕಷ್ಟದಲ್ಲಿ ಸಿಲುಕಿಕೊಂಡಿರುವವರೆ ಇವನಿಗೆ ಲಂಚ ಕೊಟ್ಟು ತೊಂದರೆ ಕೊಡದಂತೆ ಕಾಲಿಗೆ ಬೀಳುತ್ತಾರೆ. ಸಿನಿಮಾ ರಂಗಕ್ಕೆ ಇವರು ಈ ರೀತಿ ಕಾಡುತ್ತಿರುವುದು ನಿಜಕ್ಕು ಆಘಾತಿಕಾರಿಯಾದ ವಿಷಯವಾಗಿದೆ. ದುಡ್ಡು ಕೊಟ್ಟು ಸ್ಟಾರ್ ವ್ಯಾಲ್ಯೂ ಕಡಿಮೆ ಮಾಡಿಸುವುದು, ನಮ್ಮ ತಕರಾರಿಗೆ ಬರಬೇಡಿ ಎಂದು ಬೇಡಿಕೊಳ್ಳುವ ಮಟ್ಟಕ್ಕೆ ವ್ಯವಹಾರ ಇದೆಯೇ? ಎನ್ನುವ ವಿಷಯ ಜನ ಸಾಮಾನ್ಯರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಭಿಮಾನಿಗಳು ಸಹ ಕಂಗೆಟ್ಟು ಹೋಗಿದ್ದಾರೆ. ಆದ್ದರಿಂದ ಚಿತ್ರರಂಗದವರು ಒಟ್ಟಾಗಿ ಇದನ್ನು ಸ್ಥಗಿತಗೊಳಿಸಬೇಕು. ಕಲಾವಿದರ ಕಷ್ಟಕ್ಕೆ ಇದು ಅಡ್ಡಗೋಡೆಯಾಗಿ ನಿಂತಿದ್ದು, ಅವರ ಸಾಧನೆಗೆ ಕಲ್ಲು ಹಾಕಿದಂತಾಗುತ್ತದೆ  ಎಂದು ಜಗ್ಗೇಶ್ ಅವರು ತಿಳಿಸಿದ್ದಾರೆ. ಮುಂದೆ ಓದಿ

ಸಿನಿಮಾಗಳಿಗೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ

ಸ್ಟಾರ್ ನಟರ ನಡುವೆ ಈ ರೀತಿಯಾದ ಬಿರುಕು ಉಂಟಾಗಬಾರದಿತ್ತು. ಚಿತ್ರರಂಗವನ್ನು ನಾವು ಒಂದೆ ದೃಷ್ಟಿಕೋನದಲ್ಲಿ ನೋಡಬೇಕಾಗಿದೆ. ಕನ್ನಡ ಚಿತ್ರರಂಗ ಉನ್ನತ ಸ್ಥಾನಕ್ಕೆ ಏರಬೇಕಾಗಿದೆ. ಮೊದಲು ಚಿತ್ರರಂಗದ ವಾಣಿಜ್ಯ ಮಂಡಳಿಯವರು ಯಾವುದೆ ಕನ್ನಡ ಚಿತ್ರಗಳಿಗೆ ಪೈರಸಿ ಆಗಲಾರದಂತೆ ಎಚ್ಚರಿಕೆಯ ಕ್ರಮವನ್ನು ವಹಿಸಬೇಕಾಗಿದೆ. ಒಂದು ಚಿತ್ರವನ್ನು ಮಾಡಬೇಕಾದರೆ ಇಡೀ ಚಿತ್ರತಂಡದವರು ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಪೈರಸಿ ಆಗುವುದರಿಂದ ಸಿನಿಮಾಗಳಿಗೆ ಬಹಳ ದೊಡ್ಡ ಹೊಡೆತ ಬೀಳುತ್ತಿದೆ.

ಚಿತ್ರಮಂದಿರಗಳಲ್ಲಿ ಕದ್ದು ಶೂಟ್ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕದ್ದು ಶೂಟ್ ಮಾಡಿ ಆ ವಿಡಿಯೋ ಗಳನ್ನೂ ಹಾಕುವ ವೆಬ್ ಸೈಟ್ ಗಳನ್ನೂ ಸಹ ರದ್ದು ಪಡಿಸಬೇಕಾಗಿದೆ. ಇನ್ನು ರಜನಿಕಾಂತ್, ಕಮಲ್ ಹಾಸನ್ ಅಂತಹ ಸ್ಟಾರ್ ನಂತರ ಸಿನಿಮಾಗಳು ಸಹ ಪೈರಸಿ ಆಗಿತ್ತು. ಯಾರೊಬ್ಬರು ಸಹ ಇದರ ವಿರುದ್ಧ ಧ್ವನಿಯನ್ನು ಎತ್ತುತ್ತಿಲ್ಲ.

LEAVE A REPLY

Please enter your comment!
Please enter your name here