ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣದ ನಂತರ ಮೋದಿಯ ಭಾಷಣ

0
448

ಭಾರತ ದೇಶದ ನಾಗರಿಕರು ಇಂದು 73 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಶಾಲಾ ಕಾಲೇಜು ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಅದ್ದೂರಿಯಿಂದ ಧ್ವಜಾರೋಹಣವನ್ನು ಮಾಡಿ, ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಅಂದು ಸ್ವಾತಂತ್ರ ಹೋರಾಟಗಾರರು ಸುರಿಸಿದ ರಕ್ತ, ತ್ಯಾಗ, ಬಲಿಧಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕಿತ್ತು. ಸ್ವಾತಂತ್ರ
ದಿನೋತ್ಸವದ ಅಂಗವಾಗಿ ಹಲವಾರು ದೇಶ ಭಕ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪುಟ್ಟ ಪುಟ್ಟ ಮಕ್ಕಳು ಸ್ವಾತಂತ್ರ ಹೋರಾಟಗಾರರ ವೇಷಭೂಷಣವನ್ನು ಧರಿಸಿ ಬಹಳ ಮುದ್ದಾಗಿ ಹೇಳುವ ಸಂಭಾಷಣೆಯನ್ನು ನೋಡಬಹುದಾಗಿದೆ. ಸಣ್ಣ ಸಣ್ಣ ಮಕ್ಕಳಿಗು ಸ್ವತಂತ್ರ ದಿನದ ಹಿನ್ನಲೆ ಮತ್ತು ಹೋರಾಟಗಾರರ ಕಥೆಯನ್ನು ಹೇಳಿ ಅವರಲ್ಲಿ ದೇಶಾಭಿಮಾನವನ್ನು ತುಂಬುವ ಪ್ರಯತ್ನ ಪೋಷಕರು ಮಾಡಬೇಕಾಗಿದೆ.

ಪ್ಲಾಸ್ಟಿಕ್ ಎಂಬ ಕಟು ವೈರಿಯಿಂದ ನಾವು ಪಾರಾಗಬೇಕಾಗಿದೆ

73 ನೇ ಸ್ವಾತಂತ್ರ ದಿನೋತ್ಸವದ ಪ್ರಯುಕ್ತ, ಇಂದು ಪ್ರಧಾನ ಮೋದಿ ಡೆಲ್ಲಿಯಲ್ಲಿ ಧ್ವಜಾರೋಹಣವನ್ನು ಮಾಡಿದ್ದು, ನಂತರ ಭಾಷಣೆಯನ್ನು ಮಾಡಿದ್ದಾರೆ. ಜನರಲ್ಲಿ ಜಾಗ್ರತಿ ಮೂಡಿಸುವ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿ ಮಾತನಾಡಿದ್ದಾರೆ. ಪ್ಲಾಸ್ಟಿಕ್ ಎಂಬ ಕಟು ವೈರಿಯಿಂದ ನಾವು ಪಾರಾಗಬೇಕಾಗಿದೆ . ಪ್ಲಾಸ್ಟಿಕ್ ಬಳಕೆಯ ನಿಯಂತ್ರಣಕ್ಕೆ ತರಲು ಅಭಿಯಾನ ನಡೆಸುವ ಮೂಲಕ ಜನರಲ್ಲಿ ಜಾಗ್ರತಿಯನ್ನು ಮೂಡಿಸಬೇಕಾಗಿದೆ. ಪ್ಲಾಸ್ಟಿಕ್ ಚೀಲವನ್ನು ನಮ್ಮಿಂದ ಅಪೇಕ್ಷಿಸಬೇಡಿ ಎನ್ನುವ ಫಲಕ ಪ್ರತಿ ಅಂಗಡಿ ಮುಂಗಟ್ಟುಗಳಲ್ಲಿ ಹಾಕಬೇಕಾಗಿದೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿಕೊಂಡು ಚೀಲ ತಯಾರಿಸುವುದರ ಬದಲು ಬಟ್ಟೆಯನ್ನು ಉಪಯೋಗಿಸಿಕೊಂಡು ಚೀಲವನ್ನು ತಯಾರಿಸಬೇಕಾಗಿದೆ ಎನ್ನುವ ಸಲಹೆಯನ್ನು ನೀಡಿದ್ದಾರೆ.

ದೇಶದಲ್ಲಿರುವ ಸಂಪನ್ಮೂಲ ಅಭಿವೃದ್ಧಿಯತ್ತ ಚಲಿಸಬೇಕಾಗಿದೆ

ಮೇಕ್ ಇನ್ ಇಂಡಿಯಾ ಅಭಿಯಾನ ಈ ಹಿಂದೆ ಶುರುವಾಗಿತ್ತು. ನಮ್ಮ ದೇಶದಲ್ಲಿ ಉತ್ಪತಿಯಾದ ವಸ್ತುಗಳನ್ನು ದೇಶದ ಜನತೆ ಹೆಚ್ಚಾಗಿ ಬಳಸಬೇಕಾಗಿದೆ. ದೇಶದಲ್ಲಿರುವ ಸಂಪನ್ಮೂಲಗಳಿಂದ ಅಭಿವೃದ್ಧಿಯತ್ತ ಚಲಿಸಬೇಕಾಗಿದೆ. ನಮ್ಮ ದೇಶದ ಪ್ರಭಲಶಾಲಿಯಾದ ಸರ್ಕಾರವನ್ನು ಇಂದು ಇಡಿ ಜಗತ್ತೆ ಗುರುತಿಸಿದೆ. ವಿದೇಶದಲ್ಲಿ ತಯಾರಾದ ವಸ್ತುಗಳ ಬಳಕೆ ಭಾರತ ದೇಶದಲ್ಲಿ ರದ್ದು ಮಾಡಬೇಕು. ಕೇವಲ ಶಾಂತಿ ಮತ್ತು ಸುರಕ್ಷಣೆಯಿಂದ ದೇಶದ ಪ್ರಗತಿ ಕಾಣಬಹುದಾಗಿದೆ ಎಂದು ನರೇಂದ್ರ ಮೋದಿಯವರು ದೇಶದ ಕುರಿತು ಮಾತನಾಡಿದ್ದಾರೆ.

ಸೈನಿಕರನ್ನು ಮತ್ತು ಅಂತರಿಕ್ಷ ಯೋಜನೆಯ ಕುರಿತು ಮಾತನಾಡಿದ್ದಾರೆ

ದೇಶದ ಗಾಡಿಯಲ್ಲಿ ಸದಾ ಕಾಲ ನಮ್ಮನ್ನು ರಕ್ಷಿಸುತ್ತಿರುವ ಯೋಧರಿಗೆ ನಮನವನ್ನು ಸಲ್ಲಿಸಿದ್ದಾರೆ. ನಮ್ಮ ಸುತ್ತ ಮುತ್ತಲಿನಲ್ಲಿರುವ ದೇಶಗಳು ಭಯೋತ್ಪಾದನೆಯಿಂದ ಕಂಗೆಟ್ಟು ಹೋಗಿವೆ. ದೇಶದ ಸೇನಾಪಡೆಯ ಒಂದು ಸಾಮ್ಯರ್ಥತೆ ಇಂದು ಅಧಿಕವಾಗಿದೆ. ಇಡಿ ದೇಶದ ಜನತೆ ಹಾಡಿ ಹೊಗಳುವ ಹಾಗೆ ಸೇನಾಪಡೆಯು ತಮ್ಮ ಕಾರ್ಯವನ್ನು ನಿರ್ವಹಿಸಿದ್ದಾರೆ.

ಇದೆ ವೇಳೆಯಲ್ಲಿ ಬಾಹ್ಯಕಾಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದು, ಅಂತರಿಕ್ಷದಲ್ಲಿ ಭಾರತ ದೇಶ ಮಾಡಿರುವ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here