ಪ್ರಶಸ್ತಿ ಸಿಕ್ಕಿದ್ದು ಪ್ರಧಾನ ಮಂತ್ರಿಗಳಿಗೆ ಆದರೆ ಟ್ರೊಲ್ ಆಗಿದ್ದು ಮಾತ್ರ ಇಮ್ರಾನ್ ಖಾನ್

0
336

1995 ರಲ್ಲಿ ಮೊದಲ ಬಾರಿಗೆ ಜಪಾನ್ ಯುವರಾಜನಾದ ನರುಹಿಟೂ ಅವರಿಗೆ ನೀಡಲಾಗಿತ್ತು. 2007 ರಲ್ಲಿ ರಷ್ಯಾ ದೇಶದ ಅಧ್ಯಕ್ಷರಾದ ವಿಲಾಡಿಮಿರ್ ಪುಟಿನ್ ಅವರಿಗೆ ಲಭಿಸಿದ್ದು, 2018 ರಲ್ಲಿ ಚೀನಾ ದೇಶದ ಅಧ್ಯಕ್ಷೆಯಾದ ಜಿನ್ ಪಿಂಗ್ ಅವರಿಗೆ ಈ ಮೆಡಲ್ ಸಿಕ್ಕಿತ್ತು. ಇಲ್ಲಿಯವರೆಗೆ ಒಬ್ಬ ಭಾರತೀಯರು ಈ ಪುರಸ್ಕಾರವನ್ನು ಪಡೆದಿರಲಿಲ್ಲ. ನರೇಂದ್ರ ಮೋದಿ ಈ ಅವಾರ್ಡ್ ಅನ್ನು ಪಡೆದಿರುವ ಮೊದಲ ಭಾರತೀಯ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಇನ್ನು ನರೇಂದ್ರ ಮೋದಿಯವರು ಅನೇಕ ದೇಶಗಳ ಜೊತೆ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಇತರ ದೇಶಗಳ ಜೊತೆ ಸ್ನೇಹವನ್ನು ಬೆಳೆಸಲು ಈ ಹಿಂದೆ ಪ್ರವಾಸವನ್ನು ಕೈ ಗೊಂಡಿದ್ದರು.

ಆರ್ಡರ್ ಆಫ್ ಜಿಯಾದ್ ಪ್ರಶಸ್ತಿ ಮೋದಿಯವರ ಪಾಲಾಗಿದೆ

ದೇಶದ ಪ್ರಧಾನ ಮಂತ್ರಿಗಳಿಗೆ ಶನಿವಾರದ ದಿನದಂದು, ಅರಬ್ ಸಂಸ್ಥೆಯವರು ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ. ಆರ್ಡರ್ ಆಫ್ ಜಾಯೆದ್ ಎನ್ನುವ ಪ್ರಶಸ್ತಿಯನ್ನು ನರೇಂದ್ರ ಮೋದಿಯವರಿಗೆ ನೀಡಿ ಗೌರವಿಸಿದ್ದಾರೆ. ಅರಬ್ ದೇಶದ ಯುವ ಎ ಇ ಸಂಸ್ಥೆಯ ರಾಜಕುಮಾರನಾದ ಮೊಹಮ್ಮದ್ ಬಿನ್ ಜಾಯೆದ್ ಆಲ್ ನಹ್ಯಾನ್ ಅವರಿಂದ ಮೋದಿಯವರು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಯು ಎ ಇ ಸಂಸ್ಥಾಪಕರಾದ ನಹ್ಯಾನ್ ಅವರ ತಂದೆಯ ಶೇಜಕ್ ಅವರ ಜನ್ಮ ದಿನದ ಅಂಗವಾಗಿ ಈ ಅವಾರ್ಡ್ ಅನ್ನು ನೀಡಲು ನೀಡಲಾಗುತ್ತಿದೆ. ಜಾಯೆದ್ ಮೆಡಲ್ ಅನ್ನು ರಾಜರಿಗೆ, ಅಧ್ಯಕ್ಷರಿಗೆ ಮತ್ತು ರಾಜಕೀಯದ ವ್ಯಕ್ತಿಗಳಿಗೆ ಮಾತ್ರ ಕೊಡುತ್ತ ಬಂದಿದ್ದಾರೆ.

ಇಮ್ರಾನ್ ಖಾನ್ ಅವರಿಗೆ ಸಿಕ್ತು ಹೊಸ ಪಟ್ಟ

ಸ್ವಲ್ಪ ದಿನಗಳ ಹಿಂದೆ ಅರೇಬಿಯಾದ ರಾಜಕುಮಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಇದೆ ಸಂದರ್ಭದಲ್ಲಿ ಇಮ್ರಾನ್ ಖಾನ್ ಅವರು ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಕಾರಿನಲ್ಲಿ ಕೂಡಿಸಿಕೊಂಡು ಸ್ವತಃ ಇವರೆ ಕಾರು ಚಾಲಿಯಿಸಿದ್ದಾರೆ. ಜಯಾಧ್ ಪ್ರಶಸ್ತಿಯ ವಿಷಯದ ಅಂಗವಾಗಿ ಪಾಕಿಸ್ತಾನ ದೇಶದ ನೆಟ್ಟಿಗರು ಇವರನ್ನು ಬೆಸ್ಟ್ ಕಾರ್ ಡ್ರೈವರ್ ಎನ್ನುವ ಶೀರ್ಷಿಕೆಯನ್ನು ಕೊಟ್ಟು ಗೇಲಿ ಮಾಡುತ್ತಿದ್ದಾರೆ. ಪಾಕಿಸ್ತಾನ ದೇಶದ ಜನತೆಯೆ ಸ್ವತಃ ತಮ್ಮ ನಾಯಕರ ಮೇಲೆ ಅಪಹಾಸ್ಯವನ್ನು ಮಾಡುತ್ತಿದ್ದಾರೆ. ಅರೇಬಿಯಾ ರಾಜಕುಮಾರನನ್ನು ಕಾರ್ ನಲ್ಲಿ ಕೂಡಿಸಿಕೊಂಡು ಡ್ರೈವ್ ಮಾಡಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ಜನತೆ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಊಬರ್ ಕಾರ್ ಚಾಲಕನಾಗಿದ್ದಾರೆ

ಈ ವಿಷಯವನ್ನು ಸಂಸ್ಥಾನ ನಲ್ಲಿ ಓರ್ವ ಸಂಸದೆ ಪ್ರಸ್ತಾಪಿಸಿದ್ದು, ಅನೇಕ ವಿಚಾರಗಳನ್ನ ಇಟ್ಟುಕೊಂಡು ಇಮ್ರಾನ್ ಖಾನ್ ಗೆ ಪ್ರಶ್ನಿಸಿದ್ದಾರೆ? ದೇಶವನ್ನು ಅಭಿವೃದ್ಧಿ ಮಾಡುತ್ತೇನೆ, ಗವರ್ನರ್ ಹೌಸ್ ಅನ್ನು ಮ್ಯೂಸಿಯಂ ಮಾಡುತ್ತೇನೆ ಎಂದು ಹೇಳುತ್ತಿದ್ದ ಇಮ್ರಾನ್ ಖಾನ್ ಅವರು ಈಗ ಊಬರ್ ಕಾರ್ ಚಾಲಕನಾಗಿದ್ದಾರೆ. ಪ್ರತಿ ರೈಡ್ ಆದ ನಂತರ ಫೈವ್ ಸ್ಟಾರ್ ನೀಡಬೇಕೆಂದು ಪಾಕ್ ಸಂಸದೆ ಸಂಸತ್ ನಲ್ಲಿ ಇಮ್ರಾನ್ ಖಾನ್ ಅವರನ್ನು ಟೀಕಿಸಿದ್ದಾರೆ. ಇನ್ನು ಈ ವಿಡಿಯೋ ಸಿಕಾಪಟ್ಟೆ ಟ್ರೆಂಡ್ ಆಗಿದ್ದು, ಪಾಕ್ ಪ್ರಜೆಗಳು ಈ ವಿಡಿಯೋ ನೋಡಿದ ಬಳಿಕ ಇಮ್ರಾನ್ ಖಾನ್ ವಿರುದ್ಧ ಕಿಡಿಕಾರುತ್ತಿದ್ದಾರೆ.

LEAVE A REPLY

Please enter your comment!
Please enter your name here