ಕಳೆದ ಇಪ್ಪತ್ತೆರಡು ವರ್ಷಗಳಿಂದ ಮೋದಿ ಅವರಿಗೆ ರಾಖಿ ಕಟ್ಟುತ್ತಿರುವವರು ಇವರೆ ನೋಡಿ

0
280

ದೇಶಾದ್ಯಂತ ರಾಖಿ ಹಬ್ಬವನ್ನು ಜನರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅಣ್ಣ ತಂಗಿಯರ ನಡುವೆ ಇರುವ ಬಾಂಧವ್ಯವನ್ನು ವ್ಯಕ್ತ ಪಡಿಸುವ ರೀತಿಯೆ ರಾಖಿ ಹಬ್ಬ ಆಗಿದೆ. ಅಕ್ಕ ಅಥವಾ ತಂಗಿ ತಮ್ಮ ಪ್ರೀತಿಯ ಅಣ್ಣ ಮತ್ತು ತಮ್ಮರಿಗೆ ರಾಖಿ ನೂಲನ್ನು ಕಟ್ಟುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ದುಡ್ಡನ್ನು ಕೊಡುವ ಒಂದು ಸಂಪ್ರದಾಯ ಇದೆ. ಈ ಬಾರಿ ಸ್ವತಂತ್ರ ದಿನಾಚರಣೆಯ ದಿನದಂದೆ ರಾಖಿ ಹಬ್ಬ ಬಂದಿರುವುದು ವಿಶೇಷವಾಗಿದೆ. ಒಂದು ನಾಡ ಹಬ್ಬವಾದರೆ ಮತ್ತೊಂದು ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ಆಗಸ್ಟ್ 15 ರಂದು ಭಾರತ ದೇಶ ರಾಖಿ ಹಬ್ಬದ ಸಂಭ್ರಮದಲ್ಲಿರುತ್ತಾರೆ. ಮೂಲತಃ ಕ್ವಾಮರ್ ಮೊಇನ್ಷಿನ್ ಶೈಖ್  ಪಾಕಿಸ್ತಾನ್ ದೇಶದವರಾಗಿದ್ದಾರೆ.

ಅಂದು ಬೆಳೆಸಿದ ಬಾಂಧವ್ಯ ಇಂದಿಗು ಮುಂದುವರೆದಿದೆ

ಕಳೆದ 21 ವರ್ಷದಿಂದ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುತ್ತ ಬಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಮೋದಿಯವರು ಆರ್ ಎಸ್ ಎಸ್ ಸಂಘದಲ್ಲಿ ಕೆಲಸ ಮಾಡುತ್ತಿದ್ದರು. ಕ್ವಾಮರ್ ಅವರು ತಮ್ಮ ಪತಿಯನ್ನು ಭೇಟಿ ಮಾಡುವುದಕ್ಕಾಗಿ ಡೆಲ್ಲಿಗೆ ಹೋಗಿದ್ದರು. ಇವರ ಪತಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದು, ಡೆಲ್ಲಿಯಲ್ಲಿ ಭೇಟಿ ಆದಾಗಿಂದ ಮೋದಿಯವರ ಜೊತೆ ಆ ಬಾಂಧವ್ಯ ಹಾಗೆ ಉಳಿದುಕೊಂಡಿದೆ. ಮೋದಿ ಪ್ರಧಾನ ಮಂತ್ರಿ ಆದ ಮೇಲೆಯು ಆ ಟ್ರಡಿಷನ್ ಹಾಗೆ ಕಾಪಾಡಿಕೊಂಡು ಬಂದಿದ್ದಾರೆ. ಕ್ವಾಮರ್ ಅವರು ವಿವಾಹ ಆದ ನಂತರ ಪಾಕಿಸ್ತಾನದಿಂದ ಭಾರತ ದೇಶಕ್ಕೆ ಮರಳಿದ್ದಾರೆ. ಪ್ರಚಲಿತವಾಗಿ ಅಹ್ಮದಾಬಾದ್ ನಲ್ಲಿ ನೆಲೆಸಿದ್ದಾರೆ.

ಕ್ವಾಮರ್ ಜೊತೆ ಮೋದಿ ರಾಖಿ ಹಬ್ಬವನ್ನು ಸಡಗರದಿಂದ ಆಚರಿಸಲಿದ್ದಾರೆ

ಈ ವರ್ಷ ರಾಖಿ ಹಬ್ಬ ಸ್ವಾತಂತ್ರ ದಿನಾಚರಣೆಯ ದಿನದಂದು ಬಂದಿದೆ. ಶೈಖ್ ಡೆಲ್ಲಿ ಗೆ ಹೋಗಿ ಮೋದಿಯವರಿಗೆ ಎಂದಿನಂತೆ ಕಳೆದ 23 ವರ್ಷದಿಂದ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನ ಮಂತ್ರಿ ರೆಡ್ ಫೋರ್ಟ್ ನಂತರ ತಮ್ಮ ಮನೆಗೆ ಹೋಗಲಿದ್ದು, ಕ್ವಾಮರ್ ಅವರ ಜೊತೆ ರಕ್ಷಾ ಬಂಧನ್ ಹಬ್ಬವನ್ನು ಸಡಗರದಿಂದ ಆಚರಿಸಲಿದ್ದಾರೆ ಎನ್ನುವ ವರದಿ ಲಭ್ಯವಾಗಿದೆ.

ದೇಶದ ಜನತೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದರು

ಇತ್ತೀಚಿಗಷ್ಟೆ ಕೇಂದ್ರ ಸರ್ಕಾರ 370 ಮತ್ತು 35ಎ ಆರ್ಟಿಕಲ್ ಗಳನ್ನೂ ರದ್ದು ಗೊಳಿಸಿದ್ದರು. ಅಖಂಡ ಭಾರತ ಆಗಬೇಕೆಂದು ಸುಮಾರು ವರ್ಷಗಳ ಹಿಂದೆ ಅದೆಷ್ಟೊ ರಾಜಕಾರಣಿಗಳು ಹೋರಾಟವನ್ನು ಮಾಡಿದ್ದರು. ಆದರೆ ಇಂದು ಅವರ ಕನಸು ಮೋದಿ ಮತ್ತು ಅಮಿತ್ ಶಾ ಈಡೇರಿಸಿದ್ದಾರೆ. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಕ್ಕೆ ದೇಶದ ಜನತೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನ ಮಾನವನ್ನು ತೆಗೆದುಹಾಕುವ ಮೂಲಕ ಐತಿಹಾಸಿಕ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಸಾಕ್ಷಿಯಾಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರು ಸಹ ಬೆಂಬಲವನ್ನು ನೀಡಿದ್ದರು.

LEAVE A REPLY

Please enter your comment!
Please enter your name here