ನಿಖಿಲ್ ಸೋಲಿನ ಪ್ರಭಾವ, ಕುರುಕ್ಷೇತ್ರ ರಿಲೀಸ್ ಆಗೋದೆ ಅನುಮಾನ.

0
805

ಸಿನಿಮಾ ಅಂದ್ಮೇಲೆ ಸಿನಿಮಾ ಕಡೆ ಮಾತ್ರ ಹೆಚ್ಚಾಗಿ ಯೋಚನೆ ಮಾಡಬೇಕು. ಇಲ್ಲ, ರಾಜಕೀಯ ಅಂದ್ರೆ, ರಾಜಕೀಯದ ಬಗ್ಗೆ ಮಾತ್ರ ಜಾಸ್ತಿ ಚಿಂತಿಸಬೇಕು. ಅದನ್ನ ಬಿಟ್ಟು, ರಾಜಕೀಯದಲ್ಲಿ ಸಿನಿಮಾ ತರೋದು ಅಥವಾ ಸಿನಿಮಾ ರಂಗದಲ್ಲಿ ರಾಜಕೀಯ ತರೋದು ಮಾಡಿದ್ರೆ ಅದು ಚೆನ್ನಾಗಿರಲ್ಲ. ಯಾಕಂದ್ರೆ, ಅದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಜೊತೆಗೆ ಅಸಮಾಧಾನವೂ ಆಗುತ್ತೆ. ಹಾಗಾಗಿ ಯಾವ ಕ್ಷೇತ್ರದಲ್ಲಿ ಯಾವ ಕೆಲಸ ನಡೆಯಬೇಕೋ, ಆ ಕ್ಷೇತ್ರದಲ್ಲಿ ಅದೇ ಕೆಲಸ ನಡೆಯಬೇಕು. ಇಲ್ಲವಾದರೆ, ಬಿರುಕು ಉಂಟಾಗುವ ಸಾಧ್ಯತೆ ಇರುತ್ತದೆ.

ಈಗ ಅದೇ ರೀತಿ ಒಂದು ಬಿರುಕುಂಟಾಗುವ ಸಾಧ್ಯತೆ ಎದ್ದು ತೋರುತ್ತಿದೆ. ಹೌದು. ಚಂದನವನದಲ್ಲಿ ಈಗ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ಅದು ಕುರುಕ್ಷೇತ್ರ. ಅಭಿಮಾನಿಗಳು ಕುರುಕ್ಷೇತ್ರ ಸಿನಿಮಾಗಾಗಿ ತುಂಬಾ ದಿನಗಳಿಂದ, ಕಾಯುತ್ತಿದ್ದಾರೆ. ಅದರಂತೆ ಸಿನಿಮಾ ಬಗ್ಗೆ ಈಗಾಗಲೇ ಪೋಸ್ಟರ್ ಗಳು ಸಹ ರಿಲೀಸ್ ಆಗಿವೆ. ಮುಂದಿನ ತಿಂಗಳು ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ತೆರೆಗೆ ಬರುತ್ತೆ ಅಂತ ಚಿತ್ರತಂಡ ತಿಳಿಸಿತ್ತು. ಆದರೆ ಈಗ ಸಿನಿಮಾ ತೆರೆ ಮೇಲೆ ಬರುವುದೇ ಅನುಮಾನವಾಗಿದೆ. ಹೌದು. ಶಾಸಕ ಮುನಿರತ್ನ ಅವರು, ಸಿನಿಮಾ ಬಗ್ಗೆ ಅಂತಹ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ.

ಕುರುಕ್ಷೇತ್ರ ಸಿನಿಮಾ ಬಗ್ಗೆ ಮಹತ್ತರ ನಿರ್ಧಾರ ಕೈಗೊಂಡಿರುವ ಶಾಸಕ ಮುನಿರತ್ನ

ಕನ್ನಡ ಚಿತ್ರರಂಗದಲ್ಲಿ ಈಗ ಅಭಿಮಾನಿಗಳ ಬಹು ನಿರೀಕ್ಷಿತ ಸಿನಿಮಾ ಅಂದ್ರೆ ಅದು ಕುರುಕ್ಷೇತ್ರ. ಯಾಕಂದ್ರೆ ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಸೇರಿದೆ. ಅಲ್ಲದೆ, ತಮ್ಮ ನೆಚ್ಚಿನ ನಟರೆಲ್ಲಾ, ಒಂದೇ ತೆರೆ ಮೇಲೆ ಬರಲಿದ್ದಾರೆ ಅನ್ನೋ ಆಸೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಹಾಗಾಗಿ ಅಭಿಮಾನಿಗಳು ಈ ಸಿನಿಮಾ ಯಾವಾಗ ತೆರೆ ಮೇಲೆ ಬರುತ್ತೆ ಅಂತ ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್ ಮಾಡುವುದು ಅನುಮಾನ ಎಂದು ಶಾಸಕ ಮುನಿರತ್ನ ಅವರು ತಿಳಿಸಿದ್ದಾರೆ.

ನಿಖಿಲ್ ಸೋತರೆ ಸಿನಿಮಾ ರಿಲೀಸ್ ಮಾಡುವುದಿಲ್ಲ 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್ ಸ್ಪರ್ಧಿಸುತ್ತಾರೆ ಅನ್ನೋದು ಖಾತ್ರಿಯಾದ ಮೇಲೆ, ಶಾಸಕ ಮುನಿರತ್ನ ಅವರು, ಕಾರ್ಯಕ್ರಮವೊಂದರಲ್ಲಿ ಒಂದು ಮಾತನ್ನ ಹೇಳಿದ್ದರು. ಹೌದು. ಚುನಾವಣೆಯಲ್ಲಿ ನಿಖಿಲ್ ಸೋತರೆ, ಕುರುಕ್ಷೇತ್ರ ಸಿನಿಮಾ ರಿಲೀಸ್ ಮಾಡುವುದಿಲ್ಲ ಎಂದು ತಿಳಿಸಿದ್ದರು. ಈಗ ಆದೆ ರೀತಿ ಸಿನಿಮಾ ತೆರೆ ಮೇಲೆ ತರುವುದಾ? ಅಥವಾ ಬೇಡ್ವಾ ಅನ್ನೋ ಯೋಚನೆಯಲ್ಲಿ ಮುನಿರತ್ನ ಮುಳುಗಿದ್ದಾರೆ. ಆದರೆ, ಯಾರೇ ಕೇಳಿದರು, ಸಿನಿಮಾ ತೆರೆ ಮೇಲೆ ಬರುವುದಿಲ್ಲ ಅನ್ನೋ ಮಾತುಗಳನ್ನ ಹೇಳುತ್ತಿದ್ದಾರಂತೆ. ಹಾಗಾಗಿ ಸಿನಿಮಾ ತೆರೆ ಮೇಲೆ ಬರುವುದು ಅನುಮಾನವಾಗಿದೆಯಂತೆ.

ಅಭಿಮಾನಿಗಳಿಗೆ ನಿರಾಸೆಯಾಗುವಂತೆ ಮಾಡುತ್ತಿದ್ದಾರಾ ಮುನಿರತ್ನ?

ಈಗಾಗಲೇ ಕುರುಕ್ಷೇತ್ರ ಚಿತ್ರದ ಪೋಸ್ಟರ್ ಗಳು ರಿಲೀಸ್ ಆಗಿ, ಮುಂದಿನ ತಿಂಗಳ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತದೆ ಅಂತ ಎಲ್ಲೆಡೆ ಸುದ್ದಿಯಾಗಿದೆ. ಆದ್ರೆ ಇದರ ಮಧ್ಯೆ, ಈಗ ಶಾಸಕ ಮುನಿರತ್ನ ಅವರು, ಅಭಿಮಾನಿಗಳಲ್ಲಿ ನಿರಾಸೆ ಹುಟ್ಟಿಸುತ್ತಿದ್ದಾರೆ. ಜೊತೆಗೆ ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ನಿಜಕ್ಕೂ ಈ ಸಿನಿಮಾ ಬಿಡುಗಡೆಯಾಗಿಲ್ಲ ಅಂದ್ರೆ, ಸಿನಿಮಾ ರಂಗದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿದೆ. ಯಾಕಂದ್ರೆ, ಈ ಸಿನಿಮಾದಲ್ಲಿ ದೊಡ್ಡ ದೊಡ್ಡ ತಾರಾಬಳಗವೇ ಬಣ್ಣ ಹಚ್ಚಿರೋದ್ರಿಂದ, ಸಿನಿಮಾ ತೆರೆ ಮೇಲೆ ಬರದೇ ಇದ್ದರೆ, ಅವರೆಲ್ಲರ ಅಸಮಾಧಾನಕ್ಕೆ ಕಾರಣವಾಗಲಿದೆ.

ನಿಜಕ್ಕೂ ಕುರುಕ್ಷೇತ್ರ ಸಿನಿಮಾವನ್ನ ಶಾಸಕ ಮುನಿರತ್ನ ಅವರು, ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಮಾಡ್ತಾರೆ? ಅಥವಾ ನಿಖಿಲ್ ಸೋತಿರುವುದಕ್ಕೆ ಸಿನಿಮಾವನ್ನ ತೆರೆ ಮೇಲೆ ತರುವುದಿಲ್ಲವಾ ಅಂತ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here