ಮುಂಗಾರುಮಳೆ ಸುರಿದ ಮೊದಲ ಮತ್ತು ನಂತರದ ದಿನಗಳ ಮಸ್ತ್ ವಿಚಾರಗಳು

0
1183
mungarumale
mungarumale

ಮುಂಗಾರುಮಳೆ, ಈ ಸಿನಿಮಾ ಯಾರಿಗೆ ನೆನಪಿರಲ್ಲ ಹೇಳಿ, ಆ ಮಲೆನಾಡು, ಜೋಗ ಜಲಪಾತ,
ದೇವದಾಸ್,ಕರ್ಚಿಪ್, ವಾಚ್, ಮೋರಿ, ಕೆಂಪು ಕಾರು, ರೈಲು,ದೇವಸ್ಥಾನದ ಮೆಟ್ಟಿಲುಗಳು, ಕರ್ನಲ್ ಸುಬ್ಬಯ್ಯ, ಪ್ರೀತಮ್, ನಂದಿನಿ ಅಬ್ಬಾ……! ಆ ಹೆಸರು ಕೇಳಿದ ಕೂಡಲೇ ನೆನಪಿನಂಗಳದಲ್ಲಿದ್ದ ಈ ಎಲ್ಲ ವ್ಯಕ್ತಿಗಳು, ವಸ್ತುಗಳು, ಜಾಗಗಳು ನಮ್ಮ ಅಕ್ಕ ಪಕ್ಕದಲ್ಲೇ ಬಂದು ನಿಂತಿರುವಂತೆ ಭಾಸವಾಗುತ್ತದೆ, ಇದು ಒಂದು ಸಿನಿಮಾಕ್ಕೆ ಇರುವ ಶಕ್ತಿ ಅಲ್ಲದೆ ಮತ್ತಿನ್ನೇನು?, ರೋಮನ್ ಪೊಲಾನ್ಸ್ಕಿ ಅನ್ನೋ ಒಬ್ಬ ಫಿಲಂ ಮೇಕರ್ ಒಂದು ಮಾತು ಹೇಳಿದ್ದಾನೆ “ನಾವು ಸಿನಿಮಾ ಹಾಲ್ ನಲ್ಲಿ ಕೂತಿದ್ದೀವಿ ಅನ್ನೋದನ್ನ ಮರೆತುಬಿಡುವ ಹಾಗೆ ಸಿನಿಮಾ ನಮ್ಮ ಮೇಲೆ ಪ್ರಭಾವ ಬೀರಬೇಕು” ಅಂತ. ಈ ಹೇಳಿಕೆಗೆ ಉದಾಹರಣೆಯಾಗಿ ಯಾವ್ದಾದ್ರು ಸಿನಿಮಾ ಇದ್ಯ ಅಂತ ಕೇಳಿದ್ರೆ ನಾನಂತೂ ಒಂದು ಕ್ಷಣವನ್ನು ವ್ಯರ್ಥ ಮಾಡದೆ ಮುಂಗಾರುಮಳೆ ಅಂತಾನೆ ಹೇಳೋದು. ಪಕ್ಕದ ಮನೆ ಹುಡುಗನ ರೂಪದಲ್ಲಿ ಗಣೇಶ್ ಅವರ ಸ್ಕ್ರೀನ್ ಪ್ರೆಸೆನ್ಸ್, ಮೈ ನವಿರೇಳಿಸೋ ಕೃಷ್ಣ ಅವರ ಕ್ಯಾಮೆರಾ ಕೃಷಿ,ಕಾಯ್ಕಿಣಿಯವರ ಸಾಹಿತ್ಯ, ಮನೋಮೂರ್ತಿಯವರ ಸುಮಧುರ ಸಂಗೀತ,ಗುಬ್ಬಿ ಮತ್ತು ಭಟ್ರ ಕಥಾಹಂದರ ಹೀಗೆ ಎಲ್ಲ ರೀತಿಯಿಂದಲೂ ಈ ಸಿನಿಮಾ ಸೂಪರ್ ಅಂತಾನೆ ಹೇಳ್ಬೇಕು. ವಿಲನ್ ಮತ್ತೆ ಹೀರೊ ಅಕ್ಕ ಪಕ್ಕ ಕುಳಿತು ಕೈ ತಪ್ಪಿದ ಹುಡುಗಿಯ ಕುರಿತು ಅಳುತ್ತ ಒಬ್ಬರನ್ನೊಬ್ಬರು ಸಮಾಧಾನ ಮಾಡಿಕೊಳ್ಳೋ ದೃಶ್ಯ ಇಡೀ ಜಗತ್ತಲ್ಲಿ ಬೇರೆ ಇನ್ಯಾವ ಸಿನಿಮಾದಲ್ಲಿ ನಾವು ನೋಡೋಕೆ ಸಾಧ್ಯ ಹೇಳಿ.

ganesh and puneeth rajkumar
ganesh and puneeth rajkuma

ಕನ್ನಡ ಚಿತ್ರರಂಗದಲ್ಲಿ ಮುಂಗಾರುಮಳೆ ಸುರಿಯೊ ಮೊದಲು ಮತ್ತು ನಂತರದಲ್ಲಿ ನಡೆದ ಕೆಲವು ಕತೆಗಳನ್ನ, ವಿಚಾರಗಳನ್ನ ಇಲ್ಲಿ ಹೇಳ್ತಿದ್ದೀನಿ.ಬಿಸಿ ಬಿಸಿ ಕಾಪಿ ರೆಡಿ ಮಾಡ್ಕೊಳಿ ಆಗ್ಲೇ ಮೋಡ ಕವಿದ ವಾತಾವರಣವಿದೆ.

ಅಪ್ಪು ಕೈತಪ್ಪಿ ಹೋದ ಪ್ರೀತಮ್

ಹೌದು ಭಟ್ರು ಈ ಸಿನಿಮಾ ಕಥೆಯನ್ನು ಅಪ್ಪುನ ತಲೇಲಿ ಇಟ್ಕೊಂಡು ಬರ್ದಿದ್ರಂತೆ ಆದರೆ ಆಗ ಅಪ್ಪು ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದ ಕಾರಣ ಸಿನಿಮಾ ಮಾಡಲು ನಿರಾಕರಿಸಿದರಂತೆ.

SSLC FAIL ಆಗಿದ್ದ ಭಟ್ರ, ಜೋಗಕ್ಕೆ ಹೊರಟೇಬಿಟ್ರು

preetham gubbi and yograj bhat
preetham gubbi and yograj bhat

ಮುಂಗಾರುಮಳೆ ಯೋಗರಾಜ ಭಟ್ಟರ ಮೊದಲ ಸಿನಿಮಾ ಏನಾಗಿರ್ಲಿಲ್ಲ, ಮಳೆ ಸುರಿಯೋ ಮುನ್ನ ಮಣಿ ಮತ್ತು ರಂಗ SSLC ಸಿನಿಮಾಗಳನ್ನ ನಿರ್ದೇಶನ ಮಾಡಿದ್ರು, ಮಣಿ ಜನರಿಗೆ ಕಾಣಿಸುವಷ್ಟರಲ್ಲೇ ಮರೆಯಾಗಿ ಹೋಗಿತ್ತು, ನಂತರದಲ್ಲಿ ಸುದೀಪ್ ಮತ್ತು ಉಮಾಶ್ರೀ ಅವರು ಮುಖ್ಯಭೂಮಿಕೆಯಲ್ಲಿರುವ ರಂಗ SSLC ಸಿನಿಮಾ ನಿರ್ದೇಶನ ಮಾಡಿದರು ಆದ್ರೆ ಆ ಸಿನಿಮಾ ಕೂಡ ಹೇಳಿಕೊಳ್ಳುವ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ. ಇದಾದ ಬಳಿಕ ಪ್ರೀತಮ್ ಗುಬ್ಬಿಯವರೊಂದಿಗೆ ಕೈನಲ್ಲಿ ಬಿಳಿಹಾಳೆ ಮತ್ತು ಕೊಡೆ ಹಿಡಿದು ಮಲೆನಾಡಿಗೆ ಹೊರಟುಬಿಟ್ಟರು.

ಸರಿ ಅಂದಿದ್ದ ಸೂರಿ, SORRY ಅಂದ್ರು

ಮುಂಗಾರುಮಳೆ ಸಿನಿಮಾ ತಯಾರಾಗೋ ಮೊದಲಿನಿಂದಲೂ ಸೂರಿ ಮತ್ತು ಭಟ್ರು ಒಳ್ಳೆ ಸ್ನೇಹಿತರಾಗಿದ್ದರು, ಮುಂಗಾರುಮಳೆ ಕತೆ ಕೈಸೇರುತ್ತಿದ್ದಂತೆ ಭಟ್ರು ಸಿನಿಮಾದ ಸಂಭಾಷಣೆಯನ್ನು ಸೂರಿಯವರಿಗೆ ಬರೆಯಲು ಹೇಳಿದ್ದರಂತೆ, ಆದರೆ ಸೂರಿಯವರ ದುನಿಯಾ ಬೇರೇನೇ ಇದ್ದಿದ್ದರಿಂದ ಸಮಯ ಕೂಡಿಬರಲಿಲ್ಲವಂತೆ. ಆಗ ಭಟ್ರು ಕೈನಲಿ pen ಹಿಡಿದು ನಟರ ಮಾತುಗಳನ್ನ ತಾವೇ ಬರೆಯಲು ಮುಂದಾದರಂತೆ.

mungaru male still
mungaru male still

ಕೃಷ್ಣಂ ವಂದೇ ಜಗದ್ಗುರಂ

ಮುಂಗಾರುಮಳೆ ಸಿನಿಮಾದ ನಿರ್ಮಾಪಕರಾದ ಈ ಕೃಷ್ಣಪ್ಪ ಮತ್ತು ಗಣೇಶ್ ಒಂದೇ ಊರಿನವರಾಗಿದ್ದರು ಮತ್ತು ಕೃಷ್ಣಪ್ಪ ಅವರ ಕಾರ್ಖಾನೆಯಲ್ಲಿ ಗಣೇಶ್ ಅವರ ತಂದೆ ಕೆಲಸ ಮಾಡುತ್ತಿದ್ದರಂತೆ.
ಭಟ್ರು ಚಿತ್ರಕಥೆ ಮುಗಿಸುವ ಹಂತದಲ್ಲಾಗಲೇ ಗಣೇಶ್ ರವರು ತಂಡದಲ್ಲಿದ್ದುದ್ದರಿಂದ ನಿರ್ಮಾಣಕ್ಕಾಗಿ ಕೃಷ್ಣಪ್ಪ ಅವರನ್ನು ಭೇಟಿ ಮಾಡಿಸುವುದಾಗಿ ಮಾತು ಕೊಟ್ಟರು ಹಾಗೆ ನಡೆದುಕೊಂಡರು ಕೂಡ.ಕಥೆ ಕೇಳಿದ ಕೃಷ್ಣಪ್ಪರವರು ಗಣೇಶ್ ರವರಿಗೆ ಚಲ್ಲಾಟ 50 ದಿನ ಪೂರೈಸಿದ್ದಲ್ಲಿ ಸಿನಿಮಾ ನಿರ್ಮಿಸುವುದಾಗಿ ಮಾತು ಕೊಟ್ಟಿದ್ದರು, ಚಲ್ಲಾಟ 50 ಅಲ್ಲ 100 ದಿನಗಳ ಉತ್ತಮ ಪ್ರದರ್ಶನಕಂಡ ಕಾರಣ ಕೃಷ್ಣಪ್ಪರವರು ನಿರ್ಮಾಣದ ಜವಾಬ್ದಾರಿ ತಗೆದುಕೊಂಡರಂತೆ.

ಮಳೆ ಸುರಿದ ಸದ್ದು ಟಾಕೀಸಿನ ಹೊರಗೆ ಕೇಳಲೇ ಇಲ್ಲ

ಅಂದುಕೊಂಡಂತೆ 80 ರಷ್ಟು ಚಿತ್ರದ ಭಾಗವನ್ನು ಮಳೆಯಲ್ಲೇ ಚಿತ್ರೀಕರಿಸಿದ ಭಟ್ರ ಬಳಗ ಹಾಗೊ ಹೀಗೋ ಕಸರತ್ತು ಮಾಡಿ ಸಿನಿಮಾ ಬಿಡುಗಡೆ ಮಾಡಿದರು, ಪ್ರಚಾರದ ಕೊರತೆಯಿಂದ ಸಿನಿಮಾ ಬಿಡುಗಡೆಗೊಂಡದ್ದು ಜನರಿಗೆ ತಿಳಿಯಲೆಯಿಲ್ಲ,ಹೆಚ್ಚುಕಡಿಮೆ ಎರಡುವಾರಗಳಷ್ಟುದಿನ ಚಿತ್ರಮಂದಿರದಲ್ಲಿ ಜನರ ಕೊರತೆ ಎದ್ದು ಕಾಣುತಿತ್ತು. ಆದರೆ ನಂತರದ ದಿನಗಳಲ್ಲಿ ಸಿನಿಮಾ ನೋಡಿದ್ದ ಕೆಲ ಜನರು ಖುದ್ದು ತಾವೇ ಚಿತ್ರದ ಪ್ರಚಾರ ಮಾಡಿದರು, ನಂತರ ನಡೆದದ್ದು ಇತಿಹಾಸ.

ಪೂಜಾ ಆದ ಸಂಜನಾ GOLD ಆದ ಗಣಿ

ಸಿನಿಮಾಗೆ ನಾಯಕನಟನಾಗಿ ಅಪ್ಪು ಅವರ ಡೇಟ್ಸ್ ಸಿಗದ ಕಾರಣ ಅಖಾಡಕ್ಕೆ ಇಳಿದಿದ್ದ ಕಾಮಿಡಿ ಟೈಮ್ ಗಣೇಶ್ ರ ಪರಿಸ್ಥಿತಿ ಬೀಜ ಬಿತ್ತು ಮಳೆಗಾಗಿ ಕಾಯುವ ರೈತನಂತಾಗಿತ್ತು.ಕನ್ನಡದ ಯಾವುದೇ ಹೆಸರಾಂತ ನಟಿ ಸಿಗದ ಕಾರಣ, ಭಟ್ರು ಉತ್ತರ ಭಾರತದ ಸಂಜನಾ ಗಾಂಧಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು. ಸಿನಿಮಾದ ಯಶಸಿನ್ನ ನಂತರ ಸಂಜನಾ ಗಾಂಧಿ ತಮ್ಮ ಹೆಸರನ್ನು ಪೂಜಾ ಗಾಂಧಿ ಎಂದು ಬದಲಾಯಿಸಿಕೊಂಡರು, ಕಾಮಿಡಿ ಟೈಮ್ ಗಣೇಶ್ ಕನ್ನಡಿಗರ ಹೃದಯ ಕದ್ದು GOLDEN STAR ಆದರು.

jayanth kaikini, manomurthy, yograj bhat
jayanth kaikini, manomurthy, yograj bhat

SMS, MMS ನಲ್ಲಿ ಹಾಡುಗಳ ಹರಿದಾಟ

ಸಂಗೀತ ನಿರ್ದೇಶಕರಾಗಿದ್ದ ಮನೋಮೂರ್ತಿಯವರು ಕಾಲಿಪೋರ್ನಿಯಾದಲ್ಲಿ ಇದ್ದುದ್ದರಿಂದ ಸಿನಿಮಾಕ್ಕೆ ತಾವು ಕಂಪೋಸ್ ಮಾಡುತ್ತಿದ್ದ ಟ್ಯೂನ್ಗಳನ್ನು MMS ,SMS ,EMAIL ಮುಕಾಂತರ ಕಳಿಸಿ final ಮಾಡುತ್ತಿದ್ದರಂತೆ.

ಆನಂದ ಪರಮಾನಂದ !!

ಮುಂಗಾರುಮಳೆ ಚಿತ್ರದ ಗೀತೆಗಳು ಆನಂದ್ ಆಡಿಯೋ ಸಂಸ್ಥೆಯಡಿ ಸೀಡಿ ಮತ್ತು ಕ್ಯಾಸೆಟ್ ಗಳಾಗಿ ಬರೋಬ್ಬರಿ ಎರಡು ಲಕ್ಷ ಕ್ಯಾಸೆಟ್ ಗಳ ಮಾರಾಟ ಆಗುವ ಮೂಲಕ ದಾಖಲೆ ಸೃಷ್ಟಿಸಿಬಿಟ್ಟಿತು.

ಜೋಗದ ಮೇಲೆ ಕಣ್ಣಿಟ್ಟ ಕೃಷ್ಣ

ಮುಂಗಾರುಮಳೆ ಚಿತ್ರದ ಛಾಯಾಗ್ರಾಹಕ ಹೆಬ್ಬುಲಿ ಕೃಷ್ಣರವರು ಜೋಗವನ್ನು ಟಾಪ್ ಆಂಗಲ್ ನಲ್ಲಿ ತೋರಿಸಬೇಕೆಂಬ ಹಂಬಲದಿಂದ ಎಂಟು, ಹತ್ತು ಲಕ್ಷ ಬೆಲೆಬಾಳುವ ಕ್ಯಾಮೆರಾ,ಮತ್ತು ಸಲಕರಿಣಿಕೆಗಳನ್ನು ತರಿಸಿದ್ದರಂತೆ.

hebbuli krishna
hebbuli krishna

ಮುಗಿಯದ ಮಳೆ

ಎಲ್ಲಿನೋಡಿದರು “ಅನಿಸುತಿದೆ ಯಾಕೋ ಇಂದು” ಎಂದು ಕೇಳುತ್ತಿದ್ದ ಆ ಸಮಯದಲ್ಲಿ ಸಿನಿಮಾ ಬರೋಬ್ಬರಿ ಒಂದು ವರ್ಷಗಳ ಕಾಲ ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನವಾಗುವ ಮೂಲಕ ಭಾರತದಲ್ಲೇ 1 ವರ್ಷ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನ ಕಂಡ ಏಕೈಕ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸತತ ಒಂದು ವರ್ಷ ಪ್ರದರ್ಶನ ಕಂಡು 75 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡಿಬಿಟ್ಟಿತು.

ಮಳೆ ನಿಲ್ಲಲೇಯಿಲ್ಲ , ಇನ್ನು ಜೋರಾಯಿತು

mungarumale remake
mungarumale remake

ಕನ್ನಡದ ಮಣ್ಣಲ್ಲಿ ಆರ್ಭಟಿಸಿದ ಮಳೆ ಬಾಂಗ್ಲಾ( Bengali in 2008 as Premer Kahini ) , ಆಂಧ್ರ (Telugu in 2008 as Vaana ) , ಮರಾಠ ( Marathi in 2017 as Premay Namaha ), ಒಡಿಯ ( in Odia in 2009 as Romeo – The Lover Boy ) ಚಿತ್ರರಂಗದಲ್ಲು ಆರ್ಭಟಿಸಲು ಪ್ರಾರಂಭಿಸಿತು. ಈ ಮೂಲಕ ಸ್ಕೂಲ್ ಮಾಸ್ಟರ್ , ಅನುರಾಗ ಅರಳಿತು ಮತ್ತು ಅಪ್ಪು ನಂತರ ನಾಲಕಕ್ಕೂ ಹೆಚ್ಚಿನ ಭಾಷೆಗಳಲ್ಲಿ ರಿಮೇಕ್ ಆದ ಕನ್ನಡ ಚಿತ್ರ ಎಂಬ ಮೈಲಿಗಲ್ಲು ಸ್ಥಾಪಿಸಿತು.

ಹುಫ್….. ಹೇಳ್ತಾ ಹೋದ್ರೆ ಮುಗಿಯೋದೆಯಿಲ್ಲ ಈ ಹನಿ ಹನಿ ಪ್ರೇಮ್ ಕಹಾನಿ, ನಿಮಗೆ ಇವೆಲ್ಲ ಹೇಳ್ತ ಹೇಳ್ತ ಮಳೇಲಿ ತೋಯಿಸಿಕೊಳ್ಳೋ ಬಯಕೆ ಆಗ್ತಿದೆ. “ಮುಂಗಾರುಮಳೆಯೇ ಏನು ನಿನ್ನ ಹನಿಗಳ ಲೀಲೆ”…

a still from mungarumale
a still from mungarumale

LEAVE A REPLY

Please enter your comment!
Please enter your name here