ಮುಂಬೈ ಏಜೆಂಟರಿಂದ ಕೋಟಿಗೊಬ್ಬ 3 ಚಿತ್ರತಂಡಕ್ಕೆ ಮೋಸ. ನಿರ್ಮಾಪಕರ ಹರಸಾಹಸ

0
322

ಸದ್ಯಕ್ಕೆ ಕಿಚ್ಚ ಸುದೀಪ್ ಬಿಗ್ ಬಾಸ್ ಕಾರ್ಯಕ್ರಮ ನಿರೂಪಕರಾಗಿ ಕೆಲಸ ಮಾಡುವುದರ ಜೊತೆಗೆ ಚಿತ್ರೀಕರಣದಲ್ಲು ತೊಡಗಿಸಿಕೊಂಡಿದ್ದರು. ಕೋಟಿಗೊಬ್ಬ 3 ಚಿತ್ರ ತಂಡಕ್ಕೆ ಬಾರಿ ಮೋಸ ಆಗಿದೆ. ಚಿತ್ರೀಕರಣದ ಹೆಸರಿನಲ್ಲಿ ಮುಂಬೈ ಏಜನ್ಸಿ ಅವರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಚಿತ್ರದ ನಿರ್ಮಾಪಕರಾದ ಸೂರಪ್ಪ ಬಾಬು ಅವರು ಆರೋಪವನ್ನು ಮಾಡಿದ್ದಾರೆ. ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣವು ಪೊಲನ್ ನಲ್ಲಿ ಜರುಗಬೇಕಿತ್ತು. ಆದ್ದರಿಂದ ಮುಂಬೈ ದೇಶದ ಏಜೆನ್ಸಿ ಏಜೆಂಟ್ ಆದ ಸಂಜಯ್ ಪಾಲ್ ಅವರ ಜೊತೆ ಚಿತ್ರತಂಡದವರು ಸಂಪರ್ಕವನ್ನು ಬೆಳೆಸಿದ್ದರು. ಮುಂದೆ ಓದಿ

ಹೆಚ್ಚಿನ ದುಡ್ಡಿಗಾಗಿ ನಿರ್ಮಾಪಕರು ಒಪ್ಪಿರಲಿಲ್ಲ

ಚಿತ್ರೀಕರಣಕ್ಕೆ ವೆಚ್ಚವಾದ ಹಣದ ಮೊತ್ತದ ಕುರಿತು ಮೊದಲೆ ಮಾತು ಕಥೆ ನಡೆದಿತ್ತು. ಚಿತ್ರೀಕರಣ ಪೂರ್ಣವಾದ ನಂತರ ಈಗ ಅವರು ಹೆಚ್ಚಿನ ಮೊತ್ತದ ಹಣವನ್ನು ಕೇಳುತ್ತಿದ್ದಾರೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ. ಹಣದ ವಿಚಾರದ ಕುರಿತು ಅಲ್ಲಿ ನಡೆದ ಮೊತ್ತದ ಹಣಕ್ಕಿಂತ ಹೆಚ್ಚಿನ ಹಣವನ್ನು ಡಿಮ್ಯಾಂಡ್ ಮಾಡಿದ್ದರು. ಇದನ್ನು ಸೂರಪ್ಪ ಬಾಬು ಅವರು ಖಂಡಿಸಿದ್ದರು. ಇದರ ಹಿನ್ನಲೆಯಲ್ಲಿ ಚಿತ್ರತಂಡದವರನ್ನು ಪೋಲೆಂಡ್ ನಿಂದ ವಾಪಸ್ ಕಳಿಸುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡಿದ್ದರಂತೆ. ಹೇಗೋ ನಿರ್ಮಾಪಕರು ಹರಸಾಹಸವನ್ನು ಮಾಡಿ ಚಿತ್ರ ತಂಡದವರನ್ನ ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ ಸೂರಪ್ಪ ಬಾಬು ಅವರ ಅಕೌಂಟೆಂಟ್ ಪೋಲೆಂಡ್ ನಲ್ಲೆ ಇದ್ದಾರೆ.

ಮುಂಬೈ ಏಜೆಂಟ್ ವಶದಲ್ಲಿ ಅಕೌಂಟೆಂಟ್

ಸಂಜಯ್ ಪಾಲ್ ಅವರ ಚಕ್ರವ್ಯೂಹದಲ್ಲಿ ಅಕೌಂಟೆಂಟ್ ಸಿಕ್ಕಿಹಾಕಿಕೊಂಡಿದ್ದು, ಅವರನ್ನು ಕರೆ ತರುವ ಪ್ರಯತ್ನವನ್ನು ಚಿತ್ರತಂಡದವರು ಮಾಡುತ್ತಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಹತ್ತಿರ ನಿರ್ಮಾಪಕರು ದೂರನ್ನು ಸಲ್ಲಿಸಿದ್ದು, ಭಾರತ ದೇಶದ ರಾಯಬಾರಿಗಳ ಉಪಕಾರವನ್ನು ಪಡೆಯಲಾಗುತ್ತಿದೆ.

LEAVE A REPLY

Please enter your comment!
Please enter your name here