ರಸ್ತೆ ನಿರ್ಮಾಣ ಹೆಸರಿನಲ್ಲಿ ನಶಿಸಿ ಹೋಗುತ್ತಿರುವ ಮುಳ್ಳಯ್ಯನ ಗಿರಿ

0
1456
mullayyana giri

ಕರ್ನಾಟಕ ಒಂದು ಸುಂದರ ತಾಣ. ಅದನ್ನ ನೋಡಲು ಎರಡು ಕಣ್ಣು ಸಾಲದು. ನಮ್ಮ ಕರ್ನಾಟಕ ಎಷ್ಟು ಪ್ರಖ್ಯಾತಿ ಪಡೆದಿದೆ ಅಂದ್ರೆ, ಇಲ್ಲಿರುವ ಸ್ಥಳಗಳನ್ನ ನೋಡಲು ದೇಶ, ವಿದೇಶದಿಂದಲೂ ಜನರು ಬರುತ್ತಾರೆ. ಹೌದು. ಹೊರ ದೇಶಗಳಲ್ಲೂ ನಮ್ಮ ನಾಡು ಹೆಸರುವಾಸಿಯಾಗಿದೆ. ಯಾಕಂದ್ರೆ ಅಂತಹ ಅದ್ಬುತ ಸ್ಥಳಗಳು ನಮ್ಮಲ್ಲಿವೆ. ನಮ್ಮ ನಾಡಿನಲ್ಲಿ ಯಾವುದಕ್ಕೂ ಕೊರತೆ ಇಲ್ಲ. ನಮ್ಮ ಕರ್ನಾಟಕ ಕಲೆಗಳ ನಾಡು, ಶಿಲ್ಪ ತವರೂರಿನ ಬೀಡು. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ತುಂಬಿ ತುಳುಕಾಡುತ್ತಿದೆ.

ನಮ್ಮ ಕರುನಾಡು ಹೆಚ್ಚಾಗಿ ಹೆಸರು ಪಡೆದಿರೋದು, ಸುಂದರ ಸ್ಥಳಗಳಿಂದ. ಹೌದು. ಕಾಡು, ಮೇಡು, ಬೆಟ್ಟ ಗುಡ್ಡ, ಕೋಟೆ, ದೇವಾಲಯ, ಅರಮನೆ ಈ ರೀತಿ ಅನೇಕ ಪುಣ್ಯ ಸ್ಥಳಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು ನಮ್ಮಲ್ಲಿವೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಹೆಚ್ಚಾಗಿ ಜನರು ಇಷ್ಟ ಪಡುವ ಸ್ಥಳ ಅಂದ್ರೆ ಅದು ಚಿಕ್ಕಮಗಳೂರು. ಯಾಕಂದ್ರೆ ಅಲ್ಲಿರುವ ತಂಪಾದ ಗಾಳಿ, ಮೈ ರೋಮಾಂಚನವಾಗುವ ಪ್ರಕೃತಿ ಮನಸ್ಸಿಗೆ ಮುದ ನೀಡುತ್ತೆ. ಹಾಗಾಗಿ ಪ್ರತಿಯೊಬ್ಬರೂ ಚಿಕ್ಕಮಗಳೂರಿನ ಸ್ಥಳಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅದರಲ್ಲೂ ಜನರಿಗೆ ಮುಳ್ಳಯ್ಯನ ಗಿರಿ ಬೆಟ್ಟ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ಪ್ರಕೃತಿ ತನ್ನ ಸೌಂದರ್ಯವನ್ನ ಇಲ್ಲಿ, ಎದ್ದು ತೋರುತ್ತಾಳೆ. ಆದ್ರೆ ಈಗ ಇಂತ ಸುಂದರ ಸ್ಥಳಕ್ಕೂ,ಒಂದು ತೊಂದರೆ ಎದುರಾಗಿದೆ.

ಮುಳ್ಳಯ್ಯನ ಗಿರಿ ಬೆಟ್ಟಕ್ಕೆ ನಡೀತಿದೆ ರಸ್ತೆ ನಿರ್ಮಾಣ

ಮುಳ್ಳಯ್ಯನ ಗಿರಿ ಅಂದ್ರೆ ಯಾರಿಗೆ ಇಷ್ಟ ಹೇಳಿ. ಎಲ್ಲರಿಗೂ ಇಷ್ಟ. ಮಳೆಗಾಲ ಬಂತು ಅಂದ್ರೆ ಸಾಕು, ಸಾವಿರಾರು ಜನರು ಈ ಸ್ಥಳಕ್ಕೆ ಭೇಟಿ ನೀಡ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯವನ್ನ ಸವೆಯೋಕೆ, ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಆದ್ರೆ ಇಂತ ಸ್ಥಳಕ್ಕೂ ಈಗ ಕಂಟಕ ಕಾದಿದೆ. ಹೌದು. ಮುಳ್ಳಯ್ಯನ ಗಿರಿ ಬೆಟ್ಟಕ್ಕೆ, ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಅದು ಇಲ್ಲಿನ ಜನರಿಗೆ ಇಷ್ಟ ಇಲ್ಲ. ಯಾಕಂದ್ರೆ ಗಿರಿ ಅಂದ್ರೆ, ಕಾಡು ಮೇಡಿನಲ್ಲಿ ಅಲೆದು ಹೋದರೆ ಚೆಂದ, ಆದ್ರೆ ಸಾಮಾನ್ಯವಾಗಿ ರಸ್ತೆ ನಿರ್ಮಾಣ ಮಾಡಿದರೆ, ಅದು ಗಿರಿ ಎಂದೆನಿಸುವುದಿಲ್ಲ. ಜೊತೆಗೆ, ರಸ್ತೆ ನಿರ್ಮಾಣ ನೆಪದಲ್ಲಿ ಕಲ್ಲು ಮತ್ತು ಬೆಟ್ಟ ಹೊಡೆಯುತ್ತಿದ್ದಾರೆ. ಇದ್ರಿಂದ ಮುಳ್ಳಯ್ಯನ ಗಿರಿ ತನ್ನ ಸೌಂದರ್ಯವನ್ನ ಕಳೆದುಕೊಳ್ಳುತ್ತಿದೆ ಅನ್ನೋದು ಇಲ್ಲಿನ ಜನರ ಕೊರಗಾಗಿದೆ.

ಗಿರಿ ತುದಿಯಲ್ಲಿರುವ ಕಲ್ಲುಗಳನ್ನ ಬ್ಲಾಸ್ಟ್ ಮಾಡುತ್ತಿದ್ದಾರೆ

ಕರ್ನಾಟಕದ ಪರ್ವತಗಳಲ್ಲಿ ಸುಂದರ ಪರ್ವತ ಇದಾಗಿದೆ. ಆದ್ರೆ ಈಗ ಇದರ ನಾಶದ ಕಾರ್ಯ ನಡೆಯುತ್ತಿರೋದು, ಯಾರಿಂದಲೂ ಸಹಿಸಲು ಆಗುತ್ತಿಲ್ಲ. ಯಾಕಂದ್ರೆ ರಸ್ತೆ ಅಗಲೀಕರಣ ಹೆಸರಲ್ಲಿ ಇಅಗ್ಗಲೇ ಮುಳ್ಳಯ್ಯನ ಗಿರಿ ತುದಿಯಲ್ಲಿರುವ ಕಲ್ಲುಗಳನ್ನ ಬ್ಲಾಸ್ಟ್ ಮಾಡುತ್ತಿದ್ದಾರೆ. ಈ ರೀತಿ ಆದ್ರೆ, ಮುಂದೊಂದು ದಿನ ಗಿರಿ ಸಂಪೂರ್ಣವಾಗಿ ನಶಿಸುತ್ತದೆ. ಇಂದು ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡುತ್ತಿದ್ದಾರೆ. ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸೋದರಲ್ಲಿ ಅನುಮಾನವಿಲ್ಲ. ಈ ರೀತಿ ಆದರೆ ಪ್ರಾಣಿ, ಪಕ್ಷಿಗಳು ಎಲ್ಲಿಗೆ ಹೋಗಬೇಕು ಎಂದು ಜನರು ಸರ್ಕಾರಕ್ಕೆ ಪ್ರಶ್ನೆ ಇಡುತ್ತಿದ್ದಾರೆ.

ಮಣ್ಣು ಕುಸಿದು ದೊಡ್ಡ ಅನಾಹುತವಾಗಬಹುದು

ಮುಳ್ಳಯ್ಯನ ಗಿರಿ ಒಂದು ಸೂಕ್ಷ್ಮ ಪ್ರದೇಶ. ಅಂತ ಪ್ರದೇಶದಲ್ಲಿ ಸರ್ಕಾದವರು, ಗುಂಡಿ ತೊಡುವುದು, ಮಣ್ಣು ಅಗೆಯುವುದು, ಬ್ಲಾಸ್ಟ್ ಮಾಡುವುದು ಮಾಡಿದರೆ, ಮಳೆಗಾಲದಲ್ಲಿ ಅದು ಕುಸಿಯುತ್ತೆ. ಅದರಿಂದ ದೊಡ್ಡ ಅನಾಹುತ ಆಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಒಮ್ಮೆ ಈ ಗಿರಿಯನ್ನೇನಾದರೂ ನಾಶ ಮಾಡಿದರೆ, ಮತ್ತೆ ಅದನ್ನ ನಿರ್ಮಿಸಲು ಆಗುವುದಿಲ್ಲ. ಯಾಕಂದ್ರೆ ಪ್ರಕೃತಿ ಒಮ್ಮೆ ನಶಿಸಿ ಹೋದಳು ಅಂದ್ರೆ, ಅದನ್ನ ಮತ್ತೆ ಸರಿ ಮಾಡುವುದಕ್ಕೆ ತುಂಬಾ ಕಷ್ಟ ಆಗುತ್ತದೆ. ಒಂದು ವೇಳೆ ಅದನ್ನ ಸರಿ ಮಾಡಿದರೂ, ಮತ್ತೆ ಅದು ಮೊದಲಿನ ರೂಪ ಪಡೆಯುವುದಿಲ್ಲ. ಹಾಗಾಗಿ ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸಬೇಕು ಎಂದು ಪರಿಸರ ವಾದಿಗಳು ಸಹ ಕಿಡಿಕಾರುತ್ತಿದ್ದಾರೆ.

ಒಟ್ಟಿನಲ್ಲಿ ಸುಂದರ ಪ್ರದೇಶಗಳನ್ನ ಅಭಿವೃದ್ಧಿ ಮಾಡೋ ನೆಪದಲ್ಲಿ, ನಮ್ಮ ಸರ್ಕಾರ ಅವುಗಳ ನಾಶಕ್ಕೆ ಕಾರಣವಾಗುತ್ತಿದೆ ಎಂದು ಎನಿಸುತ್ತಿದೆ. ಇದೇ ರೀತಿ ಮುಂದುವರೆದರೆ, ನಮ್ಮ ನಾಡು ತನ್ನ ಸೌಂದರ್ಯವನ್ನ ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಅನುಮಾನವೇ ಇಲ್ಲ.

LEAVE A REPLY

Please enter your comment!
Please enter your name here