ಗುರುಪೂರ್ಣಿಮ ದಿನದಂದು ಶ್ರೀಗಳನ್ನು ಭೇಟಿ ಮಾಡಿದ ಮೋದಿ

0
539

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಒಂದು ಸಾಲು ಇದೆ. ಯಾವಾಗ ನಾವು ಗುರು ಹತ್ತಿರ ಸಂಪೂರ್ಣವಾಗಿ ಸೆರೆ ಆಗುತ್ತೆವೋ ಆಗಲೆ ನಾವು ಜೀವನದ ಜಂಜಾಟದಿಂದ ಹೊರಗೆ ಬರಲು ಸಾಧ್ಯ. ನೆನ್ನೆ ದೇಶಾದ್ಯಂತ ಗುರು ಪೂರ್ಣಿಮ ದಿನ ಆಚರಿಸಲಾಗಿತ್ತು. ಗುರು ಪೂರ್ಣಿಮ ದಿನದಂದು ಭಕ್ತಾದಿಗಳು ತಮ್ಮ ನೆಚ್ಚಿನ ಗುರುವನ್ನು ಭಕ್ತಿಯಿಂದ ಆಧಾರಿಸುತ್ತಾರೆ. ಗುರು ಇಲ್ಲದೆ ಮನುಷ್ಯ ಮುಕ್ತಿ ಹೊಂದಲು ಸಾಧ್ಯವಿಲ್ಲ. ನಮ್ಮ ಭಾರತ ದೇಶವನ್ನು ವಿಶ್ವ ಗುರು ಎಂದು ಕರೆಯುತ್ತೇವೆ, ಆಧ್ಯಾತ್ಮ ಮೊದಲು ಹುಟ್ಟುಕೊಂಡಿದ್ದೆ ನಮ್ಮ ದೇಶದಲ್ಲಿ. ಇತಿಹಾಸ ತೆಗೆದು ನೋಡಿದರೆ ಸಾಧು, ಸಂತರು, ಗುರುಗಳು ಎಲ್ಲರು ಜನಿಸಿದ್ದು ಭರತ ಭೂಮಿಯಲ್ಲೆ. ಆದಿ ಗುರು ಶಂಕರಾಚಾರ್ಯಗಳಿಂದ ಹಿಡಿದು ಸ್ವಾಮಿ ವಿವೇಕಾನಂದವರೆಗು ಆಗಮಿಸಿರುವ ಪ್ರತಿ ಒಬ್ಬ ಗುರು ಯೋಗ ಮತ್ತು ಆಧ್ಯಾತ್ಮದ ಜ್ನ್ಯಾನವನ್ನು ಬೋಧಿಸಿ ಇಡಿ ಜಗತ್ತಿಗೆ ಸಾರಿದ್ದಾರೆ.

ಪೇಜಾವರ ಶ್ರೀಗಳನ್ನ ಭೇಟಿ ಮಾಡಿದ ಮೋದಿ

ಈ ದಿನ ಜನರಿಗೆ ಬಹಳ ಮಹತ್ವವಾದ ದಿನವಾಗಿರುತ್ತದೆ. ಗುರು ರಾಘವೇಂದ್ರ ಸ್ವಾಮಿ, ಸಾಯಿ ಬಾಬ, ದತ್ತಾತ್ರೇಯ ಹೀಗೆ ಹಲವಾರು ಗುರುಗಳ ದರ್ಶನವನ್ನು ಪಡೆಯಲು ದೇವಸ್ಥಾನಗಳಲ್ಲಿ ಮುಗಿ ಬೀಳುತ್ತಿರುತ್ತಾರೆ. ಸ್ವಲ್ಪ ಜನ ಮನೆಯಲ್ಲೆ ಗುರುವಿಗಾಗಿ ಒಂದು ಸಣ್ಣ ದೇವಸ್ಥಾನ ಮಾಡಿ ಅಲ್ಲೆ ಗುರುವಿಗೆ ನಮಸ್ಕರಿಸುತ್ತಾರೆ. ಮನಶಾಂತಿಗಾಗಿ ಗುರುವನ್ನು ನೆನೆದು ಧ್ಯಾನ, ಯೋಗ ಇತ್ಯಾದಿಗಳನ್ನು ಮಾಡುವುದರ ಮೂಲಕ ಗುರುವಿಗೆ ಗುರು ಧಕ್ಷಿಣೆಯನ್ನು ಅರ್ಪಿಸುತ್ತಾರೆ. ದೇಶದ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಸಹ ಗುರು ಪೂರ್ಣಿಮ ದಿನದ ಪ್ರಯುಕ್ತ ,ಉಡುಪಿ ಸ್ವಾಮಿಗಳಾದ ಪೇಜಾವರ ಶ್ರೀ ಅವರನ್ನು ಭೇಟಿ ಮಾಡಿದ್ದಾರೆ. ಪೇಜಾವರ ಶ್ರೀ ಅವರನ್ನು ಭೇಟಿ ಮಾಡುವ ವಿಷಯವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ದೇಶದ ಪ್ರಧಾನ ಮಂತ್ರಿ ಹಂಚಿಕೊಂಡಿದ್ದಾರೆ.

ಸ್ವಾಮೀಜಿಯನ್ನು ಭೇಟಿ ಮಾಡಿದ್ದು ನಿಜಕ್ಕು ಹೆಮ್ಮೆ ಪಡುವ ಕ್ಷಣವಾಗಿದೆ

ನರೇಂದ್ರ ಮೋದಿ ಅವರು ಸ್ವತಃ ತಾವೆ ಉಡುಪಿ ಸ್ವಾಮೀಜಿಯನ್ನು ಡೆಲ್ಲಿ ಗೆ ಆಹ್ವಾನಿಸಿದ್ದು, ಇವರ ಜೊತೆಗೆ ಅಮೂಲ್ಯವಾದ ಕ್ಷಣಗಳನ್ನು ಕಳೆದಿದ್ದಾರೆ. ಶ್ರೀಗಳನ್ನು ಭೇಟಿಯಾದ ಭಾವಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುರುಪೂರ್ಣಿಮ ದಿನದಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿದ್ದು ನಿಜಕ್ಕು ಹೆಮ್ಮೆ ಪಡುವ ಕ್ಷಣವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀಗಳಿಂದ ನಾವು ಕಲಿಯುವುಂತಹದ್ದು ಮತ್ತು ಅವರ ಬೋಧನೆಯನ್ನು ಕೇಳುವುದು ವಿನಮ್ರವಾದ ಅನುಭವ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿಗಳು ಟ್ವೀಟ್ ಮಾಡಿದ್ದೆ ತಡ ಹಲವಾರು ಜನ ರಿಟ್ವೀಟ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here