ಪ್ರಧಾನಿ ಮೋದಿಯವರು ಹಿಟ್ಲರ್ ಅಂತೆ. ರಾಜಾರೋಷವಾಗಿ ಹೇಳಿಕೆ ನೀಡುತ್ತಿರುವ ಮಾಜಿ ಸಂಸದೆ ರಮ್ಯಾ.

0
1211

ರಾಜಕೀಯ ಅಂದ್ರೆ ಎಂಥವರಿಗೂ ಗೊಂದಲ ಹಾಗೂ ಕುತೂಹಲ ಎರಡು ತರಿಸುತ್ತೆ. ಯಾಕಂದ್ರೆ ಅದರಲ್ಲಿ ನಡೆಯುವ ಕಾರ್ಯಕಲಾಪಗಳು ಆ ರೀತಿ ಇರುತ್ತವೆ. ರಾಜಕಾರಣಿಗಳಿಗೆ ಬಿಟ್ಟರೆ, ಹೊರಗಿನ ಜನಕ್ಕೆ ಅದರ ಬಗ್ಗೆ ತಿಳಿಯೋಕೆ ಬಹಳ ಕಷ್ಟ ಆಗುತ್ತೆ. ಯಾಕಂದ್ರೆ ಅಲ್ಲಿ ನಡೆಯುವ ಕೆಲಸದ ಬಗ್ಗೆ ಅವರಿಗೆಯೇ ಗೊತ್ತಿರಲ್ಲ. ಜೊತೆಗೆ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ. ಆಡಳಿತ ಪಕ್ಷ, ವಿರೋಧ ಪಕ್ಷ ಅಂತ ಗೊಂದಲಗಳು ನಡೆಯುತ್ತಲೇ ಇರುತ್ತವೆ. ಹಾಗೂ ಒಬ್ಬರ ಮೇಲೆ, ಇನ್ನೊಬ್ಬರು ಆರೋಪ ಮಾಡುತ್ತಲೇ ಇರುತ್ತಾರೆ.

ಹೌದು. ರಾಜಕೀಯ ಅಂದ್ರೇನೆ ಹಾಗೆ. ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುತ್ತಲೇ ಇರುತ್ತಾರೆ. ಅವರಿಗಿಂತ ನಾವೇ, ದೇಶವನ್ನ ಕಾಯೋದು ಅಂತ ಹೇಳುತ್ತಲೇ ಇರುತ್ತಾರೆ. ಆದ್ರೆ ಇವರೇನೋ, ತಮ್ಮ ಬೇಳೆ ಬೇಯಿಸಿಕೊಳ್ಳೋಕೋಸ್ಕರ ಹೇಳ್ತಾರೆ. ಆದ್ರೆ ಅದನ್ನ ಕೇಳುವ ಪ್ರಜೆಗಳು ಮಾತ್ರ ಗೊಂದಲದಲ್ಲೇ ದೊಡ್ಡ ಮನೆ ಕಟ್ಟುತ್ತಿರುತ್ತಾರೆ. ಅವರು ಸರಿ ಇಲ್ಲ, ಇವರು ಸರಿ ಅನ್ನೋದೇ ನಮ್ಮ ರಾಜಕೀಯವಾಗುತ್ತಿದೆ. ಈಗ ನಮ್ಮ ನಾಯಕಿಯು ಸಹ ಇಂಥ ಒಂದು ಆರೋಪ ಮಾಡಿ, ಮತ್ತೊಂದು ವಿವಾದಕ್ಕೆ ಒಳಗಾಗಿದ್ದಾರೆ.

ಪದೇ ಪದೇ ವಿವಾದಕ್ಕೆ ಒಳಗಾಗುತ್ತಿರುವ ಸ್ಯಾಂಡಲ್ ವುಡ್ ಕ್ವೀನ್

ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಇತ್ತೀಚಿಗೆ ಒಂದಲ್ಲಾ, ಒಂದು ವಿವಾದಕ್ಕೆ ಒಳಗಾಗುತ್ತಲೇ ಇದ್ದಾರೆ. ಹೌದು. ಪ್ರಧಾನಿ ಮೋದಿಯವರಿಗೆ ಇಲ್ಲ, ಸಲ್ಲದ ಮಾತುಗಳನ್ನಾಡುವುದರ ಮೂಲಕ ಹಾಗೂ ಟ್ವೀಟ್ ಮಾಡುವುದರ ಮೂಲಕ, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಈ ಹಿಂದೆ ಮೋದಿಯನ್ನ, ಕಳ್ಳನಿಗೆ ಹೋಲಿಸಿದ್ದರು. ಆಗ ಬಿಜೆಪಿ ನಾಯಕರು ಹಾಗೂ ಜನಗಳ ಆಕ್ರೋಶಕ್ಕೆ ಕಾರಣವಾಗಿದ್ದರು. ಈಗ ಮತ್ತೊಂದು ಹೇಳಿಕೆ ನೀಡಿ, ಜನರ ಕೋಪಕ್ಕೆ ಮತ್ತೆ ತುತ್ತಾಗಿದ್ದಾರೆ.

ಪ್ರಧಾನಿಯನ್ನ ಹಿಟ್ಲರ್ ಗೆ ಹೋಲಿಸಿದ ರಮ್ಯಾ

ನಮ್ಮ ದೇಶದ ಪ್ರಧಾನಿ ಮೋದಿಯವರನ್ನ, ರಮ್ಯಾ ಹಿಟ್ಲರ್ ಗೆ ಹೋಲಿಸಿದ್ದಾರೆ. ಹೌದು. ಜರ್ಮನಿಯ ಸರ್ವಾಧಿಕಾರಿಯಾಗಿದ್ದ, ಅತ್ಯಂತ ಕ್ರೂರಿ ವ್ಯಕ್ತಿಗೆ, ನಮ್ಮ ದೇಶದ ಪ್ರಧಾನಿಯನ್ನ ಹೋಲಿಸಿದ್ದಾರೆ. ಮೋದಿಯವರು ಮಗುವಿನ ಕಿವಿ ಹಿಂಡುತ್ತಿರುವ ಫೋಟೋ ಜೊತೆ, ಹಿಟ್ಲರ್ ಕೂಡ ಒಂದು ಮಗುವಿನ ಕಿವಿ ಹಿಂಡುತ್ತಿರುವ ಫೋಟೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಇವರು ಕೂಡ ಹಿಟ್ಲರ್ ಎಂದು ಟ್ವೀಟ್ ಮಾಡಿದ್ದಾರೆ.

ಆಕ್ರೋಶ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರು ಹಾಗೂ ಜನರು

ದೇಶದ ಪ್ರಧಾನಿಯನ್ನ ಹಿಟ್ಲರ್ ಗೆ ಹೋಲಿಸಿದ ರಮ್ಯಾ ಮೇಲೆ ಈಗ ಪ್ರಜೆಗಳು ಸೇರಿದಂತೆ, ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವರಿಗೆ ದೇಶದ ಪ್ರಧಾನಿ ಬಗ್ಗೆ ಸ್ವಲ್ಪವೂ ಗೌರವವಿಲ್ಲ. ಈ ಹಿಂದೆ ಹೋದಲ್ಲೆಲ್ಲಾ ಮೋದಿಯವರಿಗೆ ಕಳ್ಳ ಎಂಬ ಹೇಳಿಕೆಯನ್ನ ನೀಡುತ್ತಿದ್ದರು. ಆದ್ರೆ ಈಗ ಅತ್ಯಂತ ಕ್ರೂರ ಮನುಷ್ಯನಿಗೆ ಹೋಲಿಸಿದ್ದಾರೆ. ಇದನ್ನೆಲ್ಲಾ ನೋಡಿದ್ರೆ, ಇವರಿಗೆ ಸ್ವಲ್ಪವೂ ದೇಶದ ನಾಯಕನ ಮೇಲೆ ಗೌರವ ಇಲ್ಲ ಅನ್ನೋದು ಗೊತ್ತಾಗುತ್ತಿದೆ. ಯಾಕಂದ್ರೆ ರಾಹುಲ್ ಗಾಂಧಿ ಕೂಡ, ಮೋದಿಯವರನ್ನ ಚೋರ್ ಹೈ ಎಂದು ಹೇಳಿ, ಮತ್ತೆ ಜನರ ಮುಂದೆ ಕ್ಷಮೆ ಕೇಳಿದ್ದಾರೆ. ಇದೇ ರೀತಿ ಇವರ ಮಾತುಗಳು ಮುಂದುವರೆಯುತ್ತಲೇ ಇದ್ರೆ, ಸರಿಯಾದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ರಮ್ಯಾರ ಹಳೆಯ ಹಸಿಬಿಸಿ ಫೋಟೋಗಳು ವೈರಲ್

ಈ ಮಾತನ್ನ ಕೇಳಿದ ಮೇಲೆ, ಬಿಜೆಪಿ ನಾಯಕರು ಹಾಗೂ ಜನರು, ರಮ್ಯಾರ ಹಳೆಯ ಹಸಿಬಿಸಿ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ನೀವು ಇದರ ಬಗ್ಗೆ ಏನು ಹೇಳುತ್ತೀರಾ? ನಿಮ್ಮ ಅನಿಸಿಕೆ ತಿಳಿಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮೊದಲು, ನಿಮ್ಮ ಯೋಗ್ಯತೆ ಬಗ್ಗೆ ತಿಳಿದುಕೊಂಡು, ನಂತರ ದೇಶದ ಪ್ರಧಾನಿಯವರ ಬಗ್ಗೆ ಮಾತಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಕ್ವೀನ್, ಮೋದಿಯವರ ಬಗ್ಗೆ ಮಾತಾಡುತ್ತ, ಈ ರೀತಿಯ ವಿವಾದಗಳಿಗೆ ಒಳಗಾಗುತ್ತಲೇ ಇದ್ದಾರೆ. ಇವರ ಮಾತುಗಳು ಹಲವರ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here