ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವೆ ಎಂದ ಪ್ರಮೋದ್ ಮುತಾಲಿಕ್

0
609
modhi and muthalik

ಚುನಾವಣೆ ಮುಗಿದು, ತಿಂಗಳುಗಳು ಕಳೆಯುತ್ತಿವೆ. ಆದ್ರೆ ಈಗಲೂ ಒಬ್ಬರನ್ನ ಕಂಡರೆ, ಮತ್ತೊಬ್ಬರು ಆರೋಪ ಮಾಡುತ್ತಿದ್ದಾರೆ. ಹೌದು ಇಡೀ ದೇಶದ ಜನರೇ ನರೇಂದ್ರ ಮೋದಿಯನ್ನು ಮೆಚ್ಚಿ ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದಾರೆ. ಯಾಕಂದ್ರೆ, ಅವರ ನಿಲುವು, ಯೋಚನೆ ಹಾಗು ಅವರ ತಿಳುವಳಿಕೆಗೆ ಇಡೀ ದೇಶವೇ ತಲೆ ಬಾಗಿದೆ. ಹಾಗಾಗಿ ಅವರೇ ಮುಂದಿನ ಪ್ರಧಾನಿಯಾದರೆ, ದೇಶ ಅಭಿವೃದ್ಧಿಯಾಗುತ್ತದೆ ಅನ್ನೋದನ್ನು ಎಲ್ಲರು ಮನಗೊಂಡಿದ್ದರೆ. ಹಾಗಾಗಿ ಅವರನ್ನ ಮತ್ತೆ ಪ್ರಧಾನಿಯಾಗುವಂತೆ ಮಾಡಿದ್ದಾರೆ. ಮೋದಿಯವರು ಸಹ ದೇಶದ ಅಭಿವೃದ್ಧಿಗಾಗಿ ಹಲವು ಕಾರ್ಯಗಳನ್ನು ಜಾರಿಗೆ ತರುತ್ತಿದ್ದಾರೆ. ಆದ್ರೆ ಕೆಲವರು ಅವರ ವಿರೋಧಿಗಳಾಗಿದ್ದಾರೆ. ಆದರೆ ಮೋದಿಯವರು ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ . ಆದ್ರೆ ಈಗ ಬಿಜೆಪಿಯವರಿಗೆ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೇವೆ

ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇತ್ತೀಚಿಗೆ ಕೆಲವು ಹೇಳಿಕೆಗೆಗಳನ್ನು ನೀಡುವುದರ ಮೂಲಕ, ಬಹಳಷ್ಟು ಸದ್ದು ಮಾಡುತ್ತಿದ್ದರು. ಆದ್ರೆ ಅವೆಲ್ಲಾ ಚಿಕ್ಕ, ಪುಟ್ಟ ವಿಷಯ ಅಂತ ಎಲ್ಲರೂ ಸುಮ್ಮನಾಗುತ್ತಿದ್ದರು. ಆದ್ರೆ ಈಗ ದೇಶದ ಪ್ರಧಾನಿಯ ಬಗ್ಗೆಯೇ ಮಾತನಾಡಿದ್ದಾರೆ. ಹೌದು. ಮೋದಿಯ ಹೆಸರು ಹೇಳಿದರೆ, ಬಾಯಲ್ಲಿ ಬೂಟು ಹಾಕ್ತೇವೆ ಎಂದು ಹೇಳುವುದರ ಮೂಲಕ, ಎಲ್ಲೆಡೆ ಸುದ್ದಿಯಾಗಿದ್ದಾರೆ. ಹೌದು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ಒಂದು ಕಾರ್ಯಕ್ರಮ ನಡೆಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ಪ್ರಮೋದ್ ಮುತಾಲಿಕ್ ಭಾವಹಿಸಿದ್ದರು. ಆ ಸಮಯದಲ್ಲಿ ಮೋದಿಯವರ ಬಗ್ಗೆ ಮಾತಾಡಿದ್ದಾರೆ.  ಹೌದು. ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ ನೋಡಿ ಈ ಬಾರಿ ನಿಮಗೆ ವೋಟ್ ಹಾಕಿದ್ದೇವೆ. ಐದು ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಚುನಾವಣೆಯಲ್ಲಿ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕ್ತೀವಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ ನೋಡಿ ಮತ ಹಾಕಿದ್ದೇವೆ

ಮೋದಿಯವರು ಈ ದೇಶಕ್ಕೆ ೨ನೇ ಬಾರಿ ಪ್ರಧಾನಿಯಾಗಿದ್ದಾರೆ. ಯಾಕಂದ್ರೆ ಅಷ್ಟರ ಮಟ್ಟಿಗೆ ಅವರು ಜನರ ಮನಸ್ಸನ್ನು ಮುಟ್ಟಿದ್ದಾರೆ. ಅವರ ನಿಲುವು ಹಾಗು ಕಾರ್ಯ ಯೋಜನೆಗಳು ಅವರನ್ನ ಗೆಲ್ಲುವಂಯೇ ಮಾಡಿದೆ. ಆದರೆ ಅವರನ್ನ ಬಿಟ್ಟರೆ, ಬೇರೆ ಯಾವ ಬಿಜೆಪಿ ಸಂಸದರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ? ಯಾರು ಮಾಡಿಲ್ಲ. ಸುಮನ್ ಅಧಿಕಾರ ಇದೆ ಅಂತ ಮೆರೆಯೋದಲ್ಲ. ಅದನ್ನ ಒಳ್ಳೆಯ ರೀತಿಯಲ್ಲಿ ಬಳಸಬೇಕು ಎಂದು ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಹಿಂದುತ್ವ ನೋಡಿ ಮತ ಹಾಕಿದ್ದೇವೆ. ನಿಮ್ಮ ಮುಖಗಳನ್ನು ನೋಡಿ ಅಲ್ಲ. ಅದನ್ನ ಉಳಿಸಿಕೊಳ್ಳಿ. ಯಾಕಂದ್ರೆ ಮೋದಿಯವರು ಈ ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಹಾಗಾಗಿ ಅವರನ್ನ ಮುಂದಿಟ್ಟುಕೊಂಡು ನಿಮ್ಮನ್ನು ಗೆಲ್ಲಿಸಿದ್ದೇವೆ. ಅದನ್ನ ಉಳಿಸಿಕೊಳ್ಳುವುದಾದರೆ ಉಳಿಸಿಕೊಳ್ಳಿ. ಇಲ್ಲವಾದರೆ, ಮುಂದಿನ ಚುನಾವಣೆಗೆ ನಮ್ಮ ಬಳಿ ಬರಬೇಡಿ ಎಂದು ಹೇಳಿದ್ದಾರೆ.

5 ವರ್ಷ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ

ಇನ್ನೂ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್ ಅವರು, ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಯಾಕಂದ್ರೆ ನಿಮ್ಮ ಕೆಲಸವನ್ನು ನೀವು ಮಾಡಬೇಕು. ನೀವು ಒಳ್ಳೆಯದನ್ನ ಮಾಡಿದರೆ ಮಾತ್ರ, ಜನರು ನಿಮಗೆ ವೋಟ್ ಹಾಕುತ್ತಾರೆ. ಅದನ್ನ ಬಿಟ್ಟು, ನೀವು ಏನು ಕೆಲಸ ಮಾಡದೇ, ಮೋದಿಯ ಹೆಸರು ಹೇಳಿಕೊಂಡೆ ಬಂದ್ರೆ, ನಿಮ್ಮ ಗ್ರಹಚಾರ ನೆಟ್ಟಗಿರುವುದಿಲ್ಲ. ಯಾಕಂದ್ರೆ ನೀವು ಮಾತ್ರ, ಅಭಿವೃದ್ಧಿಯ ಕೆಲಸ ಮಾಡಬೇಡಿ. ಅಧಿಕಾರ ಇದೆ ಅಂತ, ಸುಮ್ಮನೆ ಅದರಲ್ಲಿ ಮೆರೆಯಬಾರದು. ಬದಲಿಗೆ ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ಚುನಾವಣೆಗೆ ಅವರ ಹೆಸರನ್ನೇನಾದ್ರೂ ಬಳಸಿದರೆ, ನಿಮ್ಮ ಬಾಯಲ್ಲಿ ಬೂಟು ಹಾಕ್ತೇವೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಮೋದ್ ಮುತಾಲಿಕ್ ಅವರು ಭಾಷಣ ಮಾಡುವ ಸಮಯದಲ್ಲಿ ಬಿಜೆಪಿ ನಾಯಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪರೋಕ್ಷವಾಗಿ ಹೇಳದೆ, ನೇರವಾಗಿ ಬಾಯಲ್ಲಿ ಬೂಟು ಹಾಕ್ತೇವೆ ಅಂತಾನೆ ನೇರವಾಗಿ ಹೇಳಿ, ಅವರ ಮೇಲೆ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here