ಮೋದಿಯನ್ನು ನೋಡಲು ಸಾವಿರಾರು ಕಿ ಮೀ ಸೈಕಲ್ ತುಳಿದು ದೆಹಲಿಗೆ ಹೋದ ವ್ಯಕ್ತಿ

0
434
modhi and kim chand

ಮನುಷ್ಯ ಆರೋಗ್ಯವಾಗಿರಬೇಕು ಅಂತ ಸೈಕಲ್ ತುಳಿಯುತ್ತಾನೆ. ಹೌದು. ಚಿಕ್ಕ ಮಕ್ಕಳಿರುವಾಗಲೇ, ಮಕ್ಕಳಿಗೆ ಸೈಕಲ್ ತುಳಿಯುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಯಾಕಂದ್ರೆ ಸೈಕಲ್ ತುಳಿಯುವುದರಿಂದ ಆರೋಗ್ಯ ವೃದ್ಧಿಸುತ್ತದೆ ಅನ್ನೋದು ಎಲ್ಲರಿಗು ಗೊತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಸೈಕಲ್ ತುಳಿಯುತ್ತಾರೆ. ಆದ್ರೆ ಇಲ್ಲೊಬ್ಬರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಸೈಕಲ್ ನಲ್ಲಿಯೇ ಹೋಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಬಂದಿದ್ದಾರೆ. ಹೌದು. ಈ ವ್ಯಕ್ತಿ ಸಾವಿರಾರು ಕಿ ಮೀ ಸೈಕಲ್ ತುಳಿದು, ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಬಂದಿದ್ದಾರೆ. ಕಾರಣ ಕೇಳಿದರೆ, ವಿಚಿತ್ರವಾದ ಉತ್ತರವನ್ನು ನೀಡಿದ್ದಾರೆ. ಹೌದು. ಇದು ನನ್ನ ಒಂದು ರೀತಿಯ ಹರಕೆ ಎಂದು ತಿಳಿಸಿದ್ದಾರೆ.

ಪ್ರಧಾನಿಯನ್ನು ಭೇಟಿ ಮಾಡಲು ಸಾವಿರಾರು ಕಿ ಮೀ ಸೈಕಲ್ ತುಳಿದ ವ್ಯಕ್ತಿ

ಇವರ ಹೆಸರು ಕೀಮ್ ಚಂದ್ ಬಾಯ್. ಇವರು ಮೂಲತಃ ಗುಜರಾತ್ ನ್ ಅಮರೇಲಿಯವರು. ಇವರಿಗೆ ಪ್ರಧಾನಿ ನರೇಂದ್ರ ಮೋದಿ ಅಂದ್ರೆ ಬಹಳ ಇಷ್ಟ. ಹಾಗಾಗಿ ಇವರನ್ನ ಒಂದು ಸರಿ ಭೇಟಿ ಮಾಡಬೇಕು ಅನ್ನೋದು ಇವರ ಕನಸಾಗಿತ್ತಂತೆ. ಆದ್ರೆ ಈಗ ಇವರು, ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಹೌದು. ಇವರು ದೆಹಲಿಯಲ್ಲಿರುವ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಗುಜರಾತ್ ನಿಂದ ಸೈಕಲ್ ನಲ್ಲಿ ಹೋಗಿದ್ದಾರೆ. ಹೌದು. 17 ದಿನ, 1000 ಕಿ ಮೀ ಸೈಕಲ್ ತುಳಿದು, ದೆಹಲಿಗೆ ಹೋಗಿ ಮೋದಿಯನ್ನು ಭೇಟಿಯಾಗಿದ್ದಾರೆ. ಇನ್ನೂ ಇವರು ಸೈಕಲ್ ನಲ್ಲಿ ಹೋಗುವುದಕ್ಕೆ ಕಾರಣವನ್ನು ತಿಳಿಸಿದ್ದಾರೆ. ಹೌದು. ಮೋದಿಯವರು ಗೆದ್ದರೆ, ಸೈಕಲ್ ನಲ್ಲಿ ದೆಹಲಿಗೆ ಪ್ರಯಾಣ ಬೆಳೆಸುವುದಾಗಿ, ಹರಕೆ ರೀತಿಯಲ್ಲಿ ಒಂದು ಬೇಡಿಕೆಯನ್ನು ಅವರು ಮಾಡಿಕೊಂಡಿದ್ದರಂತೆ. ಹಾಗಾಗಿ ಮೋದಿಯವರು ಗೆದ್ದ ಕಾರಣದಿಂದ, ಸೈಕಲ್ ನಲ್ಲಿ ದೆಹಲಿಗೆ ಹೋಗಿದ್ದಾರೆ.

300ಕ್ಕಿಂತ ಹೆಚ್ಚು ಸ್ಥಾನ ಗಳಿಸಿದರೆ ಸೈಕಲ್ ತುಳಿಯುತ್ತೇನೆ

ಇನ್ನೂ ಮೋದಿಯ ಅಪ್ಪಟ ಅಭಿಮಾನಿಯಾಗಿರುವ ಕೀಮ್ ಚಂದ್ ಬಾಯ್ ಅವರು ಲೋಕಸಭಾ ಚುನಾವಣೆಯಲ್ಲಿ ಮೋದಿಯ ಪರ ಸಾಕಷ್ಟು ಪ್ರಚಾರ ಮಾಡಿದ್ದರಂತೆ. ಹೌದು. ಮೋದಿಯವರ ಫೋಟೋಗಳನ್ನು ಎಲ್ಲ ಕಡೆ ಅಂಟಿಸುವುದು. ಹಾಗೆ, ಅವರನ್ನ ಗೆಲಿಲಿಸಿ ಎಂದು ಎಲ್ಲ ಕಡೆ ಹೇಳುವುದು ಮಾಡುತ್ತಿದ್ದರಂತೆ. ಅದರ ಜೊತೆಗೆ ಮೋದಿಯವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 300ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದರೆ, ನಾನು ಸೈಕಲ್ ನಲ್ಲಿ ದೆಹಲಿಗೆ ತೆರಳುವುದಾಗಿ ಅವರು ಪ್ರತಿಜ್ಞೆ ಮಾಡಿದ್ದರಂತೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದಿದ್ದಕ್ಕಾಗಿ, ಅವರು ಗುಜರಾತ್ ನಿಂದ, ಸೈಕಲ್ ನಲ್ಲಿ ದೆಹಲಿಗೆ ತೆರಳಿದ್ದಾರೆ. ಜೊತೆಗೆ ಇವರು ಗುಜರಾತ್ ನಿಂದ ದೆಹಲಿಗೆ ಹೋಗುವಾಗಲೂ, ಮೋದಿಯ ಜಪ ಮಾಡುತ್ತಲೇ ಹೋಗಿದ್ದಾರೆ. ಹೌದು. ಸಿಕ್ಕ ಸಿಕ್ಕ ಊರುಗಳಲೆಲ್ಲಾ ಮೋದಿಯ ಮಹತ್ವ ತಿಳಿಸುತ್ತ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

ಕೀಮ್ ಚಂದ್ ಬಾಯ್ ಗೆ ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ

ಕೀಮ್ ಚಂದ್ ಬಾಯ್ ಮೋದಿಯನ್ನು ನೋಡಲೇ ಬೇಕು ಎಂದು ದೆಹಲಿಗೆ ಹೋದವರು, ಬಹಳಷ್ಟು ಕಷ್ಟಪಟ್ಟು ಮೋದಿಯನ್ನು ಭೇಟಿಯಾಗಿದ್ದಾರೆ. ಭೇಟಿಯಾದವರು ತಮಗೆ, ಮೋದಿಯ ಮೇಲೆ ಇರುವ ಅಭಿಮಾನವನ್ನು ಅವರು ತಿಳಿಸಿದ್ದಾರೆ. ಜೊತೆಗೆ ಈ ರೀತಿ ನೀವು ಚುನಾವಣೆಯಲ್ಲಿ ಗೆದ್ದರೆ, ನಾನು ಸೈಕಲ್ ನಲ್ಲಿ ಬರುವುದಾಗಿ ಪ್ರತಿಜ್ಞೆ ಮಾಡಿದ್ದೆ ಎಂದು ತಿಳಿಸಿದ್ದಾರೆ. ಅವರ ಮಾತನ್ನು ಕೇಳಿದ ಮೋದಿ, ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೋದಿಗೆ ಅವರಿಗಿದ್ದ ಅಭಿಮಾನಕ್ಕೆ ಅವರು ಕರಗಿ ಹೋಗಿದ್ದಾರೆ. ಹಾಗಾಗಿ ಮೋದಿಯವರು ಅವರ ಮಾತನ್ನು ಕೇಳಿ ಸಂತಸ ವ್ಯಕ್ತಪಡಿಸಿದ್ದು, ಕೀಮ್ ಚಂದ್ ಬಾಯ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಇದರಿಂದ ಕೀಮ್ ಚಂದ್ ಬಾಯ್ ಅವರು ಬಹಳಷ್ಟು ಸಂತೋಷಗೊಂಡಿದ್ದಾರೆ. ಯಾಕಂದ್ರೆ ಅಂದುಕೊಂಡಂತೆ ಮೋದಿಯವರನ್ನು ಭೇಟಿ ಮಾಡಿದೆ ಎಂದು, ಅಲ್ಲಿಂದ ಹೊಂದಿರುಗಿದ್ದಾರೆ.

ನಿಜಕ್ಕೂ ಕೆಲವರ ಅಭಿಮಾನವನ್ನ ಸಾಮಾನ್ಯವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಯಾಕಂದ್ರೆ ಈ ರೀತಿಯ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ನೋಡುವವರಿಗೆ ಇದೆಲ್ಲಾ ಹುಚ್ಚುತನ ಎನಿಸಿದರೂ, ಅವರಿಗಿರುವ ಅಭಿಮಾನ ಎಲ್ಲದ್ದಕ್ಕೂ ಮೀರಿದ್ದಾಗಿರುತ್ತದೆ.

LEAVE A REPLY

Please enter your comment!
Please enter your name here