ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಹೋರಾಟ. ಕಾರಣ?

0
931
mantralaya temple

ನಮ್ಮ ಹಿಂದೂಗಳು ನಿಜಕ್ಕೂ ಮಹಾನ್ ದೈವ ಭಕ್ತರು. ಹಾಗಾಗಿ ಕನ್ನಡ ನಾಡಿನಲ್ಲಿ ಗಲ್ಲಿಗೆ ಒಂದರಂತೆ ದೇಗುಲಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೂ ನಮ್ಮ ಜನರು ಕರ್ನಾಟಕದಲ್ಲಿರುವ ದೇಗುಲಗಳಿಗೆ ಭೇಟಿ ನೀಡುವುದರ ಜೊತೆಗೆ ಹೊರ ರಾಜ್ಯದಲ್ಲಿರುವ ದೇಗುಲಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಅವುಗಳಲ್ಲಿ ಮುಖ್ಯವಾದ ದೇವಾಲಯಗಳೆಂದರೆ ತಿರುಪತಿ, ಮಂತ್ರಾಲಯ ಹಾಗು ಶಿರಡಿ ಆಗಿದೆ. ಈ ದೇವಾಲಯಗಳಿಗೆ ಇತರರಿಗಿಂತ ಕನ್ನಡಿಗರು ಭೇಟಿ ನೀಡುವುದು ಹೆಚ್ಚು. ಹಾಗಾಗಿ ಈಗ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಹೌದು. ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಬೇಕಂದು ತೆಲುಗು ದೇಶಂ ಪಕ್ಷದವರು ಹೋರಾಟ ಪ್ರಾರಂಭ ಮಾಡಿದ್ದಾರೆ.

ಆಂಧ್ರ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದ ಜನತೆ

ಆಂಧ್ರಪ್ರದೇಶದ ಹಾಲಿ ಮುಖ್ಯಮಂತ್ರಿಯಾದ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ತಮ್ಮ ರಾಜ್ಯಕ್ಕೆ 6 ರಾಜಧಾನಿಗಳನ್ನು ಘೋಷಿಸಲು ಮುಂದಾಗಿದ್ದಾರೆ. ಹೌದು. ಆಂಧ್ರಪ್ರದೇಶ ರಾಜ್ಯಕ್ಕೆ 3 ರಾಜಧಾನಿಗಳನ್ನು ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಇದು ಅಲ್ಲಿನ ಜನತೆಗೆ ಇಷ್ಟವಾಗುತ್ತಿಲ್ಲ. ಹಾಗಾಗಿ ಅವರು ಮುಖ್ಯಮಂತ್ರಿ ಅವರ ನಿರ್ಧಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಹೌದು. ಜಗನ್ ಮೋಹನ್ ರೆಡ್ಡಿ ಅವರ ಈ ನಿರ್ಧಾರಕ್ಕೆ ನಮ್ಮ ಸಮ್ಮತಿ ಇಲ್ಲ. ಹಾಗಾಗಿ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ತೆಲುಗು ದೇಶಂ ಪಕ್ಷದವರು ಪ್ರತಿಭಟನೆ ಪ್ರಾರಂಭ ಮಾಡಿದ್ದಾರೆ.

ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ

ಇನ್ನು ಆಂದ್ರಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಿರುವ ಜನರು, ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಹೌದು. ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಹೊರಟಿದ್ದಾರೆ. ಇದು ಅಲ್ಲಿನ ಜನರಿಗೆ ಇಷ್ಟವಿಲ್ಲವಂತೆ. ಜೊತೆಗೆ ಈ ಬಗ್ಗೆ ಮಂತ್ರಾಲಯದ ಉಸ್ತುವಾರಿ ಸಚಿವ ಪಿ. ತಿಕ್ಕಾರೆಡ್ಡಿ ಅವರು ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ. ಹೌದು. ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ. ಯಾಕಂದ್ರೆ ಮಂತ್ರಾಲಯಕ್ಕೆ ಶೇ90% ರಷ್ಟು ಜನ ಕನ್ನಡಿಗರೇ ಬರುತ್ತಾರೆ. ಅಲ್ಲದೆ ಮಂತ್ರಾಲಯದಲ್ಲೂ ಸಹ ಕೆಲವು ಕನ್ನಡ ಆಚರಣೆಗಳಿವೆ. ಹೀಗಿರುವಾಗ ಮಂತ್ರಾಲಯವನ್ನು ಯಾವುದೊ ಕಾಣದ ಊರಿಗೆ ಸೇರಿಸುವ ಬದಲು, ಕರ್ನಾಟಕಕ್ಕೆ ಸೇರಿಸಿ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಆಂಧ್ರಪ್ರದೇಶದ ಜನರು ತಮ್ಮ ರಾಜ್ಯವನ್ನೇ ಬಿಡಲು ಸಿದ್ಧವಾಗಿದ್ದಾರೆ. ಹೌದು. ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಕೆಲವು ಪಕ್ಷಗಳು ಹೋರಾಟ ನಡೆಸುತ್ತಿವೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಇವರ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here