ರಂಗಭೂಮಿ ಕಲಾವಿದನ ಆರಂಭಿಕವಾದ ಆ ದಿನಗಳು ಹೇಗಿದ್ದವು

0
735

ಸಿನಿಮಾ ಬರುವ ಮುನ್ನ ಮೊದಲು ನಾಟಕಗಳು ನಡೆಯುತ್ತಿದ್ದವು. ರಂಗಭೂಮಿಯಲ್ಲಿ ನಟಿಸಿರುವ ಕಲಾವಿದರೆ ಇಂದು ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾದ ನೆಲೆಯನ್ನು ಕಂಡು ಕೊಂಡಿದ್ದಾರೆ. ಸಿನಿಮಾದಲ್ಲಿ ನೀವು ಎಷ್ಟು ಟೇಕ್ ಆದರು ತೆಗೆದುಕೊಳ್ಳಬಹುದು, ಆದರೆ ನಾಟಕದಲ್ಲಿ ಹಾಗಿಲ್ಲ. ಜನರ ಮುಂದೆಯೆ ನಿಮ್ಮ ಅಭಿನಯದ ಚಾತುರ್ಯತೆಯನ್ನು ಪ್ರದರ್ಶಿಸಬೇಕಾಗಿತ್ತು. ಕಲಾವಿದರು ಯಾವುದೆ ಒಂದು ಸಂಕಷ್ಟದಲ್ಲಿದ್ದರು, ನಾಟಕದ ಶೋ ನಡೆಯಲೆಬೇಕಾದ ಒಂದು ಅನಿವಾರ್ಯತೆ ಇತ್ತು. ದಿ ಶೋ ಮಸ್ಟ್ ಗೊ ಆನ್ ಎನ್ನುವುದು ರಂಗಭೂಮಿಯ ಮೊದಲ ಪಾಠವಾಗಿದೆ. ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸಿರುವ ರಂಗಭೂಮಿಯ ಕಲಾವಿದ ಎಂದರೆ ಅದು ಮಂಡ್ಯ ರಮೇಶ್. ರಂಗಭೂಮಿಯೆ ನನ್ನ ಸರ್ವಸ್ವ ಎಂದು ನಂಬಿ ತಮ್ಮ ಜೀವನವನ್ನು ನಡೆಸುತ್ತಿದ್ದರು ಅದಕ್ಕೆ ಇಲ್ಲಿ ನಡೆದಿರುವ ಒಂದು ಘಟನೆಯೆ ಸಾಕ್ಷಿಯಾಗಿದೆ.

ನಮ್ಮಿಬ್ಬರಿಗು ಸರಿಯಾದ ಸಂಬಳ ಬರುತ್ತಿರಲಿಲ್ಲ

ಮಂಡ್ಯ ರಮೇಶ್ ಮತ್ತು ಅವರ ಧರ್ಮ ಪತ್ನಿ ಸರೋಜ ಹೆಗ್ಡೆ ಇಬ್ಬರು ರಂಗಭೂಮಿಯನ್ನೆ ನಂಬಿದ್ದರು. ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಹಗಲು ರಾತ್ರಿ ಕಷ್ಟ ಪಟ್ಟು ದುಡಿಯುತ್ತಿದ್ದರು. ರಂಗಭೂಮಿಯಿಂದ ಬಂದ ಹಣದಿಂದ ತಮ್ಮ ಜೀವನವನ್ನು ನಡೆಸುತ್ತಿದ್ದರು. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಂಡ್ಯ ರಮೇಶ್ ತಮ್ಮ ರಂಗಭೂಮಿಯ ದಿನಗಳ ಕ್ಷಣದ ಬಗ್ಗೆ ಮಾತನಾಡಿದ್ದಾರೆ. ನಾನು ಮತ್ತು ನನ್ನ ಹೆಂಡತಿ ನಾಟಕದ ಕಲಾ ಮಂದಿರದಲ್ಲಿಯೆ ಇದ್ದೆವು, ಆದರೆ ಕಲಾ ಮಂದಿರ ಬಹಳ ಸಮಸ್ಯೆಗಳನ್ನು ಎದುರುಸುತ್ತಿತ್ತು. ನಮ್ಮಿಬ್ಬರಿಗು ಸರಿಯಾದ ಸಂಬಳ ಬರುತ್ತಿರಲಿಲ್ಲ. ಆರು ತಿಂಗಳು ನಾವು ಸಂಬಳವಿಲ್ಲದೆ ಪರದಾಡಿದ್ದೆವು. ಮದುವೆ ಆದ ಮೇಲೆಯು ಮನೆಯವರ ಹತ್ತಿರ ಹಣ್ಣ ಕೇಳುವುದಕ್ಕೆ ನಮಗೆ ಮುಜುಗರ ಆಗುತಿತ್ತು, ಸ್ವಾಭಿಮಾನ ಅಡ್ಡ ಬರುತಿತ್ತು ಎಂದು ಹೇಳಿದ್ದಾರೆ.

ಗ್ರೀನ್ ರೂಮ್ ನಲ್ಲಿ ಮಗುವನ್ನು ಮಲಗಿಸಿ ನಾಟಕದಲ್ಲಿ ನಟಿಸಿದ್ದೆವು

ಕಾರಂತರ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆವು. ನಾನು ನನ್ನ ಹೆಂಡತಿ ಬಹಳ ಕಷ್ಟದ ಪರಿಸ್ಥಿತಿಯಲ್ಲಿದ್ದೆವು, ಇದೆ ಸಮಯದಲ್ಲಿ ನಮಗೆ ಮಗಳು ಹುಟ್ಟಿದಳು. ನಾನು ಒಂದು ನಾಟಕದಲ್ಲಿ ನಟಿಸಬೇಕಿತ್ತು ಆದ್ದರಿಂದ ಜರ್ಮನಿಗೆ ಹೋಗಲೆ ಬೇಕಾದ ಸಂದರ್ಭ ಎದುರಾಗಿತ್ತು. ಆದರೆ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಬೇಕಿದ್ದ ನಟಿ ಬಂದೆ ಇರಲಿಲ್ಲ. ನಾಟಕದ ಪ್ರದರ್ಶನ ಯಾವುದೆ ಕಾರಣಕ್ಕು ನಿಲ್ಲಬಾರದೆಂದು ನನ್ನ ಹೆಂಡತಿಯು ಸಹ ನನ್ನ ಜೊತೆ ಬಂದಳು. ಮಗು ಹುಟ್ಟಿ ಕೇವಲ 6 ತಿಂಗಳು ಮಾತ್ರ ಆಗಿತ್ತು. ಜರ್ಮನಿಯ ಒಂದು ರಂಗ ಮಂದಿರದಲ್ಲಿ ನಾಟಕದ ಪ್ರದರ್ಶನ ಇತ್ತು. ಮಗುವನ್ನು ಸಹ ಕರೆದುಕೊಂಡು ಬಂದಿದ್ದೆವು. ಯಾವಾಗಲು ಮಗು ಅಳುತಿತ್ತು. ಗ್ರೀನ್ ರೂಮ್ ನಲ್ಲಿ ಮಗುವನ್ನು ಮಲಗಿಸಿ ನಾಟಕದಲ್ಲಿ ನಟಿಸಿದ್ದೆವು. ನಾನು ವೇದಿಕೆ ಮೇಲೆ ಇದ್ದಾಗ ನನ್ನ ಹೆಂಡತಿ ಮಗು ಹತ್ತಿರ ಇರುತ್ತಿದ್ದಳು, ಅವಳು ವೇದಿಕೆ ಮೇಲಿದ್ದಾಗ ನಾನು ಮಗುವನ್ನು ಸಂತೈಸುತ್ತಿದ್ದೆನು.

ಈ ಘಟನೆ ಯಾವಾಗಲು ಕಾಡುತ್ತಿರುತ್ತದೆ

ನಾವಿಬ್ಬರು ನಾಟಕದಲ್ಲಿ ನಿರತರಾಗಿದ್ದಾಗ ಮಗು ಜೋರಾಗಿ ಅಳುತಿತ್ತು. ನನ್ನ ಹೆಂಡತಿ ಬಾಣಂತಿ ಆಗಿದ್ದರು ಸಾಹಸಮಯವಾದ ದೃಶ್ಯಗಳಲ್ಲಿ ಅಭಿನಯಿಸುತ್ತಿದ್ದಳು. ನಾಟಕದ ಮಧ್ಯೆ ಇಂಟರ್ವಲ್ ಬಿಟ್ಟಾಗ ನನ್ನ ಹೆಂಡತಿ ಓಡಿ ಬಂದು ಮಗುವನ್ನು ತಪ್ಪಿಕೊಂಡು ಸಮಾಧಾನ ಮಾಡಿದಳು ಎಂದು ಮಂಡ್ಯ ರಮೇಶ್ ತಿಳಿಸಿದ್ದಾರೆ. ನನ್ನ ಹೆಂಡತಿಗೆ ಒಂಬತ್ತು ತಿಂಗಳು ತುಂಬಿದ್ದಾಗ, ಮಿಡ್ ಸಮ್ಮರಿ ನೈಟ್ ಡ್ರೀಮ್ಸ್ ಎನ್ನುವ ನಾಟಕದ ತಯಾರಿಯಲ್ಲಿದ್ದೆವು. ಆಗ ನಾನು ಕಾರಂತರ ಬಳಿ ಹೋಗಿ, ಸರ್ ವೈದ್ಯರು ನನ್ನ ಹೆಂಡತಿಗೆ ಡೇಟ್ ಕೊಟ್ಟಿದ್ದಾರೆ ಕೂಡಲೆ ಹೋಗಬೇಕೆಂದೆ. ಇಲ್ಲಿ ಶೋ ಮುಗಿದ ನಂತರ ಹೋಗಿ.

ಆಕೆ ಇದೆ ರೀತಿ ಇಲ್ಲಿ ನೋವನ್ನು ಅನುಭವಿಸುತ್ತಿದ್ದರೆ ವ್ಯಾಯಾಮ ಆಗುತ್ತದೆ ಡೆಲಿವರಿ ಸಹ ಸಲೀಸಾಗಿ ಆಗುತ್ತದೆ ಎಂದು ಹೇಳಿದ್ದರು. ನಾವು ನಾಟಕ ಮುಗಿಸಿದ ಮೇಲೆ ಆಸ್ಪತ್ರೆಗೆ ಹೋದೆವು. ಇದೆ ರೀತಿಯ ಹತ್ತು ಹಲವಾರು ತೊಂದರೆಗಳನ್ನು ರಂಗಭೂಮಿ ಕಲಾವಿದರು ಅನುಭಾವಿಸುತ್ತಿದ್ದಾರೆ. ನನಗೆ ಈ ಘಟನೆ ಯಾವಾಗಲು ಕಾಡುತ್ತಿರುತ್ತದೆ ಎಂದು ಆ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here