ಮಂಡ್ಯದಲ್ಲಿ ಸುಮಲತಾ ಅವರನ್ನು ಕಡೆಗಣಿಸಿದ್ರಾ

0
581

ಈ ಬಾರಿ ಲೋಕಸಭಾ ಚುನಾವಣೆ ಆದಮೇಲೆ, ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿ, ಅವರವರ ಕಾರ್ಯಕಲಾಪಗಳಲ್ಲಿ ಮುಳುಗಿದ್ದಾರೆ. ಇತ್ತ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ಕೂಡ, ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೌದು. ಭಾರಿ ಸದ್ದು ಮಾಡಿದ್ದ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರಿ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದು ಎಲ್ಲರಿಗೂ ಗೊತ್ತಿದೆ. ಅದಾದ ಮೇಲೆ, ಅವರು ಪ್ರಮಾಣ ವಚನ ಸ್ವೀಕರಿಸುವುದು ಮುಖ್ಯವಾಗಿತ್ತು. ಆದ್ರೆ ಈಗ ಪ್ರಮಾಣ ವಚನ ಕೂಡ, ಸ್ವೀಕರಿಸಿದ್ದಾಯ್ತು. ಆದ್ರೆ ಈಗ ಪ್ರಮಾಣ ವಚನ ಸ್ವೀಕರಿಸಿದ ಸುಮಲತಾ ಅವರು, ರೈತರ ಕಷ್ಟವನ್ನು ಪರಿಹರಿಸಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿದ್ದರು.

ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು

ಮಂಡ್ಯದ ಸಂಸದೆಯಾದ ಸುಮಲತಾ ಅವರು, ಅಲ್ಲಿನ ರೈತರಿಗೆ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಕೇಂದ್ರ ಸರ್ಕಾರದ ಮೊರೆ ಹೋಗಿದ್ದರು. ರಾಜ್ಯದಲ್ಲಿ ಬರ ಹೆಚ್ಚಾಗಿರುವದರಿಂದ ರೈತರು ಕೃಷಿಯ ವಿಚಾರದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳು ಈಗ ಬೆಳೆದು ನಿಂತಿದೆ, ಆದರೆ ಬೆಳೆಗಳಿಗೆ ಸರಿಯಾಗಿ ನೀರು ಇಲ್ಲದಿರುವ ಕಾರಣದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕೃಷ್ಣರಾಜನಗರ ಜಲಾಶಯದ ಮೂಲಕ ನೀರನ್ನು ಹರಿಸಿ ರೈತರು ಬೆಳೆದ ಬೆಳೆಗೆ ನೆರವಾಗಬೇಕೆಂದು, ಸಂಸದೆ ಸುಮಲತಾ ಕೇಂದ್ರ ಜಲಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.

 ಸಂಸದೆಯಾದ ಸುಮಲತಾ ಅಂಬರೀಷ್ ಅವರ ಹೆಸರೇ ಮುದ್ರಣವಾಗಿಲ್ಲ

ಮಂಡ್ಯದಲ್ಲಿ ನಡೆಯಲಿರುವ ಸಮಾರಂಭಕ್ಕೆ ಆಹ್ವಾನ ಪತ್ರವನ್ನು ಮಾಡಿಸಲಾಗಿದೆ. ಆದರೆ ಆಹ್ವಾನ ಪತ್ರದಲ್ಲಿ ಮಂಡ್ಯ ಕ್ಷೇತ್ರದ ನೂತನ ಸಂಸದೆಯಾದ ಸುಮಲತಾ ಅಂಬರೀಷ್ ಅವರ ಹೆಸರೇ ಮುದ್ರಣವಾಗಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಸುಮಲತಾ ಅವರ ಹೆಸರನ್ನೇ ಇಲ್ಲಿನ ತಾಲೂಕು ಆಡಳಿತ ಮಂಡಳಿ ಮರೆತು ಬಿಟ್ಟಿದ್ದಾರೆ. ಈಗ ಈ ವಿಷಯ ಎಲ್ಲಾ ಕಡೆ ಸಂಚಲನ ಸೃಷ್ಟಿಸುತ್ತಿದೆ ಮತ್ತು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದೆ. ಕೆಂಪೇಗೌಡ ಜಯಂತಿಯ ಸಲುವಾಗಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ ತಾಲೂಕು ಆಡಳಿತ ಮಂಡಳಿಯ ಕಾರ್ಯಕರ್ತರು ಮುದ್ರಿಸಿದ್ದರು. ಆದರೆ ಆಹ್ವಾನ ಪತ್ರಿಕೆಯಲ್ಲಿ ಸಂಸದೆಯವರ ಹೆಸರೇ ಕಣ್ಣಿಗೆ ಕಾಣುತ್ತಿಲ್ಲ. ತಾಲೂಕು ಆಡಳಿತ ಮಂಡಳಿ ಯವರು ಯಾಕೆ ಹೀಗೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಅನೇಕರಿಗೆ ಕಾಡುತ್ತಿದೆ.

ತಾಲೂಕು ಆಡಳಿತ ಮಂಡಳಿ ವಿರುದ್ಧ ಕೆಂಡಮಂಡಲವಾಗಿದ್ದಾರೆ

ಕೆಂಪೇಗೌಡ ಜಯಂತಿಯ ಸಮಾರಂಭದ ಕಾರ್ಯಕ್ರಮವನ್ನು ಕೆ ಆರ್ ಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡಿಸಲಾಗಿದೆ. ಸುಮಲತಾ ಅವರ ಹೆಸರು ಪತ್ರಿಕೆಯಲ್ಲಿ ಇಲ್ಲದಿರುವುದೇ ವಿಚಿತ್ರವಾಗಿದೆ ಮತ್ತು ಜನರ ಗೊಂದಲಕ್ಕೆ ಇದು ಕಾರಣವಾಗಿದೆ. ಸುಮಲತಾ ಅವರ ಹೆಸರು ಮರೆತ ಹಿನ್ನಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಹಾಗು ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ತಾಲೂಕು ಆಡಳಿತ ಮಂಡಳಿ ವಿರುದ್ಧ ಕೆಂಡಮಂಡಲವಾಗಿದ್ದಾರೆ. ಇದರ ಹಿಂದೆ ರಾಜಕೀಯದ ಕೈವಾಡ ಇದೆ ಆದ್ದರಿಂದ ಈ ರೀತಿ ಆಗಿದೆ ಎಂದು ಜನರು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಸಾಮಾನ್ಯ ಪ್ರಜ್ಞೆ ಆಡಳಿತ ಮಂಡಳಿಯರಿಗೆ ಇಲ್ಲವಾ?

ಅದೇನೇ ಕಾರಣವಿದ್ದರು ತಮ್ಮ ಕ್ಷೇತ್ರದ ಸಂಸದೆಯ ಹೆಸರನ್ನು ಹೇಗೆ ಲೀಲಜಾಲವಾಗಿ ಮರೆಯಲು ಸಾಧ್ಯವೆನ್ನುವ ಪ್ರಶ್ನೆ ಎದುರಾಗಿದೆ. ಸಮಾರಂಭದ ಆಮಂತ್ರಣ ಪತ್ರಿಕೆಯಲ್ಲಿ ಸಂಸದೆಯಾ ಹೆಸರು ಮುದ್ರಣ ಮಾಡಿಸಬೇಕೆಂಬ ಸಾಮಾನ್ಯ ಪ್ರಜ್ಞೆ ಆಡಳಿತ ಮಂಡಳಿಯವರಿಗೆ ಇಲ್ಲವಾ ಎಂದು ಜನರು ಬೇಸರ ಹೊರ ಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here