ವಿಜಯ್ ಮಲ್ಯನನ್ನು ಕ್ರಿಸ್ ಗೇಲ್ ಭೇಟಿ ಮಾಡಿದ್ದಾದ್ರೂ ಏಕೆ?

0
469
malya and gel

ವಿಜಯ್ ಮಲ್ಯ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರತಿಯೊಬ್ಬರಿಗೂ ವಿಜಯ್ ಮಲ್ಯ ಪರಿಚಯವಿದೆ. ಅದರಲ್ಲೂ ಭಾರತೀಯ ಬ್ಯಾಕ್ನ್ಕ್ ಗಳಿಗೆ ಸಿಕ್ಕಾಪಟ್ಟೆ ಚಿರಪರಿಚತರು. ಯಾಕಂದ್ರೆ ಒಂದೇ ಬಾರಿ ಭಾರತೀಯ ಬ್ಯಾಂಕ್ ಗಳಿಗೆಲ್ಲ ಉಂಡೆ ನಮ ಹಾಕಿರುವ ದೊಡ್ಡ ಬಿರುದನ್ನು ಅವರು ಪಡೆದಿದ್ದಾರೆ. ಹೌದು. ಭಾರತೀಯ ಬ್ಯಾಂಕ್ ಗಳಲ್ಲಿ ಸಾವಿರಾರು ಕೋಟಿ ಸಲ ಪಡೆದು, ಅದನ್ನು ತೀರಿಸಲಾಗದೆ, ವಿಜಯ್ ಮಲ್ಯ ದೇಶ ಬಿಟ್ಟು, ಪರಾರಿಯಾಗಿರುವ ವಿಷಯ ಎಲ್ಲರಿಗೂ ತಿಳಿದಿದೆ. ಆದ್ರೆ ಈಗ ಇದು ಹಳೆಯ ಸುದ್ದಿ. ಆದ್ರೆ ಅವರ ಜೊತೆ, ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್ ಫೋಟೋ ತೆಗೆಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ನ್ಯೂಸ್ ಮಾಡ್ತಿದೆ. ಹೌದು. ವಿಜಯ್ ಮಲ್ಯ ಹಾಗು ಕ್ರಿಸ್ ಗೇಲ್ ಇಬ್ಬರು ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಮಲ್ಯ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡ ಕ್ರಿಸ್ ಗೇಲ್

ಸಾವಿರಾರು ಕೋಟಿ ಸಾಲ ಮಾಡಿ, ಅದನ್ನು ತೀರಿಸಲಾಗದೆ ಲಂಡನ್ ಗೆ ವಿಜಯ್ ಮಲ್ಯ ಪರಾರಿಯಾಗಿದ್ದಾರೆ. ಅವರು ಭಾರತಕ್ಕೆ ಹಿಂದಿರುಗುವಂತೆ ಭಾರತ ಸರ್ಕಾರ ಬಹಳಷ್ಟು ಪ್ರಯತ್ನ ಮಾಡುತ್ತಿದೆ. ಆದ್ರೆ ಅದೆಲ್ಲ ವಿಫಲವಾಗುತ್ತಿದೆ. ಆದ್ರೆ ಈಗ ಅದೇ ಮಲ್ಯ ಜೊತೆ ಕ್ರಿಸ್ ಗೇಲ್ ಫೋಟೋ ತೆಗೆಸಿಕೊಂಡಿದ್ದಾರೆ. ಹೌದು. ಕ್ರಿಕೆಟ್ ನಲ್ಲಿ ಬ್ಯಾಟಿಂಗ್ ದಿಗ್ಗಜ ಎಂದೇ ಕ್ರಿಸ್ ಗೇಲ್ ಹೆಸರು ಪಡೆದಿದ್ದಾರೆ. ಆದ್ರೆ ಇವರು ಮಲ್ಯ ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಸಿಕೊಂಡಿರುವುದು ಎಲ್ಲರಿಗೂ ಆಶ್ಚರ್ಯವಾಗಿದೆ. ಯಾಕಂದ್ರೆ ದೇಶ ಬಿಟ್ಟು, ಓಡಿ ಹೋಗಿರುವವನ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ಎಲ್ಲರೂ ಸಾಮಾನ್ಯ ಜನರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿದ ಮಲ್ಯ ಹಾಗು ಗೇಲ್

ಇನ್ನು ಮಲ್ಯ ಹಾಗು ಗೇಲ್ ಕ್ಲಿಕ್ಕಿಸಿಕೊಂಡ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಆ ಫೋಟೋ ನೋಡಿದ ಕೂಡಲೇ, ಒಬ್ಬೊಬ್ಬರು ಒಂದೊಂದು ರೀತಿಯ ಕಮೆಂಟ್ಸ್ ಮಾಡುತ್ತಿದ್ದಾರೆ. ಹೌದು. ಗೇಲ್ ಹಾಗು ಮಲ್ಯ ಫೋಟೋ ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕಾಮೆಂಟ್ ಬರುತ್ತಿದೆ. ಕೆಲವರು ಗೇಲ್ ಪ್ರಶ್ನೆಯನ್ನು ಇಟ್ಟಿದ್ದಾರೆ. ಹೌದು. ನಿಮಗೆ ಬೇರೆ ಸಿಗಲಿಲ್ವಾ ಫೋಟೋ ತೆಗೆಸಿಕೊಳ್ಳುವುದಕ್ಕೆ. ಇಂತ ಚೋರ್ ಜೊತೆ ಫೋಟೋ ತೆಗೆಸಿಕೊಂಡಿದ್ದೀರಾ ಎಂದು ಪ್ರಶ್ನೆ ಇಟ್ಟಿದ್ದಾರೆ. ಇನ್ನು ಮಲ್ಯಗೆ ನೀನೊಬ್ಬ ದೊಡ್ಡ ಚೋರ್ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ಗಳಿಗೆ ಮಲ್ಯ ಜನರ ವಿರುದ್ಧ ಕಿಡಿಕಾರಿದ್ದಾರೆ.

ಕಮೆಂಟ್ ಮಾಡಿದವರ ವಿರುದ್ಧ ಕಿಡಿಕಾರಿದ ಮಲ್ಯ

ಇವರಿಬ್ಬರ ಫೋಟೋ ನೋಡುತ್ತಿದ್ದಂತೆ ಜನರು ಚೋರ್ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್ ನೋಡಿದ ಕೂಡಲೇ, ಮಲ್ಯ ಜನರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೌದು. ತಮ್ಮ ಕಮೆಂಟ್ ಮೂಲಕವೇ ಜನರಿಗೆ ಉತ್ತರವನ್ನು ನೀಡುತ್ತಿದ್ದಾರೆ. ನಾನು ಕಳೆದ ವರ್ಷವೇ ಸಾಲವನ್ನು ಹಿಂದಿರುಗಿಸುವುದಾಗಿ, ನಿಮ್ಮ ಭಾರತೀಯ ಬ್ಯಾಂಕ್ ಗಳಿಗೆ ತಿಳಿಸಿದ್ದೇನೆ. ಆದರೆ ಅವರು ಒಪ್ಪಿಕೊಳ್ಳುತ್ತಿಲ್ಲ. ಅದು ನನ್ನ ತಪ್ಪಲ್ಲ. ಮೊದಲು ನಿಮ್ಮ ಭಾರತೀಯ ಬ್ಯಾಂಕ್ ಗಳಿಗೆ ಅದನ್ನು ಹೇಳಿ. ಅವರಿಂದ ಮೊದಲು ಸತ್ಯ ಏನೆಂಬುದನ್ನು ತಿಳಿದುಕೊಳ್ಳಿ. ನಂತರ ಚೋರ್ ಯಾರೆಂದು ಹೇಳಿ ಎಂದು ಕಿಡಿಕಾರಿದ್ದಾರೆ.

ಮಲ್ಯ ಏನೋ ಒಂದು ಫೋಟೋ ಅಪ್ಲೋಡ್ ಮಾಡಿದ್ದಾರೆ. ಆದ್ರೆ ಆ ಫೋಟೋಗೆ ಸಂಬಂಧಪಟ್ಟ ಕಮೆಂಟ್ ಬರುವುದಕ್ಕಿಂತ ಹೆಚ್ಚಾಗಿ, ಅವರ ವೈಯಕ್ತಿಕ ವಿಷಯವಾಗಿ ಹೆಚ್ಚಿನ ಕಾಮೆಂಟ್ಸ್ ಬಂದಿದೆ. ಇದರಿಂದ ಮಲ್ಯ ನಾನು ಸರಿ ಇದ್ದೇನೆ, ಮೊದಲು ನಿಮ್ಮ ಬ್ಯಾಂಕ್ ಗಳ ತಪ್ಪನ್ನು ಏನೆಂದು ತಿಳಿದುಕೊಳ್ಳಿ ಎಂದು ಜನರಿಗೆ ತಮ್ಮ ಖಾರವಾದ ಮಾತಿನಿಂದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here