ಸೋಲಿಲ್ಲದ ಸರದಾರನಿಗೂ, ಸೋಲಿನ ರುಚಿ ತೋರಿಸಿದ ಮೋದಿ ಪಡೆ

0
994

ಸೋಲು, ಗೆಲುವು ಅನ್ನೋದು ಯಾರನ್ನ ಯಾವ ಸ್ಥಿತಿಗೆ ಬೇಕಾದರೂ ತಂದು ನಿಲ್ಲಿಸುತ್ತೆ. ನನಗೆ ಸೋಲೇ ಇಲ್ಲ. ನಾನು ಇದುವರೆಗೂ ಸೋಲನ್ನ ಅನುಭವಿಸೇ ಇಲ್ಲ ಅನ್ನೋರು ಸಹ ಒಂದಲ್ಲಾ ಒಂದು ದಿನ ಸೋಲು ಕಾಣುತ್ತಾರೆ ಅನ್ನೋದು ಅಕ್ಷರಶಃ ನಿಜ. ಅದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಭೀತಾಗಿದೆ. ಹೌದು. ಈ ಬಾರಿಯ ಚುನಾವಣೆ ಫಲಿತಾಂಶ ಎಲ್ಲರಲ್ಲೂ ತೀವ್ರ ಕುತೂಹಲ ಹಾಗೂ ಗೊಂದಲ ಎರಡನ್ನೂ ಉಂಟು ಮಾಡಿದೆ. ಯಾಕಂದ್ರೆ, ಘಟಾನುಘಟಿಗಳೇ ಈ ಬಾರಿ ಚುನಾವಣೆಯಲ್ಲಿ ಸೋಲಿನ ರುಚಿ ನೋಡಿದ್ದಾರೆ.

ಹೌದು. ಈ ಬಾರಿ ಚುನಾವಣೆಯಲ್ಲಿ, ದೊಡ್ಡ ದೊಡ್ಡ ಘಟಾನುಘಟಿ ಅಭ್ಯರ್ಥಿಗಳೇ ಸ್ಪರ್ಧಿಸಿದ್ದರು. ಆದರೆ ಎಲ್ಲಾ ಅಭ್ಯರ್ಥಿಗಳು ವಿಜಯ ಮಾಲೆ ಪಡೆದುಕೊಳ್ಳುವ ವಿಷಯದಲ್ಲಿ ಹಿಂದುಳಿದಿದ್ದಾರೆ. ಹೌದು. ಸೋಲನ್ನೇ ಕಾಣದ ಅಭ್ಯರ್ಥಿಗಳು, ಸಹ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ನೋಡಿದ್ದಾರೆ. ಅದ್ರಲ್ಲಿ ಮುಖ್ಯವಾದವರು ಅಂದ್ರೆ, ಮಲ್ಲಿಕಾರ್ಜುನ್ ಖರ್ಗೆ. ಯಾಕಂದ್ರೆ ಸೋಲಿಲ್ಲದ ಸರದಾರ ಅನ್ನೋ ಖ್ಯಾತಿಗೆ ಇವರು ಹೆಸರಾಗಿದ್ದರು. ಆದ್ರೆ ಈಗ ಸೋಲಿನ ರುಚಿಯನ್ನ ಅನುಭವಿಸುವಂತಾಗಿದೆ.

ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ್ ಖರ್ಗೆ

ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಸೋಲನ್ನೇ ಕಾಣದ ವ್ಯಕ್ತಿ ಅಂದ್ರೆ, ಅದು ಮಲ್ಲಿಕಾರ್ಜುನ್ ಖರ್ಗೆ ಅವರು. ಯಾಕಂದ್ರೆ ಅವರ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಸೋಲು, ಅನ್ನೋದನ್ನೇ ಅವರು ನೋಡಿರಲಿಲ್ಲ. ಆದರೆ ಈ ಬಾರಿಯ ಲೋಕಸಭಾ ಚುನಾವಣೆ ಅವರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಹೌದು. ಸುಮಾರು 1972ರಿಂದಲೂ, ಸೋಲನ್ನೇ ಕಾಣದೆ, ಪ್ರತಿ ಬಾರಿಯೂ ವಿಜಯ ಮಾಲೆ ಪಡೆದುಕೊಂಡಿದ್ದರು. ಆದರೆ ಈ ಬಾರಿ ಉಮೇಶ್ ಜಾದವ್ ಅವರ ಮುಂದೆ ಸೋಲನ್ನ ಕಂಡಿದ್ದಾರೆ.

ಉಮೇಶ್ ಜಾದವ್ ಗೆಲುವು

ಉಮೇಶ್ ಜಾದವ್. ಮೊದಲಿಗೆ ಕಾಂಗ್ರೆಸ್ ನಲ್ಲಿ ಇದ್ದವರು. ಆದರೆ ಕೆಲವು ಕಾರಣಗಳಿಂದ, ಅವರು ಕಾಂಗ್ರೆಸ್ ನ ತೊರೆದು, ಬಿಜೆಪಿಗೆ ಸೇರ್ಪಡೆಯಾಗ್ತಾರೆ. ಆಗಿಂದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಉಮೇಶ್ ಜಾದವ್ ನಡುವೆ ವೈರತ್ವ ಬೆಳೆದುಕೊಳ್ಳುತ್ತೆ. ಆದರೆ ಯಾವಾಗ ಉಮೇಶ್ ಜಾದವ್, ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿ ಅನ್ನೋ ವಿಷಯ ಗೊತ್ತಾಗುತ್ತೋ, ಆಗ ಇನ್ನೂ ಅವರ ಮೇಲೆ ಕೋಪಗೊಳ್ಳುತ್ತಾರೆ. ಬಿಜೆಪಿಯಿಂದ ಉಮೇಶ್ ಜಾದವ್ ಅವರಿಗೆ, ಸೀಟ್ ನೀಡಬೇಕಾದರು, ಎಲ್ಲರೂ ಬಹಳಷ್ಟು ಯೋಚಿಸಿರುತ್ತಾರೆ. ಯಾಕಂದ್ರೆ, ಮಲ್ಲಿಕಾರ್ಜನ್ ಖರ್ಗೆ ಯಂತಹ ಸೋಲಿಲ್ಲದ ಸರದಾರನ ಮುಂದೆ, ನಮ್ಮ ಸೋಲು ಖಚಿತ ಅನ್ನೋದು ಗೊತ್ತಿದ್ದರೂ, ಉಮೇಶ್ ಜಾದವ್ ಅವರನ್ನ ಕಣಕ್ಕಿಳಿಸುತ್ತಾರೆ. ಆದರೆ ಈಗ ಉಮೇಶ್ ಜಾದವ್ ನಗುವಿನ ಮುಖ ಬೀರಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯನ್ನ ಪುಡಿ ಪುಡಿ ಮಾಡಿದ ಮೋದಿ

ಕಲಬುರ್ಗಿ ಅಂದಕೂಡಲೇ ನೆನಪಾಗೋದು ಕಾಂಗ್ರೆಸ್ ಭದ್ರಕೋಟೆ ಅಂತ. ಯಾಕಂದ್ರೆ, ಅನೇಕ ವರ್ಷಗಳಿಂದಲೂ ಇಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಾ ಬಂದಿದೆ. ಆದರೆ ಇದೇ ಮೊದಲ ಬಾರಿಗೆ, ಮೋದಿ ಪಡೆ, ಕಾಂಗ್ರೆಸ್ ಭದ್ರಕೋಟೆಯಾದ ಕಲ್ಬುರ್ಗಿಯನ್ನ ಪುಡಿ ಪುಡಿ ಮಾಡಿದೆ.ಸೋಲಿಲ್ಲದ ಅನ್ನೋ ಖ್ಯಾತಿಗೆ ಒಳಗಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರು, ಮೊದಲ ಬಾರಿಗೆ ಸೋಲನ್ನ ಅನುಭವಿಸುತ್ತಿರೋದು, ಅವರಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ, ಮತ ಎಣಿಕೆಯ ಒಂದು ಹಂತದಲ್ಲೂ ಮುನ್ನಡೆ ಸಾಧಿಸದೆ ಇರೋದು ಭಾರಿ ಮುಖಭಂಗಕ್ಕೆ ಕಾರಣವಾಗಿದೆ.

ನಿಜಕ್ಕೂ ಮಲ್ಲಿಕಾರ್ಜುನ್ ಖರ್ಗೆ ಅವರು, ಸೋಲನ್ನ ಕಂಡಿದ್ದಾರೆ ಅನ್ನೋದನ್ನ ಯಾರಿಂದಲೂ ನಂಬಲಾಗುವುದಿಲ್ಲ. ಯಾಕಂದ್ರೆ, ಸೋಲನ್ನೇ ಕಾಣದ ವ್ಯಕ್ತಿ ಅಂತ ಹೆಸರು ಪಡೆದಿದ್ದರು. ಆದ್ರೆ ಸೋಲು ಎಂಬುದು ಹೇಗಿರುತ್ತೆ ಅಂತ, ಮೋದಿ ಪಡೆ ಮೈತ್ರಿ ಸರ್ಕಾರಕ್ಕೆ ತಿಳಿಸಿಕೊಟ್ಟಿದೆ.

LEAVE A REPLY

Please enter your comment!
Please enter your name here