ವೃದ್ಧ ಮಾಜಿ ಯೋಧನ ಜೀವನದಲ್ಲಿ ಆಟ ಆಡುತ್ತಿರುವ ಸರ್ಕಾರಿ ಅಧಿಕಾರಿಗಳು

0
840
maji yodha

ಹಿರಿಯರು ಆಗಿನ ಕಾಲದಲ್ಲಿ ಯಾವಾಗಲು ಒಂದು ಮಾತನ್ನ ಹೇಳುತ್ತಿದ್ದರು. ಹೌದು. ನಮ್ಮದೇ ನಮ್ಮ ಬಳಿ ಉಳಿಯುವುದಿಲ್ಲ, ಇನ್ನು ಪರರ ವಸ್ತು ನಮ್ಮ ಬಳಿ ಉಳಿಯುತ್ತದಾ ಎಂದು. ಈ ಮಾತು ಅಕ್ಷರಶಃ ನಿಜ. ಯಾಕಂದ್ರೆ ಮನುಷ್ಯ ಪರರ ವಸ್ತುವಿಗೆ ಆಸೆ ಪಡೋದು ಜಾಸ್ತಿ. ಅದನ್ನ ಪಡೆಯಲು ಮೋಸ, ವಂಚನೆ ಮಾಡುತ್ತಾನೆ. ಹಾಗಾಗಿ ಹಿರಿಯರು ಹಿಂದಿನ ಕಾಲದಲ್ಲೇ ಈ ಮಾತನ್ನ ಹೇಳಿದ್ದಾರೆ. ಈ ವಿಷಯ ಮನುಷ್ಯನಿಗೆ ಗೊತ್ತಿದ್ದರೂ, ಅವನು ಈ ಕ್ಷಣಕ್ಕೂ ಪರರ ವಸ್ತುವಿಗೆ ಆಸೆ ಪಡುತ್ತಲೇ ಇದ್ದಾನೆ.

ಇನ್ನು ಕೆಲವ್ರು ಹೇಗೆ ಅಂದ್ರೆ ಪರರಿಗೆ ಸಂಬಂಧಪಟ್ಟ ವಸ್ತು ನಮ್ಮ ಬಳಿ ಇದೆ ಎಂದಾಗ ಅದನ್ನ ಅವರಿಗೆ ಹೇಗಾದರೂ ತಲುಪಿಸಬೇಕು ಅನ್ನೋದು ಇರಬೇಕು. ಬದಲಾಗಿ ಅವರಿಗೆ ಕೊಡುವುದೇ ಬೇಡ ಅಂತ ಸುಮ್ಮನಾಗಬಾರದು. ಅದರಲ್ಲೂ ಆ ವಸ್ತುವಿನ ಮಾಲೀಕನೇ ಬಂದು ಅಂಗಲಾಚಿ ಕೇಳಿದರು ಸಹ ಅದನ್ನ ಕೊಡಲಾಗದಂತ ಜನರು ನಮ್ಮಲ್ಲಿದ್ದಾರೆ. ಇದೆ ರೀತಿ ಇಲ್ಲೊಬ್ಬರು ಯೋಧನಿಗೂ, ಇದೆ ಪರಿಸ್ಥಿತಿ ಬಂದಿದೆ. ಹೌದು. ತನಗೆ ಸೇರಬೇಕಾದ್ದನ್ನ ಪಡೆದುಕೊಳ್ಳಲು, ಸುಮಾರು ವರ್ಷಗಳಿಂದ ಹರಸಾಹಸ ಪಡುತ್ತಿದ್ದಾರೆ.

ಮಾಜಿ ಯೋಧನಿಗೆ ಸೇರಬೇಕಾದ ಜಮೀನು ಹಿಂದೆ ಬಿದ್ದಿರುವ ರಣಹದ್ದುಗಳು

ದೇಶ ರಕ್ಷಣೆ ಮಾಡುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ತಮ್ಮೆಲ್ಲಾ ಆಸೆ, ಕನಸುಗಳನ್ನ ತ್ಯಜಿಸಿ ಗಡಿಯಲ್ಲಿ ಇದ್ದು ನಮ್ಮನ್ನೆಲ್ಲಾ ಕಾಯುತ್ತಾರೆ. ಅಂತ ಸೈನಿಕರಿಗೆ ನಮ್ಮ ರಾಜ್ಯ ಸರ್ಕಾರ ಒಂದು ಸೌಲಭ್ಯವನ್ನ ಈ ಹಿಂದೆಯೇ ಕಲ್ಪಿಸಿತ್ತು. ಹೌದು. ಯೋಧರಿಗೆ ಕೃಷಿ ಜಮೀನು ನೀಡುವ ವ್ಯವಸ್ಥೆಯನ್ನ ಸರ್ಕಾರ ಬಹಳ ವರ್ಷಗಳ ಹಿಂದೆಯೇ ಜಾರಿಮಾಡಿದೆ. ಯಾಕಂದ್ರೆ ಅವರು ನಿವೃತ್ತಿಯಾದಾಗ, ಅವರಿಗೆ ಜೀವನ ನಡೆಸಲು ಅಂತ ಕೃಷಿ ಜಮೀನನ್ನು ನೀಡುತ್ತದೆ. ಅದೇ ರೀತಿ ಈ ಯೋಧರಿಗೂ ನೀಡಲಾಗಿತ್ತು. ಆದ್ರೆ ಅದು ಹೆಸರಿಗೆ ಮಾತ್ರ, ಇವರಿಗೆ ನೀಡಲಾಗಿದೆ ಎಂಬುದು ಹೊರ ಪ್ರಪಂಚಕ್ಕೆ ಗೊತ್ತು. ಆದ್ರೆ ಎಷ್ಟೋ ವರ್ಷಗಳು ಕಳೆದರು, ಆ ಜಮೀನು ಇವರ ಕೈಗೆ ಸಿಕ್ಕಿಲ್ಲ.

ಕಚೇರಿಗೆ ಅಲೆದಾಡುತ್ತಿರುವ ಹಿರಿಯ ಮಾಜಿ ಸೈನಿಕ

ಇವರ ಹೆಸರು ರವೀಂದ್ರ. ಇವರು ಮೂಲತಃ ಶಿವಮೊಗ್ಗದವರು. ಆರ್‌. ರವೀಂದ್ರ ಅವರು ಸುಮಾರು 1980ರಿಂದ 1997ರವರೆಗೆ 17 ವರ್ಷ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಆದರೆ ಅವರಿಗೆ ನಿವೃತ್ತಿಯಾಗುವ ಸಮಯ ಹತ್ತಿರ ಬರುವಾಗಲೇ ಅವರು, ಜಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೌದು. ರವೀಂದ್ರ ಅವರು ಸುಮಾರು 1986ರಲ್ಲೇ ಅರ್ಜಿ ಸಲ್ಲಿಸಿದ್ದರು. ಆಗ ಭದ್ರಾವತಿಯ ಜಿಲ್ಲಾಧಿಕಾರಿಯಾಗಿದ್ದವರು ಅದನ್ನ ಮಂಜೂರು ಮಾಡಿದ್ದರು. ಆದರೆ ಅವರೇನೋ ಮಂಜೂರು ಮಾಡಿದರು. ಆದ್ರೆ ಜಮೀನು ಮಾತ್ರ ಇನ್ನು ಇವರ ಕೈಗೆ ಸಿಕ್ಕಿಲ್ಲ. ಯಾಕಂದ್ರೆ ಸ್ಥಳೀಯರಿಗೆ ಆ ಜಮೀನು ಬಹಳಷ್ಟು ಅವಶ್ಯಕತೆ ಇತ್ತಂತೆ. ಹಾಗಾಗಿ ಅವರು ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದರಂತೆ. ಆದ್ರೆ ಇಷ್ಟು ವರ್ಷವಾದರೂ ಅವರಿಗೆ ಆ ಜಮೀನು ಸಿಕ್ಕಿಲ್ಲ.

33 ವರ್ಷಗಳಿಂದ ಹತ್ತಾರು ಕಚೇರಿ ಅಲೆಯುತ್ತಿರುವ ರವೀಂದ್ರ

ಸ್ವಲ್ಪ ಸಮಯ ಕೇಳಿದ್ದ ಅಧಿಕಾರಿಗಳು ಈಗಲೂ ಸಮಯ ತೆಗೆದುಕೊಳ್ಳುತ್ತಲೇ ಇದ್ದಾರಂತೆ. ಹೌದು. ರವೀಂದ್ರ ಅವರು ಸುಮಾರು 33 ವರ್ಷಗಳಿಂದ ಹತ್ತಾರು ಕಚೇರಿಗಳಿಗೆ ಅಲೆಯುತ್ತಲೇ ಇದ್ದಾರಂತೆ. ಆದರೆ ಇವರ ಕೂಗು ಮಾತ್ರ ಯಾರಿಗೂ ಕೇಳುತ್ತಿಲ್ಲ. ಇಷ್ಟು ವಯಸ್ಸಾದರೂ, ನನ್ನ ಕೂಗು ಇವರಿಗೆ ಕೇಳುತ್ತಿಲ್ಲ ಎಂದು ತಮ್ಮ ನೋವನ್ನ ತೋಡಿಕೊಳ್ಳುತ್ತಿದ್ದಾರೆ. ಎಷ್ಟು ಬೇಡಿದರು, ಎಷ್ಟು ಕಾಡಿದರು ಅಧಿಕಾರಿಗಳು ಇವರ ಕಣ್ಣೀರಿಗೆ ಬೆಲೆ ಕೊಡುತ್ತಿಲ್ಲವಂತೆ. ಹಾಗಾಗಿ ಸಿಕ್ಕ ಸಿಕ್ಕವರ ಬಳಿ ತಮ್ಮ ನೋವನ್ನ ಹೇಳಿಕೊಳ್ಳುತ್ತಿದ್ದಾರಂತೆ. ಆದರೂ ಯಾವೊಬ್ಬ ಅಧಿಕಾರಿಯು ಸಹ ಇವರ ಸಹಾಯಕ್ಕೆ ನಿಲ್ಲುತ್ತಿಲ್ಲವಂತೆ.

ಒಟ್ಟಿನಲ್ಲಿ ರವೀಂದ್ರ ಅವರ ಕಣ್ಣೀರಿಗೆ ಬೆಲೆ ಇಲ್ಲದಂತಾಗಿದೆ. ಯಾಕಂದ್ರೆ ಇಷ್ಟು ವೃದ್ಧ ವಯಸ್ಸಿನಲ್ಲೂ ಅವರು ಹತ್ತಾರು ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಆದರೂ ಅಧಿಕಾರಿಗಳ ಮನಸ್ಸು ಮಾತ್ರ ಕರಗುತ್ತಿಲ್ಲ. ಇನ್ನೆಷ್ಟು ದಿನ ಇವರು ಕಚೇರಿ ಬಾಗಿಲಿಗೆ ಅಲೆಯಬೇಕೋ ಗೊತ್ತಿಲ್ಲ.

LEAVE A REPLY

Please enter your comment!
Please enter your name here