ಈ ಒಂದು ಕಾರಣದಿಂದ ಮೈಸೂರಿನ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಸಂಕಷ್ಟದಲ್ಲಿರುವ ವ್ಯಾಪಾರಿಗಳು.

0
1337
maisurige barada janaru

ನಮ್ಮ ಕರುನಾಡು ನೋಡೋಕೆ ಎಂಥ ಚೆಂದ ಅಂತೀರಾ ರೀ. ಹೌದು ನಮ್ಮ ನಾಡಿನ ಸೊಬಗೇ ಅಂಥದ್ದು. ನೀನು ಎಲ್ಲಿಂದ ಬಂದರು, ತನ್ನಲ್ಲಿ ಸೇರಿಸಿಕೊಂಡು, ಜೀವನ ನಡೆಸುವುದಕ್ಕೆ ದಾರಿ ಮಾಡಿಕೊಡುತ್ತಿದೆ. ಹಾಗಾಗಿ, ಹೊರ ರಾಜ್ಯ ಹಾಗೂ ಹೊರ ದೇಶಗಳಿಂದಲೂ ಜನರು ಬರುತ್ತಾರೆ. ಇನ್ನೂ ನಮ್ಮಲ್ಲಿ ನೋಡುಗರು ಬೆರಗಾಗುವಂತಹ, ಹಲವು ಸ್ಥಳಗಳಿವೆ. ಅವುಗಳನ್ನ ನೋಡೋಕೆ ಅಂತ ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ.

ಸುಂದರ ತಾಣಗಳನ್ನ ಹೊಂದಿರುವ ಕರ್ನಾಟಕ ಯಾವುದಕ್ಕೂ ಕಮ್ಮಿ ಇಲ್ಲ. ಹೊರ ದೇಶದ ಜನರನ್ನ ತನ್ನತ್ತ ಸೆಳೆಯುವಂತ ಸೌಂದರ್ಯವನ್ನ ಹೊಂದಿದೆ. ಹಾಗಾಗಿ ನಮ್ಮ ರಾಜ್ಯದಲ್ಲಿರುವ ಸ್ಥಳಗಳನ್ನ ನೋಡಲು, ದಿನಬೆಳಗಾದ್ರೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಅದರಲ್ಲೂ ರಾಜ್ಯದ ಮೈಸೂರು ಅಂದ್ರೆ, ಎಲ್ಲರಿಗೂ ಇಷ್ಟ. ಇಲ್ಲಿನ ಸಾಂಸ್ಕೃತಿಕ ಸ್ಥಳಗಳನ್ನ ನೋಡಲು, ಎಲ್ಲೆಲ್ಲಿಂದಲೋ ಜನರು ಬರುತ್ತಾರೆ. ಆದ್ರೆ ಈಗ ಇಂಥ ಮೈಸೂರಿಗೆ ಪ್ರವಾಸಿಗರ ಸಂಖ್ಯೆಯೇ ಕಡಿಮೆಯಾಗಿದೆ.

ಮೈಸೂರಿಗೆ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ

ಮೈಸೂರು ಅಂದ್ರೆ ಸಾಕು, ಜನ ಮುಗಿಬಿದ್ದು ಹೋಗ್ತಾರೆ. ಯಾಕಂದ್ರೆ ಸುಂದರವಾದ ಪ್ರೇಕ್ಷಣೀಯ ಸ್ಥಳಗಳು ಇಲ್ಲಿವೆ. ಜೊತೆಗೆ ಪ್ರೇಮಿಗಳಿಗೆ ಮೈಸೂರು ಅಂದ್ರೆ ತುಂಬಾ ಇಷ್ಟ. ಇನ್ನೂ ವಿದೇಶದಿಂದ ಬರುವ ಜನರು ಹೆಚ್ಚಾಗಿ ಮೈಸೂರಿಗೆ ಬರುತ್ತಾರೆ. ಮೈಸೂರಿಗೆ ಬರದೇ ಹಾಗೇ, ಹಿಂದಿರುಗಿ ಹೋದವರೇ ಇಲ್ಲ. ಅಂತ ಮೈಸೂರಿಗೆ ಈಗ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಒಂದು ಕಾಲದಲ್ಲಿ ಕಾಲಿಡಲು ಜಾಗವಿಲ್ಲದಷ್ಟು, ಜನ ತುಂಬಿರುತ್ತಿದ್ದರು ಇಲ್ಲಿ. ಆದ್ರೆ ಈಗ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯೇ ಕಡಿಮೆಯಾಗಿದೆ. ಈಗ ಅಲ್ಲಿರುವ ಪರಿಸ್ಥಿತಿಗೆ, ಯಾರಪ್ಪ ಹೋಗ್ತಾರೆ ಅನ್ನೋ ತರ ಆಗಿದೆ ಪ್ರವಾಸಿಗರಿಗೆ.

ಹೆಚ್ಚಿರುವ ಬಿಸಿಲ ತಾಪಮಾನಕ್ಕೆ ಹೆದರಿರುವ ಜನರು

ಹೌದು. ಈ ವರ್ಷ ಮೈಸೂರಿನಲ್ಲಿ ಬಿಸಿಲ ತಾಪಮಾನ ಹೆಚ್ಚಾಗಿದೆ. 34 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ ಈ ಬಾರಿ 39 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದೆ. ಇದರಿಂದ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಜೊತೆಗೆ ಇಲ್ಲಿರುವ ಸ್ಥಳೀಯರೇ, ಮನೆಯಿಂದ ಹೊರಬರಲು ಮುಂದಾಗುತ್ತಿಲ್ಲ. ಹಾಗಾಗಿ ಇಲ್ಲಿನ ನೋಡುವಂತಹ ಸ್ಥಳಗಳೆಲ್ಲ ಖಾಲಿ ಹೊಡೆಯುವಂತಾಗಿದೆ. ಜೊತೆಗೆ ಪ್ರವಾಸಿಗರನ್ನೇ ನಂಬಿ, ತೆರೆದಿದ್ದ ಹೋಟೆಲ್ ಉದ್ಯಮಿಗಳು ಹಾಗೂ ಇತರೆ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಿಗಳು

ಇಲ್ಲಿರುವ ವ್ಯಾಪಾರಿಗಳು ಹಾಗೂ ಹೋಟೆಲ್ ಉದ್ಯಮಿಗಳು, ಮೈಸೂರಿಗೆ ಬರುವ ಸಾವಿರಾರು ಜನ ಪ್ರವಾಸಿಗರನ್ನೇ ನಂಬಿದ್ದಾರೆ. ಆದ್ರೆ ಈಗ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು, ಅವರ ವ್ಯಾಪಾರ ಕುಗ್ಗುವಂತೆ ಮಾಡಿದೆ. ಹೌದು. ಮೈಸೂರು ಅರಮನೆಗೆ ಪ್ರತಿದಿನ ಸಾಮಾನ್ಯವಾಗಿ 8ರಿಂದ 9 ಸಾವಿರ ಪ್ರವಾಸಿಗರು ಬರುತ್ತಾರೆ. ಇನ್ನೂ ರಜೆಯಲ್ಲಿ 13ರಿಂದ 15 ಸಾವಿರ ಸಂಖ್ಯೆ ದಾಟುತ್ತದೆ. ಆದ್ರೆ ಈಗ ಮಾರ್ಚ್ ನಿಂದ ಈ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ. ಇದರಿಂದ ಉದ್ಯಮಿಗಳು ಹೂಡಿರುವ ಬಂಡವಾಳಕ್ಕೆ ಯಾವುದೇ ಲಾಭವಿಲ್ಲದಂತಾಗಿದೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೇವಲ ನೀರಿರುವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ

ಪ್ರವಾಸಿಗರ ಸಂಖ್ಯೆಯಲ್ಲೇನೋ ಕಡಿಮೆಯಾಗಿದೆ. ಆದ್ರೆ ಅದರಲ್ಲೂ ಸಹ ಬರುವ ಪ್ರವಾಸಿಗರು ಕೇವಲ ನೀರಿರುವ ಸ್ಥಳಗಳಿಗೆ ಹಾಗೂ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನೂ ಬೇರೆ ಯಾವ ಸ್ಥಳಗಳಿಗೂ ಬರುತ್ತಿಲ್ಲ ಅನ್ನೋದು ಇಲ್ಲಿನ ಜನರ ಮಾತಾಗಿದೆ. ಕೇವಲ ಅಲ್ಲಿಗೆ ಮಾತ್ರ ಹೋದರೆ, ಇಲ್ಲಿ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ. ಅರಮನೆ ಹತ್ತಿರ ಬರುವ ಜನರೇ ಇಲ್ಲದಂತಾಗಿದೆ ಎನ್ನುತ್ತಿದ್ದಾರೆ.

ಒಟ್ಟಿನಲ್ಲಿ ಈ ಬಿಸಿಲ ತಾಪಮಾನದಿಂದ, ಎಷ್ಟೆಲ್ಲಾ ತೊಂದರೆಯಾಗುತ್ತಿದೆ ಅನ್ನೋದು ಈಗ ಗೊತ್ತಾಗುತ್ತಿದೆ. ಯಾಕಂದ್ರೆ ವ್ಯಾಪಾರಿಗಳು ಪ್ರವಾಸಿಗರನ್ನೇ ನಂಬಿ, ಬಂಡವಾಳ ಹೂಡಿ, ವ್ಯಾಪಾರ ಮಾಡ್ತಿರ್ತಾರೆ. ಆದ್ರೆ ಅದೇ ಪ್ರವಾಸಿಗರು ಬಂದಿಲ್ಲ ಅಂದ್ರೆ, ಅವರ ವ್ಯಾಪಾರದಲ್ಲಿ ಸಮಸ್ಯೆಗಳಾಗುತ್ತವೆ. ಆದರೂ ಈ ಬಿಸಿಲ ತಾಪಮಾನದಿಂದ, ಮೈಸೂರು, ತನ್ನತ್ತ ಬರುವ ಜನರನ್ನ ಕಳೆದುಕೊಳ್ಳುತ್ತಿದೆ ಅನ್ನೋದು ಬೇಸರದ ವಿಷಯವಾಗಿದೆ.

LEAVE A REPLY

Please enter your comment!
Please enter your name here