ಈ ಊರಿನ ಮಹಿಳೆಯರು, ಹೆಚ್ಚಾಗಿ ಸ್ಕೂಟಿಗಳನ್ನ ಅವಲಂಬಿಸಿರೋದಾದ್ರೂ ಏಕೆ?

0
805
mahileyara sahasa

ನಮ್ಮಿಂದ ಈ ಕೆಲಸ ಸಾಧ್ಯವಿಲ್ಲ ಅಂತ ಎಂದಿಗೂ ಕೈ ಕಟ್ಟಿ ಕೂರಬಾರದು. ಯಾಕಂದ್ರೆ ಯಾರಿಂದಲೂ, ಯಾವುದನ್ನೂ ಮಾಡಲು ಆಗುವುದಿಲ್ಲ ಅನ್ನೋ ಕೆಲಸಗಳೇನು ಭೂಮಿ ಮೇಲಿಲ್ಲ. ಎಲ್ಲರೂ ಎಲ್ಲ ಕೆಲಸಗಳನ್ನು ಸಹ ಮಾಡಬಹುದು. ಅದರಲ್ಲೂ ಕೆಲವೊಂದು ಕೆಲಸಗಳನ್ನ ಪುರುಷರಿಗೆ ಹಾಗೂ ಮಹಿಳೆಯರಿಗೆ ಅಂತ ವಿಂಗಡಣೆ ಮಾಡಲಾಗಿದೆ. ಆದ್ರೆ ಮಹಿಳೆಯರು ನಾವು, ಯಾರಿಗಿಂತಲೂ ಏನು ಕಮ್ಮಿ ಇಲ್ಲ ಅಂತ, ಪುರುಷರು ಮಾಡುವ ಕೆಲಸಗಳನ್ನ ಸಮಾಜದಲ್ಲಿ ಮಾಡುತ್ತಿದ್ದಾರೆ.

ನಿಜಕ್ಕೂ ಕೆಲವು ಮಹಿಳೆಯರ ಸಾಹಸಕ್ಕೆ ಮೆಚ್ಚಲೇ ಬೇಕು. ಯಾಕಂದ್ರೆ ಅವರು ಕೆಲವು ಕ್ಷೇತ್ರಗಳಲ್ಲಿ ಪುರುಷರಿಗಿಂತಲೂ ಮೇಲುಗೈ ಸಾಧಿಸಿದ್ದಾರೆ. ಪುರುಷರ ಸಹಾಯವಿಲ್ಲದೆ, ನಾವು ಸಹ ಕಷ್ಟ ಪಟ್ಟು, ಒಂದೆಡೆ ಹೋಗುತ್ತೀವಿ, ಒಂದೆಡೆ ಬರುತ್ತಿವಿ, ಎಲ್ಲಾ ಕೆಲಸಗಳನ್ನ ಮಾಡುತ್ತೀವಿ ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ. ಜೊತೆಗೆ ಅಷ್ಟೇ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಈಗ ಅದೇ ರೀತಿ ಈ ಒಂದು ಊರಲ್ಲಿ, ಮಹಿಳೆಯರು, ಪುರುಷರನ್ನ ಅವಲಂಬಿಸದೆ ತಮ್ಮ ಕೆಲಸವನ್ನ ಅವರೇ ಮಾಡಿಕೊಳ್ಳುತ್ತಾರೆ.

ಪ್ರತಿದಿನದ ದುಡಿಮೆಗೆ ಪುರುಷರನ್ನ ಅವಲಂಬಿಸಿದ ಮಹಿಳೆಯರು

ತೆಲಂಗಾಣದಲ್ಲಿರುವ ಲಕ್ಷಿಪುರ ಎಂಬ ಗ್ರಾಮದಲ್ಲಿನ ಮಹಿಳೆಯರು ತಮ್ಮ ಪ್ರತಿದಿನದ ದುಡಿಮೆಯ ಕೆಲಸಕ್ಕೆ, ಪುರುಷರನ್ನ ಅವಲಂಬಿಸದೆ ತಮ್ಮ ಕೆಲಸವನ್ನ ತಾವೇ ಮಾಡುತ್ತಾರೆ. ಹೌದು. ಈ ಊರಿನಲ್ಲಿರುವ ಮಹಿಳೆಯರೆಲ್ಲರೂ ಸಹ ಕೃಷಿಕರು. ಆದರೆ ಇವರ ಹೊಲ, ಹಾಗೂ ತೋಟಗಳು ಊರಿಂದ ಸುಮಾರು 7 ಕಿ ಮೀ ದೂರದಲ್ಲಿವೆ. ಪ್ರತಿದಿನ ಇವರು ಅಲ್ಲಿ ಕೆಲಸಕ್ಕೆ ಹೋಗುತ್ತಾರೆ. ಆದ್ರೆ ಪ್ರತಿದಿನವೂ ಇವರು, ಹೊಲಕ್ಕೆ ಹೋಗಲು ತಮ್ಮ ಪತಿಯನ್ನ ಕೇಳ್ತಿದ್ರು. ಆದ್ರೆ ಅವರು,ಈಗ, ಆಮೇಲೆ ಅಂತ ಸಬೂಬು ಹೇಳುತ್ತಿದ್ದರಂತೆ. ಹಾಗಾಗಿ ಈ ಮಹಿಳೆಯರೆಲ್ಲರೂ ಸೇರಿ ಒಂದು ಉಪಾಯ ಮಾಡಿದ್ದಾರೆ.

ತೋಟಗಳಿಗೆ ಹೋಗಲು ಸರಣಿ ಸ್ಕೂಟರ್ ಬಳಸುವ ಮಹಿಳೆಯರು

ಈ ಊರಿನಲ್ಲಿ ಎಲ್ಲಿ ನೋಡಿದರು ಸ್ಕೂಟಿಗಳೇ ಕಾಣುತ್ತವೆ. ಯಾಕಂದ್ರೆ ಇಲ್ಲಿನ ಮಹಿಳೆಯರು ತಮ್ಮ ಹೊಲ, ತೋಟಗಳಿಗೆ ಹೋಗಲು ಈ ದ್ವಿಚಕ್ರ ವಾಹನಗಳನ್ನ ಬಳಸುತ್ತಾರೆ. ಯಾಕಂದ್ರೆ ಪ್ರತಿದಿನ ಇವರು ತಮ್ಮ ಪತಿಯರನ್ನ ಕೇಳಿದಾಗ, ಅವರು ಏನೇನೋ ಸಬೂಬು ಹೇಳುತ್ತಿದ್ದರಂತೆ. ಹಾಗಾಗಿ ನಾವು ಯಾರನ್ನು ಅವಲಂಬಿಸಬಾರದು. ನಮ್ಮ ಕೆಲಸವನ್ನ ನಾವೇ ಮಾಡಿಕೊಳ್ಳಬೇಕು ಎಂದು ದ್ವಿಚಕ್ರ ವಾಹನ ತೆಗೆದುಕೊಂಡು, ಇವರೇ ತೋಟಗಳಿಗೆ ಹೋಗಿ ಕೂಲಿ ಮಾಡುತ್ತಾರೆ.

ದ್ವಿಚಕ್ರ ವಾಹನದಲ್ಲೇ ಸರಕುಗಳನ್ನ ಮಾರುಕಟ್ಟೆಗೆ ಸಾಗಿಸುತ್ತಾರೆ

ಕೂಲಿಗೆ ಹೋಗುವ ಈ ಮಹಿಳೆಯರು ತಾವು ಬೆಳೆದಿರುವ ತರಕಾರಿ ಹಾಗೂ ಇನ್ನಿತರ ಸಾಮಗ್ರಿಗಳನ್ನ ಇವರೇ ಮಂಡಿಗೆ ಹಾಗೂ ಮಾರುಕಟ್ಟೆಗೆ ಸಾಗಿಸುತ್ತಾರೆ. ಯಾವುದೇ ಆಟೋ ಅಥವಾ ಇವರ ಪತಿಯರನ್ನ ನಂಬಿ ಕೂರುವುದಿಲ್ಲ. ಬದಲಿಗೆ ಇವರೇ ಏಕಾಂಗಿಯಾಗಿ, ತಾವು ಬೆಳೆದಿರುವ ಅಷ್ಟು ತರಕಾರಿಯನ್ನ ಇವರೇ ಗಾಡಿಯಲ್ಲಿ ಹಾಕಿಕೊಂಡು, ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ, ಇವರೇ ವ್ಯಾಪಾರ ಮಾಡುತ್ತಾರೆ. ಈಗ ಇವರು ಮಾಡುವ ಈ ಕೆಲಸ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಇವರ ಈ ಕೆಲಸಕ್ಕೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ನಿಜಕ್ಕೂ ಇಂಥವರನ್ನ ನೋಡಿದರೆ ಬಹಳಷ್ಟು ಸಂತಸವಾಗುತ್ತದೆ. ಯಾಕಂದ್ರೆ ಯಾರು, ಯಾರನ್ನ ನಂಬಿ ಬದುಕುತ್ತಿಲ್ಲ. ನಾವು ಸ್ವತಂತ್ರ್ಯವಾಗಿ ಬದುಕಬಲ್ಲೆವು ಎಂಬುದನ್ನ ಈ ಮಹಿಳೆಯರು ತೋರಿಸಿದ್ದಾರೆ. ಇವರ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು.

LEAVE A REPLY

Please enter your comment!
Please enter your name here