ನಟನೆಗಾಗಿ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಸಿನಿಜಗತ್ತಿನಿಂದ ಮರೆಯಾಗಿದ್ದು ಯಾಕೆ?

0
2219

ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ ಮತ್ತು ಕ್ರಿಯಾಶೀಲತೆ ಇರುವ ಕಲಾವಿದ ಎಂದರೆ, ನಮ್ಮ ನಿಮ್ಮೆಲ್ಲರ ಪ್ರೀತಿಯ ಶಂಕರ್ ನಾಗ್. ಹೌದು ಇವರ ಹೆಸರು ಕೇಳುತ್ತಿದ್ದ ಹಾಗೆ ಪ್ರತಿಯೊಬ್ಬ ಕನ್ನಡಿಗನಿಗೂ ಮೈ ರೋಮಾಂಚನವಾಗುತ್ತದೆ. ಸಿನಿಮಾಗಳಲ್ಲಿ ನೀವು ಕರಾಟೆ ಕಿಂಗ್ ಅವರ ಆಭಿನಯ ನೋಡಿರುತ್ತೀರಿ, ಆದರೆ ಆಗಿನ ಕಾಲದಲ್ಲಿ ಮಾಲ್ಗುಡಿ ಡೇಸ್ ಎನ್ನುವ ಧಾರವಾಹಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆರ್ ಕೆ ನಾರಾಯಣ್ ಈ ಧಾರಾವಾಹಿಯ ಬರಹಗಾರರಾಗಿದ್ದು, ಶಂಕರ್ ನಾಗ್ ಸೇರಿದಂತೆ ಇನ್ನು ಅನೇಕ ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದರು. ಅದರ ಸಾಲಿನಲ್ಲಿ ಮಾಸ್ಟರ್ ಮಂಜುನಾಥ್ ಅವರು ಸಹ ಒಬ್ಬರಾಗಿದ್ದರು. ಮುಂದೆ ಓದಿ

ಜನರು ಸ್ವಾಮಿ ಎನ್ನುವ ಪಾತ್ರ ಮರೆಯಲು ಅಸಾಧ್ಯ

ಈ ಧಾರಾವಾಹಿಯಲ್ಲಿ ಸ್ವಾಮಿ ಎನ್ನುವ ಪಾತ್ರದಲ್ಲಿ ನಟಿಸಿದ್ದು, ಇಂದಿಗೂ ಸಹ ಆ ಪಾತ್ರವನ್ನು ಜನರು ಮರೆಯಲು ಸಾಧ್ಯವಾಗುತ್ತಿಲ್ಲ. ಮಾಲ್ಗುಡಿ ಡೇಸ್ ಆರ್ ಕೆ ನಾರಾಯಣ್ ಅವರ ಸಣ್ಣ ಕಥೆಯಾಗಿತ್ತು. ಸಣ್ಣ ಕಥೆಗೆ ಶಂಕರ್ ನಾಗ್ ಮತ್ತು ಕವಿತಾ ಲಂಕೇಶ್ ಹೊಸ ಧಾರಾವಾಹಿಯ ರೂಪವನ್ನು ನೀಡಿದ್ದರು. 39 ಎಪಿಸೋಡ್ಸ್ ಗಳನ್ನು ಶಂಕರ್ ನಾಗ್ ನಿರ್ದೇಶಿಸಿದ್ದರೆ, 15 ಎಪಿಸೋಡ್ಸ್ ಗಳನ್ನು ಕವಿತಾ ಲಂಕೇಶ್ ನಿರ್ದೇಶಿಸಿದ್ದರು. ಇದು ಹಿಂದಿ ಭಾಷೆಯ ಸೀರಿಯಲ್ ಆಗಿದ್ದು, 1987 ರಲ್ಲಿ ಈ ಧಾರವಾಹಿ ಪ್ರಸಾರವಾಗುತ್ತಿತ್ತು. ಮಾಲ್ಗುಡಿ ಡೇಸ್ ಅಲ್ಲದೆ ಅನೇಕ ಕನ್ನಡ ಚಿತ್ರಗಳಲ್ಲಿ ಇವರು ನಟಿಸಿದ್ದರು. ಅಚಾನಕ್ಕಾಗಿ ಸಿನಿಜಗತ್ತಿನಿಂದ ಮರೆಯಾಗಲು ಅಸಲಿ ಕಾರಣವೇನು? ಮುಂದೆ ಓದಿ.

ಮಾಸ್ಟರ್ ಮಂಜುನಾಥ್ ಬಿಚ್ಚಿಟ್ಟ ಸತ್ಯ

ನಂತರದ ದಿನಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುವ ಅವಕಾಶ ಇವರಿಗೆ ಸಿಗುತ್ತದೆ. ಇವರು 19 ನೇ ವಯಸ್ಸಿನಲ್ಲಿಯೇ 6 ಅಂತರಾಷ್ಟ್ರೀಯ, ಒಂದು ರಾಷ್ಟ್ರೀಯ ಹಾಗು ರಾಜ್ಯ ಪ್ರಶಸ್ತಿಗಳನ್ನು ನಟನೆಗಾಗಿ ಬಾಚಿಕೊಳ್ಳುವ ಮೂಲಕ ಸಿನಿರಂಗಕ್ಕೆ ವಿದಾಯವನ್ನು ಹೇಳಿದ್ದರು. ಅಭಿಮಾನಿಗಳಿಗೂ ಇವರ ನಿರ್ಧಾರದಿಂದ ಬೇಸರವಾಗಿತ್ತು. ಇಟಲಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಂಜುನಾಥ್ ಅವರು ಹಾಜರ್ ಆಗಿದ್ದರು. ಸ್ವಾಮಿ ಪಾತ್ರಕ್ಕಾಗಿ ನನಗೆ ಪ್ರಶಸ್ತಿಯನ್ನು ನೀಡುತ್ತಿದ್ದಾರೆ, ಆದರೆ ಈ ಸಂತಸದ ಕ್ಷಣವನ್ನು ನೋಡಲು ಸ್ನೇಹಿತರಿರಲಿಲ್ಲ ಮತ್ತು ಕುಟುಂಬಸ್ಥರು ಸಹ ಇರಲಿಲ್ಲ. ಆ ಒಂದು ಗಳಿಗೆಯಲ್ಲಿ ಇವರು ಚಿತ್ರರಂಗವನ್ನು ಬಿಡಲು ನಿರ್ಧರಿಸಿದ್ದರು.

ಮನೆಗೆ ಕಾರು ಕಳುಹಿಸುತ್ತೇನೆ

1976 ರಲ್ಲಿ ಮಂಜುನಾಥ್ ಬೆಂಗಳೂರಿನಲ್ಲಿ ಜನಿಸಿದ್ದು, ಇಂಗ್ಲಿಷ್ ಬಿ ಎ ಮತ್ತು ಸೋಷಿಯಾಲಜಿ ಯಲ್ಲಿ ಎಂ ಎ ಪದವಿಯನ್ನು ಪಡೆದುಕೊಂಡಿದ್ದರು. ಇದರ ಜೊತೆಗೆ ಸಿನಿಮಾಟೋಗ್ರಫಿಯಲ್ಲಿ ಡಿಪ್ಲೋಮ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದ್ದರು. ಇವರು ತಮ್ಮ ಮೂರನೇ ವಯಸ್ಸಿನಲ್ಲೇ ಸಿನಿ ಪ್ರಪಂಚಕ್ಕೆ ಲಗ್ಗೆ ಇಟ್ಟಿದ್ದು, ಶಾಲಾ ದಿನಗಳ ರಜೆಯಲ್ಲಿ ಮಾಲ್ಗುಡಿ ಡೇಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಒಂದು ದಿನ ಶಂಕರ್ ನಾಗ್ ಅವರು ಕೂಡಲೇ ನನ್ನನ್ನು ಭೇಟಿ ಮಾಡಬೇಕು ಮನೆಗೆ ಕಾರು ಕಳುಹಿಸುತ್ತೇನೆ ಎಂದು ಮಂಜುನಾಥ್ ಗೆ ಹೇಳಿದ್ದರಂತೆ. ಆಗ ವುಡ್ ಲ್ಯಾಂಡ್ಸ್ ಎನ್ನುವ ಹೋಟೆಲ್ ನಲ್ಲಿ ಬಹಳ ಮಕ್ಕಳಿದ್ದರು.

ಸ್ವಾಮಿ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ

ಯಾರಿಗೆ ಹಿಂದಿ ಮಾತನಾಡಲು ಬರುತ್ತದೆ ಎಂದು ಶಂಕರ್ ಕೇಳಿದಾಗ, ಇದಕ್ಕೆ ಮಂಜುನಾಥ್ ಒಂದು ಶಬ್ದವು ಗೊತ್ತಿಲ್ಲ ಎಂದು ಹೇಳಿದ್ದರು. ಶಂಕರ್ ನಾಗ್  ಈ ಬಾಲಕನನ್ನು ಸ್ವಾಮಿ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇವನು ಚೆನ್ನಾಗಿ ನಟಿಸಬಲ್ಲ ಮತ್ತು ಸ್ವಾಮಿಯ ಪಾತ್ರಕ್ಕೆ ಜೀವ ತುಂಬಬಲ್ಲ ಎನ್ನುವ ಭರವಸೆ ಶಂಕರ್ ನಾಗ್ ಅವರಿಗೆ ಇತ್ತು.

ಆರ್ ಕೆ ನಾರಾಯಣ್ ಮತ್ತು ಶಂಕರ್ ನಾಗ್ ಅವರ ಜೊತೆ ಚರ್ಚಿಸುತ್ತಿದ್ದರು

ಶಂಕರ್ ಗೆ ಈ ಬಾಲಕನ ಕುರಿತು ಮೊದಲೇ ಚೆನ್ನಾಗಿ ಗೊತ್ತಿತ್ತು. ಸ್ವಾಮಿ ಪಾತ್ರವನ್ನು ಹೇಗೆ ಮಾಡಬೇಕೆಂದು ಮಾಸ್ಟರ್ ಮಂಜುನಾಥ್ ಗೆ ಗೊತ್ತಿರಲಿಲ್ಲ. ನಿರ್ದೇಶಕರು ಹೇಳುವ ರೀತಿ ನಟಿಸುತ್ತಿದ್ದರು ಅಷ್ಟೆ. ಇನ್ನು ಸೆಟ್ ಗೆ ಆಗಮಿಸುತ್ತಿದ್ದ ಆರ್ ಕೆ ನಾರಾಯಣ್ ಮತ್ತು ಶಂಕರ್ ನಾಗ್ ಅವರ ಜೊತೆ ಚರ್ಚಿಸುತ್ತಿದ್ದರು. ಆರ್ ಕೆ ನಾರಾಯಣ್ ಮಂಜುನಾಥ್ ಅವರನ್ನು ವಿಚಾರಿಸಿ ಹೋಗುತ್ತಿದ್ದು, ಸ್ವಾಮಿ ಪಾತ್ರವನ್ನು ಇವರೇ ಮಾಡುತ್ತಿರುವ ವಿಷಯ ಅವರಿಗೆ ತಿಳಿದಿರಲಿಲ್ಲ.

ಮರೆಯಾದ ಪ್ರತಿಭೆ

ಮುಂಬೈ ಮಿರರ್ ಜೊತೆ ನಡೆದ ಸಂದರ್ಶನದಲ್ಲಿ ತಮ್ಮ ಹಳೆ ಘಟನೆಗಳು ನೆನೆಯುತ್ತ ಮಾತನಾಡಿದ್ದರು. ಅಶೋಕ್ ಖೇಣಿ ಮಾಲೀಕತ್ವದ ನೈಸ್ (ಬಿಎಂಐಸಿಪಿ ) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗ ತಮ್ಮದೆಯಾದಂತಹ ಪಬ್ಲಿಕ್ ರಿಲೇಷನ್ಸ್ ಕನ್ಸಲ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಸ್ವರ್ಣ ರೇಖಾ ಅವರನ್ನು ವಿವಾಹವಾಗಿದ್ದು, ಮಾಸ್ಟರ್ ಮಂಜುನಾಥ್ ಗೆ ಒಬ್ಬ ಪುತ್ರನಿದ್ದಾನೆ. ಒಳ್ಳೆಯ ಪ್ರತಿಭೆ ಇವರಲ್ಲಿ ಅಡಗಿತ್ತು. ಇಷ್ಟು ಬೇಗ ಪ್ರತಿಭಾವಂತ ಯುವ ತಾರೆ ಸಿನಿಜಗತ್ತಿನಿಂದ ಮರೆಯಾಗಬಾರದಿತ್ತು.

LEAVE A REPLY

Please enter your comment!
Please enter your name here