ಯೋಧನ ಕುಟುಂಬಕ್ಕೆ ನೆರವಾದ ಗ್ರಾಮದ ಯುವಕರು, ಯುವಕರಿಗೆ ಒಂದು ಸಲಾಂ

0
686

1992 ರಲ್ಲಿ ದಕ್ಷಿಣ ತ್ರಿಪುರ ಜಿಲ್ಲೆಯ ದಳಪತಿಪುರದಲ್ಲಿ ನಡೆದ ಯುದ್ಧದ ಸನ್ನಿವೇಶದಲ್ಲಿ ಮೂವರು ಯೋಧರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಜಿಸಿದ್ದರು. ಹುತಾತ್ಮರಾದ ಆ ಮೂವರು ಯೋಧರಲ್ಲಿ ಮಧ್ಯಪ್ರದೇಶದ ದೆಪ್ಪಲಪುರ ಜಿಲ್ಲೆಯ ಪಿರ್ ಪೀಪ್ಲಿಯ ಗ್ರಾಮದ ನಿವಾಸಿಯಾದ ಹವಾಲ್ದಾರ್ ಸೈನಿಕ ಸಹ ಒಬ್ಬರಾಗಿದ್ದಾರೆ. ಯೋಧ ವೀರ ಸ್ವರ್ಗ ಸೇರಿದ ನಂತರ ಇವರ ಪತ್ನಿ ರಾಜು ಬಾಯಿ ಅವರು ತಮ್ಮ ಮಕ್ಕಳನ್ನು ಸಾಕಿ ಸಲಹುತ್ತ ಸಣ್ಣ ಗುಡಿಸಿನಲ್ಲೆ ಜೀವನವನ್ನು ನಡೆಸುತ್ತಿದ್ದರು. ಸರ್ಕಾರ ಸಹ ಇವರ ನೆರವಿಗೆ ನಿಂತಿರಲಿಲ್ಲ. ಸರ್ಕಾರದಿಂದ ಬರುತ್ತಿದ್ದ 700 ಹಣದಲ್ಲಿಯೆ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕಿತ್ತು.

 ಯೋಧರ ಕುಟುಂಬಕ್ಕೆ ಮನೆಯನ್ನು ಕಟ್ಟಿಸಿಕೊಟ್ಟ ಸ್ಥಳೀಯ ಯುವಕರು

ಮೋಹನ್ ಸಿಂಗ್ ಮರಣ ಹೊಂದಿದ ನಂತರ ಸರ್ಕಾರ ಸಾಹಯವನ್ನು ಮಾಡಿರಲಿಲ್ಲ. ಆದ್ದರಿಂದ ಗ್ರಾಮದ ನೆರೆಹೊರೆಯ ಜನರು ಇವರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮದ ಪ್ರದೇಶಗಳಲ್ಲಿ ಓಡಾಡಿ ಹಣವನ್ನು ಜನರಿಂದ ಸಂಗ್ರಹಣೆ ಮಾಡುವ ಮೂಲಕ ರಾಜು ಬಾಯಿ ಅವರಿಗೆ ಹೊಸ ಮನೆಯನ್ನು ಕಟ್ಟಿ ಕೊಟ್ಟಿದ್ದಾರೆ. ಗುಡಿಸಲಿನಲ್ಲಿ ತಮ್ಮ ಜೀವನವನ್ನು ಕಳೆಯುತ್ತಿದ್ದ ರಾಜು ಬಾಯ್ ಗೆ ಹೊಸ ಮನೆ ಸಿಕ್ಕಿದೆ. ಇವರ ಕುಟುಂಬಕ್ಕೆ 10 ಲಕ್ಷ ಮೌಲ್ಯದ ಕಾಂಕ್ರೀಟ್ ಮನೆಯನ್ನು ನಿರ್ಮಿಸಿ ಸಾಹಯವನ್ನು ಮಾಡಿದ್ದಾರೆ. ಯೋಧ ದೇಶಕ್ಕಾಗಿ ತನ್ನ ಪ್ರಾಣವನ್ನೆ ಮುಡಿಪಾಗಿ ಇಟ್ಟಿರುತ್ತಾರೆ, ಅವರ ಕುಟುಂಬಕ್ಕಾಗಿ ನಾವು ಸಹ ನಮ್ಮ ಕೈಲಾದ ಉಪಕಾರವನ್ನು ಮಾಡಬೇಕಿದೆ.

ಯೋಧನ ಪ್ರತಿಮೆಯನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದಾರೆ

ದೇಪೆಲ್ ಪುರದ ಯುವಕರು ಸೇರಿ ಮನೆ ಕಟ್ಟಿಸಿ ಕೊಟ್ಟು ಉಡುಗೊರೆಯಾಗಿ ನೀಡಿದ್ದಾರೆ. ನಿನ್ನೆ ರಾಜು ಬಾಯಿ ಎಲ್ಲ ಯುವಕರಿಗೆ ರಾಖಿ ಕಟ್ಟಿ, ನಂತರ ಕುಟುಂಬ ಸಮೇತ ನೂತನವಾದ ಮನೆಗೆ ಪ್ರವೇಶಿಸಿದ್ದಾರೆ. ಇನ್ನು ಆ ವೀರ ಯೋಧ ಮೋಹನ್ ಸಿಂಗ್ ಅವರ ಪ್ರತಿಮೆಯನ್ನು ತಮ್ಮ ಊರಿನಲ್ಲಿ ನಿರ್ಮಿಸಬೇಕೆಂದು ನಿರ್ಧರಿಸಿದ್ದಾರೆ. ಯೋಧನ ಸಾಧನೆಯನ್ನು ಸರ್ಕಾರ ಗುರುತಿಸಿಲ್ಲ, ಆದ್ದರಿಂದ ಊರಿನ ಮುಖ್ಯ ರಸ್ತೆಯಲ್ಲಿ ಸೈನಿಕನ ಪ್ರತಿಮೆಯನ್ನು ನಿರ್ಮಾಣ ಮಾಡಲು ಊರಿನ ಜನತೆ ಮುಂದಾಗಿದ್ದಾರೆ.

ಸಹೋದರಿಗೆ ಉಡುಗೊರೆಯಾಗಿ ಹೊಸ ಮನೆಯನ್ನು ನೀಡಿದ್ದಾರೆ

ದೇಶಾದ್ಯಂತ ರಾಖಿ ಹಬ್ಬವನ್ನು ಜನರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅಣ್ಣ ತಂಗಿಯರ ನಡುವೆ ಇರುವ ಬಾಂಧವ್ಯವನ್ನು ವ್ಯಕ್ತ ಪಡಿಸುವ ರೀತಿಯೆ ರಾಖಿ ಹಬ್ಬ ಆಗಿದೆ. ಅಕ್ಕ ಅಥವಾ ತಂಗಿ ತಮ್ಮ ಪ್ರೀತಿಯ ಅಣ್ಣ ಮತ್ತು ತಮ್ಮರಿಗೆ ರಾಖಿ ನೂಲನ್ನು ಕಟ್ಟುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅಣ್ಣ ತಮ್ಮಂದಿರು ಅಕ್ಕ ತಂಗಿಯರಿಗೆ ದುಡ್ಡನ್ನು ಅಥವಾ ಉಡುಗೊರೆಯನ್ನು ಕೊಡುವ ಒಂದು ಸಂಪ್ರದಾಯ ಇದೆ. ಈ ಬಾರಿ ಸ್ವತಂತ್ರ ದಿನಾಚರಣೆಯ ದಿನದಂದೆ ರಾಖಿ ಹಬ್ಬ ಬಂದಿರುವುದು ವಿಶೇಷವಾಗಿದೆ. ರಾಜು ಬಾಯಿ ಯುವಕರಿಗೆ ರಾಖಿ ಕಟ್ಟಿದ್ದಾರೆ, ಯೋಧರ ಕುಟುಂಬಕ್ಕೆ ಉಪಯುಕ್ತವಾಗುವ ಉತ್ತಮವಾದ ಕೆಲಸವನ್ನು ಮಾಡಬೇಕೆನ್ನುವ ಉದ್ದೇಶದಲ್ಲಿ ಮನೆಯನ್ನು ಕಟ್ಟಿಸಿ ಸಹೋದರಿಗೆ ಉಡುಗೊರೆಯಾಗಿ ಹೊಸ ಮನೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here