ತಲೆಮರಿಸಿಕೊಂಡ ಆರೋಪಿಗಳನ್ನು ವಿಭಿನ್ನವಾದ ಸಂಚಿನಿಂದ ಹಿಡಿದ ಮಹಿಳಾ ಪೊಲೀಸ್

0
280

ಡೆಲ್ಲಿಯಲ್ಲಿ ವಿಭಿನ್ನವಾದ ಉಪಾಯದಿಂದ ಆರೋಪಿಗಳನ್ನು ಬಂಧಿಸುವುದರಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎಷ್ಟು ಪ್ರಯತ್ನವನ್ನು ಪಟ್ಟರು ಸಹ ಆರೋಪಿಗಳನ್ನು ಪೊಲೀಸರಿಂದ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ, ಕೊನೆಗೂ ಪೋಲೀಸರ ಸಂಚಿನ ಬಲೆಗೆ ಕಳ್ಳರು ಸಿಕ್ಕಿ ಹಾಕಿಕೊಂಡಿದ್ದಾರೆ. ಇದು ಸಾಧ್ಯವಾದದ್ದು ಒಬ್ಬ ಮಹಿಳಾ ಪೊಲೀಸ್ ಸಹಾಯದಿಂದ. ಅಕ್ಟೋಬರ್ ಮೊದಲ ವಾರದಲ್ಲಿ ಈ ಮೂವರು ಆರೋಪಿಗಳು ಕ್ಯಾಬ್ ಬುಕ್ ಮಾಡಿಕೊಂಡು ಮಂಡ್ಯ ಊರಿನತ್ತ ತಮ್ಮ ಪಯಣವನ್ನು ಸಾಗಿಸಿದ್ದರು. ಪಯಣಿಸುವ ವೇಳೆಯಲ್ಲಿ ಕ್ಯಾಬ್ ಡ್ರೈವರ್ ಅನ್ನು ಹೆದರಿಸಿ, ಬಿಯರ್ ಬಾಟಲಿ ಇಂದ ಹೊಡೆದು ಅವನನ್ನು ರಸ್ತೆಯ ಮದ್ಯೆ ಬಿಟ್ಟು ಕಾರ್ ಜೊತೆಗೆ ಅಲ್ಲಿಂದ ಜಾಗ ಕಾಲಿ ಮಾಡಿದ್ದರು. ಮುಂದೆ ಓದಿ

ಆರೋಪಿಯ ಮೊಬೈಲ್ ವಿವರಗಳನ್ನು ಪಡೆದಿದ್ದರು

ಕ್ಯಾಬ್ ಡ್ರೈವರ್ ಪೊಲೀಸರಿಗೆ ಸಂದರ್ಭವನ್ನು ವಿವರಿಸಿ ದೂರನ್ನು ನೀಡಿದ್ದರು. ಆಗಸ್ಟ್ 10 ರಂದು ಆರೋಪಿಗಳು ಹರ್ಯಾಣದಲ್ಲಿ ಕಾರಿಗೆ ಪೆಟ್ರೋಲ್ ಹಾಕಿಸಿಕೊಂಡು ಹಣ ಕೊಡದೆ ಪರಾರಿಯಾಗಿದ್ದರು. ಈ ವಿಷಯದ ಕುರಿತು ಡೆಲ್ಲಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಇನ್ನೊಂದು ಕಡೆ ಕ್ಯಾಬ್ ಚಾಲಕನಿಗೆ ಪೊಲೀಸರು ಕಳ್ಳರ ಲಿಸ್ಟ್ ನಲ್ಲಿದ್ದ ಫೋಟೋಗಳನ್ನು ತೋರಿಸುತ್ತ ಹೋದರು. ಆಗ ಸೋಮವೀರ್ ಎನ್ನುವ ಆರೋಪಿಯನ್ನು ಚಾಲಕ ಗುರುತಿಸಿದ್ದು, ಅವನನ್ನು ಹಿಡಿಯಲು ಪೊಲೀಸರು ಮುಂದಾಗಿದ್ದರು. ಸ್ವಲ್ಪ ದಿನಗಳ ಮುಂಚೆ ಸೋಮವೀರ್ ಮೊಬೈಲ್ ವಿವರಗಳನ್ನು ಪೊಲೀಸರು ಪಡೆದಿದ್ದರು. ಮುಂದೆ ಓದಿ

ಮಹಿಳಾ ಪೊಲೀಸ್ ಪೇದೆಯ ಪ್ಲಾನ್

ಕರೆಯ ವಿವರಗಳಲ್ಲಿ ಆತನ ಪ್ರೇಯಸಿಯ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಪೊಲೀಸರು ಇವನ ಪ್ರೇಯಸಿಯನ್ನು ಭೇಟಿ ಮಾಡಿದ್ದರು. ಆರೋಪಿಯನ್ನು ಹಿಡಿಯಲು ನಿಮ್ಮ ಸಹಾಯ ಬೇಕು ಎಂದು ಕೇಳಿದ್ದು, ಯುವತಿ ಪೋಲೀಸರ ಮಾತಿಗೆ ಸಮ್ಮತಿ ನೀಡಿದಳು. ಯುವತಿಯ ಫೋನ್ ಅನ್ನು ಮಹಿಳಾ ಪೋಲಿಸಿಗೆ ಕೊಟ್ಟಳು. ಆ ಯುವತಿಯ ಫೋನ್ ಬಳಸಿಕೊಳ್ಳುವ ಮೂಲಕ ಆರೋಪಿಗೆ ಮಹಿಳಾ ಪೊಲೀಸ್ ಪೇದೆ ಕರೆ ಮಾಡಿದರು. ಕರೆ ಮಾಡಿ ಪ್ರೇಯಸಿಯಂತೆ ಮಾತನಾಡಿ ಅವನನ್ನು ತನ್ನ ಬಲೆಗೆ ಹಾಕಿಕೊಳ್ಳುವ ನಾಟಕವನ್ನು ಆಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆರೋಪಿ ತನ್ನ ಪ್ರೇಯಸಿ ಕರೆ ಮಾಡಿದ್ದಾಳೆ ಎಂದು ನಂಬಿದನು.

ಪೊಲೀಸರಿಗೆ ಸಹಾಯ ಮಾಡಿದ ಪ್ರೇಯಸಿ

ಹೀಗೆ ಫೋನ್ ನಲ್ಲಿ ಮಾತನಾಡುತ್ತ ನನ್ನನ್ನು ಭೇಟಿ ಮಾಡು ಎಂದು ಅವನನ್ನು ಕರೆಸುಕೊಳ್ಳುವ ಪ್ರಯತ್ನವನ್ನು ಮಾಡಿದರು. ಡೆಲ್ಲಿಗೆ ನಾನು ಹೋದರೆ ಪೋಲೀಸರ ಕೈಗೆ ಸಿಕ್ಕಿಹಾಕಿಕೊಳ್ಳುತ್ತೇನೆ ಎನ್ನುವ ಆತಂಕ ಅವನನ್ನು ಕಾಡುತ್ತಿತ್ತು.

ಆದರು ಪ್ರೇಯಸಿ ಕರೆದಿರುವುದರಿಂದ ಹೋಗುವ ಗಟ್ಟಿ ಮನಸ್ಸನ್ನು ಮಾಡಿದ್ದು, ಪೋಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಇವನ ಜೊತೆ ಇದ್ದ ಆ ಇಬ್ಬರ ಆರೋಪಿಯ ಹೆಸರು ಬಾಯಿ ಬಿಟ್ಟಿದ್ದು, ಮೂವರು ಆರೋಪಿಗಳು ಸೆರೆಮನೆಯ ವನವಾಸವನ್ನು ಅನುಭವಿಸುತ್ತಿದ್ದಾರೆ. ಮಹಿಳಾ ಪೊಲೀಸ್ ಪೇದೆ ಮಾಡಿದ ಹೊಂಚಿಗೆ ಜನರು ಪ್ರಶಂಸೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ

LEAVE A REPLY

Please enter your comment!
Please enter your name here