ಬಿಗ್ ಬಾಸ್ 7ನೇ ಆವೃತ್ತಿಯಲ್ಲಿ ಈ ವ್ಯಕ್ತಿ ಮಾತ್ರ ಬಿಗ್ ಹೌಸ್ ನಲ್ಲಿ ಇರಲೇಬೇಕಂತೆ

0
399

ಬಿಗ್ ಬಾಸ್ 7ನೇ ಆವೃತ್ತಿ ಅಕ್ಟೋಬರ್ ತಿಂಗಳಿನ ವಾರಾಂತ್ಯದಲ್ಲಿ ಶುರುವಾಗಲಿದೆ. ಈ ಸೀಸನ್ ನಲ್ಲಿ ಕೇವಲ ಸೆಲೆಬ್ರಿಟಿಗಳು ಮಾತ್ರ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸೆಲೆಬ್ರಿಟಿಗಳ ಲಿಸ್ಟ್ ಹೊರ ಬಿದ್ದಿದ್ದು, ಕೆಲವರ ಹೆಸರು ಮಾತ್ರ ಕೇಳಿ ಬರುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಜನರು ಒಬ್ಬ ವ್ಯಕ್ತಿಯನ್ನು ಮಾತ್ರ ನಾವು ಬಿಗ್ ಬಾಸ್ ನಲ್ಲಿ ನೋಡಲು ಇಷ್ಟ ಪಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಾರು ಆ ವ್ಯಕ್ತಿ? ಮುಂದೆ ಓದಿ

ಕುರಿ ಪ್ರತಾಪ್ ಬಿಗ್ ಹೌಸ್ ನಲ್ಲಿ ಇರಲೇಬೇಕು

ಹೌದು ಆ ವ್ಯಕ್ತಿಯ ಹೆಸರು ಕುರಿ ಪ್ರತಾಪ್. ಮಜಾ ಟಾಕೀಸ್ ಮತ್ತು ಚಿತ್ರಗಳಲ್ಲಿ ಇವರ ಕಾಮಿಡಿ ಝಲಕ್ ಅನ್ನು ನೀವು ನೋಡಿರುತ್ತೀರಾ. ಕಳೆದ ಮೂರು ನಾಲಕ್ಕು ಸೀಸನ್ ನಿಂದಾನು ಜನರು ಇವರನ್ನು ನೋಡಲು ಇಚ್ಛಿಸುತ್ತಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಜನತೆಯಿಂದ ಕುರಿ ಪ್ರತಾಪ್ ಅವರಿಗೆ ಭಾರಿ ಬೇಡಿಕೆ ಬಂದಿದೆ ಅಂತಾನೆ ಹೇಳಬಹುದಾಗಿದೆ. ವರದಿಗಳ ಪ್ರಕಾರ ದೊಡ್ಡ್ ಮನೆಗೆ ಕುರಿ ಪ್ರತಾಪ್ ಲಗ್ಗೆ ಇಡುವುದು ಬಹುತೇಕ ಖಚಿತವಾಗಿದೆ. ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಕಾರ್ಯಕ್ರಮದ ನಿಶ್ಚಿತ ಸದಸ್ಯರಾಗಿದ್ದು, ಪ್ರತಿ ವಾರ ಹಾಸ್ಯದ ಮನೋರಂಜನೆ ನೀಡುವ ಮೂಲಕ ಜನರನ್ನು ರಂಜಿಸುತ್ತಿದ್ದರು. ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಇವರು ಹೆಚ್ಚು ಜನಪ್ರಿಯರಾಗಿದ್ದರು. ಆದ್ದರಿಂದ ಇವರು ಬಿಗ್ ಬಾಸ್ ಮನೆಗೆ ಬಂದರೆ ಮನೋರಂಜನೆ ಕಟ್ಟಿಟ್ಟ ಬುತ್ತಿ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಹನುಮಂತನಿಗೂ ಇದೆ ಬೇಡಿಕೆ

ಸದ್ಯಕ್ಕೆ ಹನುಮಂತನು ಡಾನ್ಸ್ ಕಾರ್ಯಕ್ರಮದಲ್ಲಿ ಜನರನ್ನು ರಂಜಿಸುತ್ತಿದ್ದರೆ, ಸಂಗೀತ ಕಾರ್ಯಕ್ರಮದಲ್ಲಿಯೂ ಸಹ ಇವರು ತಮ್ಮ ಗಾಯನದ ಮೂಲಕ ಜನರ ಮನ್ನಣೆಗಳಿಸಿದ್ದರು. ಹನುಮಂತನಿಗೂ ಸಹ ಜನರು ಬಿಗ್ ಬಾಸ್ ಗೆ ಬರಬೇಕೆಂದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ದಿಗಳ ಲಿಸ್ಟ್ ನಲ್ಲಿ ಸದ್ಯಕ್ಕೆ ಇವರಿಬ್ಬರ ಹೆಸರು ಹೆಚ್ಚಾಗಿ ಸದ್ದು ಮಾಡುತ್ತಿದೆ. ಮಂಡ್ಯ ರಮೇಶ್, ಉದಯ ಮ್ಯೂಸಿಕ್ ಹೇಮಲತಾ, ಟಿಕ್ ಟಾಕ್ ಸ್ಟಾರ್ಸ್ ಹೆಸರುಗಳು ಕೇಳಿ ಬರುತ್ತಿದೆ.

ಸ್ಪರ್ದಿಗಳ ಲಿಸ್ಟ್

ಬಿಗ್ ಬಾಸ್ ಸೀಸನ್ 7ರ ಪಟ್ಟಿ ಈಗ ಹೊರ ಬಿದ್ದಿದೆ. ಸರಿಗಮಪದಲ್ಲಿ ಸ್ಪರ್ಧಿಯಾಗಿದ್ದ ಹನುಮಂತನ ಹೆಸರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಅಧಿಕೃತವಾಗಿ ಹನುಮಂತನ ಹೆಸರು ಖಚಿತವಾಗಿದೆ.

ಇನ್ನು ರಾಧಾ ರಮಣ ಧಾರವಾಹಿ ಖ್ಯಾತಿಯ ಶ್ವೇತಾ, ಮಜಾ ಟಾಕೀಸ್ ಕಾರ್ಯಕ್ರಮದ ಹಾಸ್ಯ ಕಲಾವಿದ ಕುರಿ ಪ್ರತಾಪ್, ನಟಿ ನೇಹಾ ಪಾಟೀಲ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ, ನಟಿ ಅಮೂಲ್ಯ, ಖಾಸಗಿ ವಾಹಿನಿಯ ನಿರ್ಮಾಪಕ ಚಂದನ್ ಶರ್ಮ, ಖ್ಯಾತ ಪತ್ರಕರ್ತ ರವಿ ಬೆಳಗೆರೆ, ಶ್ರೀನಗರ ಕಿಟ್ಟಿ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.

LEAVE A REPLY

Please enter your comment!
Please enter your name here