ಹಾಸ್ಯ ಕಲಾವಿದರಾಗಬೇಕೆಂದು ತಂದೆಯಿಂದಾನೆ ವಿಷಯವನ್ನು ಮುಚ್ಚಿಟ್ಟಿದ್ದರಂತೆ ಕುರಿ ಪ್ರತಾಪ್

0
371

ಬಿಗ್ ಬಾಸ್ ಜ್ವರ ಈಗಾಗಲೆ ಶುರುವಾಗಿದೆ. ಸ್ಪರ್ಧಿಗಳು ಸಹ ಬಿಗ್ ಬಾಸ್ ಮನೆಗೆ ಲಗ್ಗೆ ಇಟ್ಟಿದ್ದು, ಇವತ್ತು ಸಂಜೆಯಿಂದ ಶೋ ಪ್ರಸಾರವಾಗಲಿದೆ. ಯಾವ ಸ್ಪರ್ದಿಗಳು ಬಿಗ್ ಬಾಸ್ ಮನೆಗೆ ಬಂದಿದ್ದಾರೆ ಎನ್ನುವ ವಿಚಾರ ನಿಮಗೆಲ್ಲ ಗೊತ್ತೆ ಇದೆ. ಗಾಯಕ ಹನುಮಂತನ ಹೆಸರು ಸಹ ಕೇಳಿ ಬರುತ್ತಿದ್ದು, ಬಿಗ್ ಬಾಸ್ ಮನೆಗೆ ಹನುಮಂತ ಬಂದಿಲ್ಲ. ಹನುಮಂತನ ಗಾಯನದ ಮನೋರಂಜನೆಯನ್ನ ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅಂತಾನೆ ಹೇಳಬಹುದಾಗಿದೆ. ಇನ್ನು ಸ್ಪರ್ಧಿಗಳ ಪಟ್ಟಿಯಲ್ಲಿ ಹೆಚ್ಚು ಗಮನವನ್ನು ಸೆಳೆಯುತ್ತಿರುವುದು ಖ್ಯಾತ ಹಾಸ್ಯ ಕಲಾವಿದರಾದ ಕುರಿ ಪ್ರತಾಪ್ ಮತ್ತು ಖ್ಯಾತ ಪತ್ರಕರ್ತ, ಬರಹಗಾರರಾದ ರವಿ ಬೆಳಗೆರೆ. ಸಾಮಾನ್ಯ ವ್ಯಕ್ತಿಯಾಗಿದ್ದ ಕುರಿ ಪ್ರತಾಪ್ ಈ ಮಟ್ಟಕ್ಕೆ ಬೆಳೆದಿದ್ದು ಹೇಗೆ? ಮುಂದೆ ಓದಿ

ಐಎಎಸ್ ಅಧಿಕಾರಿಯಾಗಬೇಕೆನ್ನುವುದು ತಂದೆಯ ಕನಸಾಗಿತ್ತು

ಕುರಿ ಪ್ರತಾಪ್, ಇವರ ಮೊದಲ ಹೆಸರು ಕೇವಲ ಪ್ರತಾಪ್ ಮಾತ್ರ ಆಗಿತ್ತು. ಕುರಿ ಪ್ರತಾಪ್ ಎಂದು ಹೆಸರು ಬಂದಿರುವ ಹಿಂದೆಯು ಒಂದು ಆಸಕ್ತಿಕರವಾದ ಕಥೆ ಇದೆ. ಮಗ ಐಎಎಸ್ ಅಧಿಕಾರಿಯಾಗಬೇಕೆನ್ನುವುದು ಕುರಿ ಪ್ರತಾಪ್ ಅವರ ತಂದೆಯ ಕನಸಾಗಿತ್ತು. ಆದರೆ ಕುರಿ ಪ್ರತಾಪ್ ಅವರು ಪಿಯುಸಿಯನ್ನು ಮುಗಿಸುವುದಕ್ಕೆ ಇದು ವರ್ಷಗಳ ಕಾಲ ತೆಗೆದುಕೊಂಡಿದ್ದರು. ಹೀಗಾಗಿ ಇವರ ತಂದೆ ಕನಸು ನುಚ್ಚು ನೂರಾಗಿತ್ತು. ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದರು. ನಂತರ ಮೈಸೂರಿನಲ್ಲಿ ಪ್ರಸಿದ್ದಿಯಾದ ಹಾಸ್ಯ ನಾಟಕಗಳ ಕಲಾವೇದಿಕೆಗೆ ಸೇರಿಕೊಳ್ಳುತ್ತಾರೆ. ಮುಂದೆ ಓದಿ

ಕುರಿಗಳು ಸಾರ್ ಕಾರ್ಯಕ್ರಮದಿಂದ ಜನಪ್ರಿಯರಾದರು

ಈ ವಿಚಾರವು ಕುರಿ ಪ್ರತಾಪ್ ಅವರ ತಂದೆಯ ಕಿವಿಗೆ ಬಿದ್ದಿದ್ದು, ಸೌದೆಯಲ್ಲಿ ಕುರಿ ಪ್ರತಾಪ್ ಅವರಿಗೆ ಹೊಡೆದಿದ್ದರಂತೆ. ಮುಂಚೆ ಉದಯ ವಾಹಿನಿಯಲ್ಲಿ ಕುರಿಗಳು ಸಾರ್ ಕುರಿಗಳು ಎನ್ನುವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ಕಾರ್ಯಕ್ರಮದ ಮೂಲಕ ಕುರಿ ಪ್ರತಾಪ್ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಅಂದಿನಿಂದ ಜನರು ಇವರನ್ನು ಕುರಿ ಪ್ರತಾಪ್ ಎಂದು ಕರೆಯುವುದಕ್ಕೆ ಶುರು ಮಾಡಿದ್ದರು. ಕೇವಲ ಒಂದು ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸುವ ಮೂಲಕ ಯಶಸ್ಸನ್ನು ಪಡೆದುಕೊಂಡಿದ್ದರು. ಸದ್ಯಕ್ಕೆ ಇವರು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸುಮಾರು 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಕುರಿ ಪ್ರತಾಪ್ ನಗೆಚಟಾಕಿಯನ್ನು ಜನರು ಇಷ್ಟ ಪಡುತ್ತಾರೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ, ಸೃಜನ್ ಲೋಕೇಶ್ ಅವರ ನಿರೂಪಣೆಯಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಖಾಯಂ ಸದಸ್ಯರು ಇವರಾಗಿದ್ದಾರೆ. ಮಜಾ ಟಾಕೀಸ್ ನಲ್ಲಿ ಮಂಡ್ಯ ರಮೇಶ್, ಮನೋಹರ್ ಸೇರಿದಂತೆ ಇನ್ನು ಅನೇಕ ಹಾಸ್ಯ ಕಲಾವಿದರಿದ್ದಾರೆ. ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಅವರ ನಗೆ ಚಟಾಕಿ ಮಾತ್ರ ವೀಕ್ಷಕರು ಬಹಳ ಇಷ್ಟ ಪಡುತ್ತಾರೆ.

ಕುರಿ ಪ್ರತಾಪ್ ಬಂದರೆ ಸಾಕು ಮಜಾ ಟಾಕೀಸ್ ನಲ್ಲಿ ಹಾಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ಯಾವುದೆ ಒಂದು ಓವರ್ ಆಕ್ಟಿಂಗ್ ಮಾಡದೆ ಹಾಸ್ಯದ ಕಲೆ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಸದ್ಯಕ್ಕೆ ಬಿಗ್ ಹೌಸ್ ಗೆ ಪ್ರವೇಶಿಸಿರುವ ಕುರಿ ಪ್ರತಾಪ್, ಜನರಿಗೆ ಮತ್ತಷ್ಟು ಮನೋರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ ಅಂತಾನೆ ಹೇಳಬಹುದಾಗಿದೆ.

LEAVE A REPLY

Please enter your comment!
Please enter your name here