ಈ ದೇಗುಲದಲ್ಲಿ ರಾತ್ರಿ ಉಳಿದುಕೊಂಡರೆ ನಿಮ್ಮ ಸಾವು ಖಚಿತ. ಯಾವುದು ಆ ದೇವಾಲಯ?

0
427
krishna temple

ನಮ್ಮ ಹಿಂದುಗಳಿಗೆ ದೇವರು ಅಂದ್ರೆ ಅಪಾರ ಭಕ್ತಿ ಹಾಗು ನಂಬಿಕೆ. ಹೌದು. ನಮ್ಮ ಭಾರತೀಯರು ದೇವರ ಮೇಲಿಟ್ಟಿರುವ ನಂಬಿಕೆಯನ್ನು ಬೇರೆ ಯಾವುದರ ಮೇಲೆಯೂ ಇಟ್ಟಿಲ್ಲ. ಹಾಗಾಗಿ ನಮ್ಮಲ್ಲಿ ಗಲ್ಲಿಗೆ ಒಂದರಂತೆ ದೇವಾಲಯಗಳನ್ನು ಕಟ್ಟಿದ್ದಾರೆ. ಸಾಮಾನ್ಯವಾಗಿ ಮನುಷ್ಯರು ದೇವಾಲಯಕ್ಕೆ ಹೋಗೋದು ಕೆಲವು ಕಾರಣಗಳಿಂದ ಮಾತ್ರ. ಹೌದು. ಮನಸ್ಸಿನ ನೆಮ್ಮದಿಗಾಗಿ, ಕಷ್ಟಗಳು ನಿವಾರಣೆಯಾಗಲು ಹಾಗು ಅಂದುಕೊಂಡಂತ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಸರಾಗವಾಗಿ ಈಡೇರಲಿ ಎಂದು ದೇಶದ ನಾನಾ ದೇವಾಲಯಗಳಿಗೆ ಅಲೆಯುತ್ತಾರೆ. ಕೆಲವರಂತೂ ತಮ್ಮ ಮನಸ್ಸಿನ ನೆಮ್ಮದಿಗಾಗಿ ಕೆಲವು ದಿನ ದೇವಾಲಯಗಳಲ್ಲೇ ಉಳಿದುಕೊಳ್ಳುತ್ತಾರೆ. ಆದ್ರೆ ಇಲ್ಲೊಂದು ದೇವಾಲಯವಿದೆ. ಈ ದೇವಾಲಯದಲ್ಲಿ ಯಾರಾದ್ರೂ ರಾತ್ರಿ ಸಮಯದಲ್ಲಿ ಉಳಿದುಕೊಂಡರೆ, ಅವರ ಸಾವು ಖಚಿತ ಅನ್ನೋದು ಅಲ್ಲಿನ ಎಲ್ಲರಿಗು ತಿಳಿದಿದೆಯಂತೆ.

ಈ ದೇವಾಲಯದಲ್ಲಿ ರಾತ್ರಿ ಸಮಯದಲ್ಲಿ ಉಳಿದುಕೊಂಡರೆ ಸಾವು ಖಚಿತ

ಈ ದೇವಾಲಯ ಮಥುರಾ ಬಳಿಯಿರುವ ನಿಧಿವನದ ಬಳಿಯಿದೆ. ಇನ್ನು ಈ ದೇವಾಲಯದ ಹೆಸರು ರಂಗಮಹಲ್ ಶ್ರೀ ಕೃಷ್ಣ ಆಲಯ. ಈ ದೇವಾಲಯದಲ್ಲಿ ರಾತ್ರಿ ಎಂಟು ಗಂಟೆಯ ನಂತರ ಯಾರೊಬ್ಬರೂ ಸಹ ಉಳಿದುಕೊಳ್ಳುವ ಆಗಿಲ್ಲ. ಯಾಕಂದ್ರೆ ಆ ರೀತಿ ಉಳಿದುಕೊಂಡರೆ ಅವರ ಸಾವು ಖಚಿತ. ಯಾಕಂದ್ರೆ ಈ ದೇವಾಲಯದಲ್ಲಿ ಮುಖ್ಯ ದೇವರು ಕೃಷ್ಣ. ಸಾಮಾನ್ಯವಾಗಿ ಕೃಷ್ಣ ದೇವರು, ಯಾವುದೇ ರೀತಿಯ ಬಲಿಯನ್ನು ಪಡೆಯುವುದಿಲ್ಲ. ಆದ್ರೆ ಇಲ್ಲಿ ಎಂಟು ಗಂಟೆಯ ನಂತರ ಇದ್ದರೆ, ಆ ದೇವರು ಬಲಿ ಪಡೆಯುತ್ತದೆ ಎಂದು ಜನರು ನಂಬಿದ್ದಾರೆ. ಯಾಕಂದ್ರೆ ಶ್ರೀ ಕೃಷ್ಣ ದೇವರು ರಾತ್ರಿ ೮ ಗಂಟೆಯ ನಂತರ ರಾಧಾ ಸಮೇತನಾಗಿ ಬಂದು, ಇಲ್ಲಿ ಗೋಪಿಕಾ ಸ್ತ್ರೀಯರೊಡಗೂಡಿ ರಾಸಲೀಲೆಗಳನ್ನು ನಡೆಸುತ್ತಾನೆ ಎಂದು ಇಲ್ಲಿನ ಜನರು ನಂಬಿದ್ದಾರೆ. ಹಾಗಾಗಿ ಆ ಸಮಯದಲ್ಲಿ ಇಲ್ಲಿ ಯಾರು ಇರಬಾರದು, ಇದ್ದರೆ ಅನಾಹುತ ತಪ್ಪಿದ್ದಲ್ಲ ಎಂಬುದನ್ನು ಕೆಲವು ಸಾಕ್ಷಿಗಳ ಮೂಲಕ ತಿಳಿದಿದ್ದಾರೆ.

ಬಾಗಿಲು ಮುಚ್ಚುವ ಸಮಯದಲ್ಲಿ ಅರ್ಚಕರು ಎಚ್ಚರಿಸುತ್ತಾರೆ

ಇನ್ನು ರಾತ್ರಿ ಎಂಟು ಗಂಟೆಯ ನಂತರ ಅರ್ಚಕರು ದೇಗುಲದ ಬಾಗಿಲು ಮುಚ್ಚುವ ವೇಳೆ ಜೋರಾಗಿ ಕಿರುಚಿ ಹೇಳುತ್ತಾರೆ. ದೇವಾಲಯದಲ್ಲಿ ಯಾರಾದರೂ ಇದ್ದರೆ, ಈ ಕೂಡಲೇ ಹೊರ ಬನ್ನಿ ಎಂದು ಹೇಳಿ ಎಚ್ಚರಿಸುತ್ತಾರೆ. ನಂತರ ದೇವಾಲಯದ ಒಳಗೆ ಹಣ್ಣು, ಹಂಪಲು ಹಾಗು ಹಾಸಿಗೆ ಹಾಸಿ ಬಾಗಿಲು ಮುಚ್ಚುತ್ತಾರೆ. ನಂತರ ಬೆಳಿಗ್ಗೆ ಬಂದು ನೋಡಿದಾಗ ಹಣ್ಣುಗಳೆಲ್ಲ ಖಾಲಿಯಾಗಿ, ಹಾಸಿಗೆ ಮೇಲೆ ಯಾರೋ ಮಲಗಿ ಎದ್ದಿರುವ ಹಾಗೆ ಇರುತ್ತದೆಯಂತೆ. ಈ ರೀತಿಯ ಘಟನೆಗಳು ಇಲ್ಲಿ ನಡೆಯುತ್ತಿದ್ದು, ಅದನ್ನು ಯಾರು ನೋಡಬಾರದಂತೆ. ಹಾಗಾಗಿ ಎಂಟು ಗಂಟೆ ನಂತರ ಮನುಷ್ಯರ ಜೊತೆಗೆ, ಪ್ರಾಣಿ ಪಕ್ಷಿಗಳು ಸಹ ಈ ಸ್ಥಳದಿಂದ ಹೊರಟು ಹೋಗುತ್ತವೆಯಂತೆ. ಇನ್ನು ಈ ದೇವಾಲಯದಲ್ಲಿ ನಡೆಯುವ ರೋಚಕ ಘಟನೆಯನ್ನು ನೋಡಲು ಮುಂದಾದವರು ಒಂದು ಸಾವನ್ನಪ್ಪುತ್ತಾರಂತೆ. ಅಥವಾ ಮಾನಸಿಕ ಅಸ್ವಸ್ಥರಾಗುತ್ತಾರಂತೆ.

ಇಲ್ಲಿನ ಮರಗಳೇ ಗೋಪಿಕಾ ಸ್ತ್ರೀಯರಾಗಿ ಬದಲಾಗುತ್ತಾರೆ

ಇನ್ನು ಇಲ್ಲಿನ ಮರಗಳು ಸಹಸ್ರ ಕಾಲದಿಂದಲೂ ಇವೆಯಂತೆ. ಒಂದು ಮರವು ಸಹ ಇದುವರೆಗೂ ಮುರಿದು ಬಿದ್ದಿಲ್ಲವಂತೆ. ಅಲ್ಲದೆ ಇಲ್ಲಿನ ಯಾವ ಮರಗಳು ನೇರವಾಗಿ ಇಲ್ಲವಂತೆ. ಬದಲಿಗೆ ಎಲ್ಲವು ಅಂಕೊಡೊಂಕಾಗಿವೆ. ಹಾಗಾಗಿ ಆ ಮರಗಳೇ ರಾತ್ರಿ ಸಮಯದಲ್ಲಿ ಗೋಪಿಕಾ ಸ್ತ್ರೀಯರಾಗಿ ಬದಲಾಗುತ್ತಾರಂತೆ. ಇನ್ನು ಇಲ್ಲಿ ಏನು ನಡೆಯುತ್ತದೆ ಎಂದು ನೋಡಲು ಒಬ್ಬರು ಸಾಹಸ ಮಾಡಿ ಒಂದು ರಾತ್ರಿ ಇಲ್ಲಿ ಉಳಿದುಕೊಂಡಿದ್ದರಂತೆ. ಅವರು ರಾತ್ರಿ ಇಲ್ಲಿ ನಡೆಯುವುದನ್ನೆಲ್ಲ ನೋಡಿದ್ದಾರೆ. ಬೆಳಿಗ್ಗೆ ಆಗುವಷ್ಟರಲ್ಲಿ ಅವರು ಮಾನಸಿಕ ಅಸ್ವಸ್ಥರಾಗಿದ್ದರಂತೆ. ಹಾಗಾಗಿ ಇಲ್ಲಿ ನಡೆಯುವ ಕೃಷ್ಣನ ರಾಸಲೀಲೆಗಳನ್ನು ನೋಡುವ ಧೈರ್ಯ ಮತ್ಯಾರು ಮಾಡಿಲ್ಲವಂತೆ. ಅಲ್ಲದೆ ಇಲ್ಲಿನ ಹೆಸರೇ ಹೇಳುವಂತೆ ನಿಧಿ ಅಂದ್ರೆ ಸಂಪತ್ತು, ವನ ಅಂದ್ರೆ ಕಾಡು. ಹಾಗಾಗಿ ಶ್ರೀ ಕೃಷ್ಣ ಪರಮಾತ್ಮನು ಸಂಪದ್ಭರಿತನಾಗಿ ಕಾಡಿನಲ್ಲಿ ರಾಸಲೀಲೆಗಳನ್ನು ನಡೆಸುತ್ತಾನೆ ಅನ್ನೋದು ಈ ದೇವಾಲಯದ ವಿಶೇಷವಾಗಿದೆ.

ನಿಜಕ್ಕೂ ಇಷ್ಟು ಶಕ್ತಿ ಹೊಂದಿರುವ ಭಗವಾನ್ ಶ್ರೀ ಕೃಷ್ಣನನ್ನು ನೋಡಲು ಅನೇಕ ಕಡೆಗಳಿಂದಲೂ ಭಕ್ತರು ಬರುತ್ತಾರೆ. ಆದ್ರೆ ಯಾರೊಬ್ಬರಿಗೂ ಸಹ ರಾತ್ರಿ 8 ಗಂಟೆಯ ನಂತರ ಉಳಿದುಕೊಳ್ಳುವ ಅವಕಾಶವಿಲ್ಲ. ಉಳಿದುಕೊಂಡರೆ, ಅವರ ಸಾವು ಖಚಿತವಂತೆ.

LEAVE A REPLY

Please enter your comment!
Please enter your name here